2018 ರಲ್ಲಿ ವೈರಲ್ ಆದ 10 ವೀಡಿಯೋಗಳು

|

ವೀಡಿಯೋ ಸ್ಟ್ರೀಮಿಂಗ್ ಗಾಗಿ ಜಗತ್ತಿನಾದ್ಯಂತ ಅತೀ ಹೆಚ್ಚು ಬಳಕೆ ಮಾಡುವುದೆಂದರೆ ಅದು ಯುಟ್ಯೂಬ್. ಇದರಲ್ಲಿ ಕೋಟಿಗಟ್ಟಲೆ ವೀಡಿಯೋಗಳಿದ್ದು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿಭಿನ್ನ ಪ್ರಾಕಾರದ ಎಲ್ಲಾ ರೀತಿಯ ವೀಡಿಯೋಗಳು ಲಭ್ಯವಾಗುತ್ತದೆ.

2018 ರಲ್ಲಿ ವೈರಲ್ ಆದ 10 ವೀಡಿಯೋಗಳು

ಇದಿಷ್ಟೇ ಅಲ್ಲದೆ ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಂಗಳು ಕೂಡ ಯೂನಿಕ್ ಆಗಿರುವ ಬಳಕೆದಾರರು ಜನರೇಟ್ ಮಾಡುವ ವೀಡಿಯೋ ಕಟೆಂಟ್ ಗಳಿಗೆ ಅವಕಾಶ ನೀಡುತ್ತವೆ. ಕೆಲವು ವೀಡಿಯೋಗಳು ಬಹಳ ಪ್ರಸಿದ್ಧಿ ಪಡೆದು ಬಿಡುತ್ತವೆ. ಹಾಗೆ 2018 ರಲ್ಲಿ ಅಂತರ್ಜಾಲದ ಜಾಣಗಳಲ್ಲಿ ಪ್ರಸಿದ್ಧಿಯಾದ ವೀಡಿಯೋಗಳನ್ನು ಪಟ್ಟಿಯೊಂದನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಯುಟ್ಯೂಬ್ ರೀವೈಂಡ್ 2018

ಯುಟ್ಯೂಬ್ ರೀವೈಂಡ್ 2018

ಯುಟ್ಯೂಬ್ ರಿವೈಂಡ್ 2018 ಅಂತರ್ಜಾಲ ವೇದಿಕೆಯಲ್ಲಿ ಅತ್ಯಂತ ಹೆಚ್ಚು ಇಷ್ಟಪಡದ ವೀಡಿಯೋ ಆಗಿದೆ.13+ ಇಷ್ಟವಿಲ್ಲದಿರುವಿಕೆಗಳು ಈ ಲೇಖನ ಬರೆಯುವ ಸಂದರ್ಬದಲ್ಲಿ ವ್ಯಕ್ತವಾಗಿದ್ದಲು.ಹಲವಾರು ಕ್ರಿಯೇಟರ್ ಗಳೊಂದಿಗೆ ಯುಟ್ಯೂಬ್ ಪ್ರತಿವರ್ಷ ಕಾರ್ಯ ನಿರ್ವಹಿಸುತ್ತದೆ ಮತ್ತು ಇದು 2018 ರಲ್ಲಿ ನಡೆದ ಪ್ರಮುಖ ಅಂಶಗಳನ್ನು ಆಧರಿಸಿರುತ್ತದೆ. ಆದರೆ 2018 ರ ರಿವೈಂಡ್ ವರ್ಷನ್ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳನ್ನು ಪಡೆದಿದೆ.

ಕಡಲೆಕಾಯಿ ಬೆಣ್ಣೆಯನ್ನು ಬಳಸಿ ಕಲ್ಲಿದ್ದಲ್ಲನ್ನು ವಜ್ರಗಳನ್ನಾಗಿ ಬದಲಿಸುವ ವೀಡಿಯೋ

ಫೇಸ್ ಬುಕ್ ನಲ್ಲಿ ಈ ವೀಡಿಯೋ ಅಂತರ್ಜಾಲ ಸೆನ್ಸೇಷನ್ ಆಗಿತ್ತು.ಇದರಲ್ಲಿ ಕಲ್ಲಿದ್ದಲ್ಲನ್ನು ವಜ್ರ ಅಥವಾ ಹೊಳೆಯುವ ಕ್ರಿಸ್ಟಲ್ ಕಲ್ಲುಳಂತೆ ಹೇಗೆ ತಯಾರಿಸಿವುದು ಎಂಬ ಬಗ್ಗೆ ಪಾಠ ಮಾಡಲಾಗಿದೆ.ಅಂತಿಮವಾಗಿ ಕೆಲವರು ಇದನ್ನು ಸಾಧ್ಯವಾಗುತ್ತದೆಯೇ ಎಂದು ಪರೀಕ್ಷಿಸಿ ಸುಳ್ಳೆಂದು ಹೇಳಿದ್ದಾರೆ. ಯಾರೂ ಕೂಡ ಕಡಲೆಕಾಯಿ ಎಣ್ಣೆ ಬಳಸಿ ಕಲ್ಲಿದ್ದಲ್ಲನ್ನು ವಜ್ರಗಳನ್ನಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ. ಆದರೂ ವೀಡಿಯೋ ಮಾತ್ರ ವೈರಲ್ ಆಗಿತ್ತು.

ಲೂಯಿಸ್ ಫೊನ್ಸಿ - ಡೆಸ್ಪಾಸಿಟೋ ಅಡಿ ಡಾಡಿ ಯಾಂಕೀ

ಲೂಯಿಸ್ ಫೊನ್ಸಿ - ಡೆಸ್ಪಾಸಿಟೋ ಅಡಿ ಡಾಡಿ ಯಾಂಕೀ

ಈ ವೀಡಿಯೋ 2017 ರಲ್ಲೇ ಪಬ್ಲಿಷ್ ಆಗಿದ್ದರೂ ಕೂಡ ಲೂಯಿಸ್ ಫೊನ್ಸಿ - ಡೆಸ್ಪಾಸಿಟೋ ಅಡಿ ಡಾಡಿ ಯಾಂಕೀ 5.6 ಮಿಲಿಯನ್ ನಷ್ಟು ಮಂದಿ ಈ ವೀಡಿಯೋ ನೋಡಿದ್ದಾರೆ.

ಸ್ಕೇಟ್ ಬೋರ್ಡಿಂಗ್ ಡಾಗ್

ಸ್ಕೇಟ್ ಬೋರ್ಡಿಂಗ್ ಡಾಗ್

ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.ನೀವೇ ನೋಡಿ ಬಿಡಿ.

ಸಾಲ್ಟ್ ಬೇ

ಸಾಲ್ಟ್ ಬೇ

ನೀವು ಅಡುಗೆ ಮತ್ತು ಆಹಾರಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಯುಟ್ಯೂಬ್ ನಲ್ಲಿ ಅಥವಾ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ನೋಡುತ್ತಿದ್ದರೆ ನಿಮಗೆ ಸಾಲ್ಟ್ ಬೇ ಬಗ್ಗೆ ನಿಮಗೆ ತಿಳಿದಿರುತ್ತದೆ. ಈ ಬಾಣಸಿಗನ ವೀಡಿಯೋಗಳು ಜಗತ್ತಿನಾದ್ಯಂತ ಪ್ರಖ್ಯಾತಿಯಾಗಿದೆ. ಮಾಂಸವನ್ನು ಈತ ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡುವ ವೀಡಿಯೋ ಬಹಳ ಪ್ರಸಿದ್ಧಿ.

ಅಸ್ಸಾಲಾಮು ಆಲಿಕುಮ್ ವಾಲಿಕುಮ್ ಅಸ್ಸಾಲಾಮ್

ಅಸ್ಸಾಲಾಮು ಆಲಿಕುಮ್ ವಾಲಿಕುಮ್ ಅಸ್ಸಾಲಾಮ್

ಇದೊಂದು ಶಾರ್ಟ್ ವೀಡಿಯೋ ಆಗಿದ್ದು 16 ಮಿಲಿಯನ್ ನೋಡುಗರ ಗಮನವನ್ನು ಸೆಳೆದಿದೆ. ಪ್ರಸಿದ್ಧಿ ಚಾನಲ್ ನಿಂದ ಪಬ್ಲಿಷ್ ಆಗದೆ ಇದ್ದರೂ ಇಷ್ಟೊಂದು ದೊಡ್ಡ ನೋಡುಗರ ಬಳಗವನ್ನು ಇದು ಹೊಂದಿದ್ದೇ ವಿಶೇಷ.

