ಗೂಗಲ್ ಇಂಟರ್ ವ್ಯೂನಲ್ಲಿ ಕೇಳಿದ ಸವಾಲಿನ 20 ಪ್ರಶ್ನೆಗಳು!!

By GizBot Bureau
|

ನಿಮ್ಮಲ್ಲಿ ಯಾರಿಗಾದರೂ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲವಿದ್ಯಾ,...ಯಾವತ್ತಾದ್ರೂ ಒಂದು ದಿನ ಈ ಕಂಪೆನಿಯಲ್ಲಿ ಕೆಲಸ ಮಾಡಿಯೇ ಸಿದ್ಧ ಎಂದು ಕನಸು ಕಾಣುತ್ತಿದ್ದೀರಾ.. ಹಾಗಾದ್ರೆ ನೀವು ಕಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಬೇಕು.. ಹೌದು.. ಗೂಗಲ್ ಕಂಪೆನಿ ಕೆಲಸಕ್ಕೆ ತೆಗೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳಿ, ಆ ಪ್ರಶ್ನೆಗಳಿಗೆ ಸಮರ್ಥವಾಗಿ ಆ ವ್ಯಕ್ತಿ ಉತ್ತರಿಸಿದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತದೆ.

ಗೂಗಲ್ ಇಂಟರ್ ವ್ಯೂನಲ್ಲಿ ಕೇಳಿದ ಸವಾಲಿನ 20 ಪ್ರಶ್ನೆಗಳು!!

ಇತ್ತೀಚೆಗೆ ಗೂಗಲ್ ಮಾತ್ರವಲ್ಲ ಹಲವಾರು ಕಂಪೆನಿಗಳು ಹೀಗೆಯೇ ಮಾಡುತ್ತೆ ಬಿಡಿ. ಆದರೆ ಗೂಗಲ್ ಅನ್ನೋದು ಈಗಾಗಲೇ ಬ್ರ್ಯಾಂಡ್ ಆಗಿರುವ ಕಂಪೆನಿ. ಉತ್ತಮ ಸಂಬಳ, ಸಾಕಷ್ಟು ಸೌಕರ್ಯಗಳು ಎಲ್ಲವೂ ಇರುವ ಕಂಪೆನಿ. ಇಂತಹ ಕಂಪೆನಿಯ ಒಳ ಹೋಗಬೇಕು ಎಂದರೆ ಅದೃಷ್ಟ ಮಾಡಿರಬೇಕು.. ಆ ಅದೃಷ್ಟ ನಿಮ್ಮದಾಗಿಸಿಕೊಳ್ಳಬೇಕು ಎಂದರೆ ಒಮ್ಮೆ ಅವರು ಇಂಟರ್ ವ್ಯೂನಲ್ಲಿ ಕೇಳುವ ಪ್ರಶ್ನೆಗಳತ್ತ ಗಮನ ಹರಿಸಿ. ಹೌದು. ನಾವು ಈ ಕೆಳಗೆ ಪಟ್ಟಿ ಮಾಡಿದ ಪ್ರಶ್ನೆಗಳು ಗೂಗಲ್ ಕಂಪೆನಿಗೆ ಇಂಟರ್ ವ್ಯೂ ಗೆ ಹೋದ ವ್ಯಕ್ತಿಗಳು ಎದುರಿಸಿದ ಸವಾಲಿನ ಪ್ರಶ್ನೆಗಳು.

ಕ್ರಿಯೇಟೀವ್ ಸ್ಪೆಷಲಿಸ್ಟ್

ಕ್ರಿಯೇಟೀವ್ ಸ್ಪೆಷಲಿಸ್ಟ್

ಪ್ರಶ್ನೆ - ನಿಮ್ಮ ಅಜ್ಜಿಗೆ HTML 5 ನ ಮಹತ್ವವನ್ನು ಹೇಗೆ ವಿವರಿಸುತ್ತೀರಿ?

