Subscribe to Gizbot

ಟಾಪ್ 10 ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

Posted By:

ಕಂಪ್ಯೂಟರ್ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವೆಂಬುದು ಹೆಚ್ಚು ಮಹತ್ವಪೂರ್ಣ ಎಂದೆನಿಸಿದೆ. ಅದರಲ್ಲೂ ಶಾರ್ಟ್ ಕಟ್ ಕೀಗಳು ನಮ್ಮ ಕೆಲಸವನ್ನು ಹಗುರ ಮಾಡುವುದರ ಜೊತೆಗೆ ಕೆಲಸವನ್ನು ನೇರವಾಗಿ ಅಚ್ಚುಕಟ್ಟಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಲೇಖನದಲ್ಲಿ ಇಂತಹುದೇ ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯಗಳನ್ನು ಅರಿತುಕೊಳ್ಳೋಣ.

ಇಲ್ಲಿ ನೀಡಿರುವ ಟಾಪ್ 10 ಎಕ್ಸೆಲ್ ವಿಧಾನಗಳು ಅತ್ಯಂತ ಸರಳವಾಗಿದ್ದು ಪ್ರಯೋಜನಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲವನ್ನೂ ಆಯ್ಕೆಮಾಡಲು ಒಂದು ಕ್ಲಿಕ್

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಕಂಟ್ರೋಲ್ ಎ ಶಾರ್ಟ್ ಕಟ್ ಅನ್ನು ಬಳಸಿ ನೀವೆಲ್ಲಾ ಎಲ್ಲವನ್ನೂ ಆಯ್ಕೆಮಾಡುತ್ತೀರಿ, ಆದರೆ ಕಾರ್ನರ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಕೆಲವೇ ಸೆಕುಂಡುಗಳಲ್ಲಿ ಈ ಕೆಲಸವನ್ನು ನಿಮಗೆ ನಿರ್ವಹಿಸಬಹುದಾಗಿದೆ.

ಹೆಚ್ಚು ಪ್ರಮಾಣದಲ್ಲಿ ಎಕ್ಸೆಲ್ ಫೈಲ್‌ಗಳನ್ನು ತೆರೆಯುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ನೀವು ತೆರೆಯಲು ಬಯಸಿರುವ ಫೈಲ್‌ಗಳನ್ನು ಆಯ್ಕೆಮಾಡಿ ಮತ್ತು ಕೀಬೋರ್ಡ್‌ನಲ್ಲಿ ಎಂಟರ್ ಕೀ ಒತ್ತಿ, ಎಲ್ಲಾ ಫೈಲ್‌ಗಳು ತನ್ನಿಂದ ತಾನೇ ತೆರೆಯುತ್ತದೆ.

ವಿವಿಧ ಎಕ್ಸೆಲ್ ಫೈಲ್‌ಗಳ ಮಧ್ಯೆ ಬದಲಾಯಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಕಂಟ್ರೋಲ್ + ಟ್ಯಾಬ್ ಅನ್ನು ಬಳಸಿ ವಿವಿಧ ಫೈಲ್‌ಗಳ ನಡುವೆ ಮುಕ್ತವಾಗಿ ನೀವು ಬದಲಾಯಿಸಬಹುದು.

ಹೊಸ ಶಾರ್ಟ್ ಕಟ್ ಮೆನುವನ್ನು ರಚಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಫೈಲ್ > ಆಪ್ಶನ್ಸ್> ಕ್ವಿಕ್ ಏಕ್ಸಸ್ ಟೂಲ್ ಬಾರ್, ಎಡ ಕಾಲಮ್‌ನಿಂದ ಬಲಕ್ಕೆ ಕಟ್ ಮತ್ತು ಕಾಪಿಯನ್ನು ಮಾಡಿ ಅದನ್ನು ಉಳಿಸಿ. ಟಾಪ್ ಮೆನುವಿನಲ್ಲಿ ಇನ್ನೆರಡು ಶಾರ್ಟ್‌ಕಟ್‌ಗಳು ಸೇರಿರುವುದನ್ನು ನಿಮಗೆ ಕಾಣಬಹುದು.

ಸೆಲ್‌ಗೆ ಡಯಾಗ್ನಲ್ ಲೈನ್ ಸೇರಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಹೋಮ್ > ಫಾಂಟ್ > ಬಾರ್ಡರ್ಸ್ ನೀವು ಹೆಚ್ಚು ಬಾರ್ಡರ್ಸ್‌ಗೆ ಕ್ಲಿಕ್ ಮಾಡಿದಂತೆಲ್ಲಾ, ನಿಮಗೆ ಇನ್ನಷ್ಟು ಆಶ್ಚರ್ಯಕರ ಸಂಗತಿಗಳು ಕಾಣುತ್ತವೆ.

ಒಂದಕ್ಕಿಂತ ಸಾಲು ಅಥವಾ ಕಾಲಮ್ ಸೇರಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಹೈಲೈಟ್ ಆಗಿರುವ ಸಾಲುಗಳು ಮತ್ತು ಕಾಲಮ್‌ಗಳಿಗೆ ಬಲ ಕ್ಲಿಕ್ ಮಾಡಿ ಮತ್ತು ಡ್ರಾಪ್ ಡೌನ್ ಮೆನುವಿನಿಂದ ಇನ್‌ಸರ್ಟ್ ಆರಿಸಿ.

ಸೆಲ್‌ಗಳಲ್ಲಿ ಡೇಟಾ ಕಾಪಿ ಮಾಡುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಫೈಲ್ ಸರಿಸುವ ಮುನ್ನ ಕಂಟ್ರೋಲ್ ಬಟನ್ ಒತ್ತಿರಿ ಮತ್ತು ಹೊಸ ಕಾಲಮ್ ಎಲ್ಲಾ ಆಯ್ಕೆಯಾಗಿರುವ ಡೇಟಾವನ್ನು ನಕಲಿಸುತ್ತದೆ.

ಖಾಲಿ ಸೆಲ್‌ಗಳನ್ನು ವೇಗವಾಗಿ ಅಳಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಡೇಟಾಗೆ ಹೋಗಿ, ಫಿಲ್ಟರ್ ಕೆಳಭಾಗದ ಬಟನ್ ಗೋಚರವಾದ ನಂತರ, ಕೊನೆಯ ಆಯ್ಕೆಯನ್ನು ಆರಿಸಿ.

ವೈಲ್ಡ್ ಕಾರ್ಡ್‌ನೊಂದಿಗೆ ವಾಗ್ಯೂ ಸರ್ಚ್

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಪ್ರಶ್ನಾರ್ಥಕ ಚಿಹ್ನೆಯನ್ನು ಮೊದಲು ಹುಡುಕಬೇಕು ಹೀಗೆ ವೈಲ್ಡ್ ಕಾರ್ಡ್‌ನೊಂದಿಗೆ ವಾಗ್ಯೂ ಸರ್ಚ್ ಮಾಡಿ.

ಕಾಲಮ್‌ನಲ್ಲಿ ಯುನಿಕ್ ವಾಲ್ಯೂ ರಚಿಸುವುದು

ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಕಾಲಮ್ ಆರಿಸಿ ಕ್ಲಿಕ್ ಮಾಡಿ ಡೇಟಾ > ಸುಧಾರಿತ ಇಲ್ಲಿಗೆ ಹೋಗಿ. ಪಾಪ್ ಅಪ್ ವಿಂಡೋ ಕಾಣುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Tricks That Can Make Anyone An Excel Expert.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot