ಈ ವರ್ಷದಲ್ಲಿ ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋಗಳಾವುವು!?.. ಇಲ್ಲಿದೆ ಲಿಸ್ಟ್‌

|

ಸದ್ಯಕ್ಕೆ ನಾವೆಲ್ಲಾ 2022 ಕ್ಕೆ ವಿದಾಯ ಹೇಳುವ ಹಂತದಲ್ಲಿದ್ದೇವೆ. ಈ ವೇಳೆ ಈ ವರ್ಷದಲ್ಲಿ ಘಟಿಸಿದ ಹಲವಾರು ಮಾಹಿತಿಯನ್ನು ಗೂಗಲ್‌ ತಿಳಿಸುತ್ತಾ ಬರುತ್ತಿದೆ. ಅದರಲ್ಲೂ ಯೂಟ್ಯೂಬ್‌ ಎಂಬುದು ಮಾಹಿತಿ ಹಾಗೂ ಮನರಂಜನೆ ನೀಡುವ ಪ್ಲಾಟ್‌ಫಾರ್ಮ್‌ ಆಗಿದ್ದು, ಹಲವಾರು ಫೀಚರ್ಸ್‌ಗಳನ್ನು ನೀಡುವುದರ ಮೂಲಕ ಹೆಚ್ಚು ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿದೆ. ಇದರ ನಡುವೆ ಈಗ ಈ ವರ್ಷದಲ್ಲಿ ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಪಡೆದ ವಿಡಿಯೋಗಳ ಲಿಸ್ಟ್‌ ಅನ್ನು ಗೂಗಲ್‌ ಲಾಂಚ್‌ ಮಾಡಿದೆ.

ಗೂಗಲ್‌

ಹೌದು, ಗೂಗಲ್‌ ಒಡೆತನದ ಯೂಟ್ಯೂಬ್‌ನಲ್ಲಿ ಹಲವಾರು ಜನರು ಚಾನಲ್‌ ತೆರೆಯುವ ಮೂಲಕ ಜಾಗತಿಕವಾಗಿ ಪರಿಚಿತಗೊಂಡಿದ್ದಾರೆ. ಇನ್ನೂ ಕೆಲವರು ಯೂಟ್ಯೂಬ್‌ನಲ್ಲೆ ಉದ್ಯೋಗ ಕಂಡುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್‌ ಸದ್ಯಕ್ಕೆ ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋಗಳ ಲಿಸ್ಟ್‌ ಬಗ್ಗೆ ಮಾಹಿತಿ ನೀಡಿದ್ದು, ಅದರ ವಿವರವನ್ನು ಇಲ್ಲಿ ನೀಡಿದ್ದೇವೆ ಓದಿರಿ.

ಏಜ್ ಆಫ್ ವಾಟರ್- ರೌಂಡ್2ಹೆಲ್ (R2H)

ಏಜ್ ಆಫ್ ವಾಟರ್- ರೌಂಡ್2ಹೆಲ್ (R2H)

ಏಜ್ ಆಫ್ ವಾಟರ್ ಎಂಬ ವಿಡಿಯೋ 54 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಇದು ನೀರಿನ ಸಂರಕ್ಷಣೆಯ ಕುರಿತು ಆಲೋಚಿಸುವಂತೆ ಮಾಡುವ ವಿಡಿಯೋ ಆಗಿದೆ. ನೀರಿಗಾಗಿ ಜನರು ಅಲೆದಾಡುವ ಕಥೆ ಇದರಲ್ಲಿದ್ದು ನೀರಿಲ್ಲದ ಮತ್ತು ಜನರು ಸಾಯುತ್ತಿರುವ ನಗರವನ್ನು ಇದರಲ್ಲಿ ತೋರಿಸಲಾಗಿದೆ.

ಸಾಸ್ತಾ ಶಾರ್ಕ್ ಟ್ಯಾಂಕ್- ಆಶಿಶ್ ಚಂಚಲಾನಿ

ಸಾಸ್ತಾ ಶಾರ್ಕ್ ಟ್ಯಾಂಕ್- ಆಶಿಶ್ ಚಂಚಲಾನಿ

ಸೋನಿ ಟಿವಿಯ ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಆಗಿದೆ. ಇದು 56 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಗುವಿನ ಹೊಳೆಯೇ ಹರಿಯುತ್ತದೆ.

ಇಂಡಿಯನ್ ಫುಡ್ ಮ್ಯಾಜಿಕ್

ಇಂಡಿಯನ್ ಫುಡ್ ಮ್ಯಾಜಿಕ್

ದೇಶಾದ್ಯಂತ ಕಂಡುಬರುವ ವಿಶೇಷ ತಿನಿಸುಗಳ ಕುರಿತಾದ ವಿಡಿಯೋ ಇದಾಗಿದೆ. ಇದರಲ್ಲಿ ದೊಡ್ಡ ಗೋಲ್ಗಪ್ಪ, ವಿಶೇಷ ಪಾನ್, ದೊಡ್ಡ ಮೊಮೊಗಳು ಮತ್ತು ಇನ್ನಿತರೆ ವಿಷಯಗಳನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಈ ವಿಡಿಯೋ 33 ಮಿಲಿಯನ್ ವೀಕ್ಷಣೆ ಪಡೆದಿದೆ.

ಅರೇಬಿಕ್ ಕುಥು - ಬೀಸ್ಟ್ ಫಸ್ಟ್ ಸಿಂಗಲ್ ಪ್ರೋಮೋ

ಅರೇಬಿಕ್ ಕುಥು - ಬೀಸ್ಟ್ ಫಸ್ಟ್ ಸಿಂಗಲ್ ಪ್ರೋಮೋ

ಜಯ್ ಹಾಡಿನ ಮೊದಲ ಪ್ರೋಮೋ ಇದಾಗಿದ್ದು 33 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಚಿತ್ರದ ನಿರ್ಮಾಪಕರು ಅರೇಬಿಕ್ ಕುಥು ಮತ್ತು ಅದರ ಪರಿಕಲ್ಪನೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಹಾಡಿನ ಪ್ರೋಮೋ ತುಣುಕುಗಳನ್ನು ಇದು ಒಳಗೊಂಡಿತ್ತು.

ದಾರು ವಿತ್ ಡ್ಯಾಡ್ 3 ಹರ್ಷ್ ಬೇನಿವಾಲ್, ಬಿಬಿ ಕಿ ವೈನ್ಸ್ ಆಟೋಮ್ಯಾಟಿಕ್‌ ಗಾಡಿ

ದಾರು ವಿತ್ ಡ್ಯಾಡ್ 3 ಹರ್ಷ್ ಬೇನಿವಾಲ್, ಬಿಬಿ ಕಿ ವೈನ್ಸ್ ಆಟೋಮ್ಯಾಟಿಕ್‌ ಗಾಡಿ

ದಾರು ವಿತ್ ಡ್ಯಾಡ್ 3 ಹರ್ಷ್ ಬೇನಿವಾಲ್ ಅಪ್ಪ ಮಗನ ಬಾಂಧವ್ಯದ ಕುರಿತಾದ ಕಾಮಿಡಿ ವಿಡಿಯೋ ಆಗಿದೆ. ಇದು 25 ಮಿಲಿಯನ್ ವೀಕ್ಷಣೆ ಪಡೆದರೆ ಬಿಬಿ ಕಿ ವೈನ್ಸ್ ಆಟೋಮ್ಯಾಟಿಕ್‌ ಗಾಡಿ ವಿಡಿಯೋದಲ್ಲಿ ಹೊಸ ಕಾರು ಖರೀದಿಸುವ ವಿಷಯ ಇದೆ. ಇದೂ ಸಹ 21 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ದೂಧಿಯಾ ದಿ ಮೃದುಲ್, ಬಿಗ್ಗೆಸ್ಟ್‌ ಗ್ಯಾಂಗ್‌ಸ್ಟಾರ್‌ ಎನ್‌ಕೌಂಟರ್‌

ದೂಧಿಯಾ ದಿ ಮೃದುಲ್, ಬಿಗ್ಗೆಸ್ಟ್‌ ಗ್ಯಾಂಗ್‌ಸ್ಟಾರ್‌ ಎನ್‌ಕೌಂಟರ್‌

ದೂಧಿಯಾ ದಿ ಮೃದುಲ್ ವಿಡಿಯೋ ಗ್ರಾಮೀಣ ಹಿನ್ನೆಲೆಯ ಕಾಮಿಡಿ ವಿಡಿಯೋ ಆಗಿದ್ದು, ಇದು 38 ಮಿಲಿಯನ್ ವೀಕ್ಷಣೆ ಪಡೆದಿದ್ದರೆ, ಎನ್ಕೌಂಟರ್-ಜಿಟಿಎ ವಿ ಗೇಮ್ಸ್‌ 146 ಬರೋಬ್ಬರಿ 25 ಮಿಲಿಯನ್ ವೀಕ್ಷಣೆ ಪಡೆದಿದೆ.

ಫ್ರೀ ಫೈರ್ ವರ್ಲ್ಡ್ ಸೀರಿಸ್ 2022 ಸೆಂಟೋಸಾಫೈನಲ್ಸ್, ಚಿಡಿಯಾ ಘರ್ ಅಮಿತ್ ಭದನಾ

ಫ್ರೀ ಫೈರ್ ವರ್ಲ್ಡ್ ಸೀರಿಸ್ 2022 ಸೆಂಟೋಸಾಫೈನಲ್ಸ್, ಚಿಡಿಯಾ ಘರ್ ಅಮಿತ್ ಭದನಾ

ಫ್ರೀ ಫೈರ್ ವರ್ಲ್ಡ್ ಸೀರಿಸ್ 2022 ಸೆಂಟೋಸಾಫೈನಲ್ಸ್ ಜಾಗತಿಕ ಫ್ರೀ ಫೈರ್ ಪಂದ್ಯಾವಳಿಯ ಬಗ್ಗೆ ಇದ್ದು, 20 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಚಿಡಿಯಾ ಘರ್ - ಅಮಿತ್ ಭದನಾ ಕಿರು ಕಾಮಿಡಿ ಸಿನಿಮಾದ ವಿಡಿಯೋ ಆಗಿದ್ದು, 19 ಮಿಲಿಯನ್ ವೀಕ್ಷಣೆ ಗಳಿಸಿದೆ.

ಶ್ರೀವಲ್ಲಿ ಪುಷ್ಪಾ, ಅರೇಬಿಕ್ ಕುಥು ಸಾಂಗ್

ಶ್ರೀವಲ್ಲಿ ಪುಷ್ಪಾ, ಅರೇಬಿಕ್ ಕುಥು ಸಾಂಗ್

ಶ್ರೀವಲ್ಲಿ ಪುಷ್ಪಾ ತೆಲುಗು ಹಾಡು 544 ಮಿಲಿಯನ್ ವೀಕ್ಷಣೆ ಪಡೆದುಕೊಂಡರೆ, ಅರೇಬಿಕ್ ಕುಥು- ಹಲಮಿತಿ ಹಬಿಬೋ ಹಾಡಿನ ವಿಡಿಯೋ 493 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಪುಷ್ಪಾ ಸಿನಿಮಾ ಭಾರತದ ಹಲವು ಭಾಷೆಗಳಿಗೆ ಡಬ್ಬಿಂಗ್‌ ಆಗಿತ್ತು.

ಸಾಮಿ ಸಾಮಿ- ಪುಷ್ಪಾ, ಕಚಾ ಬಾದಮ್ ಹಾಡು

ಸಾಮಿ ಸಾಮಿ- ಪುಷ್ಪಾ, ಕಚಾ ಬಾದಮ್ ಹಾಡು

ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡು ಯೂಟ್ಯೂಬ್‌ನಲ್ಲಿ 490 ಮಿಲಿಯನ್ ವೀಕ್ಷಣೆ ಪಡೆದರೆ, ಕಚಾ ಬಾದಮ್ ಹಾಡು 383 ಮಿಲಿಯನ್ ವೀಕ್ಷಣೆ ಪಡೆದುಕೊಂಡು ದಾಖಲೆ ಬರೆದಿದೆ. ಈ ಹಾಡನ್ನು ಕಡಲೇಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿದ್ದಾರೆ. ಈ ಮೂಲಕ ಇವರು ಭಾರೀ ಜನಪ್ರಿಯತೆ ಗಳಿಸಿದ್ದರು.

ಲೆ ಲೆ ಆಯ್‌ ಕೋಕಾ ಕೋಲಾ ಹಾಗೂ ಪುಷ್ಪಾ ಹಾಡು

ಲೆ ಲೆ ಆಯ್‌ ಕೋಕಾ ಕೋಲಾ ಹಾಗೂ ಪುಷ್ಪಾ ಹಾಡು

ಲೆ ಲೆ ಆಯ್‌ ಕೋಕಾ ಕೋಲಾ ಕೇಸರಿ ಲಾಲ್ ಯಾದವ್ ಮತ್ತು ಶಿಲ್ಪಿ ರಾಜ್ ಹಾಡಿರುವ ಭೋಜ್‌ಪುರಿ ಹಾಡಾಗಿದೆ . ಇದು 313 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದರೆ, ಪುಷ್ಪಾ ಸಿನಿಮಾದ ಓ ಬೊಲೆಗಾ ಯಾ ಓ ಓ ಬೊಲೆಗಾ ಹಾಡು 344 ಮಿಲಿಯನ್ ವೀಕ್ಷಣೆ ಪಡೆದು ಜನಪ್ರಿಯಗೊಂಡಿದೆ.

ಊ ಅಂಟಾವ ಮಾವಾ ಊ ಓ ಅಂಟಾವ , ಕೋಕ್ ಸ್ಟುಡಿಯೋ ಸೀಸನ್ 14 ಪಸೂರಿ

ಊ ಅಂಟಾವ ಮಾವಾ ಊ ಓ ಅಂಟಾವ , ಕೋಕ್ ಸ್ಟುಡಿಯೋ ಸೀಸನ್ 14 ಪಸೂರಿ

ಪುಷ್ಪ: ದಿ ರೈಸ್ ಸಿನಿಮಾದ ಊ ಅಂಟಾವ ಮಾವಾ ಊ ಓ ಅಂಟಾವ ಹಿಂದಿ ಹಾಡು 263 ಮಿಲಿಯನ್ ವೀಕ್ಷಣೆ ಗಳಿಸಿಕೊಂಡರೆ ಪಸೂರಿ ಎಂಬುದು ಪಂಜಾಬಿ-ಉರ್ದು ಆಲ್ಬಂ ಆಗಿದ್ದು, ಇದನ್ನು ಪಾಕಿಸ್ತಾನಿ ಗಾಯಕ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿದ್ದಾರೆ.ಈ ಹಾಡು 456 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಅರೇಬಿಕ್ ಕುಥು ಬೀಸ್ಟ್, ನಾಥುನಿಯಾ ಕೇಸರಿ ಲಾಲ್ ಹಾಡು

ಅರೇಬಿಕ್ ಕುಥು ಬೀಸ್ಟ್, ನಾಥುನಿಯಾ ಕೇಸರಿ ಲಾಲ್ ಹಾಡು

ಅರೇಬಿಕ್ ಕುಥು ಬೀಸ್ಟ್ ವಿಡಿಯೋ 342 ಮಿಲಿಯನ್ ವೀಕ್ಷಣೆ ಪಡೆದರೆ, ಖೇಸರಿ ಲಾಲ್ ಯಾದವ್ ಹಾಡಿರುವ ಮತ್ತೊಂದು ಭೋಜ್‌ಪುರಿ ಹಾಡು ನಾಥುನಿಯಾ 257 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಯೂಟ್ಯೂಬ್‌ನಲ್ಲಿ ಈ ಎಲ್ಲಾ ವಿಡಿಯೋಗಳು ಧೂಳೆಬ್ಬಿಸಿವೆ.

Best Mobiles in India

English summary
20 most popular videos on YouTube for the year 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X