ಪಿಯುಸಿ ವಿಧ್ಯಾರ್ಥಿಗೆ 1.44 ಕೋಟಿ ಸಂಬಳದ ಗೂಗಲ್ ಕೆಲಸ ಸಿಕ್ಕಿದ್ದು ಹೇಗೆ ಗೊತ್ತಾ?

ಅಚ್ಚರಿ ಎನ್ನಿಸಿಸದರೂ ಸತ್ಯ ಹರ್ಷಿತ್ ಶರ್ಮಾ ಎನ್ನುವ 12 ನೇ ತರಗತಿ ಹುಡುಗ ತನ್ನ ಕೌಶಲ್ಯದಿಂದ ಗೂಗಲ್‌ನಲ್ಲಿ ಕೆಲಸ ಪಡೆದಿದ್ದಾನೆ.!!

|

ಚಂಡೀಗಢದ 12 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವನಿಗೆ ಹೆಸರಾಂತ ಗೂಗಲ್ ಕಂಪನಿಯಲ್ಲಿ ಈಗಲೇ ಉದ್ಯೋಗ ದೊರೆತಿದ್ದು, ವಾರ್ಷಿಕ 1.44 ಕೋಟಿ ರುಪಾಯಿ ಸಂಬಳವನ್ನು ಪಡೆಯುತ್ತಾನೆ.!! ಹೌದು, ಅಚ್ಚರಿ ಎನ್ನಿಸಿಸದರೂ ಸತ್ಯ ಹರ್ಷಿತ್ ಶರ್ಮಾ ಎನ್ನುವ 12 ನೇ ತರಗತಿ ಹುಡುಗ ತನ್ನ ಕೌಶಲ್ಯದಿಂದ ಗೂಗಲ್‌ನಲ್ಲಿ ಕೆಲಸ ಪಡೆದಿದ್ದಾನೆ.!!

ಇಂಟರ್ನೆಟ್ ಲೋಕದ ಸರ್ಚ್ ಇಂಜಿನ್ ದಿಗ್ಗಜ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ.! ಅದೆಷ್ಟೂ ಜನರು ಏನೆಲ್ಲಾ ಹರಸಾಹಸ ಪಟ್ಟರೂ ಸಹ ಈ ಕಂಪನಿಯಲ್ಲಿ ಕೆಲಸ ಪಡೆಯದೇ ಸೋತು ಹೋಗಿದ್ದಾರೆ. ಆದರೆ, ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಗೂಗಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.!!

ಹಾಗಾದರೆ,1 2 ತರಗತಿ ಹರ್ಷಿತ್ ಶರ್ಮಾ ಗೂಗಲ್‌ನಲ್ಲಿ ಉದ್ಯೋಗ ಪಡೆದುಕೊಂಡಿದ್ದು ಹೇಗೆ? ಗೂಗಲ್‌ನಲ್ಲಿ ಉದ್ಯೋಗ ಪಡೆಯಲು ಏನಿವನ ಟ್ಯಾಲೆಂಟ್? ಗುರುಹಿರಿಯರು ಹರ್ಷಿತ್ ಶರ್ಮಾ ಬಗ್ಗೆ ಏನು ಹೇಳುತ್ತಾರೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಗೂಗಲ್‌ನಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ.!!

ಗೂಗಲ್‌ನಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ.!!

ಗೂಗಲ್‌ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಹರ್ಷಿತ್ ಶರ್ಮಾ ಆಯ್ಕೆಯಾಗಿದ್ದಾನೆ. ಆಗಸ್ಟ್ 7 ರಂದು ಹರ್ಷಿತ್ ಕ್ಯಾಲಿಫೋರ್ನಿಯಾಗೆ ಹೋಗಲಿದ್ದು, ಅಲ್ಲಿ ಗ್ರಾಫಿಕ್ ಡಿಸೈನ್ ಬಗ್ಗೆ ಒಂದು ವರ್ಷ ತರಬೇತಿ ಪಡೆಯಲಿದ್ದಾನೆ. ತರಬೇತಿಯ ವೇಳೆ ಪ್ರತಿತಿಂಗಳು 4 ಲಕ್ಷ ಸಿಗಲಿದೆ. ವರ್ಷದ ನಂತರ ನಂತರ 12 ಲಕ್ಷ ರೂಪಾಯಿ ಸಂಬಳ ಪ್ರತಿ ತಿಂಗಳು ಪಡೆಯಲಿದ್ದಾನೆ.

10ನೇ ವಯಸ್ಸಿಗೇ ಆಸಕ್ತಿ!!

10ನೇ ವಯಸ್ಸಿಗೇ ಆಸಕ್ತಿ!!

10ನೇ ವಯಸ್ಸಿಗೇ ಹರ್ಷಿತ್ ಶರ್ಮಾಗೆ ಡಿಸೈನಿಂಗ್‌ನಲ್ಲಿ ಆಸಕ್ತಿ ಬೆಳೆದಿದೆ. ಆಗಿನಿಂದಲೇ ಗೂಗಲ್‌ನಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ಅವನಿಗೆ ಉಂಟಾಗಿ, ಗೌಪ್ಯವಾಗಿ ಅವನು ಅವರ ಚಿಕ್ಕಪ್ಪನ ಬಳಿಯಿಂದ ತರಬೇತಿ ಪಡೆದಿದ್ದಾನೆ. ಯಾವುದೇ ಶಿಕ್ಷಣ ಸಂಸ್ಥೆಗೆ ಹೋಗಿ ನಾನು ಗ್ರಾಫಿಕ್‌ ಡಿಸೈನ್‌ ಕಲಿತಿಲ್ಲ ಎಂದು ಹರ್ಷಿತ್ ಹೇಳಿದ್ದಾನೆ.

ಹರ್ಷಿತ್ ಗ್ರಾಫಿಕ್ಸ್‌ಗೆ ಎಲ್ಲರೂ ಫಿದಾ

ಹರ್ಷಿತ್ ಗ್ರಾಫಿಕ್ಸ್‌ಗೆ ಎಲ್ಲರೂ ಫಿದಾ

ಗೂಗಲ್‌ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಆಯ್ಕೆಯಾಗುವ ಮುನ್ನವೇ ಹರ್ಷಿತ್ ಗ್ರಾಫಿಕ್ಸ್ ಮೂಲಕವೇ ಎಲ್ಲರ ಗಮನ ಸೆಳಿದಿದ್ದಾನೆ. ತನ್ನ ಹತ್ತನೇ ವಯಸ್ಸಿನಲ್ಲೆ ಗ್ರಾಫಿಕ್ಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ, ಅಲ್ಲದೆ ಶಾಲಾದಿನಗಳಲ್ಲಿ ಬಾಲಿವುಡ್ ನಟ, ನಟಿಯರ ಚಿತ್ರಗಳ ಆಕರ್ಷಕ ಪೋಸ್ಟರ್ ವಿನ್ಯಾಸಗೊಳಿಸಿ ಸಾವಿರಾರು ರೂ.ಗಳನ್ನು ಹರ್ಷಿತ್ ಸಂಪಾದಿಸುತ್ತಿದ್ದ.!!

ಗ್ರಾಫಿಕ್ಸ್‌ಗೆ ಮನಸೋತ ಗೂಗಲ್

ಗ್ರಾಫಿಕ್ಸ್‌ಗೆ ಮನಸೋತ ಗೂಗಲ್

ಹರ್ಷಿತ್‌ಗೆ ಗೂಗಲ್ ನಲ್ಲಿ ಉದ್ಯೋಗ ಇರುವುದು ತಿಳಿದ ಕೂಡಲೇ ತಾನು ಮಾಡಿರುವ ಡಿಸೈನ್ ಗಳನ್ನು ಗೂಗಲ್ ಲಿಂಕ್ ಗೆ ಕಳುಹಿಸಿ ಅರ್ಜಿ ಹಾಕಿದ್ದಾನೆ. ಈತನ ಗ್ರಾಫಿಕ್ಸ್ ಗೆ ಮನಸೋತ ಗೂಗಲ್ ಜೂನ್ ತಿಂಗಳಿನಲ್ಲಿ ನೇಮಕಾತಿಯಾಗಿರುವ ಬಗ್ಗೆ ಪತ್ರವನ್ನು ಕಳುಹಿಸಿದೆ.!!

ಹೆಮ್ಮೆಯಿಂದ ಸಂಭ್ರಮ!!

ಹೆಮ್ಮೆಯಿಂದ ಸಂಭ್ರಮ!!

ಗೂಗಲ್ ಕಂಪನಿ ಹರ್ಷಿತ್ ಸಾಧನೆಯನ್ನು ಗಮನಿಸಿ ನೌಕರಿ ನೀಡಿದ್ದು, ಗೂಗಲ್‌ನಲ್ಲಿ ಉದ್ಯೋಗ ಪಡೆದಿರುವುದಕ್ಕೆ ಹರ್ಷಿತ್ ಪೋಷಕರು, ಶಿಕ್ಷಕರು, ಸ್ನೇಹಿತರು ಸೇರಿದಂತೆ ಇಡೀ ಚಂಡೀಗಢವೇ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ.!!

<strong>ಆಧಾರ್-ಪಾನ್ ಜೋಡಿಸಲು ಮತ್ತೆ ಅವಕಾಶ!..ಆನ್‌ಲೈನ್‌ನಲ್ಲಿ ಹೀಗೆ ಲಿಂಕ್ ಮಾಡಿ!!</strong>ಆಧಾರ್-ಪಾನ್ ಜೋಡಿಸಲು ಮತ್ತೆ ಅವಕಾಶ!..ಆನ್‌ಲೈನ್‌ನಲ್ಲಿ ಹೀಗೆ ಲಿಂಕ್ ಮಾಡಿ!!

Best Mobiles in India

Read more about:
English summary
"To turn my dream into reality, I started taking training from my uncle secretly," he said.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X