ರಿಲಾಯನ್ಸ್ ಜಿಯೋಗಿಂತಲೂ ಏರ್‌ಟೆಲ್‌ ಉತ್ತಮ: 5 ಕಾರಣಗಳು

By Suneel
|

ಇಂಟರ್ನೆಟ್ ಡಾಟಾ ಪ್ಯಾಕ್‌, ಟ್ಯಾರಿಫ್ ಪ್ಲಾನ್‌, ಉಚಿತ ಡಾಟಾ, ಉಚಿತ ಎಸ್‌ಎಂಎಸ್‌ ಹೀಗೆ ಹಲವು ಪ್ಲಾನ್‌ಗಳು ಎಲ್ಲಾ ಟೆಲಿಕಾಂ ಕಂಪನಿಗಳಲ್ಲಿಯೂ ಶೀಘ್ರ ರೀತಿಯಲ್ಲಿ ಬದಲಾಗುತ್ತಿವೆ. ಆದರೆ ಟೆಲಿಕಾಂ ಕ್ಷೇತ್ರದಲ್ಲಿ ಸುನಾಮಿ ಎದ್ದಿರುವುದಂತು ನಿಜ. ಕಾರಣ ಎಲ್ಲರಿಗೂ ತಿಳಿದಿರುವಂತೆ ರಿಲಾಯನ್ಸ್ ಜಿಯೋ ಆಗಮನ.

ಉಚಿತ ವಾಯ್ಸ್ ಕರೆಗಳು, ಅನ್‌ಲಿಮಿಟೆಡ್ ಇಂಟರ್ನೆಟ್, ಹೊಸ ಟ್ಯಾರಿಫ್‌ ಪ್ಲಾನ್‌ಗಳೊಂದಿಗೆ ಹೊಸ ಹೊಸ ತಂತ್ರಗಳನ್ನು ರಿಲಾಯನ್ಸ್ ಜಿಯೋ ಬಳಸುತ್ತಲೇ ಇದೆ. ಈ ತಂತ್ರಗಳಿಂದ ಹಳೆಯ ಗಟಾನುಗಟಿ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ. ಏರ್‌ಟೆಲ್‌, ವೊಡಾಫೋನ್, ಐಡಿಯಾ ಮತ್ತು ಇತರೆ ಕಂಪನಿಗಳಾಗಿರಬಹುದು. ಆದರೆ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಿಳಿಯದೇ ಇರುವ ಒಂದು ವಿಷಯವಿದೆ. ಅದೇನೆಂದರೆ ಜಿಯೋ ಎಂತಹದೇ ಆದ ಹೊಸ ಹೊಸ ಟ್ಯಾರಿಫ್‌ ಪ್ಲಾನ್‌ಗಳನ್ನು ಪರಿಚಯಿಸಿದರೂ ಸಹ ಏರ್‌ಟೆಲ್‌ ಮಾರುಕಟ್ಟೆ ಸ್ಥಾನವನ್ನು ಅಲಂಕರಿಸಿಲ್ಲ. ಹೌದು, ಏರ್‌ಟೆಲ್‌ ದೇಶದ ಉತ್ತಮ ನೆಟ್‌ವರ್ಕ್‌ ಎಂದು ಹೇಳಲಾಗಿದೆ.

ಬಿಎಸ್‌ಎನ್‌ಎಲ್‌ ಪ್ರೀಪೇಡ್‌ ಸಿಮ್ ಖರೀದಿಗೆ ಮುನ್ನ ಚೆಕ್‌ ಮಾಡಲೇಬೇಕಾದ 5 ಅಂಶಗಳು

ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಕರೆ ಮತ್ತು ಇಂಟರ್ನೆಟ್ ಆಫರ್‌ ನೀಡಿದರೂ ಸಹ ಏರ್‌ಟೆಲ್‌(Airtel) ಟೆಲಿಕಾಂ ಮಾರುಕಟ್ಟೆಯನ್ನು ಆಳುತ್ತಿದೆ. ಕಾರಣ ಏನು ಗೊತ್ತೇ? ಈ ಕುತೂಹಲಕಾರಿ ಮಾಹಿತಿ ತಿಳಿಯಲು ಲೇಖನ ಓದಿರಿ.

ಕರೆ ಸ್ಥಗಿತ ಸಮಸ್ಯೆಗಳು ಕಡಿಮೆ

ಕರೆ ಸ್ಥಗಿತ ಸಮಸ್ಯೆಗಳು ಕಡಿಮೆ

ಏರ್‌ಟೆಲ್‌ ಕರೆ ಸ್ಥಗಿತ ಸಮಸ್ಯೆಗಳನ್ನು ಹೊಂದಿಲ್ಲ. ಆದರೆ ರಿಲಾಯನ್ಸ್ ಜಿಯೋ ಬಳಕೆದಾರರು ಕರೆ ಸ್ಥಗಿತ ಸಮಸ್ಯೆಗಳ ಅನುಭವವನ್ನು ಹೆಚ್ಚಾಗೆ ಪಡೆದಿದ್ದಾರೆ. ಇದು ಶೇ.90 ಎನ್ನಲುಬಹುದು. ಇದು ತನ್ನ ಸ್ವಂತ ನೆಟ್‌ವರ್ಕ್‌ ಹೊಂದಿದ್ದರೂ ಸಹ ಕರೆ ಸ್ಥಗಿತ ಸಮಸ್ಯೆ ಹೊಂದಿದೆ. ಈ ರೀತಿಯಲ್ಲಿ, ಜಿಯೋಗೆ ಹೋಲಿಸಿದರೆ, ಏರ್‌ಟೆಲ್‌ ಉತ್ತಮ ಅನುಭವ ನೀಡುತ್ತಿದೆ.

