ಏರ್ ಪ್ಯೂರಿಫೈಯರ್ ಖರೀದಿಸಬೇಕೆ?..ಈ 10 ಸಂಗತಿ ಗಮನಿಸಿ!

|

ವಾಹನಗಳು ಹಾಗೂ ಇನ್ನಿತರೆ ವಿಷಯಕ್ಕೆ ನಮ್ಮ ಸುತ್ತಮುತ್ತಲಿನ ಗಾಳಿ ಹೆಚ್ಚಿಗೆ ಮಲಿನವಾಗುತ್ತಿದೆ. ಇದರ ನಿಯಂತ್ರಣಕ್ಕೆ ಪ್ರಮುಖ ಕಂಪೆನಿಗಳಾದ ಫಿಲಿಪ್ಸ್‌, ಡೈಸನ್‌, ಲುಸ್ಕೋ ಸೇರಿದಂತೆ ಇನ್ನಿತರೆ ಕಂಪೆನಿಗಳು ವಿವಿಧ ಫೀಚರ್ಸ್‌ ಇರುವ ಪ್ಯೂರಿಫೈಯರ್‌ಗಳನ್ನು ಮಾರಾಟ ಮಾಡುತ್ತಿವೆ. ಈ ಪ್ಯೂರಿಫೈಯರ್ ಗಳಿಂದ ಬರುವ ಗಾಳಿ ಶುದ್ಧವಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ, ಇವುಗಳನ್ನು ಖರೀದಿಸುವ ಮುನ್ನ ಈ ವಿಷಯಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಿ.

ಪ್ಯೂರಿಫೈಯರ್

ಹೌದು, ಏರ್ ಪ್ಯೂರಿಫೈಯರ್ ವಿಷಯಕ್ಕೆ ಬಂದಾಗ ಇದರಲ್ಲಿ ಸಾಕಷ್ಟು ಫೀಚರ್ಸ್‌ ಇರುವ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ನಿಖರವಾಗಿ ನಿಮ್ಮ ಮನೆ, ನಿಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಯಾವ ರೀತಿಯ ಏರ್ ಪ್ಯೂರಿಫೈಯರ್ ಬೇಕಾಗಬಹುದು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?, ಅದರಲ್ಲೂ ಯಾವ ಏರ್ ಪ್ಯೂರಿಫೈಯರ್ ಹೇಗೆಲ್ಲಾ ಕೆಲಸ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯಾ?, ಈ ಕಾರಣಕ್ಕೆ ನಾವು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಇವುಗಳನ್ನು ತಿಳಿದಿಕೊಂಡರೆ ನೀವು ಏರ್ ಪ್ಯೂರಿಫೈಯರ್ ಖರೀದಿ ಮಾಡಲು ಅನುಕೂಲ ಆಗುತ್ತದೆ.

ಏರ್ ಪ್ಯೂರಿಫೈಯರ್‌ ಹೇಗೆ ಕೆಲಸ ಮಾಡುತ್ತದೆ?

ಏರ್ ಪ್ಯೂರಿಫೈಯರ್‌ ಹೇಗೆ ಕೆಲಸ ಮಾಡುತ್ತದೆ?

ಏರ್ ಪ್ಯೂರಿಫೈಯರ್‌ ಕಲುಷಿತ ಒಳಾಂಗಣದ ಗಾಳಿಯನ್ನು ಹೀರಿಕೊಂಡು ಅದರಿಂದ ಮಾಲಿನ್ಯಕಾರಕಗಳನ್ನು ತೆಗೆದುಹಾಕಿದ ನಂತರ ಅದನ್ನು ಮತ್ತೆ ಕೋಣೆಗೆ ಬಿಡುಗಡೆ ಮಾಡುತ್ತದೆ. ಇನ್ನು ಒಳಾಂಗಣ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ವಿವಿಧ ರೀತಿಯ ತಂತ್ರಜ್ಞಾನಗಳನ್ನು ಬಳಸುತ್ತದೆ. ಹಾಗೆಯೇ ವಿವಿಧ ರೀತಿಯ ಶೋಧನೆಯು ನಿರ್ದಿಷ್ಟ ಪ್ರಯೋಜನಗಳನ್ನು ಬಳಕೆದಾರರಿಗೆ ನೀಡಲಿವೆ.

ಇವು ಅನಿವಾರ್ಯವೇ?

ಇವು ಅನಿವಾರ್ಯವೇ?

