ಜಿಯೋಗಿಂತ ಕಡಿಮೆ ಬೆಲೆಗೆ ಡೇಟಾ ಆಫರ್!..ಟೆಲಿಕಾಂಗೆ ಶಾಕ್ ಕೊಟ್ಟ ಬೆಂಗಳೂರಿನ ಕಂಪೆನಿ!!

ಜಿಯೋವನ್ನು ಸಹ ಜನರು ಕಡೆಗಣಿಸುವ ರೀತಿಯಲ್ಲಿ ಕೇವಲ 2 ರೂಪಾಯಿಗೆ 100MB ಡೇಟಾ ನೀಡಲು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಒಂದು ತಯಾರಾಗಿದೆ.!!

|

ಒಂದೇ ವರ್ಷದಲ್ಲಿ ಭಾರತದ ಟೆಲಿಕಾಂ ಅನ್ನು ಬದಲಾವಣೆ ಮಾಡಿದ ಕೀರ್ತಿ ಜಿಯೋಗೆ ಸಲ್ಲಿದೆ.! ಆದರೆ, ಜಿಯೋ, ಏರ್‌ಟೆಲ್ ಅನ್ನು ಮೀರಿಸುವ ಒಂದು ಕಂಪೆನಿ ಹುಟ್ಟಿಕೊಂಡರೆ?. ಹೌದು, ಜಿಯೋವನ್ನು ಸಹ ಜನರು ಕಡೆಗಣಿಸುವ ರೀತಿಯಲ್ಲಿ ಕೇವಲ 2 ರೂಪಾಯಿಗೆ 100MB ಡೇಟಾ ನೀಡಲು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಒಂದು ತಯಾರಾಗಿದೆ.!!

ಹೌದು, ವಿಶ್ವದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಇಂಟರ್‌ನೆಟ್ ಡೇಟಾ ಸ್ಟಾರ್ಟ್‌ಅಪ್ 'ವೈ-ಫೈ ಡಬ್ಬಾ' ಕಂಪೆನಿ ಇಂತಹದೊಂದು ಸಾಹಸದ ಯೋಜನೆಯನ್ನು ಬೆಂಗಳೂರು ನಗರದಲ್ಲಿ ಕೈಗೊಳ್ಳುತ್ತಿದ್ದು, ಜಿಯೋಗಿಂತಲೂ ವೇಗವಾದ ಡೇಟಾವನ್ನು ಜಿಯೋಗಿಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿರುವುದಾಗಿ ಹೇಳಿಕೊಂಡಿದೆ.!!

ಒಂದು ವರ್ಷದ ಹಿಂದಷ್ಟೆ ಸ್ಥಾಪಿತವಾಗಿರುವ 'ವೈ-ಫೈ ಡಬ್ಬಾ' ಕಂಪೆನಿ ಒಂದು ಜಿಬಿ ಡೇಟಾವನ್ನು ಕೇವಲ 20 ರೂಪಾಯಿಗಳಿಗೆ ನೀಡಲು ಮುಂದಾಗಿದ್ದು, ಹಾಗಾದರೆ ಏನಿದು 'ವೈ-ಫೈ ಡಬ್ಬಾ' ಪ್ಲಾನ್? ಜನರಿಗೆ ಡೇಟಾ ಹೇಗೆ ಒದಗಿಸುತ್ತಿದೆ? 'ವೈ-ಫೈ ಡಬ್ಬಾ' ಹುಟ್ಟಿಹಾಕಿದ್ದು ಯಾರು? ಗ್ರಾಹಕರಿಗೆ ಲಾಭಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೆಂಗಳೂರಿನ 'ವೈ-ಫೈ ಡಬ್ಬಾ'!!

ಬೆಂಗಳೂರಿನ 'ವೈ-ಫೈ ಡಬ್ಬಾ'!!

ಇಂದಿಗೆ 13 ತಿಂಗಳು ಮುಂಚಿತವಾಗಿ ಬೆಂಗಳೂರಿನಲ್ಲಿ ರೂಪುತಾಳಿರುವ ಇಂಟರ್‌ನೆಟ್ ಡೇಟಾ ಸ್ಟಾರ್ಟ್‌ಅಪ್ 'ವೈ-ಫೈ ಡಬ್ಬಾ.! ಶುಬೇಂದು ಶರ್ಮಾ ಮತ್ತು ಕರಮ್ ಲಕ್ಷ್ಮಣ್ ಎಂಬುವವರು ಈ ಸ್ಟಾರ್ಟ್‌ಅಪ್ ಕಂಪೆನಿಯನ್ನು ಹುಟ್ಟಿಹಾಕಿದ್ದು, ಈ ಸ್ಟಾರ್ಟ್ ಆಪ್ ಮೂಲಕ ಜಿಯೋಗಿಂತಲೂ ಕಡಿಮೆ ಬೆಲೆಗೆ ಡೇಟಾ ನೀಡುತ್ತಿದೆ.!!

