Subscribe to Gizbot

ಗೂಗಲ್‌ನಲ್ಲಿ ಕೆಲಸ ಗಿಟ್ಟಿಸುವುದು ಕಷ್ಟನಾ?..ಈ ಇಂಟರ್‌ವ್ಯೂ ಪ್ರಶ್ನೆಗಳನ್ನು ನೋಡಿ ಗೊತ್ತಾಗುತ್ತೆ!!

Written By: Lekhaka

ಭವಿಷ್ಯದಲ್ಲಿ ಆಗುವ ಅದ್ಭುತ ಆವಿಷ್ಕಾರಗಳಿಗಾಗಿ ವಿಶ್ವದ ಎಲ್ಲಾ ಉತ್ತಮ ತಂತ್ರಜ್ಞಾನ ದಿಗ್ಗಜರು, ಟೆಕ್ ಕಂಪನಿಗಳು ಹೊಸ-ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯಲು ಮತ್ತು ಆವಿಷ್ಕರಿಸಲು ಪೈಪೋಟಿ ನಡೆಸುತ್ತಿದ್ದಾರೆ.

ಗೂಗಲ್‌ನಲ್ಲಿ ಕೆಲಸ ಗಿಟ್ಟಿಸುವುದು ಕಷ್ಟನಾ?

ಅಂತಾದರಲ್ಲಿ ಇವುಗಳನ್ನು ನಿರ್ದೇಶಿಸುವ, ನಿರ್ವಹಿಸುವ ಉದ್ಯೋಗಿಗಳು ಎಷ್ಟು ಬುದ್ದಿವಂತರಾಗಿರಬೇಕಾಗುತ್ತದೆ ಎಂಬುದನ್ನು ನಾವು ಕೇವಲ ಊಹಿಸಬಲ್ಲೆವು! ಇಂತಹ ಪ್ರಸಿದ್ದ ಕಂಪನಿಗಳು ಎಷ್ಟೊಂದು ಸ್ಪರ್ಧಾತ್ಮಕವಾಗಿ ಯೋಚಿಸುತ್ತವೆ ಎಂಬುದನ್ನು ಅವುಗಳು ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳನ್ನು ನೋಡಿದಾಗ ಅರಿವಿಗೆ ಬರುತ್ತದೆ. ಸರ್ಚ್ ಎಂಜಿನ್ ಗೂಗಲ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಪ್ರತಿಯೊಬ್ಬರೂ ಕೂಡ ಗೂಗಲ್ ನಲ್ಲಿ ಏನಾದರೊಂದು ಸರ್ಚ್ ಮಾಡಿಯೇ ಇರುತ್ತಾರೆ.

ಆದರೆ ಇಂತಹ ಕಂಪನಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಎಷ್ಟೊಂದು ವಿಚಿತ್ರ ಮತ್ತು ಅದ್ಬುತವಾಗಿರುತ್ತವೆ ಅಂದ್ರೆ ನೀವೂ ಕೂಡ ಒಮ್ಮೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ! ಇಲ್ಲಿನ ಪ್ರಶ್ನೆಗಳನ್ನು ನೀವೊಮ್ಮೆ ಓದಿದರೆ ತಲೆ ಕೆಡುವುದಂತೂ ಸತ್ಯ! ನೀವೊಮ್ಮೆ ಓದಿ, ಉತ್ತರಿಸಲು ಟ್ರೈ ಮಾಡಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಡಿಯಾರ ಮುಳ್ಳು

ಗಡಿಯಾರ ಮುಳ್ಳು

ಗಡಿಯಾರದಲ್ಲಿ ಗಂಟೆ ಮುಳ್ಳು ಮತ್ತು ನಿಮಿಷದ ಮುಳ್ಳಿನ ನಡುವೆ ಮೂರೂ ಕಾಲು ಗಂಟೆ ತೋರಿಸುವಾಗ ಎಷ್ಟು ಡಿಗ್ರಿಯ ಕೋನ ಏರ್ಪಡುತ್ತದೆ?

ಮ್ಯಾನ್‌ಹೋಲ್‌

ಮ್ಯಾನ್‌ಹೋಲ್‌

ಮ್ಯಾನ್‌ಹೋಲ್‌ ಮುಚ್ಚಳಗಳು ವೃತ್ತಾಕಾರದಲ್ಲೇ ಇರುತ್ತವೆ ಯಾಕೆ?