ಜನವರಿ 2016 ರಲ್ಲಿ ಕ್ರಿಯೇಟೀವ್ ಸ್ಪೆಷಲಿಸ್ಟ್ ಹುದ್ದೆಗೆ ಆಯ್ಕೆ ಮಾಡುವವರನ್ನು ಕೇಳಿದ ಪ್ರಶ್ನೆ ಇದು.

ಡಾಟಾಬೇಸ್ ಅಡ್ಮಿನಿಸ್ಟ್ರೇಟರ್

ಡಾಟಾಬೇಸ್ ಅಡ್ಮಿನಿಸ್ಟ್ರೇಟರ್

ಪ್ರಶ್ನೆ - ಮಾನವಕುಲದಲ್ಲಿ ಉಂಟಾದ ದೊಡ್ಡ ಬಿಕ್ಕಟ್ಟನ್ನು ಒಂದು ಬಿಲಿಯನ್ ಡಾಲರ್ ಮತ್ತು ಬಾಹ್ಯಾಕಾಶ ನೌಕೆ ಬಳಸಿ ನೀವು ಹೇಗೆ ಬಗೆಹರಿಸುತ್ತೀರಿ?

ಡಿಸೆಂಬರ್ 2015 ರಲ್ಲಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಾಗಿ ಈ ಪ್ರಶ್ನೆಯನ್ನು ಕೇಳಲಾಯ್ತು.

ಸಾಫ್ಟವೇರ್ ಇಂಜಿನಿಯರ್

ಸಾಫ್ಟವೇರ್ ಇಂಜಿನಿಯರ್

ಪ್ರಶ್ನೆ - ಗೂಗಲ್ ಮ್ಯಾಪನ್ನು ಕಂಡುಹಿಡಿದಿರುವುದೇ ನೀವೇ ಎಂದು ಭಾವಿಸಿಕೊಳ್ಳಿ ಮತ್ತು ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ದೆಹಲಿಯ ಇಂಡಿಯಾ ಗೇಟ್ ಗೆ ತೆರಳಲು ಮಾರ್ಗದರ್ಶನ ನೀಡಬೇಕು.. ಏನೂ ಗೊತ್ತಿಲ್ಲದ ಒಬ್ಬ ವ್ಯಕ್ತಿಗೆ ಹೇಗೆ ಇದನ್ನು ವಿವರಿಸುತ್ತೀರಿ?

ಸಾಫ್ಟವೇರ್ ಇಂಜಿನಿಯರ್ ಹುದ್ದೆಗೆ ಆಯ್ಕೆ ಮಾಡುವವರಿಗೆ ಈ ಪ್ರಶ್ನೆ ಕೇಳಲಾಗಿತ್ತು.

ಪ್ರೊಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್

ಪ್ರೊಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್

ಪ್ರಶ್ನೆ - ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು,4 ವರ್ಷ ಶಾಲೆಯಲ್ಲೂ ಭಾಗವಹಿಸಿದ್ದಾರೆ, ಅಮೇರಿಕಾದಲ್ಲಿ ಪ್ರತಿ ವರ್ಷ ಕೆಲಸ ಗಿಟ್ಟಿಸಿಕೊಳ್ಳುವ ಪದವೀದರ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಂದಾಜು ಲೆಕ್ಕಾಚಾರ ಹಾಕಬಹುದೇ?

ಪ್ರೊಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಗಾಗಿ ಈ ಪ್ರಶ್ನೆಯನ್ನು ಕೇಳಲಾಯ್ತು.