'ವೈ-ಫೈ ಡಬ್ಬಾ' ಡೇಟಾ ಸಿಗುವುದು ಹೇಗೆ?

'ವೈ-ಫೈ ಡಬ್ಬಾ' ಡೇಟಾ ಸಿಗುವುದು ಹೇಗೆ?

ಶುಬೇಂದು ಶರ್ಮಾ ಮತ್ತು ಕರಮ್ ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿ 'ವೈ-ಫೈ ಡಬ್ಬಾ' ಯೋಜನೆ ಜಾರಿಗೊಳಿಸುತ್ತಿದ್ದಾರೆ. ಬೆಂಗಳೂರಿನಾಧ್ಯಂತ ಫೈಬರ್ ಜಾಲದಲ್ಲಿ 350 ವೈ-ಫೈ ರೂಟರ್‌ಗಳನ್ನು 'ವೈ-ಫೈ ಡಬ್ಬಾ' ಟೀಮ್ ನಿರ್ಮಿಸಿದ್ದು, 50MB ಸ್ಪೀಡ್ ಡೇಟಾವನ್ನು ಈ ವೈ-ಫೈಗಳ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಜನರಿಗೆ ತಲುಪಿಸಲುವ ಕೆಲಸ ಮಾಡಿದ್ದಾರೆ.!!

2.ರೂ.ಗೆ ಡೇಟಾ ರೀಚಾರ್ಜ್ ಮಾಡಿಸಿ!!

2.ರೂ.ಗೆ ಡೇಟಾ ರೀಚಾರ್ಜ್ ಮಾಡಿಸಿ!!

ಬೆಂಗಳೂರಿನಲ್ಲಿ ಮೊದಲು ಜಾರಿಯಾಗುತ್ತಿರುವ 'ವೈ-ಫೈ ಡಬ್ಬಾ' ಯೋಜನೆಯ ಮೊದಲು ಲಾಭ ನಗರದ ಗ್ರಾಹಕರಿಗೆ ದೊರೆಯುತ್ತಿದ್ದು, ಕೇವಲ 2.ರೂಪಾಯಿಗಳಿಗೂ ಸಹ ಡೇಟಾ ರೀಚಾರ್ಜ್ ಮಾಡಿಸಬಹುದು ಎಂದು ಶುಬೇಂದು ಶರ್ಮಾ ಹೇಳಿದ್ದಾರೆ.!ಅದೂ ಕೂಡ ಕಿರಾಣಿ ಅಂಗಡಿಗಳಲ್ಲಿಯೂ ಸಿಗಲಿದೆ ಎಂದು ತಿಳಿಸಿದ್ದಾರೆ.!!

ಗ್ರಾಹಕರ ಇಚ್ಚೆಗೆ ತಕ್ಕಂತೆ ಡೇಟಾ!!

ಗ್ರಾಹಕರ ಇಚ್ಚೆಗೆ ತಕ್ಕಂತೆ ಡೇಟಾ!!

ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆಯುತ್ತಿರುವ 'ವೈ-ಫೈ ಡಬ್ಬಾ' ಸ್ಟಾರ್ಟ್ ಆಪ್ ಗ್ರಾಹಕರ ಇಚ್ಚೆಗೆ ತಕ್ಕಂತೆ ಡೇಟಾ ಒದಗಿಸಲು ಮುಂದಾಗಿದೆ.!! ಅತ್ಯಂತ ಕಡಿಮೆ ಬೆಲೆಗೂ ಜನರಿಗೆ ಡೇಟಾ ನೀಡುವ ಮೂಲಕ ಡಿಜಿಟಲ್ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸಲು 'ವೈ-ಫೈ ಡಬ್ಬಾ' ಮುಂದಾಗಿದೆ.!!

ವಿಶ್ವದಲ್ಲಿಯೇ ಮೊದಲು!!

ವಿಶ್ವದಲ್ಲಿಯೇ ಮೊದಲು!!

ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಡೇಟಾವನ್ನು ನೀಡಲಿರುವ 'ವೈ-ಫೈ ಡಬ್ಬಾ'ದ ಈ ಯೋಜನೆ ವಿಶ್ವದಲ್ಲಿಯೇ ಮೊದಲಾಗಿದ್ದು, ಜಿಯೋ, ಏರ್‌ಟೆಲ್ ಮತ್ತು ಇತರ ದೊಡ್ಡ ದೊಡ್ಡ ಕಂಪೆನಿಗಳಿಗೆ ಎದುರು ನಿಂತು ಕಡಿಮೆ ಬೆಲೆಗೆ ಡೇಟಾ ನೀಡುವ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದೆ. ಮತ್ತು ಮೊದಲು ಬೆಂಗಳೂರಿನ ಜನರಿಗೆ ಈ ಸೇವೆ ಸಿಗಲಿದೆ.!!

<strong>ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್‌ ರಿಲೀಸ್!!</strong>ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್‌ ರಿಲೀಸ್!!

Best Mobiles in India

English summary
We believe that even after the launch of Jio there is a lot of room for price wars to happen and we are certain that we can drop the prices even further to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X