ಆಪಲ್ ಪ್ರೇಮಿಗಳಿಗೆ ಕಿರಿಕಿರಿ ಎಂದೆನಿಸುವ ಆಂಡ್ರಾಯ್ಡ್ ಫೀಚರ್ಸ್

  By Shwetha
  |

  ಆಪಲ್ ಅಭಿಮಾನಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲವೊಂದು ರಹಸ್ಯಗಳನ್ನು ಆಂಡ್ರಾಯ್ಡ್ ಹೊಂದಿದ್ದು ಈ ಫೀಚರ್‌ಗಳು ನಮ್ಮ ಫೋನ್‌ನಲ್ಲಿ ಏಕಿಲ್ಲವೆಂದು ಆಪಲ್ ಬಳಕೆದಾರರು ಅಲವತ್ತುಕೊಳ್ಳುವುದು ಸಹಜವಾಗಿದೆ. ಇನ್ನು ಆಂಡ್ರಾಯ್ಡ್ ಬಳಕೆದಾರರು ಆಪಲ್‌ ಫೋನ್‌ನಲ್ಲಿರುವ ಕೆಲವೊಂದು ವಿಶೇಷತೆಗಳನ್ನು ನೋಡಿ ಕಾತರಗೊಳ್ಳುವುದು ಸಹಜವೇ ಆಗಿದೆ.

  ಓದಿರಿ: ಫೋನ್‌ನಲ್ಲಿ ಈ ಲಾಕ್‌ಗಳಿಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!

  ಇಂದಿನ ಲೇಖನದಲ್ಲಿರುವ ಈ ಎರಡೂ ದಿಗ್ಗಜರ ವ್ಯತ್ಯಾಸಗಳನ್ನು ನಾವು ಮುಂದೆ ಇರಿಸಲಿದ್ದು ನಿಜಕ್ಕೂ ಇದು ನಿಮ್ಮನ್ನು ಅಚ್ಚರಿಗೊಳಿಸಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವಿನ್ಯಾಸದಲ್ಲಿ ಅನುಕೂಲತೆ ಇಲ್ಲದಿರುವುದು

  ಗೂಗಲ್ ತನ್ನ ಫೋನ್‌ಗಳಲ್ಲಿ ಯಾವುದೇ ಹೊಸ ವಿನ್ಯಾಸಗಳನ್ನು ಅನುಸರಿಸುವುದಿಲ್ಲ. ಕೆಲವೊಂದು ಅಪ್ಲಿಕೇಶನ್‌ಗಳ ತಯಾರಿಯಲ್ಲಿ ಇದು ಸಮಸ್ಯೆಗಳನ್ನು ಉಂಟುಮಾಡುತ್ತಿರುತ್ತದೆ. ಆದರೆ ಆಪಲ್ ತನ್ನ ಅಪ್ಲಿಕೇಶನ್ ನಿರ್ಮಾಣದಲ್ಲಿ ಸಂಪೂರ್ಣತೆಯನ್ನು ಅನುಸರಿಸುತ್ತದೆ. ಯಾವುದೇ ದೋಷಗಳನ್ನು ಆಪಲ್‌ನಲ್ಲಿ ನಮಗೆ ಗುರುತಿಸಲಾಗುವುದಿಲ್ಲ.

  ಆಂಡ್ರಾಯ್ಡ್‌ನಲ್ಲಿ ನಿರ್ಬಂಧನೆಗಳಿಲ್ಲ

  ಆಪಲ್‌ನಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಯಾವುದೇ ಕಟ್ಟುಪಾಡುಗಳನ್ನು ವಿಧಿಸಿಲ್ಲ. ಬಳಕೆದಾರ ಸ್ನೇಹಿಯಾಗಿರುವ ಆಂಡ್ರಾಯ್ಡ್ ಐಫೋನ್‌ನಂತೆ ಜಟಿಲತೆಯನ್ನು ಬಳಕೆದಾರರಿಗೆ ಒದಗಿಸುವುದಿಲ್ಲ.

  ಓಎಸ್ ಅಪ್‌ಡೇಟ್‌ಗಳು

  ಆಂಡ್ರಾಯ್ಡ್‌ನ ಹೊಸ ಆವೃತ್ತಿಗಳು ಬಂದಾಗ ಹೆಚ್ಚಿನ ಬಳಕೆದಾರರು ಇದಕ್ಕಾಗಿ ಕಾಯಬೇಕಾಗುತ್ತದೆ. ನಿಮ್ಮಲ್ಲಿ ನೆಕ್ಸಸ್ ಡಿವೈಸ್ ಇದೆ ಎಂದಾದಲ್ಲಿ ಏನೂ ತೊಂದರೆಯಿಲ್ಲ. ಆದರೆ ಇತರ ಡಿವೈಸ್‌ಗಳಲ್ಲಿ ಈ ತೊಂದರೆ ಇನ್ನೂ ಇದೆ. ಐಓಎಸ್ ಬಳಕೆದಾರರು ಇಂತಹ ತೊಂದರೆಗೆ ಈಡಾಗಬೇಕಿಲ್ಲ. ಓಎಸ್‌ ಅಪ್‌ಡೇಟ್ ಆದ ಸಮಯದಲ್ಲೇ ಐಓಎಸ್ ಬಳಕೆದಾರರಿಗೆ ಓಎಸ್‌ ಡಿವೈಸ್‌ಗಳಲ್ಲಿ ಲಭ್ಯವಾಗುತ್ತದೆ.

  ಅಪ್ಲಿಕೇಶನ್ ತೊಂದರೆ

  ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಸ್ವಯಂಚಾಲಿತವಾಗಿ ಸಿಕ್ಕ ಸಿಕ್ಕ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಆಗುತ್ತಿರುತ್ತವೆ. ನಿಮಗೆ ಇದು ಅನಾವಶ್ಯಕ ಎಂದೆನಿಸಿದರೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತಿರುತ್ತವೆ. ಆದರೆ ಐಓಎಸ್‌ನಲ್ಲಿ ಈ ತರಹದ ಸಮಸ್ಯೆಗಳು ಉಂಟಾಗುವುದಿಲ್ಲ.

  ಕಂಟ್ರೋಲ್ ಸೆಂಟರ್

  ಐಓಎಸ್ ಕಂಟ್ರೋಲ್ ಸೆಂಟರ್ ಅನ್ನು ಯಾವುದೇ ಪರದೆಯಿಂದ ಪ್ರವೇಶಿಸಬಹುದಾಗಿದೆ ಇದು ಹೆಚ್ಚಿನ ಸ್ವಿಚ್‌ಗಳು, ಕಂಟ್ರೋಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಜೊತೆಗೆ ಬಂದಿದ್ದು ವಾಲ್ಯೂಮ್ ಸ್ಲೈಡರ್ ಅನ್ನು ಹೊಂದಿದೆ.

  ಆಂಡ್ರಾಯ್ಡ್‌ನಲ್ಲಿ ಸೀಮಿತ ಕ್ಯಾಮೆರಾ ಅಪ್ಲಿಕೇಶನ್‌ಗಳು

  ಐಓಎಸ್‌ನಲ್ಲಿರುವ ಡೀಫಾಲ್ಟ್ ಕ್ಯಾಮೆರಾ ಹೆಚ್ಚು ಫೀಚರ್‌ಗಳನ್ನು ಒಳಗೊಂಡಿದ್ದು ಗೂಗಲ್‌ನ ಡೀಫಾಲ್ಟ್ ಕ್ಯಾಮೆರಾ ಅಪ್ಲಿಕೇಶನ್‌ಗಿಂತ ಅತ್ಯುತ್ತಮವಾಗಿದೆ.

  ಐಕ್ಲೌಡ್ ಬ್ಯಾಕಪ್ ಆಂಡ್ರಾಯ್ಡ್‌ನಲ್ಲಿಲ್ಲ

  ಐಕ್ಲೌಡ್ ಬ್ಯಾಕಪ್‌ಗೆ ಸರಿಸಾಟಿಯಾಗಿರುವಂಥದ್ದು ಆಂಡ್ರಾಯ್ಡ್‌ನಲ್ಲಿಲ್ಲ. ಐಕ್ಲೌಡ್ ನಿಮ್ಮ ಡಿವೈಸ್‌ನಲ್ಲಿರುವ ಎಲ್ಲವನ್ನೂ ಬ್ಯಾಕಪ್ ಮಾಡುತ್ತದೆ. ನಿಮ್ಮ ಸಂಪೂರ್ಣ ಆಂಡ್ರಾಯ್ಡ್ ಡಿವೈಸ್ ಅನ್ನು ಬ್ಯಾಕಪ್ ಮಾಡಲು ನೀವು ಅದನ್ನು ರೂಟ್ ಮಾಡುವುದು ಅತ್ಯವಶ್ಯಕವಾಗಿದೆ.

  ಅಪ್ಲಿಕೇಶನ್‌ಗಳು

  ಆಪಲ್ ಸ್ಟೋರ್‌ಗಿಂತಲೂ ಹೆಚ್ಚಿನ ಅಪ್ಲಿಕೇಶನ್‌ಗಳು ಗೂಗಲ್ ಸ್ಟೋರ್‌ನಲ್ಲಿದೆ. ಆಪಲ್‌ನಷ್ಟು ನಿರ್ಬಂಧ ಗೂಗಲ್ ತನ್ನ ಆಂಡ್ರಾಯ್ಡ್‌ಗೆ ನೀಡದಿರುವುದೇ ಇದಕ್ಕೆ ಕಾರಣವಾಗಿದೆ. ಇನ್ನು ಹೊಸ ಅಪ್ಲಿಕೇಶನ್‌ಗಳ ಬಿಡುಗಡೆಯ ಸಂದರ್ಭದಲ್ಲಿ ಆಪಲ್ ಅದನ್ನು ಬಳಕೆದಾರರಿಗೆ ಕೂಡಲೇ ಒದಗಿಸುತ್ತದೆ. ಆದರೆ ಆಂಡ್ರಾಯ್ಡ್‌ನಲ್ಲಿ ನೀವು ಹೊಸ ಅಪ್ಲಿಕೇಶನ್‌ಗಳ ಡೌನ್‌ಲೋಡ್‌ಗಾಗಿ ಬಹಳಷ್ಟು ಸಮಯ ಕಾಯಬೇಕಾಗುತ್ತದೆ.

  ವಿಶೇಷತೆ

  ಮ್ಯಾಕ್ ಅಥವಾ ಐಪ್ಯಾಡ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ಐಓಎಸ್ 8 ನ ಫೀಚರ್ ಆದ ಕಂಟ್ಯೂನಿಟಿ ನಿಮ್ಮ ಜೀವನವನ್ನು ಇನ್ನಷ್ಟು ಸರಳಗೊಳಿಸಲಿದೆ. ಆದರೆ ಆಂಡ್ರಾಯ್ಡ್‌ನಲ್ಲಿ ಯಾವಾಗಲೂ ಕಿರಿಕಿರಿ ತಪ್ಪುವುದೇ ಇಲ್ಲ.

  ಆಪಲ್ ಹೆಲ್ತ್ ಉತ್ತಮ

  ಆಪಲ್ ಹೆಲ್ತ್ ನಿಮ್ಮ ಬಳಿ ಇದೆ ಎಂದಾದಲ್ಲಿ ಗೂಗಲ್ ಫಿಟ್ ನಿಮಗೆ ನಿರಾಸೆಯನ್ನುಂಟು ಮಾಡುವುದು ಖಂಡಿತ. ಇವುಗಳೆರಡರ ಫೀಚರ್‌ಗಳು ಸಮಾನವಾಗಿದ್ದರೂ ಆಪಲ್ ಹೆಲ್ತ್, ಗೂಗಲ್ ಫಿಟ್‌ಗಿಂತ ಉತ್ತಮವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  You've been an Apple loyalist during your entire life, but the inevitable happens and an unstoppable compelling force has made you consider doing the unthinkable - making the switch to Android. Here we can find some features which are differentiating android and apple.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more