2019 ರ ಲೋಕಸಭೆ ಚುನಾವಣೆ: ಅಭ್ಯರ್ಥಿಗಳು ಫೇಸ್ ಬುಕ್, ಟ್ವೀಟರ್ ಮತ್ತು ಯುಟ್ಯೂಬ್ ನಲ್ಲಿ ಮಾಡಬಾರದ 9 ವಿಚಾರಗಳು

|

2019 ರ ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ.ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು ಎಪ್ರಿಲ್ 11 ರಿಂದ ಆರಂಭವಾಗಿ ಮೇ 19 ರ ವರೆಗೆ ನಡೆಯಲಿದೆ. ಸಾಮಾಜಿಕ ಜಾಲತಾಣದ ವರ್ತನೆಗಳ ಬಗ್ಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಕೆಲವು ನೀತಿನಿಯಮಗಳನ್ನು ಪ್ರಕಟಿಸಿದೆ. ಫೇಸ್ ಬುಕ್, ಯುಟ್ಯೂಬ್ ಮತ್ತು ಟ್ವೀಟರ್ ನಲ್ಲಿ ಯಾವುದೇ ರೀತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಯಬಾರದು ಎಂಬುದಕ್ಕಾಗಿ ಈ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ

ನಾಮಪತ್ರ ಸಲ್ಲಿಕೆಯ ಸಂದರ್ಬದಲ್ಲಿಯೇ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವೀಟರ್ ಸೇರಿದಂತೆ ಇತರೆ ಅಕೌಂಟ್ ಗಳ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಿಸಬೇಕು.

ಫೇಸ್ ಬುಕ್ ಅಥವಾ ಟ್ವೀಟರ್ ನಲ್ಲಿ ಯಾವುದೇ ರಾಜಕೀಯ ಜಾಹೀರಾತು ಪ್ರಕಟಗೊಳ್ಳುವ ಮುನ್ನ ಅದಕ್ಕೆ ಸರ್ಟಿಫಿಕೇಟ್ ಪಡೆದುಕೊಂಡಿರಬೇಕು.

ಗೂಗಲ್, ಫೇಸ್ ಬುಕ್, ಟ್ವೀಟರ್ ಅಥವಾ ಯುಟ್ಯೂಬ್ ನಲ್ಲಿ ಪರಿಶೀಲನೆಗೊಳ್ಳದ ಯಾವುದೇ ರಾಜಕೀಯ ಜಾಹೀರಾತುಗಳು ಪ್ರಕಟವಾಗುವಂತಿಲ್ಲ.

ಚುನಾವಣಾ

ಚುನಾವಣಾ

ಒಟ್ಟಾರೆ ಚುನಾವಣಾ ವೆಚ್ಚದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳಿಗೆ ವೆಚ್ಚ ಮಾಡಿರುವುದನ್ನು ಕೂಡ ನಮೂದಿಸಬೇಕಾಗುತ್ತದೆ.

ರಾಜಕೀಯ ಲಾಭಕ್ಕಾಗಿ ಅಥವಾ ತಮ್ಮ ಪಕ್ಷದ ಪ್ರಚಾರಕ್ಕಾಗಿ ಯಾವುದೇ ರಕ್ಷಣಾ ಅಧಿಕಾರಿಯ ಅಂದರೆ ಸೈನಿಕರ ಅಥವಾ ಸೈನ್ಯದ ಅಧಿಕಾರಿಗಳ ಭಾವಚಿತ್ರವನ್ನು ಬಳಸಿಕೊಳ್ಳುವಂತಿಲ್ಲ.

ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಉಲ್ಲಂಘನೆ ನಡೆದಲ್ಲಿ ಅದರ ದೂರುಗಳನ್ನು ಸ್ವೀಕರಿಸುವುದಕ್ಕಾಗಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ವಾಟ್ಸ್ ಆಪ್

ವಾಟ್ಸ್ ಆಪ್

ದ್ವೇಷ ಹೆಚ್ಚಿಸುವ ಭಾಷಣ, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲಗಳು ಮತ್ತು ಫೇಸ್ ಬುಕ್, ಗೂಗಲ್ ಟ್ವೀಟರ್ ಗಳಲ್ಲಿ ಪೋಸ್ಟ್ ಮಾಡುವಂತಿಲ್ಲ ಮತ್ತು ಒಂದು ವೇಳೆ ಪಸರಿಸಿದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಇವುಗಳು ಭರವಸೆ ನೀಡಿವೆ.

ಫೇಸ್ ಬುಕ್, ಟ್ವೀಟರ್ ಅಥವಾ ಗೂಗಲ್ ನಲ್ಲಿ ಪೋಸ್ಟ್ ಮಾಡಲಾಗಿರುವ ಜಾಹೀರಾತುಗಳು ವಿಶೇಷವಾಗಿ ಐಟಿ ದೈತ್ಯರಿಂದ ಹೈಲೆಟ್ ಮಾಡಲಾಗಿರುತ್ತದೆ.

ವಾಟ್ಸ್ ಆಪ್ ಬಗ್ಗೆ ಯಾವುದೇ ನಿರ್ಧಿಷ್ಟ ಗೈಡ್ ಲೈನ್ ಗಳನ್ನು ನಮೂದಿಸಲಾಗಿಲ್ಲ.

Best Mobiles in India

English summary
2019 Lok Sabha elections: 9 things candidates can't do on Facebook, Twitter and YouTube

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X