ಅಸೋಸಿಯೇಟ್ ಪ್ರೊಡಕ್ಟ್ ಮ್ಯಾನೇಜರ್

ಅಸೋಸಿಯೇಟ್ ಪ್ರೊಡಕ್ಟ್ ಮ್ಯಾನೇಜರ್

ಪ್ರಶ್ನೆ - ನಿಮಗೆ ಬ್ಯಾಂಕಿನ ಡಾಟಾಬೇಸ್ ನ್ನು ನೋಡುವ ಅವಕಾಶವಿದ್ದು, ವೃದ್ಧರಿಗೆ ಎಟಿಎಂ ಡಿಸೈನ್ ಮಾಡಬೇಕು ಎಂದಾದರೆ ಆ ಮಾಹಿತಿಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ..?

2015 ರಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

ಪ್ರೊಡಕ್ಟ್ ಮ್ಯಾನೇಜರ್

ಪ್ರೊಡಕ್ಟ್ ಮ್ಯಾನೇಜರ್

ಪ್ರಶ್ನೆ - ಸ್ಯಾನ್ ಪ್ರ್ಯಾನ್ಸಿಸ್ಕೋ ದಲ್ಲಿ ಮನೆಯಿಲ್ಲದೆ ಇರುವವರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಿ?

2015 ರಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಹುದ್ದೆಗಾಗಿ ಈ ಪ್ರಶ್ನೆ ಕೇಳಲಾಗಿತ್ತು.

ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?ಜಿಯೋ ಪ್ರೀಪೇಡ್ ಗ್ರಾಹಕರು ಪೋಸ್ಟ್‌ಪೇಡ್ ಗ್ರಾಹಕರಾಗುವುದು ಹೇಗೆ?

ಸಾಫ್ಟವೇರ್ ಇಂಜಿನಿಯರ್

ಸಾಫ್ಟವೇರ್ ಇಂಜಿನಿಯರ್

ಪ್ರಶ್ನೆ - ಒಬ್ಬ ವ್ಯಕ್ತಿ ತನ್ನ ಕಾರನ್ನು ಹೋಟೆಲಿಗೆ ನುಗ್ಗಿಸಿದ ಮತ್ತು ತನ್ನ ಅದೃಷ್ಟ ಕಳೆದುಕೊಂಡ.ಏನಾಯ್ತು?

ಸಾಫ್ಟ್ ವೇರ್ ಹುದ್ದೆಗಾಗಿ ಕೇಳಿದ ಪ್ರಶ್ನೆ ಇದು.

ಕ್ವಾಂಟಿಟೇಟಿವ್ ಕಂಪೋನ್ಸೇಷನ್ ಎನಲಿಸ್ಟ್

ಕ್ವಾಂಟಿಟೇಟಿವ್ ಕಂಪೋನ್ಸೇಷನ್ ಎನಲಿಸ್ಟ್

ಪ್ರಶ್ನೆ - ಪ್ರಪಂಚದ ಯಾವುದೋ ಮೂಲೆಯಲ್ಲಿ,ಒಂದು ಹೊಸ ಗೂಗಲ್ ಆಫೀಸ್ ತೆರೆಯುತ್ತೀರಿ ಮತ್ತು ಹೊಸ ಆಫೀಸಿನ ಕಾರ್ಮಿಕರಿಗೆ ನೀವು ಹೇಗೆ ಪರಿಹಾರ ಧನ ನೀಡುತ್ತೀರಿ?

