Subscribe to Gizbot

ಮಂಗಳನ ಅಂಗಳದಲ್ಲಿ ಮಾನವನ ಬದುಕು ಅಸಾಧ್ಯ!!! ಕಾರಣಗಳೇನು

Written By:

ಮಂಗಳದ ನೆಲದಲ್ಲಿ ಮಂಜು ಇದೆ, ನೀರಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನು ವಿಜ್ಞಾನಿಗಳು ಇದನ್ನು ಆಧರಿಸಿ ಮಂಗಳ ಅಂಗಳದಲ್ಲಿ ಮಾನವನ ಬದುಕು ಸಾಧ್ಯ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ನೀರಿದ್ದರೂ ಅದು ಶುದ್ಧವಾಗಿದೆಯೇ? ನಮ್ಮ ಬದುಕಿಗೆ ಪೂರಕವಾಗಿರುವ ರೀತಿಯಲ್ಲಿ ಅಲ್ಲಿ ಹರಿಯುತ್ತಿರುವ ನೀರು ಇದೆಯೇ? ಇನ್ನು ವಾತಾವರಣ ನಮ್ಮ ಬದುಕಿಗೆ ಬೇಕಾಗಿರುವ ಮಾದರಿಯಲ್ಲಿದೆಯೇ ಎಂಬ ಅಂಶವನ್ನು ಕಂಡುಕೊಳ್ಳುವುದಾದರೂ ಹೇಗೆ?

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಇನ್ನು ಬಾಹ್ಯಾಕಾಶ ಯಾನಿಗಳು ಅಲ್ಲಿಗೆ ಪ್ರಯಾಣಿಸಿದ್ದಾರೆ ಅದರಿಂದಾಗಿ ನಮ್ಮ ಬದುಕೂ ಸುಖಮಯವಾಗಿರುತ್ತದೆ ಎಂಬುದಾಗಿ ನಾವು ಭಾವಿಸುವಂತಿಲ್ಲ. ಅದು ಏಕೆ ಅವರಂತೆ ನಮ್ಮ ಬಾಳು ಅಲ್ಲಿ ಏಕೆ ಸಾಧ್ಯವಿಲ್ಲ ಎಂಬ ಮಾಹಿತಿಯ ಕುರಿತೇ ಇಂದಿನ ಲೇಖನದಲ್ಲಿ ನೀವು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಡುಸಾಗಿದೆ

ಮಂಗಳನ ಅಂಗಳ

ಮಂಗಳನ ಅಂಗಳ ತುಂಬಾ ಗಡುಸಾಗಿದೆ. ಇನ್ನು ಅಪಾಯಕಾರಿ ರೇಡಿಯೇಶನ್ ಕೂಡ ಇಲ್ಲಿದೆ. ಇನ್ನು ಇಲ್ಲಿರುವ ನೀರು ಕೂಡ ಮಾನವನ ಬಾಳ್ವಿಕೆಗೆ ಯೋಗ್ಯವಲ್ಲದ್ದಾಗಿದೆ.

ಆಘಾತಕಾರಿಯಾದ ಫಲಿತಾಂಶ

ಆಘಾತಕಾರಿಯಾದ ಫಲಿತಾಂಶ

ಇನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಮ್ಮ ಪ್ರಯಾಣ ಆಘಾತಕಾರಿಯಾದ ಫಲಿತಾಂಶಗಳನ್ನು ಉಂಟುಮಾಡಬಹುದು. ಇನ್ನು ನಿಮಗೆ ಗೊತ್ತಿರದೇ ಇರುವ ಪ್ರದೇಶದಲ್ಲಿ ಎಲ್ಲವೂ ಅನುಕೂಲಕರವಾಗಿರಬಹುದು ಎಂಬುದಾಗಿ ಹೇಳುವಂತಿಲ್ಲ.

ಪ್ರಸ್ತುತ ಜೀವಿತ

ಮಾರ್ಸ್‌ನ ಸ್ವಚ್ಛತೆ

ಮಾರ್ಸ್‌ನ ಸ್ವಚ್ಛತೆ ಕೂಡ ನಮ್ಮ ಬದುಕು ಸಾಗಲು ಅತ್ಯವಶ್ಯಕವಾಗಿದೆ. ಇನ್ನು ಮಂಗಳನಲ್ಲಿ ಪೂರ್ವ ಮತ್ತು ಪ್ರಸ್ತುತ ಜೀವಿತ ಇದೆಯೇ ಎಂಬುದನ್ನು ಕಂಡುಕೊಳ್ಳಲು ರೋವರ್ ಉಪಕರಣ ಅಲ್ಲಿಗೆ ಪ್ರಯಾಣವನ್ನು ಬೆಳೆಸಿತ್ತು.

ಮಾರ್ಸ್‌ನ ಬ್ಯಾಕ್ಟೀರಿಯಾ

ಮಾರ್ಸ್‌ನ ಬ್ಯಾಕ್ಟೀರಿಯಾಗಳು ತುಂಬಾ ಸಣ್ಣದು

ಭೂಮಿಯಲ್ಲಿ ಕಂಡುಬಂದಿರುವ ಬ್ಯಾಕ್ಟೀರಿಯಾಗಿಂತಲೂ ಇದು ಸಣ್ಣದಾಗಿದೆ. ಇನ್ನು ಅವುಗಳ ರಚನೆ ಕೂಡ ಮಾನವನ ಜೀವನವಿಲ್ಲದೆ ಉಂಟಾಗಿರುವಂಥದ್ದಾಗಿದೆ.

