Subscribe to Gizbot

ವೊಡಾಫೋನ್ ಆಯ್ಕೆ ಮಾಡಿಕೊಂಡವರಿಗೆ 5 ಸ್ಟ್ರಾಂಗ್ ಬೆನಿಫಿಟ್‌ಗಳು; ಮಿಸ್‌ಮಾಡದಿರಿ

Written By:

ರಿಲಾಯನ್ಸ್ ಜಿಯೋ ಕುತೂಹಲ ಹಾಗೆ ಉಳಿದಿರುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲ. ಯಾಕಂದ್ರೆ ಜಿಯೋ ಎಫೆಕ್ಟ್‌ನಿಂದಲೇ ಇಂದು ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್ ಟೆಲಿಕಾಂಗಳು ಸಹ ತಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಿ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳು, ಡಾಟಾ ಸೇವೆಗಳನ್ನು ನೀಡುತ್ತಿವೆ.

ರಿಲಾಯನ್ಸ್ ಜಿಯೋ ರೀತಿಯಲ್ಲೇ ಏರ್‌ಟೆಲ್‌ ಈಗ ಮೈಏರ್‌ಟೆಲ್‌ ಆಪ್ ಅನ್ನು ಅಪ್‌ಡೇಟ್‌ ಮಾಡಿ, 50 ನಿಮಿಷ ಉಚಿತ ಕರೆ ಮತ್ತು ಇತರೆ ಸೇವೆಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ವೊಡಾಫೋನ್ ಸಹ ಅತಿ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್ ಮತ್ತು ಡಾಟಾ ಪ್ಯಾಕ್‌ಗಳನ್ನು ಪ್ರಕಟಣೆ ಮಾಡಿದೆ.

ವೊಡಾಫೋನ್ ಈಗ ತನ್ನ ರೆಡ್ ಗ್ರಾಹಕರಿಗೆ ಲೈಫ್‌ಟೈಮ್‌ ಬೆನಿಫಿಟ್‌ಗಳನ್ನು ಪ್ರಕಟಣೆ ಮಾಡಿದೆ. ಅಂದಹಾಗೆ ವೊಡಾಫೋನ್‌ ರೆಡ್‌ ಎಂದರೆ ಪೋಸ್ಟ್‌ಪೇಡ್ ಸಬ್‌ಸ್ಕ್ರಿಬ್‌ಶನ್ ಸರ್ವೀಸ್‌. ರೆಡ್‌ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆಗಳು, ಇನ್‌ಬಿಲ್ಟ್ ರೋಮಿಂಗ್ ಮತ್ತು ಉಚಿತ ಡಾಟಾ ಕೋಟಾಗಳನ್ನು ಪ್ರಕಟಿಸಿದೆ. ನೀವು ವೊಡಾಫೋನ್(Vodafone) ಪೋಸ್ಟ್‌ಪೇಡ್ ಗ್ರಾಹಕರಾಗಿದ್ದಲ್ಲಿ ನಿಮಗಾಗಿ ಇರುವ ಬೆನಿಫಿಟ್‌ಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಜಿಯೋ ಮತ್ತು ವೊಡಾಫೋನ್ ಅಪ್ಲಿಕೇಶನ್‌ಗಳಲ್ಲಿ ಬೆಸ್ಟ್ ಯಾವುದು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಬಲ್ ಡಾಟಾ ಆಫರ್‌

ಡಬಲ್ ಡಾಟಾ ಆಫರ್‌

ಇದುವರೆಗೆ ವೊಡಾಫೋನ್ ರೆಡ್‌ ಗ್ರಾಹಕರು ರೂ.499 ಕ್ಕೆ 1GB 4G ಡಾಟಾ ಪಡೆಯುತ್ತಿದ್ದರು. 1,999 ಕ್ಕೆ 8GB 4G ಡಾಟಾ ನೀಡಲಾಗುತ್ತಿತ್ತು. ಆದರೆ ಈಗ ಹೊಸ ಗ್ರಾಹಕರು ಡಬಲ್‌ ಡಾಟಾ ಬೆನಿಫಿಟ್‌ಗಳನ್ನು ಪಡೆಯಬಹುದಾಗಿದೆ. ರೂ.999 3GB 4G ಬದಲು 6GB ಡಾಟಾವನ್ನು ಒಂದು ತಿಂಗಳ ಅವಧಿಗೆ ಪಡೆಯಬಹುದಾಗಿದೆ. ಈ ಡಾಟಾ ಪ್ಲಾನ್ ಎಲ್ಲಾ ರೆಡ್ ಪ್ಲಾನ್ ಸಬ್‌ಸ್ಕ್ರೈಬರ್‌ಗಳಿಗೆ ಸಿಗಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಲೈಫ್‌ಟೈಮ್‌ ಬೆನಿಫಿಟ್‌

ಲೈಫ್‌ಟೈಮ್‌ ಬೆನಿಫಿಟ್‌

ವೊಡಾಫೋನ್ ರೆಡ್‌ ಪೋಸ್ಟ್‌ಪೇಡ್ ಸಬ್‌ಸ್ಕ್ರೈಬರ್‌ಗಳು ಹೊಸದಾಗಿ ಸೇವೆ ಪಡೆದಲ್ಲಿ ಲೈಫ್‌ಟೈಮ್‌ ಬೆನಿಫಿಟ್‌ಗಳನ್ನು ಪಡೆಯಲಿದ್ದಾರೆ. ಇದು ಬಿಎಸ್ಎನ್ಎಲ್‌ನ BB249 ಪ್ಲಾನ್‌ ರೀತಿಯಲ್ಲಿದ್ದು, ಹೊಸದಾಗಿ ಬ್ರಾಡ್‌ಬ್ಯಾಂಡ್‌ ಪಡೆದ ಗ್ರಾಹಕರಿಗೆ ಮಾತ್ರ ಈ ಸೇವೆ ಸಿಗಲಿದೆ.

 ಈ ವರ್ಷದ ಅಂತ್ಯದ ವರೆಗೆ ವ್ಯಾಲಿಡಿಟಿ

ಈ ವರ್ಷದ ಅಂತ್ಯದ ವರೆಗೆ ವ್ಯಾಲಿಡಿಟಿ

ಈಗಾಗಲೇ ವೊಡಾಫೋನ್ ರೆಡ್‌ ಸಬ್‌ಸ್ಕ್ರೈಬರ್‌ಗಳು ಮತ್ತು ಹೊಸದಾಗಿ ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಡಬಲ್‌ ಡಾಟಾ ಬೆನಿಫಿಟ್‌ಗಳನ್ನು ಲೈಫ್‌ಟೈಮ್‌ ಎಂಜಾಯ್ ಮಾಡಬಹುದಾಗಿದೆ. ಆದರೆ ಈ ಸೇವೆಗೆ ಡಿಸೆಂಬರ್ 31, 2016 ರೊಳಗೆ ಸಬ್‌ಸ್ಕ್ರೈಬ್‌ ಆಗಬೇಕಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4G ವೃತ್ತದಲ್ಲಿರುವ ಬಳಕೆದಾರರಿಗೆ ಹೆಚ್ಚು ಬೆನಿಫಿಟ್‌ಗಳು

4G ವೃತ್ತದಲ್ಲಿರುವ ಬಳಕೆದಾರರಿಗೆ ಹೆಚ್ಚು ಬೆನಿಫಿಟ್‌ಗಳು

4G ವೃತ್ತದಲ್ಲಿರುವ ವೊಡಾಫೋನ್ ಬಳಕೆದಾರರಿಗೆ ಹೆಚ್ಚು ಬೆನಿಫಿಟ್‌ಗಳು ದೊರೆಯಲಿದ್ದು, ಅವರು ಆಪರೇಟರ್‌ಗಳಿಂದ ಹೆಚ್ಚುವರಿಯಾಗಿ 4G ಡಾಟಾವನ್ನು ದಿನದ ಯಾವುದೇ ಸಮಯದಲ್ಲಿ ಪಡೆಯಬಹುದಾಗಿದೆ.

3G ವೃತ್ತದಲ್ಲಿರುವವರು ರಾತ್ರಿ ಡಾಟಾ ರೀತಿಯಲ್ಲಿ ಬಳಸಬಹುದು

3G ವೃತ್ತದಲ್ಲಿರುವವರು ರಾತ್ರಿ ಡಾಟಾ ರೀತಿಯಲ್ಲಿ ಬಳಸಬಹುದು

3G ವೃತ್ತದಲ್ಲಿರುವ ವೊಡಾಫೋನ್ ರೆಡ್‌ ಬಳಕೆದಾರರು 3G ಹೆಚ್ಚುವರಿ ಡಾಟಾವನ್ನು ರಾತ್ರಿ ಡಾಟಾವಾಗಿ 12am ಇಂದ 6am ವರೆಗೆ ಬಳಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
5 Strong Benefits of Choosing Vodafone Red Postpaid Service. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot