ಕ್ರಿಕೆಟ್‌ನಲ್ಲಿ ಬಳಸುವ ಅತ್ಯಾಧುನಿಕ ಟೆಕ್ನಾಲಜಿಗಳು ಯಾವುವು ಗೊತ್ತೇ?

Written By:

ಕ್ರಿಕೆಟ್‌ ಅಂದ್ರೆ ಯಾರಿಗೆ ತಾನೆ ಕ್ರೇಜ್‌ ಇಲ್ಲಾ ಹೇಳಿ. ನಾಳೆ ಪರೀಕ್ಷೆ ಇದೆ ಅಂದ್ರು ಸಹ ಮೊದಲು ಕ್ರಿಕೆಟ್‌ ನೋಡಿ ಆಮೇಲೇನೆ ಪರೀಕ್ಷೆಗೆ ಓದೋದು ನಮ್‌ ಭಾರತೀಯ ಕ್ರಿಕೆಟ್‌ ಪ್ರೇಮಿ ಪ್ರಜೆಗಳು. ಆದ್ರೆ ಕೆಲವು ಪೋಷಕರಂತು ಇಂದು ಮಕ್ಕಳಿಗೆ ಪರೀಕ್ಷೆ ಎದುರಾಗುತ್ತಿದಂತೆಯೇ ಮೊಬೈಲ್‌, ಟಿವಿ, ಆಟಗಳಿಗೆಲ್ಲಾ ಬ್ರೇಕ್‌ ಹಾಕಿ ಬಿಡುತ್ತಾರೆ. ಟೆಕ್ನಾಲಜಿ ಬಗ್ಗೆ ಹೇಳೋದು ಬಿಟ್ಟು ಕ್ರಿಕೆಟ್‌ ಬಗ್ಗೆ ಹೇಳ್ತಿದ್ದಾರಲ್ಲಾ ಅಂತಿರಾ? ಅಂದಹಾಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಆಯೋಜಕರು ಕ್ರಿಕೆಟ್ ಪಂದ್ಯ ನೋಡುಗರಿಗೆ ಹೆಚ್ಚು ಆಸಕ್ತಿಯಾಗಿ ಪಂದ್ಯ ನೋಡುವ ಅನುಭವ ನೀಡಲು ಆಧುನಿಕ ಟೆಕ್ನಾಲಜಿಗಳನ್ನು ಬಳಸುವಲ್ಲಿ ಮುಂದಾಗಿದ್ದಾರೆ.

ಕ್ರಿಕೆಟ್ ಕ್ಷೇತ್ರದಲ್ಲಿ ವೀಕ್ಷಕರ ಅನುಭವವನ್ನು ಆಸಕ್ತಿಗೊಳಿಸಲು ಬಳಸುವ ಟೆಕ್ನಾಲಜಿ ಕ್ರಾಂತಿ ಮೂಡಿಸುವಲ್ಲಿ ಸಂಶಯವಿಲ್ಲ. ಹಾಗಾದ್ರೆ ಕ್ರಿಕೆಟ್‌ ಕ್ಷೇತ್ರದಲ್ಲಿ ಬಳಸುತ್ತಿರುವ ಅಂತಹ ಆಧುನಿಕ ಟೆಕ್ನಾಲಜಿಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಇಡಿ ಬೇಲ್ಸ್ (The LED bails)

ಎಲ್ಇಡಿ ಬೇಲ್ಸ್ (The LED bails)

1

ಕ್ರಿಕೆಟ್‌ ಆಟದಲ್ಲಿ ಮೊದಲು ಮರದ ಬೇಲ್ಸ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಪ್ರಸ್ತುತದಲ್ಲಿ "ಎಲ್‌ಇಡಿ ಜಿಂಗ್‌ ಬೇಲ್ಸ್‌"ಗಳನ್ನು ಬಳಸಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯನ್‌ ಬಿಗ್‌ ಬಾಸ್‌ ಲೀಗ್‌ನಲ್ಲಿ 'ಎಲ್‌ಇಡಿ ಜಿಂಗ್‌ ಬೇಲ್ಸ್' ಬಳಸಲಾಯಿತು. ಪ್ರಸ್ತುತದಲ್ಲಿ ಎಲ್ಇಡಿ ಬೇಲ್ಸ್ ಅನ್ನು ICC World T20 ಕ್ರಿಕೆಟ್‌ ಪಂದ್ಯದಲ್ಲಿ ಬಳಸಲಾಗುತ್ತಿದೆ. ಜಿಂಗ್ ವಿಕೆಟ್‌ ವ್ಯವಸ್ಥೆ ಸ್ಟಂಪ್‌ ಮಾಡಿದಾಗ ಸೆನ್ಸಾರ್ ಆಗಿ ಮೈಕ್ರೋಪ್ರೊಸೆಸರ್‌ಗೆ ಸಂಪರ್ಕಗೊಳ್ಳುತ್ತದೆ.

ಸ್ಪೈಡರ್‌ಕ್ಯಾಮ್ (Spidercam)

ಸ್ಪೈಡರ್‌ಕ್ಯಾಮ್ (Spidercam)

2

ಕ್ರಿಕೆಟ್‌ ಪಂದ್ಯವನ್ನು ವೀಡಿಯೋ ಮಾಡಲು ಅಭಿವೃದ್ದಿಪಡಿಸಿರುವ ಇನ್ನೊಂದು ಮಹತ್ತರ ಟೆಕ್‌ ಬಳಕೆ "ಸ್ಪೈಡರ್‌ಕ್ಯಾಮ್‌". ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯದ ಎಲ್ಲಾ ಚಲನೆಗಳನ್ನು ಉತ್ತಮವಾಗಿ ಎಲ್ಲಾ ಆಂಗಲ್‌ಗಳಲ್ಲಿ ತೋರಿಸಲು ಸ್ಪೈಡರ್‌ಕ್ಯಾಮ್‌ ಬಳಸಲಾಗುತ್ತಿದೆ.

 ಹಾಕ್‌ ಕಣ್ಣು (Hawk Eye)

ಹಾಕ್‌ ಕಣ್ಣು (Hawk Eye)

3

ಹಾಕ್‌ ಕಣ್ಣು (Hawk Eye) ಬ್ರಾಡ್‌ಕಾಸ್ಟರ್‌ಗಳಿಂದ ಉಪಯೋಗಿಸಲ್ಪಡುವ ಅತ್ಯುತ್ತಮ ಟೆಕ್ನಾಲಜಿ. ಇದನ್ನು ವಿಕೆಟ್‌ ಹಿಂದಿನ ಕಾಲುಗಳನ್ನು ತೋರಿಸಲು, ಅಂದರೆ LBW ಅಪೀಲ್‌ಗಾಗಿ ಕಮೆಂಟರ್ಸ್‌ ಮತ್ತು ವೀಕ್ಷಕರ ಸಹಾಯಕ್ಕಾಗಿ ಬಳಸಲಾಗಿದೆ. ಕ್ರಿಕೆಟ್‌ ಮೈದಾನದ ಹಲವು ದಿಕ್ಕುಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಈ ಟೆಕ್ನಾಲಜಿ ಇಂದ ಚೆಂಡಿನ ಪಥವನ್ನು ತೋರಿಸಬಹುದು ಮತ್ತು LBW ಅಪೀಲ್‌ನ ನಿರ್ಧಾರ ನೀಡಲು ಸಹಾಯಕವಾಗಿದೆ.

ಹಾಟ್‌ಸ್ಪಾಟ್‌ (HotSpot)

ಹಾಟ್‌ಸ್ಪಾಟ್‌ (HotSpot)

4

ಕ್ರಿಕೆಟ್‌ ಕ್ಷೇತ್ರದಲ್ಲಿ ಇತ್ತಿಚೆಗೆ ಅಳವಡಿಸಿದ ಟೆಕ್ನಾಲಜಿ ಎಂದರೆ ಹಾಟ್‌ಸ್ಪಾಟ್‌ ಅಭಿವೃದ್ದಿ. ಅತ್ಯಾಧುನಿಕ ಅವರೋಹಿತ ಕ್ಯಾಮೆರಾಗಳನ್ನು ಬಳಸಿ ಚೆಂಡು ಮತ್ತು ಬ್ಯಾಟ್‌ ಮಧ್ಯೆ ಏರ್ಪಡುವ ಪರಿಣಾಮವನ್ನು, ಬಾಲ್‌ ಯಾವ ರೀತಿ ಬ್ಯಾಟ್‌ಗೆ ಸ್ಪರ್ಶ ನೀಡಿದೆ, ಹಾಗೂ ಬ್ಯಾಟ್‌ ಪ್ಯಾಡ್‌ LBW ಹೊಡೆತಗಳ ಪತ್ತೆಗಾಗಿ ಈ ಹಾಟ್‌ಸ್ಪಾಟ್‌ ಬಳಸಲಾಗುತ್ತದೆ. ಇದರಿಂದ ನಿಖರ ಜಡ್ಜ್‌ಮೆಂಟ್‌ ನೀಡಲು ಸಹಾಯವಾಗುತ್ತದೆ.

