ಜಿಯೋ ಮತ್ತು ವೊಡಾಫೋನ್ ಅಪ್ಲಿಕೇಶನ್‌ಗಳಲ್ಲಿ ಬೆಸ್ಟ್ ಯಾವುದು?

By Shwetha
|

ಜಿಯೋ ಭಾರತದಲ್ಲಿ ಉಂಟುಮಾಡುತ್ತಿರುವ ಸದ್ದುಗದ್ದಲವನ್ನು ನೀವು ಅರಿತಿರುತ್ತೀರಿ ತಾನೇ? ಇಷ್ಟರವರೆಗೆ ಯಾವುದೇ ಟೆಲಿಕಾಮ್ ಸಂಸ್ಥೆಗಳು ನೀಡದೇ ಇರುವ ಆಫರ್‌ಗಳನ್ನು ಜಿಯೋ ನೀಡಿ ಇತರ ಟೆಲಿಕಾಮ್ ವಲಯಕ್ಕೂ ಬಿಸಿ ಮುಟ್ಟಿಸಿದೆ. ಇದರಿಂದ ಪ್ರಭಾವಿತಗೊಂಡು ಇತರ ಟೆಲಿಕಾಮ್ ಕ್ಷೇತ್ರಗಳೂ ಕೂಡ ಇನ್ನಷ್ಟು ಆಕರ್ಷಕ ಆಫರ್‌ಗಳನ್ನು ಒದಗಿಸುವ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುವ ಕಾರ್ಯದಲ್ಲಿ ಭರದಿಂದ ತೊಡಗಿವೆ.

ಓದಿರಿ: ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್‌'ನಲ್ಲಿದೆ ವಿಶೇಷ ಆಫರ್

ಇತ್ತೀಚೆಗೆ ತಾನೇ ವೊಡಾಫೋನ್ ತನ್ನ ವೊಡಾಫೋನ್ ಪ್ಲೇ ಅಪ್ಲಿಕೇಶನ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದ್ದು ಇದು ಡಿಸೆಂಬರ್ 31, 2016 ರವರೆಗೆ ಲಭ್ಯವಿದೆ. ವೊಡಾಫೋನ್ ಅಪ್ಲಿಕೇಶನ್‌ನಂತೆಯೇ ಜಿಯೋ ಅಪ್ಲಿಕೇಶನ್ ಕೂಡ ಸಾಕಷ್ಟು ಮನರಂಜನೆಗಳನ್ನು ಬಳಕೆದಾರರಿಗೆ ಒದಗಿಸುತ್ತಿವೆ. ಹಾಗಿದ್ದರೆ ಇವೆರಡರಲ್ಲಿ ಯಾವುದು ಅತ್ಯುತ್ತಮ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ.

ಓದಿರಿ: ಬಿಎಸ್‌ಎನ್‌ಎಲ್ ಪ್ರಿಪೈಡ್‌ಗೆ ಇಂಟರ್ನೆಟ್ ಲೋನ್ ಪಡೆಯುವುದು ಹೇಗೆ?

ಜಿಯೋ ಅಪ್ಲಿಕೇಶನ್ 4ಜಿ ಗೆ ಮಾತ್ರ ಸೀಮಿತ

ಜಿಯೋ ಅಪ್ಲಿಕೇಶನ್ 4ಜಿ ಗೆ ಮಾತ್ರ ಸೀಮಿತ

ವೊಡಾಫೋನ್ ಅಪ್ಲಿಕೇಶನ್ 3ಜಿಯಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ. ಆದರೆ ಜಿಯೋ ಅಪ್ಲಿಕೇಶನ್ ಕೇವಲ 4ಜಿ ಮಾತ್ರ ತನ್ನ ಪವರ್ ಅನ್ನು ತೋರಿಸಲಿದೆ. ವೊಡಾಫೋನ್ 3ಜಿ ಮತ್ತು 4ಜಿ ಎರಡರಲ್ಲೂ ಕೂಡ ಕಾರ್ಯನಿರ್ವಹಿಸಲಿದೆ.

ವೊಡಾಫೋನ್ ಅಪ್ಲಿಕೇಶನ್‌ನಲ್ಲಿ 180 ಟಿವಿ ಚಾನಲ್‌ಗಳಿಗೆ ಮಾತ್ರ ಪ್ರವೇಶ

ವೊಡಾಫೋನ್ ಅಪ್ಲಿಕೇಶನ್‌ನಲ್ಲಿ 180 ಟಿವಿ ಚಾನಲ್‌ಗಳಿಗೆ ಮಾತ್ರ ಪ್ರವೇಶ

ವೊಡಾಫೋನ್ ಅಪ್ಲಿಕೇಶನ್ ಕೇವಲ 180 ಚಾನಲ್‌ಗಳಿಗೆ ಪ್ರವೇಶವನ್ನು ಒದಗಿಸಲಿದೆ. ಜಿಯೋ ಅಪ್ಲಿಕೇಶನ್ 350 ಟಿವಿ ಚಾನಲ್‌ಗಳ ಜೊತೆಗೆ 40 ಎಚ್‌ಡಿ ಚಾನಲ್‌ಗಳನ್ನು ಬಳಕೆದಾರರಿಗೆ ಒದಗಿಸಲಿದೆ ಇದರಲ್ಲಿ ಬೇರೆ ಬೇರೆ ಭಾಷೆಗಳೂ ಸೇರಲಿವೆ.

ವೈಫೈಯೊಂದಿಗೆ ಕೂಡ ವೊಡಾಫೋನ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ

ವೈಫೈಯೊಂದಿಗೆ ಕೂಡ ವೊಡಾಫೋನ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ

ವೊಡಾಫೋನ್ ಅಪ್ಲಿಕೇಶನ್ ಅನ್ನು ಆರಂಭಿಸಲು ನಿಮಗೆ ಮೊಬೈಲ್ ಡೇಟಾ ಅಗತ್ಯವಿದೆ ಆದರೆ ವೈಫೈಯಲ್ಲಿ ಕೂಡ ಈ ಅಪ್ಲಿಕೇಶನ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಆದರೆ ಜಿಯೋ ಅಪ್ಲಿಕೇಶನ್ ಅನ್ನು 4ಜಿ ನೆಟ್‌ವರ್ಕ್‌ನಲ್ಲಿ ಮಾತ್ರ ಆಕ್ಟಿವೇಟ್ ಮಾಡಲು ಸಾಧ್ಯ.

ಡಿಸೆಂಬರ್ 31 ರವರೆಗೆ ಉಚಿತ ಚಂದಾದಾರಿಕೆ

ಡಿಸೆಂಬರ್ 31 ರವರೆಗೆ ಉಚಿತ ಚಂದಾದಾರಿಕೆ

ಎರಡೂ ಅಪ್ಲಿಕೇಶನ್‌ಗಳು ತಮ್ಮ ವ್ಯಾಲಿಡಿಟಿಯನ್ನು ಪಡೆದುಕೊಂಡಿವೆ. ಎರಡನ್ನು ಬಳಸುತ್ತಿರುವ ಬಳಕೆದಾರರು ಡಿಸೆಂಬರ್ 31, 2016 ರವರೆಗೆ ಇದರ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ.

ಯಾವುದು ಅತ್ಯುತ್ತಮ

ಯಾವುದು ಅತ್ಯುತ್ತಮ

ಆದರೆ ಕೊನೆಯಲ್ಲಿ ಒಂದು ಪ್ರಶ್ನೆ ನಮ್ಮನ್ನು ಕಾಡುತ್ತಿರುತ್ತದೆ. ಹಾಗಿದ್ದರೆ ಇವೆರಡರಲ್ಲಿ ಅತ್ಯುತ್ತಮ ಯಾವುದು ಎಂಬುದಾಗಿದೆ. ಈ ಎರಡೂ ಸೇವೆಗಳಲ್ಲಿರುವ ಪ್ರಮುಖ ವ್ಯತ್ಯಾಸಗಳನ್ನು ನಾವು ನಿಮಗೆ ತಿಳಿಸಿದ್ದೇವೆ. ಆದರೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇವುಗಳಲ್ಲಿ ಯಾವುದನ್ನು ಆಯ್ಕೆಮಾಡಬೇಕು ಎಂಬುದು ನಿಮಗೆ ಬಿಟ್ಟದ್ದಾಗಿದೆ.

Best Mobiles in India

English summary
Similar to the JioPlay app, the Vodafone Play app also has a collection of videos, TV shows, and music. But which one is better we will see here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X