ಇಂಟರ್ನೆಟ್ ಸ್ಪೀಡ್ ಡಬಲ್‌

ಇಂಟರ್ನೆಟ್ ಸ್ಪೀಡ್ ಡಬಲ್‌

ಇತ್ತೀಚೆಗೆ ರಿಲಾಯನ್ಸ್ ಜಿಯೋ, ಭಾರತದಲ್ಲಿ ಉತ್ತಮ ಮೊಬೈಲ್‌ ಡಾಟಾ ವೇಗ ನೀಡುವ ಭರವಸೆ ನೀಡಿತು. ಆ ಸಮಯ ಈಗಾಗಲೇ ಮುಗಿದಿದೆ. ಜಿಯೋ ಇಂಟರ್ನೆಟ್ ವೇಗ, 0.4-5 mbps ವರೆಗೂ ಕುಸಿದಿದೆ. ಏರ್‌ಟೆಲ್‌ 4G ಇಂಟರ್ನೆಟ್ ಡಾಟಾ ವೇಗಕ್ಕೆ ಹೋಲಿಸಿದರೆ, ಜಿಯೋ ಅರ್ಧದಷ್ಟು ವೇಗ ಹೊಂದಿದೆ. ಜಿಯೋಗಿಂತ ಎರಡು ಪಟ್ಟು ವೇಗವನ್ನು ಏರ್‌ಟೆಲ್‌ ನೀಡುತ್ತದೆ.

ಉತ್ತಮ ಗ್ರಾಹಕರ ಸೇವೆ

ಉತ್ತಮ ಗ್ರಾಹಕರ ಸೇವೆ

ಜಿಯೋ'ದಲ್ಲಿ ಸಮಸ್ಯೆ ಕಂಡುಬಂದರೆ, ಗ್ರಾಹಕರು ಹಲವು ನಿಮಿಷಗಳು, ಗಂಟೆಗಳು ಅಥವಾ ಒಂದು ದಿನವೇ ಗ್ರಾಹಕರ ಸೇವಾವಾಣಿಗಾಗಿ ಕಾಯಬೇಕಾಗುತ್ತದೆ. ಆದರೆ ಏರ್‌ಟೆಲ್‌ ಗ್ರಾಹಕರು ಶೀಘ್ರವಾಗಿ ಸೇವಾವಾಣಿ ಸಂಪರ್ಕ ಹೊಂದಬಹುದು.

ಏರ್‌ಟೆಲ್‌ ಸಿಮ್‌ಕಾರ್ಡ್ 2G, 3G, 4G ಫೋನ್‌ಗಳಲ್ಲಿ ಸಪೋರ್ಟ್‌ ಆಗುತ್ತದೆ

ಏರ್‌ಟೆಲ್‌ ಸಿಮ್‌ಕಾರ್ಡ್ 2G, 3G, 4G ಫೋನ್‌ಗಳಲ್ಲಿ ಸಪೋರ್ಟ್‌ ಆಗುತ್ತದೆ

ರಿಲಾಯನ್ಸ್ ಜಿಯೋ 4G ಸಿಮ್ ಕೇವಲ 4G ಫೋನ್‌ಗಳಲ್ಲಿ ಮಾತ್ರ ಸಪೋರ್ಟ್‌ ಆಗುತ್ತದೆ. ಆದರೆ ಏರ್‌ಟೆಲ್‌ ಸಿಮ್‌ 2G, 3G, 4G ಫೋನ್‌ಗಳಲ್ಲಿ ಸಪೋರ್ಟ್‌ ಆಗುತ್ತದೆ.

ದೂರದ ಪ್ರದೇಶಗಳಲ್ಲಿಯೂ ವರ್ಕ್‌ ಆಗುತ್ತದೆ

ದೂರದ ಪ್ರದೇಶಗಳಲ್ಲಿಯೂ ವರ್ಕ್‌ ಆಗುತ್ತದೆ

ಒಟ್ಟಾರೆ 21 ವೃತ್ತಗಳಲ್ಲಿ, 19 ವೃತ್ತಗಳಲ್ಲಿ ಏರ್‌ಟೆಲ್‌ 4G ಸೇವೆಯನ್ನು ಲಾಂಚ್ ಮಾಡಿದೆ. ಇದು ರಿಲಾಯನ್ಸ್ ಜಿಯೋಗಿಂತಲೂ ಅಧಿಕ ಸೇವೆ ಹೊಂದಿದೆ. ಜಿಯೋ ರೀತಿ ಅಲ್ಲದೇ, ಏರ್‌ಟೆಲ್‌ ದೂರದ ಪ್ರದೇಶಗಳಲ್ಲಿಯೂ ಸಹ ವರ್ಕ್‌ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Reasons Why Airtel is Better Than Reliance Jio. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X