ರಾತ್ರಿ ಹಗಲು ಸರ್ವೇಸಾಮಾನ್ಯ

ಕಾಲಗಳು ನಿರ್ದಿಷ್ಟವಾಗಿಲ್ಲ

ಭೂಮಿಯಲ್ಲಿರುವಂತೆಯೇ ಮಂಗಳನಲ್ಲೂ ರಾತ್ರಿ ಹಗಲು ಸರ್ವೇಸಾಮಾನ್ಯವಾಗಿದೆ. ಇನ್ನು ಮಾಸಗಳು ಇಲ್ಲಿ ದುಪ್ಪಟ್ಟುಗೊಂಡಿವೆ. ಭೂಮಿಯಲ್ಲಿ ಮೂರು ತಿಂಗಳಿದ್ದರೆ ಮಂಗಳನಲ್ಲಿ ಇದೇ ಆರು ತಿಂಗಳಾಗಿರುತ್ತದೆ.

ಕಳವಳಕಾರಿಯಾದ ವಿಷಯ

ಸ್ಪೇಸ್‌ಶಿಪ್‌ಗಳ ಕಣ್ಮರೆ

ಮಂಗಳನಲ್ಲಿ ಮಾನವನ ಬದುಕು ಎಂಬ ಅನ್ವೇಷಣೆಯು 18 ನೇ ಶತಮಾನದಿಂದಲೇ ಆರಂಭವಾಗಿದೆ. ಸಾಕಷ್ಟು ಸ್ಯಾಟಲೈಟ್‌ಗಳನ್ನು ಇಲ್ಲಿಗೆ ಕಳುಹಿಸಲಾಗಿದೆ ಆದರೆ ಅದರಲ್ಲಿ ಹಲವಷ್ಟು ಮರಳಿ ಭೂಮಿಗೆ ಬಂದಿಲ್ಲ. ಇದರಿಂದಾಗಿ ಇಲ್ಲಿ ಏನೋ ಕಳವಳಕಾರಿಯಾದ ವಿಷಯವಿದೆ ಎಂಬ ಭಯವೂ ಭುಗಿಲೇಳುತ್ತದೆ.

ಮಾನವನ ಬದುಕು ಅಸಾಧ್ಯ

ವಿಜ್ಞಾನಿಗಳ ನಿರಾಕರಣೆ

ಈ ಯೋಜನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ನಾಸಾ ವಿಜ್ಞಾನಿಗಳು ಮಂಗಳನಲ್ಲಿ ಮಾನವನ ಬದುಕು ಅಸಾಧ್ಯ ಎಂಬುದಾಗಿಯೇ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಪತ್ತೆಹಚ್ಚುವುದಾಗಿತ್ತು

ಸಾವಯವ ಅಂಶಗಳಿಲ್ಲ

1970 ರಲ್ಲಿ ವೈಕಿಂಗ್ ಎಂಬ ಸಂಶೋಧನೆಯನ್ನು ನಡೆಸಿದ್ದರು. ಇದರ ಮುಖ್ಯ ಉದ್ದೇಶ ಮಂಗಳನಲ್ಲಿ ಸಾವಯವ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚುವುದಾಗಿತ್ತು. ಆದರೆ ಕೊನೆಯಲ್ಲಿ ಇಲ್ಲಿ ಇಂತಹ ಯಾವುದೇ ಅಂಶಗಳು ಕಂಡುಬರದೇ ಇರುವುದು ವಿಪರ್ಯಾಸವಾಗಿತ್ತು.

ವಿಶ್ವಾಸ

ಪೂರ್ವ ಜೀವನ

ಇನ್ನು ಮಂಗಳನಲ್ಲಿ ಪೂರ್ವ ಜೀವನ ಇದ್ದಿರಬಹುದು ಎಂಬುದಾಗಿ ನಾಸಾ ವಿಜ್ಞಾನಿಗಳಿಗೆ ಕೊಂಚ ಮಟ್ಟಿಗಿನ ವಿಶ್ವಾಸವಿತ್ತು. ಇನ್ನು ಗ್ರಹದ ಮೇಲ್ಮೈಯಲ್ಲಿ ನೀರು ಇರುವುದರಿಂದ ಪೂರ್ವ ಜೀವಿತ ಇಲ್ಲಿ ಇದ್ದಿರಲೂಬಹುದು ಎಂಬ ಅಂಶ ಅವರಿಗಿದೆ.

ಯಾವ ಬಗೆಯ ನೀರು

ಘನೀಕೃತ ನೀರು

ಮಂಗಳನ ಮೇಲ್ಮೈಯಲ್ಲಿ ಇರುವುದು ಶೀತಲ ನೀರು ಎಂಬ ಮಾತು ಕೂಡ ಇದೆ. 2004 ರಲ್ಲಿ ಇಲ್ಲಿರುವುದು ಮಂಜುಗಡ್ಡೆಯ ನೀರು ಎಂಬುದಾಗಿತ್ತು ಆದರೆ 2005 ರಲ್ಲಿ ಮಂಗಳ ಮೇಲ್ಮೈಯಲ್ಲಿ ಹರಿಯುವ ನೀರು ಇದೆ ಎಂಬುದಾಗಿ ಅನ್ವೇಷಣೆಯಾಗಿತ್ತು. ಆದರೆ ಇದು ಯಾವ ಬಗೆಯ ನೀರು ಎಂಬುದಾಗಿ ಇನ್ನೂ ಖಾತ್ರಿಗೊಂಡಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Life on another planet is also an imagination, which may never come true because we have many valid reasons. On mars for instance life would never be possible due to following 10 reasons.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot