ಈ ನಿಯಮಗಳನ್ನು ಪಾಲಿಸಿ ಫೋನ್ ಬಳಸಿ

  By Shwetha
  |

  ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ತುಸು ಹೆಚ್ಚಾಗಿಯೇ ನಾವು ಮಾಡುತ್ತಿದ್ದೇವೆ. ನಮಗೆ ದೈನಂದಿನ ಬದುಕಿಗೆ ಫೋನ್‌ಗಳು ಉಪಕಾರಿಯಾಗಿದ್ದರೂ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಂಶವನ್ನು ನೀವು ಮನಗಾಣಲೇ ಬೇಕು. ಅಧಿಕ ಫೋನ್ ಬಳಕೆ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುತ್ತದೆ ಅಂತೆಯೇ ನಿಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

  ಓದಿರಿ: ಹಳೆಯ ಸ್ಮಾರ್ಟ್‌ಫೋನ್‌ ನಿಮ್ಮ ಉತ್ತಮ ಸಂಗಾತಿ

  ಇಂದಿನ ಲೇಖನದಲ್ಲಿ ಮೊಬೈಲ್ ಫೋನ್‌ಗಳ ಅತಿ ಬಳಕೆಯಿಂದ ನಿಮ್ಮ ದೇಹಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟಲು ನೆರವಾಗುವ ಕೆಲವು ಅಂಶಗಳನ್ನು ತಿಳಿದುಕೊಳ್ಳೋಣ. ಫೋನ್ ಬಳಸುವಾಗ ಯಾವ ರೀತಿಯ ಎಚ್ಚರಿಕೆಯಿಂದ ಪಾಲಿಸಿದರೆ ಅದರಿಂದ ಉಂಟಾಗುವ ಹಾನಿಯಿಂದ ತಪ್ಪಿಸಿಕೊಳ್ಳಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೆಡ್‌ಸೆಟ್ ಅಥವಾ ಸ್ಪೀಕರ್‌ಫೋನ್ ಮೋಡ್

  ನೀವು ಕರೆಯಲ್ಲಿರುವಾಗ, ವಯರ್ ಉಳ್ಳ ಹೆಡ್‌ಸೆಟ್ ಅಥವಾ ಸ್ಪೀಕರ್‌ಫೋನ್ ಮೋಡ್ ಬಳಸಿ. ಇದರಿಂದ ಕಡಿಮೆ ಪ್ರಮಾಣದ ರೇಡಿಯೇಶನ್ ನಿಮ್ಮನ್ನು ಸಮೀಪಿಸುತ್ತದೆ.

  ನಿಮ್ಮ ದೇಹದಿಂದ ದೂರವಿರಿಸಿ

  ನಿಮ್ಮ ಫೋನ್‌ನಿಂದ ನಿಮ್ಮನ್ನು ಆದಷ್ಟು ದೂರವಾಗಿರಿಸಿಕೊಳ್ಳಿ.

  ಫೋನ್ ಅನ್ನು ಪಾಕೆಟ್‌ಗಳಲ್ಲಿ ಇರಿಸಿಕೊಳ್ಳದಿರಿ

  ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿ ಇರಿಸುವುದರ ಬದಲಿಗೆ ರೇಡಿಯೇಶನ್‌ನಿಂದ ನಿಮ್ಮನ್ನು ಕಾಪಾಡುವ ಬೆಲ್ಟ್ ಹೋಲ್ಸಟರ್ ಅನ್ನು ಬಳಸಿ.

  ಪ್ರಯಾಣದಲ್ಲಿರುವಾಗ ಫೋನ್ ಬಳಕೆ ಬೇಡ

  ನೀವು ಚಾಲನೆಯಲ್ಲಿರುವಾಗ ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ.

  ಫೋನ್ ಆಫ್ ಮಾಡಿ

  ನೀವು ಫೋನ್ ಅನ್ನು ಬಳಸಿಕೊಳ್ಳದೇ ಇರುವ ಸಂದರ್ಭಗಳಲ್ಲಿ ಆಫ್ ಮಾಡಿಟ್ಟುಕೊಳ್ಳಿ.

  ಕೋರ್ಡೆಡ್ ಲ್ಯಾಂಡ್‌ಲೈನ್ ಫೋನ್ ಬಳಸಿ

  ವೈರ್‌ಲೆಸ್ ಫೋನ್ ಬದಲಿಗೆ ಕೋರ್ಡೆಡ್ ಲ್ಯಾಂಡ್‌ಲೈನ್ ಫೋನ್ ಬಳಸಿ.

  ಕಟ್ಟಡದ ಒಳಗೆ ಫೋನ್ ಬಳಸದಿರಿ

  ಸ್ಟೀಲ್ ವಿನ್ಯಾಸವುಳ್ಳ ಕಟ್ಟಡದ ಒಳಗೆ ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.

  ಮಕ್ಕಳು ಫೋನ್ ಬಳಸದಂತೆ ನೋಡಿಕೊಳ್ಳಿ

  ರೇಡಿಯೇಶನ್ ಅನ್ನು ಕೂಡಲೇ ಹೀರಿಕೊಳ್ಳುವ ಮಕ್ಕಳಿಂದ ಆದಷ್ಟು ಫೋನ್ ಅನ್ನು ದೂರವಿರಿಸಿ.

  18 ರ ಒಳಗಿನ ಮಕ್ಕಳಿಗೆ ಮೊಬೈಲ್ ನೀಡದಿರಿ

  ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ 18 ರ ಒಳಗಿನ ಮಕ್ಕಳು ಮೊಬೈಲ್ ಬಳಸದಂತೆ ನೋಡಿಕೊಳ್ಳಿ

  ಕಿವಿಯ ಹತ್ತಿರ ಇರಿಸಿಕೊಳ್ಳದಿರಿ

  ನೀವು ಕರೆಮಾಡುತ್ತಿರುವ ವ್ಯಕ್ತಿ ಫೋನ್ ತೆಗೆಯದ ಹೊರತು ಕಿವಿಗೆ ಸಮೀಪವಾಗಿ ಫೋನ್ ಅನ್ನು ಇರಿಸಿಕೊಳ್ಳಬೇಡಿ. ಇದು ಹೆಚ್ಚಿನ ರೇಡಿಯೇಶನ್ ಅನ್ನು ಉತ್ಪತ್ತಿ ಮಾಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The jury is still out about whether electromagnetic radiation from mobile phones and wireless home phones pose health risks. For those concerned about the potential dangers of using mobile devices, here are safety tips provided by the Environmental Health Trust.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more