ಬ್ಯೂಸಿನೆಸ್ ಎನಲಿಸ್ಟ್

ಬ್ಯೂಸಿನೆಸ್ ಎನಲಿಸ್ಟ್

ಪ್ರಶ್ನೆ - ಒಂದು ಕಟ್ಟಡವನ್ನು ಸ್ಥಳಾಂತರಿಸುವ ಬಗೆಗಿನ ಪ್ಲಾನಿಂಗ್ ಡಿಸೈನ್ ತಯಾರಿಸಿ

2014 ರ ನವೆಂಬರ್ ನ ಇಂಟರ್ ವ್ಯೂನಲ್ಲಿ ಈ ಪ್ರಶ್ನೆ ಕೇಳಲಾಗಿತ್ತು

ಕ್ವಾಂಟಿಟೇವಿವ್ ಎನಲಿಸ್ಟ್

ಕ್ವಾಂಟಿಟೇವಿವ್ ಎನಲಿಸ್ಟ್

ಪ್ರಶ್ನೆ - ಒಂದು ನಾಣ್ಯವನ್ನು 1000 ಬಾರಿ ಚಿಮ್ಮಿಸಲಾಗಿದೆ ಮತ್ತು 560 ಬಾರಿ ಹೆಡ್ಸ್ ಬಂದಿದೆ. ನೀವು ನಾಣ್ಯ ಪಕ್ಷಪಾತ ಮಾಡುತ್ತಿದೆ ಎಂದು ಭಾವಿಸುತ್ತೀರಾ?

2015 ರ ಸೆಪ್ಟೆಂಬರ್ ನಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್

ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್

ಪ್ರಶ್ನೆ - ಜಿಮೇಲ್ ಅಥವಾ ಗೂಗಲ್ ಪ್ಲಸ್ ಅಕೌಂಟ್ ತೆರೆಯುವಾಗ ಪ್ರತಿಯೊಬ್ಬರೂ ಕೂಡ ತಮ್ಮ ಅಧಿಕೃತ ಹೆಸರನ್ನೇ ಬಳಸಬೇಕು ಅಥವಾ ಬೇಡ.. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

2014 ರಲ್ಲಿ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗೆ ಕೇಳಲಾದ ಪ್ರಶ್ನೆ ಇದು.

ಇಂಜಿನಿಯರಿಂಗ್ ಮ್ಯಾನೇಜರ್

ಇಂಜಿನಿಯರಿಂಗ್ ಮ್ಯಾನೇಜರ್

ಪ್ರಶ್ನೆ - 264 = ಎಷ್ಟು?

ಬ್ಯುಸಿನೆಸ್ ಅಸೋಸಿಯೇಟ್

ಬ್ಯುಸಿನೆಸ್ ಅಸೋಸಿಯೇಟ್

ಪ್ರಶ್ನೆ - ಹುಲ್ಲಿನ ರಾಶಿಯಲ್ಲಿ ಸೂಜಿ ಹುಡುಕಲು ನೀವು ಎಷ್ಟು ಮತ್ತು ಯಾವೆಲ್ಲ ಮಾರ್ಗಗಳನ್ನು ಯೋಚಿಸಬಹುದು?

2014 ರ ಪ್ರಶ್ನೆ ಇದು.

ಅಸೋಸಿಯೇಟ್ ಅಕೌಂಟ್ ಸ್ಟ್ರಾಟಜಿಸ್ಟ್

ಅಸೋಸಿಯೇಟ್ ಅಕೌಂಟ್ ಸ್ಟ್ರಾಟಜಿಸ್ಟ್

ಪ್ರಶ್ನೆ - ನಿಮ್ಮ ಮುಂದಿನ ಜೀವನದಲ್ಲಿ ಒಂದು ರೂಮಿಗೆ ತೆರಳುವಾಗ ಕೇವಲ ಅದೇ ಒಂದು ಹಾಡನ್ನು ಪ್ಲೇ ಮಾಡಲು ಅವಕಾಶವಿದೆ. ಮುಂದೇನಾಗಬಹುದು?

ಸಾಫ್ಟವೇರ್ ಇಂಜಿನಿಯರ್

ಸಾಫ್ಟವೇರ್ ಇಂಜಿನಿಯರ್

ಪ್ರಶ್ನೆ - ಕಡಲುಗಳ್ಳರ ಹಡಗಿನ ಮಾಲೀಕ ನೀವು. ನಿಮ್ಮ ಸಿಬ್ಬಂದಿ ಚಿನ್ನವನ್ನು ಹೇಗೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಹೇಳುತ್ತಿದ್ದಾರೆ. ಅರ್ಧದಷ್ಟು ಮಂದಿ ನಿನ್ನ ಪರವಾಗಿ ಓಟ್ ಮಾಡಿದರೆ ನೀನು ಸತ್ತಂತೆ. ಲೂಟಿಯಾದ ಚಿನ್ನದಲ್ಲಿ ಹೆಚ್ಚು ಪಡೆದು,ನಿಮ್ಮ ಜೀವವನ್ನೂ ಉಳಿಸಿಕೊಳ್ಳಲು ನೀವೇನು ಮಾಡುತ್ತೀರಿ?