 Snick-O-Meter

Snick-O-Meter

5

ಸ್ನಿಕೊ ಎಂದಲೇ ಪ್ರಸಿದ್ಧಿ ಆದ Snick-O-Meter ಅನ್ನು "ಅಲಾನ್‌ ಪ್ಲಾಸ್ಕೆಟ್ಟ್" ಎಂಬುವವರು ಸಂಶೋಧನೆ ಮಾಡಿದರು. ಈ ಟೆಕ್ನಾಲಜಿ ಬೌಲರ್‌ ಬಾಲ್‌ ಎಸೆದ ನಂತರ ಬಾಲ್‌ ಅನ್ನು ಕೀಪರ್‌ ವಿಕೆಟ್‌ ಹಿಂದೆಯೇ ಹಿಡಿದಿದ್ದಾರಾ ಎಂಬುದನ್ನು ತಿಳಿಯಲು ಅಂಪೈರ್‌ಗೆ ಸಹಾಯಕವಾಗುತ್ತದೆ. ಈ ಟೆಕ್ನಾಲಜಿಗೆ ಮೈಕ್ರೋಫೋನ್‌ ಅಳವಡಿಸಲಾಗಿರುತ್ತದೆ. ಇದನ್ನು ಸ್ಟಂಪ್‌ನ ಹತ್ತಿರದಲ್ಲಿ ಇರಿಸಲಾಗಿರುತ್ತದೆ.

ಸ್ಟಂಪ್‌ ಕ್ಯಾಮೆರಾ (Stump Camera)

ಸ್ಟಂಪ್‌ ಕ್ಯಾಮೆರಾ (Stump Camera)

6

ವೀಕ್ಷಕರಿಗೆ ಕ್ರಿಕೆಟ್‌ ನೋಡುವುದರಲ್ಲಿ ಉತ್ತಮ ಅನುಭವ ನೀಡಲು ಸ್ಟಂಪ್‌ ಕ್ಯಾಮೆರಾಗಳನ್ನು ಬಳಸಲಾಗಿರುತ್ತದೆ. ಸ್ಪಂಪ್‌ ಕ್ಯಾಮೆರಾ ಮೈದಾನದಲ್ಲಿ ನಡೆಯುವ ಆಟದ ಪ್ರತಿ ಸಂಗತಿಯನ್ನು ನಿಕಟವಾಗಿ ಸೆರೆಹಿಡಿಯುತ್ತದೆ. ಸಣ್ಣ ಕ್ಯಾಮರಾವು ಸ್ಟಂಪ್‌ನ ಒಳಗಡೆ ಇರಿಸಲಾಗಿರುತ್ತದೆ. ಆದ್ದರಿಂದ ಎಲ್ಲಾ ಆಂಗಲ್‌ನಲ್ಲೂ ನಿಕಟ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ.

 ಸ್ಪೀಡ್‌ ಗನ್‌ (Speed Gun)

ಸ್ಪೀಡ್‌ ಗನ್‌ (Speed Gun)

7

ಅಧಿಕೃತ ಗಿನ್ನಿಸ್‌ ವಿಶ್ವ ದಾಖಲೆಗಳ ಪ್ರಕಾರ " ಇಲೆಕ್ಟ್ರಿಕಲಿ ಬಾಲ್‌ ವೇಗವನ್ನು ಅಳತೆ ಮಾಡಿದಾಗ, ಅತ್ಯಧಿಕ ವೇಗವಾಗಿ ಬೌಲಿಂಗ್ ಮಾಡಿದ ಪುರುಷ ಬೌಲರ್‌ನ ಬಾಲ್‌ ವೇಗ 161.3 km/h. ಈ ವೇಗದಲ್ಲಿ ಬೌಲಿಂಗ್‌ ಮಾಡಿದವರು ಪಾಕಿಸ್ತಾನದ ಶೋಯಬ್‌ ಅಖ್ತರ್‌'ರವರು. 2003 ರ ಫೆಬ್ರವರಿ 22 ರಂದು ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‌ನಲ್ಲಿ ಈ ವೇಗವಾಗಿ ಬೌಲಿಂಗ್ ಮಾಡಿದ್ದರು. ಬಾಲ್‌'ನ ವೇಗವನ್ನು ಸಣ್ಣ ಡಾಪ್ಲರ್‌ ರೆಡಾರ್‌ ಘಟಕವು ವಿಶ್ವ ದಾಖಲೆಯ ಬೌಲಿಂಗ್‌ ವೇಗವನ್ನು ಅಳತೆ ಮಾಡಿತ್ತು. ಸ್ಪೀಡ್‌ ಗನ್‌ ಕ್ರಿಕೆಟ್‌ನಲ್ಲಿ ಬಹುಮುಖ್ಯ ಟೆಕ್ನಾಲಜಿಯಾಗಿದ್ದು, ಬೌಲಿಂಗ್‌ ವೇಗವನ್ನು ಅಳತೆ ಮಾಡುತ್ತದೆ.

ಮೈದಾನದಲ್ಲಿ ರಿಯಲ್‌ ಟೈಮ್‌ ಕಾಮೆಂಟರಿ

ಮೈದಾನದಲ್ಲಿ ರಿಯಲ್‌ ಟೈಮ್‌ ಕಾಮೆಂಟರಿ

8

ಕ್ರಿಕೆಟ್ ಪಂದ್ಯದ ಆಟದ ಸಮಯದಲ್ಲಿಯ ವೀಕ್ಷಕರ ಅತ್ಯುತ್ತಮ ಅನುಭವಕ್ಕಾಗಿ 'T20' ರಿಯಲ್‌ ಟೈಮ್‌ ಕಾಮೆಂಟರಿ ಅನ್ನು ಆಟಗಾರರು ಮತ್ತು ಅಂಪೈರ್‌ಗಳಿಂದ ಪರಿಚಯಿಸಿದೆ. ಇದು ಆಟಗಾರರು ತಮ್ಮ ತಂತ್ರವನ್ನು ನಿರಂತರವಾಗಿ ಮೈದಾನದಲ್ಲಿ ವಿವರಿಸಲು ಮತ್ತು ಅಭಿವೃದ್ದಿಪಡಿಸಲು ಪರಿಚಯಿಸಲಾದ ಟೆಕ್ನಾಲಜಿಯಾಗಿದೆ.

ಬಾಲ್‌ ಸ್ಪಿನ್‌ RPM(Ball Spin RPM)

ಬಾಲ್‌ ಸ್ಪಿನ್‌ RPM(Ball Spin RPM)

9

ಇತ್ತೀಚೆಗೆ 2013 ರ ಆಶಿಸ್‌ ಸರಣಿಯಲ್ಲಿ ಸ್ಕೈ ಸ್ಪೋರ್ಟ್ಸ್, ಬಾಲ್‌ ಸ್ಪಿನ್‌ RPM(revolutions per minute) ಅನ್ನು ಪರಿಚಯಿಸಿತು. ಇದು ಬೌಲರ್‌ ಬಾಲ್‌ ಅನ್ನು ಎಸೆದ ನಂತರ ಬಾಲ್‌ ಸ್ಪಿನ್‌ ರೇಟ್‌ ಅನ್ನು ಅಳತೆ ಮಾಡಲು ಸಹಾಯವಾಗುವ ಟೆಕ್ನಾಲಜಿ. ವಿಮರ್ಶಾತ್ಮಕವಾಗಿ ಮುಖ್ಯ ಅಭಿವೃದ್ಧಿ ಎಂದರೆ ಬಾಲ್‌ ಸ್ಪಿನ್‌ RPM(revolutions per minute).

ಸೂಪರ್‌ ಸ್ಲೋ ಮೋಷನ್‌ ( Super slow motion)

ಸೂಪರ್‌ ಸ್ಲೋ ಮೋಷನ್‌ ( Super slow motion)

10

ಈ ಟೆಕ್ನಾಲಜಿ ಆಧುನಿಕ ಉತ್ತಮ ವೇಗದ ಕ್ಯಾಮೆರಾಗಳನ್ನು ಬಳಸಿಕೊಂಡು ಫ್ರೇಮ್‌ ರೇಟ್‌ ಬಳಸಿಕೊಂಡು ಬಾಲ್‌ನ ಸೂಪರ್‌ ಸ್ಲೋ ಮೋಷನ್‌ ಅನ್ನು ಪುನರಾವರ್ತಿಸಲು ಸಹಾಯಕವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
10 Technological Advancements in Cricket. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot