ಹಳತಾಯಿತೆಂದು ಹಳೆಯ ಫೋನ್ ಅನ್ನು ಮೂಲೆಗೆಸೆಯಬೇಡಿ!!!

By Shwetha
|

ಹೊಸ ಡಿವೈಸ್‌ಗಳು ಈಗ ಮಾರುಕಟ್ಟೆಗೆ ಕಾಲಿಡುತ್ತಿದ್ದು ಆಗ ಹಳೆಯದನ್ನು ಮರೆತು ಹೊಸದನ್ನು ಖರೀದಿಸುವ ನಿಮ್ಮ ಹುಮ್ಮಸ್ಸು ದುಪ್ಪಟ್ಟಾಗುವುದು ಸಹಜ. ಆದರೆ ನಿಮ್ಮ ಬಳಿ ಈಗಾಗಲೇ ಒಂದು ಡಿವೈಸ್ ಇದ್ದು ಇನ್ನೊಂದನ್ನು ಖರೀದಿಸಲು ನೀವು ಕೊಂಚ ಹಿಂದೇಟು ಹಾಕುತ್ತೀರಿ ಆಗ ನಿಮಗೆ ಹಳೆಯ ಫೋನ್ ಅನ್ನು ಏನು ಮಾಡಬೇಕು ಎಂಬ ಚಿಂತೆ ಮೂಡುವುದು ಸಹಜ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮ್ಮ ಹಳೆಯ ಆಂಡ್ರಾಯ್ಡ್ ಫೋನ್‌ನಿಂದ ನಿಮಗುಂಟಾಗುವ ಪ್ರಯೋಜನಗಳನ್ನು ನಾವು ಪಟ್ಟಿ ಮಾಡುತ್ತಿದ್ದೇವೆ.

ಓದಿರಿ: ಫೋನ್ ಬಿಸಿಯಾಗುತ್ತಿದೆಯೇ ಈ ಹಂತಗಳನ್ನು ಅನುಸರಿಸಿ

ಹಾಗಾದರೆ ತಡಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಹಳೆಯ ಡಿವೈಸ್‌ಗಳಿಂದ ನೀವು ಪಡೆದುಕೊಳ್ಳಬಹುದಾದ ಕೆಲವೊಂದು ಪ್ರಯೋಜನಕಾರಿ ಅಂಶಗಳನ್ನು ನೀಡುತ್ತಿದ್ದು ಅವುಗಳನ್ನು ನೋಡಿ

ರೆಟ್ರೋ ಗೇಮ್ಸ್ ಕನ್ಸೋಲ್

ರೆಟ್ರೋ ಗೇಮ್ಸ್ ಕನ್ಸೋಲ್

ಕ್ರೋಮ್ ಕಾಸ್ಟ್ ಸ್ಟ್ರೀಮಿಂಗ್, ಮೈಕ್ರೊ ಯುಎಸ್‌ಬಿ ಎಚ್‌ಡಿಎಮ್ಐ ಕನ್‌ವರ್ಟರ್ ಕೇಬಲ್ ಖರೀದಿಸಿ ನಿಮ್ಮ ಫೋನ್ ಅನ್ನು ಗೇಮ್ಸ್ ಕನ್ಸೋಲ್ ಆಗಿ ಪರಿವರ್ತಿಸಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಕೆಲವೊಂದು ಗೇಮ್ಸ್‌ಗಳನ್ನು ಡೌನ್‌ಲೋಡ್ ಮಾಡಿ.

ಜಿಮ್ ಡಿವೈಸ್

ಜಿಮ್ ಡಿವೈಸ್

ನಿಮ್ಮ ಹಳೆಯ ಡಿವೈಸ್ ಅನ್ನು ಜಿಮ್ ಡಿವೈಸ್‌ನಂತೆ ಬಳಸಿಕೊಳ್ಳಬಹುದಾಗಿದೆ. ಬೇಡದ ಅಪ್ಲಿಕೇಶನ್ ನಿವಾರಣೆ ಮಾಡಿ, ಸಿಮ್ ಕಾರ್ಡ್ ಹೊರತೆಗೆಯಿರಿ, ವೈಫೈ ಬಳಸಿ ಫೇಸ್‌ಬುಕ್ ಅಥವಾ ಟ್ವಿಟ್ಟರ್ ಪ್ರವೇಶಿಸದಿರಿ.

ಡೆಸ್ಕ್‌ಟಾಪ್ ಕಂಪ್ಯೂಟರ್

ಡೆಸ್ಕ್‌ಟಾಪ್ ಕಂಪ್ಯೂಟರ್

ಇನ್ನು ಹಳೆಯ ಡಿವೈಸ್ ಅನ್ನು ಸಾಮಾನ್ಯ ಕಂಪ್ಯೂಟರ್‌ನಂತೆ ಕೂಡ ಬಳಸಬಹುದು. ನಿಮ್ಮ ಡಿವೈಸ್‌ನಲ್ಲಿ ಡೆಬಿಯನ್ ಓಪನ್ ಸೋರ್ಸ್ ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದನ್ನು ಮಾನಿಟರ್‌ಗೆ ಕನೆಕ್ಟ್ ಮಾಡಿಕೊಳ್ಳಿ ಬ್ಲ್ಯೂಟೂತ್ ಕೀಬೋರ್ಡ್ ಮತ್ತು ಮೌಸ್‌ಗೆ ಸಿಂಕ್

ನಿಮ್ಮ ಕಾರಿನ ಜಿಪಿಎಸ್

ನಿಮ್ಮ ಕಾರಿನ ಜಿಪಿಎಸ್

ನಿಮ್ಮ ಹಳೆಯ ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸಿಕೊಂಡು ಕಾರಿನ ಜಿಪಿಎಸ್ ಆಗಿ ಉಪಯೋಗಿಸಬಹುದಾಗಿದೆ. ಕಾಇನ ಎಮ್‌ಪಿ 3 ಪ್ಲೇಯರ್‌ನಂತೆ ಕೂಡ ನಿಮ್ಮ ಹಳೆಯ ಡಿವೈಸ್ ಕಾರ್ಯನಿರ್ವಹಿಸಬಹುದು.

ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್

ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್

ಗೂಗಲ್ ಕಾರ್ಡ್‌ಬೋರ್ಡ್ ಗೂಗಲ್‌ನ ಒಂದು ಅತ್ಯುತ್ತಮ ಯೋಜನೆ ಎಂದೆನಿಸಿದ್ದು ಹಳೆಯ ಡಿವೈಸ್ ಬಳಸಿ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ತಯಾರಿಸಿಕೊಳ್ಳಬಹುದು.

ಅಲಾರ್ಮ್ ಕ್ಲಾಕ್

ಅಲಾರ್ಮ್ ಕ್ಲಾಕ್

ನಿಮ್ಮ ಹಳೆಯ ಡಿವೈಸ್ ಅನ್ನು ಅಲರ್ಮ್ ಕ್ಲಾಕ್‌ನಂತೆ ಕೂಡ ಬಳಸಿಕೊಳ್ಳಬಹುದಾಗಿದೆ.

ಮೀಡಿಯಾ ಸೆಂಟರ್

ಮೀಡಿಯಾ ಸೆಂಟರ್

ಕ್ರೋಮ್‌ಕಾಸ್ಟ್ ಸ್ಟ್ರೀಮಿಂಗ್ ಡಿವೈಸ್ ಅನ್ನು ಖರೀದಿಸಿ, ನಿಮ್ಮ ಹಳೆಯ ಫೋನ್ ಅನ್ನು ರಿಫಾರ್ಮ್ಯಾಟ್ ಮಾಡಿ ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಇದನ್ನು ತುಂಬಿಸಿಕೊಳ್ಳಿ.

ವೈಫೈ ಎಕ್ಸ್‌ಟೆಂಡರ್

ವೈಫೈ ಎಕ್ಸ್‌ಟೆಂಡರ್

ನಿಮ್ಮ ವೈಫೈ ಸಿಗ್ನಲ್ ಅನ್ನು ವರ್ಧಿಸಲು ಹಳೆಯ ಡಿವೈಸ್ ಅನ್ನು ಬಳಸಿಕೊಳ್ಳಬಹುದಾಗಿದೆ. ಇದು ಸಿಗ್ನಲ್ ಅನ್ನು ಆರಿಸಿಕೊಳ್ಳುತ್ತದೆ ಮತ್ತು ಅದನ್ನು ಪುನರಾವರ್ತಿಸುತ್ತದೆ.

ರೈನ್ ಫಾರೆಸ್ಟ್ ಸಂರಕ್ಷಣೆಗೆ ಸಹಾಯ

ರೈನ್ ಫಾರೆಸ್ಟ್ ಸಂರಕ್ಷಣೆಗೆ ಸಹಾಯ

ನಿಮ್ಮ ಹಳೆಯ ಡಿವೈಸ್ ಅನ್ನು ಇಂತಹ ಸಂಸ್ಥೆಗಳಿಗೆ ದಾನ ಮಾಡಿ ಮತ್ತು ಅವುಗಳು ರೈನ್ ಫಾರೆಸ್ಟ್ ಸಂರಕ್ಷಣೆಗೆ ಸಹಾಯ ಮಾಡಲು ಸಹಾಯವನ್ನು ಮಾಡಬಲ್ಲವು.

ಭದ್ರತಾ ಕ್ಯಾಮೆರಾ

ಭದ್ರತಾ ಕ್ಯಾಮೆರಾ

ನಿಮ್ಮ ಮನೆಯನ್ನು ರಕ್ಷಿಸುವ ಭದ್ರತಾ ಕ್ಯಾಮೆರಾದಂತೆ ಹಳೆಯ ಡಿವೈಸ್ ಅನ್ನು ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
There are a number of creative uses for an old Android smartphone, that can make your life and the lives of others far easier.So, check out 15 things you can to do with your old Android smartphone...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X