ಕುಟುಂಬ ಅಂದ ಮೇಲೆ ಅಲ್ಲಿ ಯಾರಿಗಾದರೂ ಏನಾದರೂ ಉಸಿರಾಟದ ಸಮಸ್ಯೆ ಇದ್ದೇ ಇರುತ್ತದೆ. ಈ ಸಮಸ್ಯೆಯಿಂದ ಮಕ್ಕಳು ಹಾಗೂ ಇತರೆ ಸದಸ್ಯರನ್ನು ಏರ್ ಪ್ಯೂರಿಫೈಯರ್‌ ನಿಂದ ರಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಸಾಕುಪ್ರಾಣಿಗಳ ತಲೆಹೊಟ್ಟು, ಬರಿಗಣ್ಣಿಗೆ ಕಾಣದ ಇತರ ಮಾಲಿನ್ಯಕಾರಕಗಳನ್ನು ತೊಡೆದುಹಾಕುವ ಮೂಲಕ ಒಳಾಂಗಣ ಗಾಳಿಯ ಶುದ್ಧತೆಯ ಗುಣಮಟ್ಟವನ್ನು ಇವು ನಿರಂತರವಾಗಿ ಹೆಚ್ಚಿಸುತ್ತವೆ.

ವಿಭಿನ್ನ ಉದ್ದೇಶಕ್ಕೆ ವಿವಿಧ ಆಯ್ಕೆ

ವಿಭಿನ್ನ ಉದ್ದೇಶಕ್ಕೆ ವಿವಿಧ ಆಯ್ಕೆ

ಈ ಡಿವೈಸ್‌ಗಳಲ್ಲಿ ವಿವಿಧ ಫಿಲ್ಟರ್‌ಗಳು ಇರಲಿದ್ದು, ಗಾಳಿಯನ್ನು ಸ್ವಚ್ಛಗೊಳಿಸಲು ಇವು ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಹಂತದ ಫಿಲ್ಟರ್‌ ಮಾಡುವ ಡಿವೈಸ್‌ ಖರೀದಿಸಬೇಕು ಎಂದರೆ ಹೆಚ್ಚಿನ ಬೆಲೆ ಸಹ ನೀಡಬೇಕಾಗುತ್ತದೆ.

ಪ್ರಿ- ಫಿಲ್ಟರ್‌

ಪ್ರಿ- ಫಿಲ್ಟರ್‌

ಪ್ರಿ- ಫಿಲ್ಟರ್‌ ಹೊಂದಿರುವ ಏರ್ ಪ್ಯೂರಿಫೈಯರ್ ಧೂಳು ಮತ್ತು ಪಿಇಟಿ ಡ್ಯಾಂಡರ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅದರಲ್ಲೂ ನೀವೇನಾದರೂ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದರೆ ಹಾಗೂ ಸಾಕು ಪ್ರಾಣಿಗಳು ನಿಮ್ಮ ಮನೆಯಲ್ಲಿ ಇದ್ದರೆ ಈ ಫಿಲ್ಟರ್‌ ಇರುವ ಏರ್‌ ಪ್ಯೂರಿಫೈಯರ್ ಸಹಾಯಕವಾಗಲಿದೆ.

HEPA ಫಿಲ್ಟರ್ಸ್‌

HEPA ಫಿಲ್ಟರ್ಸ್‌

HEPA ಫಿಲ್ಟರ್ಸ್‌ ಇರುವ ಏರ್ ಪ್ಯೂರಿಫೈಯರ್ ಹೆಚ್ಚಿನ ಧೂಳಿನ ಕಣ, ಪರಾಗಗಳಂತಹ ಸಣ್ಣ ಕಣಗಳನ್ನು ನಾಶ ಮಾಡುತ್ತದೆ. ಈ ಡಿವೈಸ್ 0.3 ಮೈಕ್ರಾನ್‌ಗಳಷ್ಟು ಸಣ್ಣ ಕಣಗಳನ್ನೂ ನಾಶ ಮಾಡಬಲ್ಲ ಶಕ್ತಿ ಪಡೆದಿದೆ. ಹಾಗೆಯೇ ಉಸಿರಾಟದ ಸಮಸ್ಯೆ ಹೊಂದಿರುವ ಮಕ್ಕಳು ಇರುವ ಮನೆಯಲ್ಲಿ ಇದನ್ನು ಬಳಕೆ ಮಾಡಬಹುದು.

ಆಕ್ಟಿವೇಟೆಡ್ ಕಾರ್ಬನ್ / ಇದ್ದಿಲು ಶೋಧಕ

ಆಕ್ಟಿವೇಟೆಡ್ ಕಾರ್ಬನ್ / ಇದ್ದಿಲು ಶೋಧಕ

ಆಕ್ಟಿವೇಟೆಡ್ ಕಾರ್ಬನ್ ಅಥವಾ ಇದ್ದಿಲು ಶೋಧಕ ಫೀಚರ್ಸ್‌ ಇರುವ ಏರ್ ಪ್ಯೂರಿಫೈಯರ್ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಹಾಗೆಯೇ ಕೆಟ್ಟ ವಾಸನೆ, ಹೊಗೆ ಮತ್ತು ರಾಸಾಯನಿಕಗಳನ್ನು ನಾಶ ಮಾಡುತ್ತದೆ.

ಆಂಟಿಬ್ಯಾಕ್ಟೀರಿಯಲ್ ಮತ್ತು ಯುವಿ ಫಿಲ್ಟರ್ಸ್‌

ಆಂಟಿಬ್ಯಾಕ್ಟೀರಿಯಲ್ ಮತ್ತು ಯುವಿ ಫಿಲ್ಟರ್ಸ್‌

ಆಂಟಿಬ್ಯಾಕ್ಟೀರಿಯಲ್ ಮತ್ತು ಯುವಿ ಫಿಲ್ಟರ್ಸ್‌ ಫೀಚರ್ಸ್‌ ಇರುವ ಏರ್ ಪ್ಯೂರಿಫೈಯರ್ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗೆಯೇ ಶುದ್ಧ ಗಾಳಿಯನ್ನು ಬಳಕೆದಾರರಿಗೆ ನೀಡುತ್ತದೆ. ಇದರೊಂದಿಗೆ ಯುವಿ ಫಿಲ್ಟರ್‌ಗಳು ಗಾಳಿಯನ್ನು ಸ್ವಚ್ಛಗೊಳಿಸಿ ವಿವಿಧ ಸೋಂಕುಗಳು ಹರಡುವುದನ್ನು ತಡೆಯುತ್ತವೆ.

ಕೋಣೆಯ ಗಾತ್ರ ಗಮನಿಸಿ

ಕೋಣೆಯ ಗಾತ್ರ ಗಮನಿಸಿ

ನೀವು ಏರ್ ಪ್ಯೂರಿಫೈಯರ್ ಕೊಂಡುಕೊಳ್ಳಲು ಮುಂದಾಗುವ ಮುನ್ನ ನಿಮ್ಮ ಕೊಠಡಿಯ ಗಾತ್ರದ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ಏರ್ ಪ್ಯೂರಿಫೈಯರ್ ದೊಡ್ಡ ಗಾತ್ರದ ಕೋಣೆಯಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ಕಾರಣಕ್ಕೆ ಯಾವ ಏರ್ ಪ್ಯೂರಿಫೈಯರ್ ಎಷ್ಟು ಪ್ರದೇಶದ ವರೆಗೆ ಗಾಳಿಯನ್ನು ಶುದ್ಧ ಮಾಡುತ್ತವೆ ಎಂಬುದನ್ನು ಗಮದಲ್ಲಿರಿಸಿಕೊಂಡು ಖರೀದಿ ಮಾಡಿದರೆ ಅನುಕೂಲ ಆಗುತ್ತದೆ.

ಏರ್‌ ಚೇಂಜ್ ರೇಟ್‌

ಏರ್‌ ಚೇಂಜ್ ರೇಟ್‌

ಏರ್‌ ಚೇಂಜ್ ರೇಟ್‌ ವಿಷಯವನ್ನು ಸಾಮಾನ್ಯವಾಗಿ ಬಳಕೆದಾರರು ತಿಳಿದುಕೊಳ್ಳಬೇಕಿದೆ. ಯಾಕೆಂದರೆ ಒಂದು ಗಂಟೆಯಲ್ಲಿ ಏರ್‌ ಪ್ಯೂರಿಫೈಯರ್ ಎಷ್ಟು ಬಾರಿ ಕೋಣೆಯಲ್ಲಿನ ಗಾಳಿಯನ್ನು ಶುದ್ಧ ಮಾಡುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ಮೂಲಕ ಗಂಟೆಗೆ ಗರಿಷ್ಠ ಮಟ್ಟದಲ್ಲಿ ಗಾಳಿಯನ್ನು ಶುದ್ಧ ಮಾಡುವ ಪ್ಯೂರಿಫೈಯರ್ ಅನ್ನು ಆಯ್ಕೆ ಮಾಡಬಹುದು.

CADR ರೇಟಿಂಗ್

CADR ರೇಟಿಂಗ್

CADR ರೇಟಿಂಗ್ ಶುದ್ಧೀಕರಿಸಿದ ಗಾಳಿಯ ಪ್ರಮಾಣವನ್ನು ಅಳೆಯುವ ಮೂಲಕ ಏರ್ ಪ್ಯೂರಿಫೈಯರ್‌ನ ದಕ್ಷತೆಯನ್ನು ಇದು ತಿಳಿಸುತ್ತದೆ. ಹೆಚ್ಚಿನ CADR ರೇಟಿಂಗ್ ಇರುವ ಪ್ಯೂರಿಫೈಯರ್ ಖರೀದಿ ಮಾಡಿದರೆ ಹೆಚ್ಚಿನ ಶುದ್ಧಗಾಳಿಯಿಂದ ಉಸಿರಾಡಬಹುದು.

Best Mobiles in India

English summary
The air around us is getting more and more polluted due to vehicles and other things. For this reason, information about air purifier devices is given.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X