ಪಾಲು ವಿಂಗಡನೆ

ಪಾಲು ವಿಂಗಡನೆ

ನೀವು ಕಡಲುಗಳ್ಳರ ಹಡಗಿನ ನಾಯಕರಾಗಿದ್ದೀರಿ. ಕದ್ದ ಚಿನ್ನವನ್ನು ವೋಟ್ ಮೂಲಕ ಹಂಚಿಕೊಳ್ಳಲು ನಿಮ್ಮ ಜತೆಗಾರರು ಬಯಸಿದ್ದಾರೆ. ಒಂದು ವೇಳೆ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಕಡಲುಗಳ್ಳರು ನಿಮ್ಮ ಮಾತನ್ನು ಒಪ್ಪಿದರೂ ನೀವು ಸಾಯುವಿರಿ. ಹಾಗಾದರೆ ನಿಮ್ಮ ಜೀವ ಉಳಿಸಿಕೊಂಡೇ ಸುಲಿಗೆ ಮಾಡಿದ ಪಾಲನ್ನು ಸರಿಯಾಗಿ ಯಾವ ರೀತಿ ವಿಂಗಡಿಸುತ್ತಿರಿ?

ಗಡಿಯಾರ-ಮುಳ್ಳು

ಗಡಿಯಾರ-ಮುಳ್ಳು

ಒಂದು ದಿನದಲ್ಲಿ ಗಡಿಯಾರದ ಮುಳ್ಳುಗಳು ಎಷ್ಟು ಬಾರಿ ಒಂದಕ್ಕೊಂದು ಸಂಧಿಸುತ್ತದೆ?

ಪಿಯಾನೋ ಟ್ಯೂನರ್

ಪಿಯಾನೋ ಟ್ಯೂನರ್

ಇಡೀ ಜಗತ್ತಿನಲ್ಲಿ ಎಷ್ಟು ಜನ ಪಿಯಾನೋ ಟ್ಯೂನರ್ ಗಳಿದ್ದಾರೆ?

BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!

ಫೇಸ್ಬುಕ್

ಫೇಸ್ಬುಕ್

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಶುಕ್ರವಾರದಂದು ಅಪರಾಹ್ನ 2:30 ಕ್ಕೆ ಫೇಸ್ಬುಕ್ ಅನ್ನು ಎಷ್ಟು ಜನರು ಬಳಸುತ್ತಿದ್ದರು?

ಪೆನ್ಸಿಲ್ ಪೆಟ್ಟಿಗೆ

ಪೆನ್ಸಿಲ್ ಪೆಟ್ಟಿಗೆ

ನಿಮಗೆ ಪೆನ್ಸಿಲ್ ಗಳ ಪೆಟ್ಟಿಗೆಯನ್ನು ನೀಡಿದ್ದರೆ, ಅವುಗಳನ್ನು ಬಳಸಿ ಮಾಡಬಹುದಾದ ಸಾಂಪ್ರದಾಯಿಕವಲ್ಲದ 10 ವಿಷಯಗಳನ್ನು ಪಟ್ಟಿ ಮಾಡಿ.

ಫೋನ್ ವಿನ್ಯಾಸ

ಫೋನ್ ವಿನ್ಯಾಸ

ಕಿವುಡರಿಗಾಗಿ ನೀವು ಫೋನ್ ಅನ್ನು ವಿನ್ಯಾಸಗೊಳಿಸಲು ಬಯಸುವಿರಿ. ನೀವು ಅದನ್ನು ಹೇಗೆ ಮಾಡುವಿರಿ?

ಡಿಸ್ಕ್‌ ತಿರುಗುವ ದಿಕ್ಕು

ಡಿಸ್ಕ್‌ ತಿರುಗುವ ದಿಕ್ಕು

ತಿರುಗಣೆಯೊಂದರಲ್ಲಿ ಒಂದು ಡಿಸ್ಕ್‌ ತಿರುಗುತ್ತಿರುತ್ತದೆ. ಆದರೆ ಯಾವ ದಿಕ್ಕಿಗೆ ತಿರುಗುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲ. ನಿಮಗೆ ಒಂದಷ್ಟು ಪಿನ್‌ಗಳನ್ನು ನೀಡಲಾಗಿದೆ. ಅವುಗಳನ್ನು ಬಳಸಿ ಡಿಸ್ಕ್‌ ಯಾವ ದಿಕ್ಕಿಗೆ ತಿರುಗುತ್ತಿದೆ ಎಂಬುದನ್ನು ತಿಳಿಯೋದು ಹೇಗೆ ವಿವರಿಸಿ.

ಕುಬ್ಜ ರಾಕ್ಷಸ

ಕುಬ್ಜ ರಾಕ್ಷಸ

ಒಬ್ಬ ಕುಬ್ಜ ರಾಕ್ಷಸ 10 ಮಂದಿ ಕುಳ್ಳರನ್ನು ಎತ್ತರಕ್ಕೆ ಅನುಗುಣವಾಗಿ ಸಾಲಾಗಿ ನಿಲ್ಲಿಸುತ್ತಾನೆ. ಪ್ರತಿ ಕುಳ್ಳನೂ ತನ್ನ ಮುಂದಿರುವ ಅತಿ ಕುಳ್ಳನನ್ನು ನೋಡಲು ಸಾಧ್ಯವಿರುತ್ತದೆ. ಆದರೆ ತನ್ನ ಹಿಂದಿರುವ ಕುಳ್ಳನನ್ನು ನೋಡಲಾಗುವುದಿಲ್ಲ. ಕುಳ್ಳ ರಾಕ್ಷಸ ಕೆಲವು ಕುಳ್ಳರ ತಲೆಯ ಮೇಲೆ ಕಪ್ಪು-ಬಿಳುಪಿನ ಟೋಪಿ ಹಾಕಿರುತ್ತಾನೆ. ಯಾವೊಬ್ಬ ಕುಳ್ಳನೂ ಕೂಡ ತನ್ನ ಟೋಪಿಯನ್ನು ನೋಡಲಾಗುವುದಿಲ್ಲ. ಪ್ರತಿ ಕುಳ್ಳನೂ ಮತ್ತೊಬ್ಬ ಕುಳ್ಳನ ಜತೆ ತನ್ನ ಟೋಪಿಯ ಬಣ್ಣ ಯಾವುದು ಎಂದು ಕೇಳುವಂತೆ ರಾಕ್ಷಸ ಸೂಚಿಸುತ್ತಾನೆ.

ಕುಳ್ಳರು ತಪ್ಪು ಉತ್ತರ ನೀಡಿದರೆ ರಾಕ್ಷಸ ಅವರನ್ನು ಕೊಲ್ಲುತ್ತಾನೆ. ಪ್ರತಿಯೊಬ್ಬ ಕುಳ್ಳನೂ ಹಿಂದಿನವ ನೀಡಿದ ಉತ್ತರವನ್ನು ಕೇಳಿಸಿಕೊಳ್ಳಬಲ್ಲ. ಆದರೆ ಒಬ್ಬ ಕುಳ್ಳನನ್ನು ಸಾಯಿಸಿದಾಗ ಅವನಿಗೇನೂ ಕೇಳಿಸುವುದಿಲ್ಲ. ಟೋಪಿಗಳನ್ನು ಹಂಚುವ ಮೊದಲು ಕುಳ್ಳರಿಗೆ ಅಗತ್ಯ ತಂತ್ರಗಳನ್ನು ಹೂಡಲು ಅವಕಾಶ ನೀಡಲಾಗಿರುತ್ತದೆ. ಹಾಗಿದ್ದರೆ ಕೆಲವೇ ಕುಬ್ಜರನ್ನು ಕೊಲ್ಲಲು ಯಾವ ತಂತ್ರ ಬಳಸಬೇಕು ಮತ್ತು ಈ ಕಾರ್ಯತಂತ್ರದಿಂದ ಉಳಿಸಬಹುದಾದ ಕನಿಷ್ಠ ಕುಳ್ಳರ ಸಂಖ್ಯೆ ಎಷ್ಟು?

ವೃತ್ತಾಕಾರದ ಕೇಕ್

ವೃತ್ತಾಕಾರದ ಕೇಕ್

ನೀವು ವೃತ್ತಾಕಾರದ ಕೇಕ್ ಅನ್ನು ಎಂಟು ಸಮಾನ ತುಂಡುಗಳಾಗಿ ಹೇಗೆ ಕತ್ತರಿಸುತ್ತೀರಿ?

ಗೋಳಗಳ ಘರ್ಷಣೆ

ಗೋಳಗಳ ಘರ್ಷಣೆ

ಎರಡು ಚಲಿಸುವ ಗೋಳಗಳ ಘರ್ಷಣೆಯನ್ನು ಹೇಗೆ ಲೆಕ್ಕಹಾಕುವಿರಿ? ಪರಿಹಾರಕ್ಕಾಗಿ ಗಣಿತಶಾಸ್ತ್ರದ ಸಮೀಕರಣ ಮತ್ತು ಅಲ್ಗಾರಿದಮ್ ವಿಧಾನದ ಮೂಲಕ ಉತ್ತರ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
All the best tech giants in the world are racing past each other to invent and discover newer technologies that will rule the future soon and we can only imagine how intelligent must be the people running them.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot