ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

By Shwetha

  ತಂತ್ರಜ್ಞಾನದ ಪರಿಣಾಮ ನಮ್ಮ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಜೀವನದ ಮೇಲೆ ಪರಿಣಾಮವನ್ನು ಬೀರಲಿದ್ದು, ಇದರ ಬಗ್ಗೆ ನಾವು ಹೆಚ್ಚಿನ ಮುತುವರ್ಜಿಯನ್ನು ವಹಿಸಲೇಬೇಕು. ಆಧುನಿಕ ಯುಗವು ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮವನ್ನು ಉಂಟುಮಾಡುವುದರಿಂದ ತಂತ್ರಜ್ಞಾನದ ಮಿತವಾದ ಬಳಕೆಯನ್ನು ನಾವು ಮಾಡಬೇಕಾಗುತ್ತದೆ.

  ಇಂದಿನ ಲೇಖನದಲ್ಲಿ ಹೆಚ್ಚಿನ ಇಂಟರ್ನೆಟ್ ಅಥವಾ ಸ್ಮಾರ್ಟ್‌ಫೋನ್‌ಗಳ ಬಳಕೆ ದೇಹದ ಮತ್ತು ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಅರಿತುಕೊಳ್ಳೋಣ. ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುವ ತಾಂತ್ರಿಕ ದೋಷದ ಅಪಾಯಗಳನ್ನು ನೋಡೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಜನರೊಂದಿಗೆ ಹೆಚ್ಚು ಬೆರೆಯದೇ ನಮ್ಮದೇ ಜಗತ್ತಿನಲ್ಲಿ ನಾವಿರುವುದು ಖಿನ್ನತೆಗೆ ಪ್ರಮುಖ ಕಾರಣವಾಗಿದೆ. ತಂತ್ರಜ್ಞಾನದ ಬಳಕೆಯೇ ಇಂತಹ ಜನರಿಗೆ ಹೆಚ್ಚು ಪ್ರಿಯವಾಗಿರುವುದರಿಂದ ಆತ್ಮೀಯತೆ, ಸ್ನೇಹ ಎಂಬುದಕ್ಕೆ ಇವರುಗಳು ಬೆಲೆಯೇ ನೀಡುವುದಿಲ್ಲ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಸಾಮಾಜಿಕ ಜ್ಞಾನದ ಕೊರತೆಯನ್ನು ಈ ಆಧುನಿಕ ಯುಗದಲ್ಲಿ ಅನುಭವಿಸುವುದು ಹೆಚ್ಚು ದುಸ್ತರ ಎಂದೆನಿಸಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಹೆಚ್ಚಿನ ಸಮಯವನ್ನು ವೀಡಿಯೊ ಗೇಮ್‌ಗಳಲ್ಲಿ ಕಳೆಯುವುದು, ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವುದು ಇದರಿಂದಾಗಿ ಬೊಜ್ಜು ಉತ್ಪನ್ನವಾಗುತ್ತದೆ. ಕುಳಿತುಕೊಂಡೇ ಮಾಡುವ ಈ ಪ್ರವೃತ್ತಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನುಂಟು ಮಾಡುತ್ತದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಮಾನವ ಸಂಪರ್ಕದ ಕೊರೆತೆಯಿಂದಾಗಿ ಖಿನ್ನತೆಯು ಉಂಟಾಗುವುದಾಗಿದ್ದು ಹೆಚ್ಚು ತಿನ್ನುವುದು ಮತ್ತು ವ್ಯಾಯಾಮದ ಕೊರತೆ ಕೂಡ ಖಿನ್ನತೆಗೆ ಪ್ರಮುಖ ಕಾರಣ ಎಂದೆನಿಸಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದೇ ಇರುವುದು ಕೂಡ ಖಿನ್ನತೆಗೆ ಕಾರಣವಾಗಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಹೆಚ್ಚಿನ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್ ಬಳಕೆಯು ನಿಮ್ಮ ನಿದ್ದೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ. ಆನ್‌ಲೈನ್‌ನಲ್ಲಿ ನಾವು ವ್ಯಸ್ತರಾಗಿರುವುದು ನಮ್ಮನ್ನು ನಿದ್ದೆಯಿಂದ ವಂಚಿತರಾಗುವಂತೆ ಮಾಡುತ್ತದೆ ಮತ್ತು ಇದು ನಿಮ್ಮ ಮೆದುಳಿನ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚು.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ತಂತ್ರಜ್ಞಾನವು ನಮ್ಮ ದೇಹದ ಮೇಲೆ ಮಾತ್ರ ಪರಿಣಾಮ ಬೀರದೇ ನಾವಿರುವ ವಾತಾವರಣದ ಮೇಲೂ ಕೆಟ್ಟ ದೃಷ್ಟಿಯನ್ನು ಬೀರುತ್ತದೆ. ಅಂದರೆ ರಾಸಾಯನಿಕದ ಉತ್ಪತ್ತಿಯು ಇದರಿಂದ ಹೆಚ್ಚುತ್ತಿದ್ದು, ಇದನ್ನು ಇ - ವೇಸ್ಟ್ ಎಂದೇ ಕರೆಯಬಹುದು.