ಇಂಜಿನಿಯರಿಂಗ್ ಮ್ಯಾನೇಜರ್ ಹುದ್ದೆಗಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

ಪ್ರೊಡಕ್ಟ್ ಮ್ಯಾನೇಜರ್

ಪ್ರೊಡಕ್ಟ್ ಮ್ಯಾನೇಜರ್

ಪ್ರಶ್ನೆ - ದಿನಕ್ಕೆ ಎಷ್ಟು ಬಾರಿ ಗಡಿಯಾರದ ಮುಳ್ಳುಗಳು ಒಂದರ ಮೇಲೆ ಒಂದು ವ್ಯಾಪಿಸಿಕೊಳ್ಳುತ್ತವೆ.?

ಕ್ವಾಂಟಿಟೇಟಿವ್ ಕಂಪೋನ್ಸೇಷನ್ ಎನಲಿಸ್ಟ್

ಕ್ವಾಂಟಿಟೇಟಿವ್ ಕಂಪೋನ್ಸೇಷನ್ ಎನಲಿಸ್ಟ್

ಪ್ರಶ್ನೆ - ಒಂದು ಕಡ್ಡಿಯನ್ನು ಮೂರು ತುಂಡುಗಳನ್ನಾಗಿ ಮಾಡಿ ತ್ರಿಕೋನ ತಯಾರಿಕೆಯ ಸಂಭವನೀಯತೆ ಎಷ್ಟು?

ಬೋಲ್ಡ್ ಕ್ಯಾಂಡಿಡೇಟ್

ಬೋಲ್ಡ್ ಕ್ಯಾಂಡಿಡೇಟ್

ಪ್ರಶ್ನೆ - ಗೂಗಲ್ ಜಿಮೇಲ್ ಬಳಕೆ ಮಾಡಲು ತಿಂಗಳಿಗೆ ಒಬ್ಬ ಬಳಕೆದಾರನಿಗೆ 1 ಡಾಲರ್ ನಂತೆ ಶುಲ್ಕ ತೆಗೆದುಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

2015 ರಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

ಬ್ಯೂಸಿನೆಸ್ ಅಸೋಸಿಯೇಟ್

ಬ್ಯೂಸಿನೆಸ್ ಅಸೋಸಿಯೇಟ್

ಪ್ರಶ್ನೆ - ಅಮೇರಿಕಾದಲ್ಲಿ ವರ್ಷಕ್ಕೆ ಎಷ್ಟು ಹೇರ್ ಕಟ್ ಗಳು ನಡೆಯಬಹುದೆಂದು ನೀವು ಊಹಿಸುತ್ತೀರಿ?

ಅಡ್ವರ್ಸ್ ಅಸೋಸಿಯೇಟ್

ಅಡ್ವರ್ಸ್ ಅಸೋಸಿಯೇಟ್

ಪ್ರಶ್ನೆ - ಸಿಟ್ಟಾಗಿರುವ ಮತ್ತು ನಿರಾಶೆಗೊಂಡಿರುವ ಒಬ್ಬ ಜಾಹಿರಾತುದಾರನ ಜೊತೆ ಫೋನಿನಲ್ಲಿ ಹೇಗೆ ವ್ಯವಹರಿಸುತ್ತೀರಿ?

Best Mobiles in India

Read more about:
English summary
20 toughest questions from google job interviews

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X