ರಿಲಾಯ್ಸ್ ಜಿಯೋ:ಸತ್ಯ ಮತ್ತು ಮಿಥ್ಯಗಳ ಅವಲೋಕನ

By Shwetha
|

ರಿಲಾಯನ್ಸ್ ಜಿಯೋ 4ಜಿ ಜ್ವರ ಮಾರುಕಟ್ಟೆಯನ್ನು ವಿಪರೀತವಾಗಿ ಬಾಧಿಸಿದೆ. ನೆಟ್‌ವರ್ಕ್‌ನ ಕಾರ್ಯಕ್ಷಮತೆಯ ಬಗ್ಗೆ ಮತ್ತು ಅದು ಬಳಕೆದಾರರಿಗೆ ನೀಡುತ್ತಿರುವ ಆಫರ್‌ಗಳ ಕುರಿತು ಈಗಲೂ ಸುದ್ದಿ ಹರಡುತ್ತಲೇ ಇದೆ. ಅದಾಗ್ಯೂ ಅಲ್ಲೊಂದು ಇಲ್ಲೊಂದು ಸಾಮಾಜಿಕ ಮಾಧ್ಯಮದಲ್ಲಿ ಜಿಯೋದ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಲೇ ಇದೆ.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

ಟೆಲಿಕಾಮ್ ಮಾರುಕಟ್ಟೆಗೆ ಹೊಸ ಆಗಮನ ಎಂದೆನಿಸಿರುವ ಜಿಯೋ ಆಫರ್‌ಗಳು ಚಂದಾದಾರಿಗೆ ಜಿಯೋ ಸಿಮ್‌ಗೆ ಹೇಗೆ ಚಂದಾದಾರಿಕೆಯನ್ನು ಮಾಡಬಹುದು ಎಂಬುದನ್ನು ತಿಳಿಸಲಿರುವ ಸಂಪೂರ್ಣ ವಿಮರ್ಶೆಯನ್ನು ಮುಂದಿಟ್ಟಿದೆ. ಇಂದಿನ ಲೇಖನದಲ್ಲಿ ಜಿಯೋ ಕುರಿತು ಹರಡಿರುವ ವದಂತಿಗಳೇನು ಎಂಬುದನ್ನು ಅರಿತುಕೊಳ್ಳೋಣ.

ಮೂಲ ದಾಖಲೆಗಳನ್ನು ಸಲ್ಲಿಸಿ

ಮೂಲ ದಾಖಲೆಗಳನ್ನು ಸಲ್ಲಿಸಿ

ನೀವು ಮೂಲ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ವದಂತಿ ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಈ ವದಂತಿಗಳನ್ನು ನಂಬುವ ಮುನ್ನ ಕೊಂಚ ಯೋಚಿಸಬೇಕಾದ್ದು ನಿಮ್ಮ ಕರ್ತವ್ಯವಾಗಿದೆ. ಯಾವುದೇ ಟೆಲಿಕಾಮ್ ಕಂಪೆನಿಯು ನಿಮ್ಮ ಮೂಲ ದಾಖಲೆಗಳನ್ನು ಕೇಳುವುದಿಲ್ಲ ಇದಕ್ಕೆ ಜಿಯೋ ಕೂಡ ಹೊರತಲ್ಲ. ನಿಮ್ಮ ದಾಖಲೆಗಳ ಫೋಟೋಕಾಪಿಯೊಂದಿಗೆ ನೀವು ಜಿಯೋ ಸ್ಟೋರ್ ಬಳಿಗೆ ಹೋಗಿ ನಿಮಗೆ ಸಿಮ್ ದೊರೆಯುತ್ತದೆ.

ಸ್ಥಳೀಯ ಆಧಾರ್ ಕಾರ್ಡ್‌ಗೆ ಮಾತ್ರವೇ ಜಿಯೋ ಸಿಮ್ ಲಭ್ಯ

ಸ್ಥಳೀಯ ಆಧಾರ್ ಕಾರ್ಡ್‌ಗೆ ಮಾತ್ರವೇ ಜಿಯೋ ಸಿಮ್ ಲಭ್ಯ

ತನ್ನ ಅನಿಯಮಿತ ಡೇಟಾ ಆಫರ್‌ಗಳೊಂದಿಗೆ ಬಂದಿರುವ ಜಿಯೋ ಸಿಮ್ ಇತರ ಟೆಲಿಕಾಮ್ ಕಂಪೆನಿಗಳಂತೆಯೇ ದಾಖಲೆಗಳನ್ನು ಕೇಳುತ್ತಿದೆ. ನಿಮ್ಮ ಊರು ಬಿಟ್ಟು ಹೊರಗಡೆ ನೀವು ಅಧ್ಯಯನ ಅಥವಾ ಕೆಲಸ ಮಾಡುತ್ತಿದ್ದೀರಿ ಎಂದಾದಲ್ಲಿ ಸಿಮ್ ಪಡೆದುಕೊಳ್ಳಲು ಕೊಂಚ ಕಷ್ಟವಾಗುತ್ತದೆ. ಸ್ಥಳೀಯ ಆಧಾರ್ ಕಾರ್ಡ್ ಹೊಂದಿದ್ದಲ್ಲಿ ಮಾತ್ರವೇ ಸಿಮ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸ್ಥಳೀಯ ವಿಳಾಸಕ್ಕೆ ನೀವು ಬರುವವರೆಗೆ ಕಾಯಿರಿ ನಂತರ ದಾಖಲೆಗಳನ್ನು ಸಲ್ಲಿಸಿ ಸಿಮ್ ಪಡೆದುಕೊಳ್ಳಿ

ಕಾಲ್ ಡ್ರಾಪ್

ಕಾಲ್ ಡ್ರಾಪ್

ಯಾವುದೇ ನೆಟ್‌ವರ್ಕ್‌ನಲ್ಲಿ ಜಿಯೋ ಬಳಕೆದಾರರು ಒಳಬರುವ ಮತ್ತು ಹೊರಹೋಗುವ ಕರೆಗಳಲ್ಲಿ ಕಷ್ಟವನ್ನು ಎದುರಿಸುತ್ತಾರೆ ಎಂಬುದು ಇನ್ನೊಂದು ವದಂತಿಯಾಗಿದೆ. ಎರಡು ಜಿಯೋ ಸಂಖ್ಯೆಗಳ ನಡುವೆ ಸಂಪರ್ಕ ಮಾತ್ರ ಉತ್ತಮವಾಗಿರುತ್ತದೆ.

ಕರೆ ಸೌಲಭ್ಯ

ಕರೆ ಸೌಲಭ್ಯ

ನಿಮ್ಮ ಫೋನ್‌ನಲ್ಲಿ ಉತ್ತಮ 4ಜಿ ನೆಟ್‌ವರ್ಕ್ ಸೌಲಭ್ಯವನ್ನು ನೀವು ಹೊಂದಿದ್ದರೆ ಕರೆ ಸೌಲಭ್ಯವನ್ನು ನಿಮಗೆ ಉತ್ತಮವಾಗಿ ಆನಂದಿಸಬಹುದಾಗಿದೆ. ಉತ್ತಮ 4ಜಿ ನೆಟ್‌ವರ್ಕ್ ಅನ್ನು ಹೊಂದಿರುವ ಇತರ ಬಳಕೆದಾರರಿಗೆ ಕಾಲ್ ಡ್ರಾಪ್ ಸಮಸ್ಯೆಯಾಗುವುದಿಲ್ಲ. ಕಡಿಮೆ ದರದಲ್ಲಿ ಉತ್ತಮ 4ಜಿ ಡೇಟಾ ಸೌಲಭ್ಯವನ್ನು ಒದಗಿಸುವುದೇ ಜಿಯೋ ಇಂಗಿತವಾಗಿದೆ.

ಜಿಯೋ ಸಿಮ್ ಪಡೆದುಕೊಳ್ಳುವಲ್ಲಿ ವಿಳಂಬ

ಜಿಯೋ ಸಿಮ್ ಪಡೆದುಕೊಳ್ಳುವಲ್ಲಿ ವಿಳಂಬ

ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು ಬಳಕೆದಾರರು ಸೂಕ್ತವಾದ ದಾಖಲೆಗಳನ್ನು ಒದಗಿಸದೇ ಇರುವುದು ಸಿಮ್ ಪಡೆದುಕೊಳ್ಳುವಲ್ಲಿ ನಿಧಾನವನ್ನು ಮಾಡುತ್ತಿದೆ. ಹೊಸ ಸಿಮ್ ಅನ್ನು ತ್ವರಿತವಾಗಿ ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ, ರಿಲಾಯನ್ಸ್ ಜಿಯೋ ಸ್ಟೋರ್‌ನಲ್ಲಿ ನಿಖರವಾದ ಮಾಹಿತಿಗಳನ್ನು ಒದಗಿಸಿ.

ಕಸ್ಟಮರ್ ಸೇವೆಯಲ್ಲಿ ಸುಧಾರಣೆ ಅಗತ್ಯ

ಕಸ್ಟಮರ್ ಸೇವೆಯಲ್ಲಿ ಸುಧಾರಣೆ ಅಗತ್ಯ

ರಿಲಾಯನ್ಸ್ ಜಿಯೋ ಕಸ್ಟಮರ್ ಸರ್ವೀಸ್ ಕೊಂಚ ಕಷ್ಟವಾಗಿದೆ. ಕಸ್ಟಮರ್ ಸರ್ವೀಸ್ ಸೇವೆಯನ್ನು ಜನರಿಗೆ ತಲುಪುವಲ್ಲಿ ಕಷ್ಟವುಂಟಾಗುತ್ತಿದೆ. ಸಣ್ಣ ಮಾಹಿತಿಗೆ ಕೂಡ ಬಳಕೆದಾರರು 15-20 ನಿಮಿಷ ಕಾಯಬೇಕಾದ ಸ್ಥಿತಿ ಬಂದೊದಗಿದೆ. ತಮ್ಮ ಗ್ರಾಹಕ ಸೇವೆಯನ್ನು ಸುಧಾರಣೆ ಮಾಡುವ ಭರವಸೆಯನ್ನು ರಿಲಾಯನ್ಸ್ ಜಿಯೋ ಬಳಕೆದಾರರಿಗೆ ನೀಡಿದೆ.

Best Mobiles in India

English summary
The rumors and the post getting viral about Reliance Jio across the web has surely made matters worse.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X