ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

By Gizbot Bureau
|

ಎಟಿಎಂ ಕಾರ್ಡ್ ಗಳು ಬ್ಯಾಂಕ್ ನಲ್ಲಿ ಡೆಪಾಸಿಟ್ ಆಗಿರುವ ಹಣವನ್ನು ಡ್ರಾ ಮಾಡಿಕೊಳ್ಳುವುದಕ್ಕೆ ಇರುವ ಅತ್ಯುತ್ತಮವಾದ ಸುಲಭ ಮಾರ್ಗ. ಅದೇ ಕಾರಣಕ್ಕೆ ನೀವು ನಿಮ್ಮ ಕಾರ್ಡ್ ನ್ನು ಸೇಫ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕಳ್ಳಕಾಕರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಕೂಡ ಇಂಪಾರ್ಟೆಂಟ್.

ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

ಒಂದು ವೇಳೆ ಯಾವುದೋ ಕಾರಣಕ್ಕೆ, ಯಾವುದೋ ಅಚಾತುರ್ಯದಿಂದಾಗಿ ಎಟಿಎಂ ಕಾರ್ಡ್ ಕಳುವಾಯ್ತು ಅಥವಾ ಕಳೆದು ಹೋಯ್ತು ಎಂದಿಟ್ಟುಕೊಳ್ಳೋಣ. ಆಗ ನೀವು ಮಾಡಬೇಕಾಗಿರುವ ಮೊದಲ ಕೆಲಸ ಅದನ್ನು ಬ್ಲಾಕ್ ಮಾಡುವುದು. ಹೊಸ ಕಾರ್ಡ್ ನ್ನು ಎಷ್ಟು ಬೇಗವೋ ಅಷ್ಟು ಬೇಗ ಬ್ಯಾಂಕ್ ನಿಂದ ಪಡೆದುಕೊಳ್ಳುವುದು. ಆದರೆ ಕೂಡಲೇ ಕಳೆದು ಹೋದ ಕಾರ್ಡ್ ನ್ನು ಬ್ಲಾಕ್ ಮಾಡಿ ಕಳ್ಳರು ಹಣ ದೋಚದಂತೆ ನೋಡಿಕೊಳ್ಳುವುದು ಹೇಗೆ? ಇದಕ್ಕೆ ಕೆಲವು ಸುಲಭ ಮಾರ್ಗಗಳಿವೆ. ಅವುಗಳನ್ನು ಈ ಕೆಳಗೆ ತಿಳಿದುಕೊಳ್ಳೋಣ.

ವಿಧಾನ 1: ಕಸ್ಟಮರ್ ಕೇರ್ ಗೆ ಕರೆ ಮಾಡಿ

ವಿಧಾನ 1: ಕಸ್ಟಮರ್ ಕೇರ್ ಗೆ ಕರೆ ಮಾಡಿ

ಎಲ್ಲಾ ಎಟಿಎಂ ಕಾರ್ಡ್ ಗಳಿಗೂ ಕೂಡ ಟಾಲ್ ಫ್ರೀ ನಂಬರ್ ಇರುತ್ತದೆ. ಅದನ್ನು ಎಟಿಎಂನ ಹಿಂಭಾಗದಲ್ಲಿ ನಮೂದಿಸಲಾಗಿರುತ್ತದೆ. ಆ ನಂಬರ್ ನ್ನು ಸೇವ್ ಮಾಡಿ ಇಟ್ಟುಕೊಳ್ಳುವುದಕ್ಕೆ ಸಲಹೆ ನೀಡಲಾಗುತ್ತದೆ. ಕಾರ್ಡ್ ಈಗಾಗಲೇ ಕಳೆದು ಹೋಗಿರುವುದರಿಂದಾಗಿ ಇದಕ್ಕೆ ಗೂಗಲ್ ನಲ್ಲಿ ನಿಮಗೆ ಉತ್ತರ ಸಿಗುತ್ತದೆ. ಬ್ಯಾಂಕ್ ಹೆಸರಿಗೆ ಅನ್ವಯಿಸುವಂತೆ ಟಾಲ್ ಫ್ರೀ ನಂಬರ್ ನ್ನು ಗೂಗಲ್ ನಲ್ಲಿ ಹುಡುಕಾಡಿ ಮತ್ತು ಗ್ರಾಹಕ ಕೇಂದ್ರಕ್ಕೆ ಕರೆ ಮಾಡಿ. ಅದಕ್ಕೂ ಮುನ್ನ ಅಂದರೆ ಕರೆ ಮಾಡುವ ಮುನ್ನ ಬ್ಯಾಂಕ್ ಖಾತೆಯ ಸಂಖ್ಯೆ, ಕೊನೆಯ ಟ್ರಾನ್ಸ್ಯಾಕ್ಷನ್ ವಿವರ ಇತ್ಯಾದಿಗಳನ್ನು ಇಟ್ಟುಕೊಂಡಿರಿ. ಗೂಗಲ್ ನೀಡಿದ ನಂಬರ್ ಬಗ್ಗೆ ಖಾತ್ರಿ ಇರಲಿ.

ವಿಧಾನ 2: ನೆಟ್ ಬ್ಯಾಂಕಿಂಗ್ ಬಳಸಿ

ವಿಧಾನ 2: ನೆಟ್ ಬ್ಯಾಂಕಿಂಗ್ ಬಳಸಿ

ಒಂದು ವೇಳೆ ನಿಮ್ಮ ಪಿಸಿ ಅಥವಾ ಸ್ಮಾರ್ಟ್ ಫೋನಿನಲ್ಲಿ ಇಂಟರ್ನೆಟ್ ಕನೆಕ್ಷನ್ ಇದ್ದಲ್ಲಿ ಕೂಡಲೇ ನೆಟ್ ಬ್ಯಾಂಕಿಂಗ್ ಅಕೌಂಟಿಗೆ ಲಾಗಿನ್ ಆಗಿ ಮತ್ತು ಕಾರ್ಡ್ ಅಥವಾ ಸರ್ವೀಸ್ ಸೆಕ್ಷನ್ ನ್ನು ಹುಡುಕಾಡಿ. ಬ್ಲಾಕ್ ರಿಕ್ವೆಸ್ಟ್ ನ್ನು ನೆಟ್ ಬ್ಯಾಂಕಿಂಗ್ ನಲ್ಲೂ ಕೂಡ ಮಾಡಬಹುದು.

ವಿಧಾನ 3: ಎಸ್ಎಂಎಸ್ ಬಳಸಿ

ವಿಧಾನ 3: ಎಸ್ಎಂಎಸ್ ಬಳಸಿ

ಹಲವು ಬ್ಯಾಂಕ್ ಗಳು ಎಸ್ಎಂಎಸ್ ಮೂಲಕ ಕೂಡ ಕಾರ್ಡ್ ಬ್ಲಾಕ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ತಾವು ರಿಜಿಸ್ಟರ್ ಮಾಡಿದ ಮೊಬೈಲ್ ನಂಬರಿನಿಂದ ಬ್ಲಾಕ್ ಎಂದು ಬರೆದು ಬಳಕೆದಾರರು ಬ್ಯಾಂಕಿಗೆ ಎಸ್ಎಂಎಸ್ ಕಳಿಸುವ ಮೂಲಕ ಕೂಡ ಇದನ್ನು ಸಾಧಿಸಬಹುದು.

ವಿಧಾನ 4: ಹತ್ತಿರದ ಬ್ಯಾಂಕಿನ ಬ್ರ್ಯಾಂಚಿಗೆ ಭೇಟಿ ನೀಡುವುದು

ವಿಧಾನ 4: ಹತ್ತಿರದ ಬ್ಯಾಂಕಿನ ಬ್ರ್ಯಾಂಚಿಗೆ ಭೇಟಿ ನೀಡುವುದು

ಒಂದು ವೇಳೆ ನೀವು ನಿಮ್ಮ ಕಾರ್ಡ್ ಕಳೆದುಕೊಂಡರೆ ಬ್ಯಾಂಕಿನ ಕೆಲಸದ ವೇಳೆಯಲ್ಲಿ ಕೂಡಲೇ ಹತ್ತಿರದ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಮತ್ತು ಅಲ್ಲಿನ ಸಿಬ್ಬಂದಿಯ ಬಳಿ ವಿಚಾರ ತಿಳಿಸಿ ಕಾರ್ಡ್ ಬ್ಲಾಕ್ ಮಾಡುವಂತೆ ಹೇಳಬಹುದು.

Best Mobiles in India

Read more about:
English summary
4 Simple Ways To Block A Lost Credit Or Debit Card

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X