17 ರ ಹರೆಯದ ವಿಶ್ವ ಪ್ರಸಿದ್ಧ ಯುವ ವಿಜ್ಞಾನಿಗಳು

Written By:

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಕ್ಕೆ ಸಡ್ಡುಹೊಡೆದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾಣಬಹುದಾಗಿದೆ. ಇಂದಿನ ತಾಂತ್ರಿಕ ಯುಗಕ್ಕೆ ಸರಿಹೊಂದುವ ರೀತಿಯಲ್ಲಿ ಇವರು ಅನ್ವೇಷಣೆಗಳನ್ನು ಮಾಡುತ್ತಿದ್ದು ಪ್ರಪಂಚಕ್ಕೆ ಇವರ ಕೀರ್ತಿ ಅಸಾಮಾನ್ಯವಾಗಿ ಹಬ್ಬಿದೆ ಎಂದೇ ಹೇಳಬಹುದು.

ಓದಿರಿ: ಫೋನ್ ಸ್ಲೋ ಆಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಟಿಪ್ಸ್

ಈ ಪ್ರತಿಭೆಗಳನ್ನು ಹುಡುಕಿ ಅವರ ಅನ್ವೇಷಣೆಯನ್ನು ಜಗತ್ತಿಗೆ ಪ್ರದರ್ಶಿಸುವ ಸಾಹಸಕ್ಕೆ ಗೂಗಲ್ ಕೈಹಾಕಿದೆ. ಹೌದು ಸೈನ್ಸ್ ಫೇರ್ ಅನ್ನು ಆಯೋಜಿಸುವುದರ ಮೂಲಕ ಈ ಯುವ ವಿಜ್ಞಾನಿಗಳಿಗೆ ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇಂದಿನ ಲೇಖನದಲ್ಲಿ ಈ ಹತ್ತು ಪ್ರತಿಭೆಗಳು ಮತ್ತು ಅವರ ಅನ್ವೇಷಣೆಗಳನ್ನು ಪರಿಚಯಿಸಿಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಬೋಲಾಗೆ ಔಷಧಿ

ಇಬೋಲಾಗೆ ಔಷಧಿ

ಒಲೊವಿಯಾ ಹಲಿಸೇ

16 ವರ್ಷ ಪ್ರಾಯದ ಒಲೊವಿಯಾ ಹಲಿಸೇ ಪ್ರಾಣಾಂತಕಾರಿ ರೋಗ ಇಬೋಲಾಗೆ ಔಷಧಿಯನ್ನು ಕಂಡುಹುಡುಕಿದ್ದಾರೆ. ಫ್ರಿಡ್ಜ್‌ನ ಅಗತ್ಯವಿಲ್ಲದೆಯೇ 30 ನಿಮಿಷಕ್ಕೆ ಫಲಿತಾಂಶವನ್ನು ನೀಡುವ ಔಷಧವನ್ನು ಈ ಬಾಲೆ ಕಂಡುಹುಡಕಿದ್ದಾರೆ. ಇನ್ನು ಈ ಯೋಜನೆಗೆ ಗೂಗಲ್ ಆಕೆಗೆ $50,000 ಸ್ಕಾಲರ್‌ಶಿಪ್ ಅನ್ನು ನೀಡಿದೆ.

ಪ್ರೊಟೊಟೈಪ್

ಪ್ರೊಟೊಟೈಪ್

ಅನುರುದ್ ಗಣೇಶನ್

ಲಸಿಕೆಗಳನ್ನು ವೇಗವಾಗಿ ತಲುಪಿಸುವಂತಹ ಪ್ರೊಟೊಟೈಪ್ ಅನ್ನು ಇವರು ವಿನ್ಯಾಸಗೊಳಿಸಿದ್ದಾರೆ. ಇವರ ಪ್ರೊಟೊಟೈಪ್ ಲೆಗೊ ಎಡ್ಯುಕೇಶನ್ ಬಿಲ್ಡರ್ ಅವಾರ್ಡ್ ಅನ್ನು ಗಳಿಸಿಕೊಂಡಿದೆ.

ಗಾರ್ಡನಿಂಗ್ ಮಾಡುವ ರೊಬೋಟ್

ಗಾರ್ಡನಿಂಗ್ ಮಾಡುವ ರೊಬೋಟ್

ಈಲಿಯಟ್ ಸಾರ್ರೆ

ಇವರು ಗಾರ್ಡನಿಂಗ್ ಮಾಡುವ ರೊಬೋಟ್ ಅನ್ನು ಕಂಡುಹುಡುಕಿದ್ದು ಇನ್‌ಕ್ಯುಬೇಟರ್ ಅವಾರ್ಡ್ ಅನ್ನು ಇವರಿಗೆ ಇದು ತಂದುಕೊಟ್ಟಿದೆ. ಹದಿನಾಲ್ಕರ ಹರೆಯದ ಈ ಯುವ ಅನ್ವೇಷಕ ಕಂಡುಹುಡುಕಿರುವ ರೊಬೋಟ್ ತರಕಾರಿ ಉದ್ಯಾನವನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಗಿರೀಶ್ ಕುಮಾರ್

ಸಿಂಗಪೂರ್‌ನ 17 ರ ಹರೆಯದ ಗಿರೀಶ್ ಕುಮಾರ್ ಸಾಫ್ಟ್‌ವೇರ್ ಅನ್ನು ರಚಿಸಿದ್ದು, ಅಕಾಡೆಮಿ ವೆಬ್‌ಸೈಟ್‌ಗಳಿಂದ MCQ ವನ್ನು ರಚಿಸಲು ಸಹಾಯ ಮಾಡುತ್ತದೆ.

ಹೆಚ್ಚಿಸುವುದು ಹೇಗೆ

ಹೆಚ್ಚಿಸುವುದು ಹೇಗೆ

ಸಿಯಾರಾ ಜಡ್ಜ್, ಸೋಫಿ ಹೇಲಿ ತೊ, ಎಮರ್ ಹಿಕೇ

ನಿರ್ದಿಷ್ಟ ಬೀಜಗಳನ್ನು ಬ್ಯಾಕ್ಟೀರಿಯಾ ಮೂಲಕ ಹೆಚ್ಚಿಸುವುದು ಹೇಗೆ ಎಂಬುದನ್ನು ಇವರು ಸಾಧನೆ ಮಾಡಿದ್ದಾರೆ.

ಕಂಪ್ಯೂಟರ್ ಪ್ರೊಗ್ರಾಮ್

ಕಂಪ್ಯೂಟರ್ ಪ್ರೊಗ್ರಾಮ್

ಎರಿಕ್ ಚೇನ್

ಮಾರಕ ವೈರಸ್‌ಗಳಾದ H5N1 ಮತ್ತು H7N9 ವೈರಸ್‌ಗಳು ಹರಡದಂತೆ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಇವರು ಬಳಸಿ ತಮ್ಮ ಅನ್ವೇಷಣೆಯನ್ನು ಇವರು ಸಂಪೂರ್ಣಗೊಳಿಸಿದ್ದಾರೆ.

ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ

ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ

ಬ್ರಿಟ್ನಿ ವಿನೇಗರ್

ಬಯೋಲಜಿ ಮತ್ತು ಕಂಪ್ಯೂಟರ್ ಸೈನ್ಸ್‌ನ ಮಿಶ್ರ ಅಧ್ಯಯನವನ್ನು ಒಗ್ಗೂಡಿಸಿ ಬ್ರಿಟ್ನಿ ವಿನೇಗರ್ ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧವನ್ನು ಕಂಡುಹುಡಕಿದ್ದಾರೆ.

ಅತ್ಯುತ್ತಮ ಪ್ರಶಸ್ತಿ

ಅತ್ಯುತ್ತಮ ಪ್ರಶಸ್ತಿ

ಶ್ರೇಯಾ ಬೋಸ್

ಗೂಗಲ್‌ನ ಪ್ರಪ್ರಥಮ ಸೈನ್ಸ್ ಫೇರ್‌ನಲ್ಲಿ ಇವರು ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿರುವ ಬುದ್ಧಿವಂತೆಯಾಗಿದ್ದಾರೆ. ಯಾವುದೇ ಹಾನಿಯನ್ನುಂಟು ಮಾಡದೇ ಕಿಮೋಥೆರಪಿ ಚಿಕಿತ್ಸೆಯನ್ನು ನಿರ್ಬಂಧಿಸುವ ದೇಹದ ಪ್ರೊಟೀನ್‌ಗಳಲ್ಲಿರುವ ಪ್ರೊಟೀನ್ ಹಾಜರಾತಿಯನ್ನು ಆಕೆಯ ಸಂಶೋಧನೆ ಕಂಡುಹುಡುಕಿದೆ.

ನಿರ್ಬಂಧಿಸುವ ರೀತಿ

ನಿರ್ಬಂಧಿಸುವ ರೀತಿ

ಕೆನ್ನೆತ್ ಶೆನ್‌ಝೋಕಾ

ಈತನ ತಾತ ಅಲ್ಜಿಮೆರ್ನ ರೋಗಿಯಾಗಿದ್ದು ಹಾಸಿಗೆಯಲ್ಲಿದ್ದ ಸಂದರ್ಭದಲ್ಲಿ ಹಲವಾರು ಅಪಘಾತಗಳಿಗೆ ಒಳಗಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಈ ರೋಗಿಗಳು ಅತ್ತಿತ್ತ ನಡೆದಾಡುವುದನ್ನು ನಿರ್ಬಂಧಿಸುವ ರೀತಿಯಲ್ಲಿ ಈತ ಸಂಶೋಧನೆಯನ್ನು ಕೈಗೊಂಡಿದ್ದಾನೆ.

ವಿಜ್ಞಾನ ಕಾರ್ಯಾಗಾರದ ಒಂದು ಭಾಗ

ವಿಜ್ಞಾನ ಕಾರ್ಯಾಗಾರದ ಒಂದು ಭಾಗ

ಅಹ್ಮದ್ ಮೊಹಮ್ಮದ್

ಈ 14 ವರ್ಷದ ಬುದ್ಧಿವಂತ ಈ ವರ್ಷದ ವಿಜ್ಞಾನ ಕಾರ್ಯಾಗಾರದ ಒಂದು ಭಾಗವಾಗಿದ್ದಾನೆ. ಮನೆಯಲ್ಲೇ ತಾನು ತಯಾರಿಸಿದ ಕ್ಲಾಕ್ ಅನ್ನು ಶಾಲೆಗೆ ಕೊಂಡೊಯ್ಯುವಾಗ ಅಲ್ಲಿದ್ದವರೆಲ್ಲರೂ ಅದೊಂದು ಟೈಮ್ ಬಾಂಬ್ ಎಂದೇ ಭಾವಿಸಿದ್ದರು. ಈತನನ್ನು ಶಾಲೆಯಿಂದ ಮೂರು ದಿನಗಳ ಕಾಲ ಹೊರಗೆ ಕೂಡ ಹಾಕಿದ್ದರು. ಆದರೆ ಹುಡುಗನ ಅನ್ವೇಷಣೆ ಗೂಗಲ್‌ನ ಪ್ರಮುಖ ಮುತ್ಸದ್ದಿಗಳನ್ನು ಸಂಧಿಸುವ ಸುವರ್ಣವಕಾಶವನ್ನು ಒದಗಿಸಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google recently hosted its 5th Science Fair where brilliant student were provided the opportunity to showcase their awe-inspiring talent and ideas. Take a look at these 10 amazing teenagers whose science fair projects shone and won prizes this time and over the years.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot