ಆಪಲ್‌ ದಿಗ್ಗಜನ ಕಿವಿಮಾತುಗಳು

Written By:

ಇಂದು ಜಗತ್ತಿನ ತಂತ್ರಜ್ಞಾನದ ಮುಖವನ್ನೇ ಬದಲಿಸಿದ ವ್ಯಕ್ತಿಯೊಬ್ಬನನ್ನು ನೆನೆಯುವ ದಿನವಾಗಿದೆ. ಆತ ಬೇರಾರು ಅಲ್ಲ ಸೃಜನಶೀಲತೆಯೊಂದಿಗೆ ತಂತ್ರಜ್ಞಾನ ರೂಢಿಗಳನ್ನು ಬದಲಿಸಿದ 'ಸರ್ ಸ್ಟೀವನ್ ಪೌಲ್ ಜಾಬ್ಸ್'. ಇವರು ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ಪ್ರವರ್ತಕ. ಪ್ರತಿಷ್ಠಿತ ಆಪಲ್‌ ಕಂಪನಿಯ ಸಹ-ಸಂಸ್ಥಾಪಕರು ಹೌದು. ಇಂದು ಅವರ ಪುಣ್ಯತಿಥಿಯಾಗಿದ್ದು ಅವರನ್ನು ಟೆಕ್‌ ಕ್ಷೇತ್ರ ನೆನೆಯಲೇ ಬೇಕಾಗಿದೆ. ಇವರ ಸಾಧನೆಗೆ ಸ್ಫೂರ್ತಿಯಾದ ಅಂಶಗಳು ಮತ್ತು ಅವರಿಂದ ತಿಳಿಯಬೇಕಾದ ಹಲವು ವಿಷಯಗಳನ್ನು ನಾವು ಈ ಲೇಖನಲ್ಲಿ ನಿಮಗೆ ತಿಳಿಸಲಿದ್ದೇವೆ.

ಓದಿರಿ: ಎಂದೂನೋಡದ ಚಂದ್ರನ ಫೋಟೊಗಳು

ಸೃಜನಶೀಲ ವ್ಯಕ್ತಿತ್ವದ ಸ್ಟೀವ್ ಜಾಬ್ಸ್ ರಿಂದ ತಿಳಿಯಬೇಕಾದ 10 ವಿಷಯಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಸಮಯ ಇಲ್ಲಿ ಮಿತಿಯಾಗಿದೆ.

ನಿಮ್ಮ ಸಮಯ ಇಲ್ಲಿ ಮಿತಿಯಾಗಿದೆ.

ನೀವು ಎಲ್ಲೇ ಇರಿ, ಹೇಗೆ ಇರಿ. ಆದರೆ ನಾವು ಕಂಡಿತ ಸಾಯುತ್ತೇವೆ. ನಾವು ಬದುಕಿರುವ ಹಿಂದೆ ನಮ್ಮ ಆಲೋಚನೆಗಳು, ನೆನಪುಗಳ ಜೊತೆಯಲ್ಲಿ ಕೆಲಸ ಮಾಡುತ್ತ, ಹೊಸದೊಂದನ್ನು ರೂಪಿಸಬೇಕಾಗಿದೆ.

 ಪ್ರಾರಂಭ ಒಂದೇ ಮುಖ್ಯ

ಪ್ರಾರಂಭ ಒಂದೇ ಮುಖ್ಯ

ಯಾವ ಕೆಲಸಗಳಿಗೆ ಆಗಲಿ ಹಣ, ಇನ್ವೆಸ್ಟರ್ಸ್‌, ಪ್ಲಾನ್‌, ಇದಾವುದು ಬೇಕಿಲ್ಲ. ನಿಮ್ಮಲ್ಲಿ ನಂಬಿಕೆಯೊಂದಿಗೆ ಪ್ರಾರಂಭವೇ ಮುಖ್ಯ.

ಎಂದಿಗೂ ಬಿಡದಿರಿ

ಎಂದಿಗೂ ಬಿಡದಿರಿ

ನೀವು ಕೈಗೊಂಡ ಕೆಲಸಗಳು ಯಾವಾಗ ಹೇಗೆ ಕಷ್ಟಕ್ಕೆ ಸಿಲುಕುತ್ತವೆ ಎಂಬ ಭಯ ಬೇಡ. ಆಪಲ್‌ ಇಂಕ್‌ ಒಂದು ಗ್ಯಾರೇಜ್‌ನಲ್ಲಿ ಪ್ರಾರಂಭವಾಗಿ, ಇಂದು ವಿಶ್ವದ ರಾಷ್ಟ್ರೀಯ ಆದಾಯದಲ್ಲಿ ಮೂರನೇ ಸ್ಥಾನ ಪಡೆದಿದೆ.

ಹಸಿವಿನಿಂದ ಉಳಿಯಿರಿ , ಮೂರ್ಖರಾಗಿ ಉಳಿಯಿರಿ

ಹಸಿವಿನಿಂದ ಉಳಿಯಿರಿ , ಮೂರ್ಖರಾಗಿ ಉಳಿಯಿರಿ

ಕೆಲವೊಮ್ಮೆ ನಿಮ್ಮ ಮೂರ್ಖ ಪ್ರಯತ್ನಗಳನ್ನು ಬಳಸಲು ಹೆದರದಿರಿ, ಅದನ್ನೇ ಬಳಸಿ ನಂತರದಲ್ಲಿ ನೀವು ಅದೇ ಚಟುವಟಿಕೆಯಿಂದ ಯಾವುದು ಅಗುವುದಿಲ್ಲ ಎಂದು ಯೋಚಿಸುತ್ತೀರಿ. ನಿಮ್ಮ ಮೊದಲ ಪ್ರಯತ್ನಗಳೆಲ್ಲವನ್ನು ಅದರಂತೆ ನಿರ್ವಹಿಸಿ.

ಶ್ರಮ ಜೀವಿಗಳಾಗಿ ಕೆಲಸ ನಿರ್ವಹಿಸಿ

ಶ್ರಮ ಜೀವಿಗಳಾಗಿ ಕೆಲಸ ನಿರ್ವಹಿಸಿ

ಆಪಲ್‌ ಸಂಸ್ಥಾಪಕ ಸ್ಟೀವ್ ಜಾಬ್ಸ್ ತನ್ನ ಕೆಲಸದಲ್ಲಿ ಆತ್ಮವನ್ನೇ ಇರಿಸಿದ್ದ. ತಾನು ಕೆಲಸ ನಿರ್ವಹಿಸುವಾಗ ಅಳಲು, ಗೆಲ್ಲಲು ಯಾವುದಕ್ಕೂ ಸಮಯವಿಲ್ಲದೇ ಕೆಲಸದಲ್ಲಿ ತೊಡಗಿರುತ್ತಿದ್ದ. ನಂತರದಲ್ಲಿ ಅದೇ ಬೃಹತಾಕಾರದಲ್ಲಿ ಹೊರಹೊಮ್ಮಿತು.

ಕಲಿಯಲು ವಿಷಯಗಳನ್ನು ಸರಳವಾಗಿ ಇರಿಸಿರಿ

ಕಲಿಯಲು ವಿಷಯಗಳನ್ನು ಸರಳವಾಗಿ ಇರಿಸಿರಿ

ಪ್ರಮಾಣಿಕತೆ ಮತ್ತು ನಮ್ರತೆಯಿಂದ ತೋರ್ಪಡಿಕೆ ಎಂಬುದು ಯಾವಾಗ ಬೇಕಾದರೂ ಬರಬಹುದು. ಆದರೆ ಸ್ಟೀವ್ ಜಾಬ್ಸ್ ಎಷ್ಟು ಬಿಲಿಯನ್‌ ಬೇಕಾದರೂ ತನ್ನ ತೋರ್ಪಡಿಕೆಗೆ ಸುರಿಯಬಹುದಿತ್ತು. ಆದರೆ ಆತ ಎಂದಿಗೂ ಕಂಡದ್ದು, ತನ್ನ ಗ್ಲಾಸ್‌, ಸರಳ ಜೀನ್ಸ್‌, ಒಂದು ಸ್ವೆಟರ್‌ನಿಂದ ಮಾತ್ರ.

ನೀವು ಮಾಡುವ ಕೆಲಸವನ್ನು ಪ್ರೀತಿಸಿ

ನೀವು ಮಾಡುವ ಕೆಲಸವನ್ನು ಪ್ರೀತಿಸಿ

ನಿಮ್ಮ ಕೊನೆ ಉಸಿರಿನವರೆಗೂ ಸಹ ನೀವು ನಿರ್ವಹಿಸುವ ಕೆಲಸದ ಮೇಲೆ ಆತ್ಮದಿಂದ ಪ್ರೀತಿ ಇರಲಿ. ಇದಕ್ಕೇ ಉದಾಹರಣೆಯಾಗಿ ಜಾಬ್ಸ್‌ ತಾವು ಆಸ್ಪತ್ರೆಯಲ್ಲಿದ್ದಾಗಲು ಹೊಸ ಉತ್ಪನ್ನದ ತಯಾರಿಗೆ ಆಲೋಚಿಸುತ್ತಿದ್ದರೂ. ಕಾರಣ ಅವರ ಕೆಲಸದಲ್ಲಿನ ಪ್ರೀತಿ.

ಹಣ

ಹಣ

ಹಣ ಮಾಡುವುದೇ ನಿಮ್ಮ ಪ್ರೇರಣೆ ಆಗಿದ್ದರೇ ಅದು ನಿಮಗೆ ಎಂದೂ ಸಿಗುವುದಿಲ್ಲ.

 ಪ್ರಶ್ನೆ

ಪ್ರಶ್ನೆ

ನಿಮಗೆ ಉತ್ತಮವಾದದ್ದು ಸಿಗಬೇಕಾದಲ್ಲಿ, ಅದಕ್ಕಾಗಿ ಏನು ಮಾಡಿದ್ದೀರಿ ಎಂಬ ಪ್ರಶ್ನೆ ಇರುತ್ತದೆ.

ಎಂದಿಗೂ ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ

ಎಂದಿಗೂ ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ

ಯಾರಿಗೆ ಹೆಚ್ಚು ಆಲೋಚನೆ ಮಾಡಲು ಶಕ್ತಿ ಇರುತ್ತದೋ ಅವರು ಜಗತ್ತನ್ನು ಬದಲಾವಣೆ ಮಾಡಬಲ್ಲರು, ಆದರೆ ಅದರಲ್ಲಿ ಅವರು ಕೆಲಸ ಮಾಡಿದ್ದಲ್ಲಿ ಮಾತ್ರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Talk of a man who changed norms and showed the world how genius stands out in a herd of maimed followers, and the first name that hits is Sir Steven Paul Jobs (Steve Jobs). Today, on the 5th of October, this legend who changed the face of technology for the world, left us.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot