ಗೂಗಲ್‌ನಿಂದ ಭಾರತದ 100 ರೈಲುಸ್ಟೇಶನ್‌ಗಳಿಗೆ ಉಚಿತ ವೈಫೈ

By Shwetha
|

ನವದೆಹಲಿಯಲ್ಲಿ ನಡೆದಿರುವ ಗೂಗಲ್ ಇಂಡಿಯಾ ಈವೆಂಟ್‌ನಲ್ಲಿ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಕೆಲವೊಂದು ಪ್ರಮುಖ ಬೆಳವಣಿಗೆಗಳ ಪ್ರಸ್ತುತಿಯನ್ನು ಮಾಡಿದ್ದು 100 ರೈಲು ಸ್ಟೇಶನ್‌ಗಳಲ್ಲಿ ವೈಫೈ ಪ್ರವೇಶವನ್ನು ಘೋಷಿಸಿದ್ದಾರೆ. ಹೈದ್ರಾಬಾದ್‌ನಲ್ಲಿ ಹೆಚ್ಚಿನ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡುವ ಯೋಜನೆಯನ್ನು ತಿಳಿಸಿದ್ದಾರೆ. ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಪಿಚ್ಚೈ ಬೆಂಬಲವನ್ನು ಸೂಚಿಸಿದ್ದಾರೆ.

ಓದಿರಿ: ಸುಂದರ್ ಪಿಚ್ಚೈ: ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಪುತ್ರ

ಇಂದಿನ ಲೇಖನದಲ್ಲಿ ಗೂಗಲ್ ಇಂಡಿಯಾ ಈವೆಂಟ್‌ನಲ್ಲಿ ನಡೆದಿರುವ ಕೆಲವೊಂದು ಪ್ರಮುಖ ಸುದ್ದಿಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ನಿಜಕ್ಕೂ ಇದು ಅದ್ಭುತ ಎಂದೆನಿಸಿದೆ.

ಕ್ರೋಮ್ ಬಿಟ್ ಲಾಂಚ್

ಕ್ರೋಮ್ ಬಿಟ್ ಲಾಂಚ್

ಭಾರತದಲ್ಲಿ ಕ್ರೋಮ್ ಬಿಟ್ ರೂ 7,999 ಕ್ಕೆ ಲಾಂಚ್ ಆಗಲಿದೆ. ಅಸೂಸ್ ಉತ್ಪನ್ನವನ್ನು 2016 ರಲ್ಲಿ ಲಾಂಚ್ ಮಾಡಲಿದೆ.

ವಾಟ್ಸಾಪ್ ಅಪ್‌‌ಡೇಟ್

ವಾಟ್ಸಾಪ್ ಅಪ್‌‌ಡೇಟ್

ಹಿಂದಿಯಲ್ಲಿ ಸ್ವೀಕರಿಸಲಾದ ಸಂದೇಶವನ್ನು ಗೂಗಲ್ ಟ್ರಾನ್ಸ್‌ಲೇಟ್‌ಗೆ ಅನುವಾದಿಸಲಾಗುತ್ತದೆ ಇದು ವಾಟ್ಸಾಪ್‌ನ ಬಲಭಾಗದಲ್ಲಿ ಕಾಣಿಸಿಕೊಳ್ಳಲಿದೆ ಮತ್ತು ಅನುವಾದವನ್ನು ತೋರಿಸಲಿದೆ.

ಟ್ಯಾಪ್ ಟು ಟ್ರಾನ್ಸಲೇಟ್ ಫೀಚರ್

ಟ್ಯಾಪ್ ಟು ಟ್ರಾನ್ಸಲೇಟ್ ಫೀಚರ್

ಗೂಗಲ್ ಶೀಘ್ರದಲ್ಲೇ ಟ್ಯಾಪ್ ಟು ಟ್ರಾನ್ಸಲೇಟ್ ಫೀಚರ್ ಅನ್ನು ಪ್ರಸ್ತುತಪಡಿಸಲಿದೆ. ಮುಂದಿನ ವರ್ಷ ಈ ಯೋಜನೆ ಜಾರಿಯಾಗಲಿದೆ.

ಟ್ರಾನ್ಸಲೇಟ್ ಅಪ್ಲಿಕೇಶನ್

ಟ್ರಾನ್ಸಲೇಟ್ ಅಪ್ಲಿಕೇಶನ್

ತನ್ನ ಟ್ರಾನ್ಸಲೇಟ್ ಫೀಚರ್‌ಗೆ ಡೇಟಾವನ್ನು ಗೂಗಲ್ ಕ್ರೌಡ್ ಸೋರ್ಸ್ ಮಾಡುತ್ತಿರುತ್ತದೆ. ಗೂಗಲ್ ಟ್ರಾನ್ಸಲೇಟ್ ಅಪ್ಲಿಕೇಶನ್‌ನಲ್ಲಿರುವ ಕ್ಯಾಮೆರಾ ಫೀಚರ್ ಮೂಲಕ ಅನುವಾದಿಸಿ ಕ್ಯಾಮೆರಾದ ಮೂಲಕ ತೋರಿಸಲಾದ ಯಾವುದೇ ಗುರುತನ್ನು ಕ್ಯಾಮೆರಾ ಮೂಲಕ ಹಿಂದಿಗೆ ಅನುವಾದಿಸುತ್ತದೆ.

ಹೆಚ್ಚಿನ ಪದಗಳ ಅನುವಾದ

ಹೆಚ್ಚಿನ ಪದಗಳ ಅನುವಾದ

ಹಚ್ಚಿನ ಪದಗಳನ್ನು ಅನುವಾದ ಮಾಡಲು ಜನರಿಗೆ ಸಹಾಯಕವಾಗುವಂತೆ ಗೂಗಲ್ ಟ್ರಾನ್ಸಲೇಟ್ ಅನ್ನು ಚಾಲನೆ ಮಾಡಲಿದೆ. ಹಿಂದಿಯಲ್ಲದೆ, ಬಂಗಾಳಿ, ಪಂಜಾಬಿ ಮತ್ತು ಮರಾಠಿ ಭಾಷೆಯನ್ನೂ ಇದು ವಿಸ್ತರಿಸುತ್ತದೆ.

74 ಭಾಷೆಗಳಿಗೆ ಬೆಂಬಲ

74 ಭಾಷೆಗಳಿಗೆ ಬೆಂಬಲ

ವಿಶ್ವದಲ್ಲಿರುವ 1.4 ಬಿಲಿಯನ್ ಆಂಡ್ರಾಯ್ಡ್ ಬಳಕೆದಾರರು ಮತ್ತು ಮೊಬೈಲ್ ಓಎಸ್ ಇದೀಗ 74 ಭಾಷೆಗಳಿಗೆ ಬೆಂಬಲವನ್ನು ನೀಡಲಿದೆ.

ಸೂಪರ್ ಫಾಸ್ಟ್ ಇಂಟರ್ನೆಟ್

ಸೂಪರ್ ಫಾಸ್ಟ್ ಇಂಟರ್ನೆಟ್

ಫೈಬರ್ ಇನ್‌ಫ್ರಾಸ್ಟ್ರಕ್ಚರ್ ಅನ್ನು ಗೂಗಲ್ ಬಳಸಿ ಈ ರೈಲ್ವೇ ಸ್ಟೇಶನ್‌ಗಳಲ್ಲಿ ವೇಗದ ಇಂಟರ್ನೆಟ್ ಅನ್ನು ಒದಗಿಸಲಿದೆ.

ಪ್ರತಿಯೊಬ್ಬರಿಗೂ ಇಂಟರ್ನೆಟ್ ಸೌಲಭ್ಯ

ಪ್ರತಿಯೊಬ್ಬರಿಗೂ ಇಂಟರ್ನೆಟ್ ಸೌಲಭ್ಯ

ಮುಕ್ತ ಮತ್ತು ಸ್ವತಂತ್ರ ಇಂಟರ್ನೆಟ್‌ನ ಬಳಕೆಯನ್ನು ವಿಶ್ವದ ಪ್ರತಿಯೊಬ್ಬರೂ ಮಾಡಬೇಕು - ಗೂಗಲ್‌ನ ಮರಿಯನ್ ಕ್ರೋಕ್

ಪಾಸ್ ಬಫರ್ ಫೀಚರ್

ಪಾಸ್ ಬಫರ್ ಫೀಚರ್

ವೀಡಿಯೊವನ್ನು ಪಾಸ್ ಮಾಡುವ, ಬಫರ್‌ಗೆ ಅದನ್ನು ಬಿಡುವ, ಅಪ್ಲಿಕೇಶನ್ ಅಥವಾ ಸೈಟ್ ಅನ್ನು ಹಾಗೆಯೇ ಬಿಟ್ಟು ನಿರಂತರ ಬಫರಿಂಗ್ ಸೌಲಭ್ಯಕ್ಕಾಗಿ ಗೂಗಲ್ ಶೀಘ್ರವೇ ಪಾಸ್ ಬಫರ್ ಫೀಚರ್ ಅನ್ನು ಪ್ರಸ್ತುತಪಡಿಸಲಿದೆ.

ಯೂಟ್ಯೂಬ್ ಅಪ್‌ಲೋಡ್

ಯೂಟ್ಯೂಬ್ ಅಪ್‌ಲೋಡ್

ಭಾರತದಿಂದ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾದ ವಿಷಯ ಕೂಡ ದುಪ್ಪಟ್ಟಾಗಿದೆ.

Best Mobiles in India

English summary
Technology giant Google will bring internet connectivity to 100 railway stations across the country by next year, its CEO Sundar Pichai today said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X