ಭಾರತದಲ್ಲಿರುವ ಟಾಪ್ ಟೆಕ್ ಕಂಪೆನಿಗಳು
ಇನ್ನೇನು 2015 ಕಣ್ಣು ಮುಚ್ಚುವ ಸಮಯ ಬಂದೊದಗಿದೆ. ಈ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಲು ಸೂಕ್ತವಾದ ಸಮಯವಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಭಾರತದಲ್ಲಿ ಟೆಕ್ ಮಹತ್ವಾಕಾಂಕ್ಷಿಗಳು ಕೆಲಸ ಮಾಡಬಹುದಾದ ಟಾಪ್ ಕಂಪೆನಿಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
ಓದಿರಿ: ವಿಶ್ವದ ಜನಪ್ರಿಯ ಟಾಪ್ 10 ಟೆಕ್ ಕಂಪೆನಿಗಳು
ಭಾರತದಲ್ಲಿ ಕಾರ್ಯನಿರ್ವಹಿಸಲು ಅತ್ಯುತ್ತಮವಾಗಿರುವ ಟಾಪ್ ಕಂಪೆನಿಗಳ ಪಟ್ಟಿಯನ್ನು ಇಲ್ಲಿ ನಾವು ನೀಡುತ್ತಿದ್ದು ದೇಶದ ಸಂಸ್ಕೃತಿ, ಜನಸಂಖ್ಯೆ ಆರ್ಥಿಕತೆಯನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2015 ಕ್ಕಾಗಿ ಕಾರ್ಯನಿರ್ವಹಿಸಲು ಅತ್ಯುತ್ತಮವಾಗಿರು ಕಂಪೆನಿಗಳ ಪಟ್ಟಿ ಇಲ್ಲಿದೆ.

2015 ರ ಟೆಕ್ ಕಂಪೆನಿಗಳು
ಪ್ರಥಮ ಸ್ಥಾನ:
ಎನ್‌ಸಿಆರ್ ಆಧಾರಿತ ಐಟಿ ಸೇವಾ ಸಂಸ್ಥೆಯಾಗಿದೆ RMSI. ಇದು ಜಿಐಎಸ್, ಅನಾಲಿಟಿಕ್ಸ್ ಮತ್ತು ಸಾಫ್ಟ್‌ವೇರ್ ಸರ್ವೀಸ್ ಅನ್ನು ಒದಗಿಸುತ್ತದೆ. ಕೆಲಸಗಾರರ ಜೀವನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಇದು ಹೊಂದಿದೆ.

2015 ರ ಟೆಕ್ ಕಂಪೆನಿಗಳು
ದ್ವಿತೀಯ ಸ್ಥಾನ:
ಭಾರತದಲ್ಲಿ ಎರಡನೇ ಬೆಸ್ಟ್ ಕಂಪೆನಿ ಎಂಬ ಹೆಸರು ಗೂಗಲ್‌ನದ್ದಾಗಿದೆ. ಉದ್ಯೋಗಿಗಳ ಸಂಪೂರ್ಣ ಆರೋಗ್ಯ ಸುರಕ್ಷತೆಯನ್ನು ಗೂಗಲ್ ಬೆಂಬಲಿಸುತ್ತಿದ್ದು ಕೆಲಸದೊಂದಿಗೆ ಉದ್ಯೋಗಿಗಳ ಸುರಕ್ಷತೆಯನ್ನು ಕಂಪೆನಿ ಮಾಡುತ್ತಿದೆ.

2015 ರ ಟೆಕ್ ಕಂಪೆನಿಗಳು
ಐದನೇ ಸ್ಥಾನ:
ಮುಂದಿನ ಟೆಕ್ ಕಂಪೆನಿ ಐದನೇ ಸ್ಥಾನದಲ್ಲಿರುವ SAP ಟೆಕ್ ಕಂಪೆನಿಯಾಗಿದೆ. ಉದ್ಯೋಗಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಕಂಪೆನಿ ನಡೆಸುತ್ತದೆ. ಅಂತೆಯೇ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಕಾರ್ಯವನ್ನು ಇದು ಮಾಡುತ್ತದೆ.

2015 ರ ಟೆಕ್ ಕಂಪೆನಿಗಳು
ಏಳನೇ ಸ್ಥಾನ:
ಏಳಬೇ ಸ್ಥಾನದಲ್ಲಿರುವ ಇನ್‌ಟ್ಯೂಟ್ ಇಂಡಿಯಾ ಉದ್ಯೋಗಿಗಳ ಪ್ರತಿಯೊಂದು ಬೇಕು ಬೇಡಗಳನ್ನು ಕಂಪೆನಿ ಪರಿಗಣಿಸುತ್ತಿದ್ದು ಕೆಲಸದೊಂದಿಗೆ ಉದ್ಯೋಗಿಗಳ ಬೆಳವಣಿಗೆಯನ್ನು ನಡೆಸುತ್ತದೆ.