ಮಾರ್ವೆಲ್ ಸ್ಟುಡಿಯೋಸ್ ಆವೆಂಜರ್ಸ್- ಅಫೀಷಿಯಲ್ ಟ್ರೈಲರ್

ಮಾರ್ವೆಲ್ ಸ್ಟುಡಿಯೋಸ್ ಆವೆಂಜರ್ಸ್- ಅಫೀಷಿಯಲ್ ಟ್ರೈಲರ್

ಮಾರ್ವೆಲ್ ಸ್ಟುಡಿಯೋಸ್ ಆವೆಂಜರ್ಸ್ ನ ಅಫೀಶಿಯಲ್ ಟ್ರೈಲರ್ 24 ಮಿಲಿಯನ್ ವ್ಯೂಸ್ ಮತ್ತು ಕೌಂಟಿಂಗ್ ಹೊಂದಿದೆ. ಇದು ಮಾರ್ವೆಲ್ ಸಿನಿಮ್ಯಾಟಿಕ್ ಯುನಿವರ್ಸಿಟಿಯ ನಾಲ್ಕನೇ ಆವೆಂಜರ್ಸ್ ಮೂವಿಯ ಮೊದಲ ಟ್ರೈಲರ್ ಇದು.

ಎಮಿನೆಮ್ –ವಿನಮ್

ಎಮಿನೆಮ್ –ವಿನಮ್

ಎಮಿನೆಮ್ ವಿನಮ್ ಎನಿನಮ್ ನ ರ್ಯಾಪ್ ಸಾಂಗ್. ರ್ಯಾಪ್ ದೇವರು ಎನ್ನಲಾಗುತ್ತದೆ. ಅಕ್ಟೋಬರ್ 2018 ರಲ್ಲಿ ಇದನ್ನು ಪಬ್ಲಿಷ್ ಮಾಡಲಾಯ್ತು ಮತ್ತು ಈಗಾಗಲೇ 187 ಮಿಲಿಯನ್ ವ್ಯೂವ್ಸ್ ಮತ್ತು ಕೌಂಟಿಂಗ್ ಆಗಿದೆ.

ಅರಿಯಾನಾ ಗ್ರ್ಯಾಂಡ್ – ಥ್ಯಾಂಕ್ಯೂ,ನೆಕ್ಸ್ಟ್

ಅರಿಯಾನಾ ಗ್ರ್ಯಾಂಡ್ – ಥ್ಯಾಂಕ್ಯೂ,ನೆಕ್ಸ್ಟ್

ಅರಿಯಾನಾ ಗ್ರ್ಯಾಂಡ್- ಥ್ಯಾಂಕ್ಯೂ ನೆಕ್ಸ್ಟ್ ನವೆಂಬರ್ 2018 ರಲ್ಲಿ ಪಬ್ಲಿಷ್ ಮಾಡಲಾಯಿತು ಮತ್ತು 187 ಮಿಲಿಯನ್ ಮಂದಿ ಕೇವಲ 50 ದಿನಗಳ ಅವಧಿಗೂ ಮುನ್ನವೇ ನೋಡಿದ್ದಾರೆ.

ಐಫೋನ್ ಎಕ್ಸ್ – ಅನ್ ಲಾಕ್ – ಆಪಲ್

ಐಫೋನ್ ಎಕ್ಸ್ – ಅನ್ ಲಾಕ್ – ಆಪಲ್

ಆಪಲ್ ಐಫೋನ್ ಎಕ್ಸ್ ನ ಫೇಸ್ ಐಡಿಯನ್ನು ಪ್ರಮೋಟ್ ಮಾಡಲು ಆಪಲ್ ಸಂಸ್ಥೆ ಮಾಡಿದ ಜಾಹಿರಾತು ಇದು. ಇದನ್ನು ಈಗಾಗಲೇ 13 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

Best Mobiles in India

English summary
YouTube is one of the most used free video streaming service, which offers a ton of content on various topics from Science and tech to fictional stories. Similarly, various social media websites like Facebook, Twitter, and Instagram are also known to offer unique content. Here are the top 10 viral videos of 2018.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X