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ತಂತ್ರಜ್ಞಾನದ ಹೆಚ್ಚು ಬಳಕೆಯು ಮಕ್ಕಳಲ್ಲಿ ಬೆಸರಿಕೆಯಂತಹ ಅಪಾಯಗಳಿಗೆ ಕಾರಣವಾಗುತ್ತಿದೆ. ಆನ್‌ಲೈನ್‌ನ ಬಳಕೆಯನ್ನು ಮಾಡುತ್ತಿರುವ ಹೆಚ್ಚಿನ ಮಕ್ಕಳು ಇಂದು ಬೆದರಿಕೆ ಸಂದೇಶಗಳನ್ನು ಸ್ವೀಕರಿಸುವ ಸ್ಥಿತಿ ಒದಗಿದ್ದು ತಲ್ಲಣವನ್ನುಂಟು ಮಾಡುತ್ತಿರುವ ಸುದ್ದಿಯಾಗಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಆನ್‌ಲೈನ್ ಬಳಕೆ ಹೆಚ್ಚಾದಂತೆ ಗೌಪ್ಯತೆಯ ಕೊರತೆ ಎದುರಾಗುತ್ತಿದೆ ಎಂಬುದಂತೂ ಸುಳ್ಳಲ್ಲ. ಆದಷ್ಟು ನಿಮ್ಮ ಮಾಹಿತಿಗಳನ್ನು ಗೌಪ್ಯವಾಗಿಡುವುದು ನೀವು ಅನುಸರಿಸಬೇಕಾದ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಜನರು ಇಂದು ಮೋಸದ ಖಾತೆಯನ್ನು ತೆರೆದು ಮತ್ತೊಬ್ಬರ ಜೀವನದಲ್ಲಿ ಆಟವಾಡುತ್ತಿರುವುದು ಸಾಮಾನ್ಯವಾಗಿದ್ದು ನಿಜಕ್ಕೂ ಇದು ಖೇದಕರ ಸಂಗತಿ ಎಂದೆನಿಸಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ನಿಮ್ಮ ದೈನಂದಿನ ಜೀವನಕ್ಕೂ ಅಂತರ್ಜಾಲದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಅಂತರ್ಜಾಲವನ್ನು ನೀವು ಬಳಸುತ್ತಿರುವಾಗ ಮುಖವಾಡ ಧರಿಸಬೇಕಾಗುತ್ತದೆ. ಇಲ್ಲಿ ನಿಮಗೆ ಹಲವಾರು ಸ್ನೇಹಿತರಿದ್ದು ಅವರೆಲ್ಲರ ಎದುರಿಗೆ ನೀವು ಭಿನ್ನವಾಗಿ ವ್ಯವಹರಿಸಬೇಕಾಗುತ್ತದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಹೆಚ್ಚಿನ ಸಮಯ ಅಂತರ್ಜಾಲದ ಬಳಕೆ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಕಾರಣವಾಗಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಬ್ಲ್ಯಾಕ್‌ಬೆರ್ರಿ/ಐಫೋನ್ ಥಂಬ್ ಎಂಬುದು ಒಂದು ಕಾಯಿಲೆಯಾಗಿದ್ದು ನೀವು ಮೊಬೈಲ್ ಡಿವೈಸ್ ಅನ್ನು ಹೆಚ್ಚು ಬಳಸುವುದು ಹೆಬ್ಬೆರಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಸಾಮಾಜಿಕ ತಾಣವನ್ನು ಬಳಸುತ್ತಿರುವವರು ಒಮ್ಮೊಮ್ಮೆ ತಮ್ಮ ಮಿತಿ ನೆಲೆಗಟ್ಟನ್ನು ದಾಟಿ ಬೇರೊಬ್ಬರ ಜೀವನವನ್ನು ಪ್ರವೇಶಿಸುತ್ತಾರೆ. ಫೇಸ್‌ಬುಕ್, ಟ್ವಿಟ್ಟರ್‌ನಂತಹ ತಾಣಗಳಲ್ಲಿ ಕೆಲವೊಂದು ಪೋಸ್ಟ್‌ಗಳನ್ನು ಹಾಕುವುದು ಮೊದಲಾದ ಕ್ರಿಯೆಗಳು ಮತ್ತೊಬ್ಬರ ಮನಸಿಗೆ ಘಾಸಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವುದು ಕೆಲವೊಮ್ಮೆ ಸಭ್ಯತೆಯ ಗೆರೆಯನ್ನು ದಾಟುತ್ತದೆ. ತಂತ್ರಜ್ಞಾನದ ಋಣಾತ್ಮಕ ಪರಿಣಾಮವಾಗಿ ಈ ಅಂಶವನ್ನು ಪರಿಗಣಿಸಬಹುದಾಗಿದೆ.

  ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

  ಇಂದಿನ ಆಧುನಿಕ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಪರಿಧಿ ಮಾಯವಾಗುತ್ತಿದೆ ಎಂಬುದು ತಲ್ಲಣಗೊಳಿಸುವ ಅಂಶವಾಗಿದೆ. ಸಾಮಾಜಿಕವಾಗಿ ಬೆರೆಯುವ ಭಾವನೆ ಈಗ ಮರೆಯಾಗುತ್ತಿದ್ದು ವೇಗದ ಜೀವನಶೈಲಿಗೆ ನಾವು ಸಂಪೂರ್ಣವಾಗಿ ನಮ್ಮನ್ನು ಅರ್ಪಿಸಿಕೊಂಡಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about 15 Negative Effects of Technology on human mind.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more