2015 ರ ಟೆಕ್ ಕಂಪೆನಿಗಳು
ಹದಿನೈದನೇ ಸ್ಥಾನ:
ಪಟ್ಟಿಯಲ್ಲಿರುವ ಇನ್ನೊಂದು ಬಿಪಿಎಲ್ ಕಂಪೆನಿಯಾಗಿದೆ ಟೆಲಿಪರ್ಫಾಮೆನ್ಸ್ ಇಂಡಿಯಾ. ಇಂಟರ್ನೆಟ್ ಮೂಲಕ ಇಲ್ಲಿ ಉದ್ಯೋಗಿಗಳು ತಮ್ಮ ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ
ಹತ್ತೊಂಭತ್ತನೇ ಸ್ಥಾನ:
ಹತ್ತೊಂಭತ್ತನೇ ಸ್ಥಾನದಲ್ಲಿರುವ ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ ಕಂಪೆನಿಯ ಪ್ಲೇಯರ್ ಪ್ರೊಗ್ರಾಮ್ ಮತ್ತು ಅಭ್ಯರ್ಥಿಗಳ ಸೂಕ್ತ ಆಯ್ಕೆಯನ್ನು ಮಾಡುತ್ತದೆ.

2015 ರ ಟೆಕ್ ಕಂಪೆನಿಗಳು
ಇಪ್ಪತ್ತನೇ ಸ್ಥಾನ:
2015 ರ ಪಟ್ಟಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸಲು ಮೈಕ್ರೋಸಾಫ್ಟ್ 20 ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಸಾಫ್ಟ್‌ವೇರ್ ದೈತ್ಯ ಉದ್ಯೋಗದಲ್ಲಿ ಪ್ರಮುಖ ಸ್ಥಾನದಲ್ಲಿದೆ.

2015 ರ ಟೆಕ್ ಕಂಪೆನಿಗಳು
ಇಪ್ಪತ್ತೊಂದನೇ ಸ್ಥಾನ:
2015 ರ ಪಟ್ಟಿಯಲ್ಲಿರುವ ಅಡೋಬ್ ಸಿಸ್ಟಮ್ಸ್ ಇಪ್ಪತ್ತೊಂದನೇ ಸ್ಥಾನದಲ್ಲಿದೆ.

2015 ರ ಟೆಕ್ ಕಂಪೆನಿಗಳು
ಇಪ್ಪತೆರಡನೇ ಸ್ಥಾನ
ಭಾರತದಲ್ಲಿ ಟೆಕ್ ಕಂಪೆನಿಯಾಗಿ ಎಂದಿಗೂ ಪಟ್ಟಿಯಲ್ಲಿ ನೆಲೆನಿಲ್ಲುವ ನೆಟ್ಆಪ್ ಇಂಡಿಯಾ ಇಪ್ಪತೆರಡನೇ ಸ್ಥಾನವನ್ನು ಪಡೆದುಕೊಂಡಿದೆ.

2015 ರ ಟೆಕ್ ಕಂಪೆನಿಗಳು
ಇಪ್ಪತ್ತಾರನೇ ಸ್ಥಾನ:
ಟೆಲಿಕಾಮ್ ದೈತ್ಯ ವೊಡಾಫೋನ್ ಇಪ್ಪತ್ತಾರನೇ ಸ್ಥಾನದಲ್ಲಿದ್ದು 15 ಹೊಸ ಮಹಿಳಾ ರೀಟೈಲ್ ಸ್ಟೋರ್‌ಗಳನ್ನು ಇದು ಲಾಂಚ್ ಮಾಡಿದೆ.

2015 ರ ಟೆಕ್ ಕಂಪೆನಿಗಳು
ಮೂವತ್ತಮೂರನೇ ಸ್ಥಾನ:
ಸಾಫ್ಟ್‌ವೇರ್ ಭದ್ರತಾ ಕಂಪೆನಿ ಎಂದೆನಿಸಿರುವ ಮೆಕ್‌ಅಫೆ ಸೇಲ್ಸ್ ಇಂಡಿಯಾ ಪಟ್ಟಿಯಲ್ಲಿ ಮೂವತ್ತಮೂರನೇ ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಇಂಟೆಲ್ ಸೆಕ್ಯುರಿಟಿ ಮಾರಾಟಗಳಿಗೆ ಬೆಂಬಲವನ್ನು ಒದಗಿಸುವುದಾಗಿದೆ.


Click it and Unblock the Notifications








