ಭಾರತದಲ್ಲಿ ಹೆಚ್ಚು ಮಾರಾಟ ಕಾಣುತ್ತಿರುವ 5 ಟ್ರೂ ವಾಯರ್‌ಲೆಸ್‌ ಹೆಡ್‌ಫೋನ್!

|

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ TWS ಅಥವಾ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅಥವಾ ಹೆಡ್‌ಫೋನ್‌ಗಳ ಈಗ ಹೆಚ್ಚು ಬೇಡಿಕೆಯ ಡಿವೈಸ್‌ಗಳಲ್ಲಿ ಕಾಣಿಸಿಕೊಂಡಿವೆ. ಅನೇಕರು ಸ್ಮಾರ್ಟ್‌ಫೋನ್‌ನೊಂದಿಗೆ ಒಂದು ಅತ್ಯುತ್ತಮ ಹೆಡ್‌ಫೋನ್ ಹೊಂದಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಅವರ ಹೆಡ್‌ಫೋನ್‌ ಖರೀದಿಸುವಾಗ ಮೊದಲಿಗೆ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್ ಹೆಡ್‌ಫೋನ್‌ಗಳಿಗೆ ಆದ್ಯತೆ ನೀಡುತ್ತಾರೆ. ಕೆಲವು ಕಂಪನಿಗಳ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್ ಡಿವೈಸ್‌ಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ.

ಪಾಯಿಂಟ್

ಕೌಂಟರ್‌ ಪಾಯಿಂಟ್ ಸಂಶೋಧನೆಯು ಇತ್ತೀಚೆಗೆ 2021 ರ ಮೊದಲ ಮೂರು ತಿಂಗಳಲ್ಲಿ ಭಾರತದ TWS ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಮಾದರಿಗಳನ್ನು ಹೆಸರಿಸಿದೆ. ಕೈಗೆಟುಕುವ TWS ಇಯರ್‌ಬಡ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ 150% ಕ್ಕಿಂತ ಹೆಚ್ಚು ಮಾರಾಟವಾದವುಗಳಲ್ಲಿ ಅಚ್ಚರಿಯಿಲ್ಲ. ಕೌಂಟರ್ಪಾಯಿಂಟ್ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಐದು ಪ್ರಮುಖ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್ ಡಿವೈಸ್‌ಗಳು ಯಾವುದು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್ ಬಡ್ಸ್ Z ಡಿವೈಸ್‌

ಒನ್‌ಪ್ಲಸ್ ಬಡ್ಸ್ Z ಡಿವೈಸ್‌

ಒನ್‌ಪ್ಲಸ್ ಕಂಪನಿಯ ಈ ಡಿವೈಸ್‌ ತ್ವರಿತ ಚಾರ್ಜಿಂಗ್, ಶಬ್ದ-ಪ್ರತ್ಯೇಕತೆ ಮತ್ತು ಐಪಿ 55 ರೇಟಿಂಗ್ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಈ ಇಯರ್‌ಬಡ್‌ಗಳು ಬೆವರು-ನಿರೋಧಕ ರಚನೆಯನ್ನು ಪಡೆದಿವೆ. ಇನ್ನು ಈ ಡಿವಸ್ ಬೆಲೆ 2,999ರೂ. ಆಗಿದೆ.

ಬೋಟ್ ಏರ್‌ಡೋಪ್ಸ್ 131 ಡಿವೈಸ್

ಬೋಟ್ ಏರ್‌ಡೋಪ್ಸ್ 131 ಡಿವೈಸ್

ಬೋಟ್ ಏರ್‌ಡೋಪ್ಸ್ 131 ಡಿವೈಸ್ ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಮಾರುಕಟ್ಟೆಯಲ್ಲಿ ಈ ಡಿವೈಸ್ ಬೆಲೆಯು 1,199ರೂ. ಆಗಿದೆ.

ರಿಯಲ್ಮೆ ಬಡ್ಸ್ Q ಡಿವೈಸ್

ರಿಯಲ್ಮೆ ಬಡ್ಸ್ Q ಡಿವೈಸ್

ಈ ಡಿವೈಸ್ ದೀರ್ಘ ಬ್ಯಾಟರಿ ಬಾಳಿಕೆ (ಚಾರ್ಜಿಂಗ್ ಪ್ರಕರಣದೊಂದಿಗೆ ಒಟ್ಟು 20 ಗಂಟೆಗಳ ಪ್ಲೇಬ್ಯಾಕ್ ಸಮಯ) ಹಗುರವಾದ ವಿನ್ಯಾಸ ಮತ್ತು ಹಿತವಾಗಿರುವ ಫಿಟ್ ಮತ್ತು ಐಪಿಎಕ್ಸ್ 4 ರೇಟಿಂಗ್ ಸೌಲಭ್ಯ ಪಡೆದಿದೆ. ಇನ್ನು ಇದರ ಬೆಲೆಯು 1,999ರೂ. ಆಗಿದೆ.

ಬೋಟ್ ಏರ್‌ಡೋಪ್ಸ್ 381 ಡಿವೈಸ್

ಬೋಟ್ ಏರ್‌ಡೋಪ್ಸ್ 381 ಡಿವೈಸ್

ಬೋಟ್ ಏರ್‌ಡೋಪ್ಸ್ 381 ಡಿವೈಸ್ ವಿನ್ಯಾಸ, ಬೆಲೆ, ಅನುಕೂಲಕರ ಪ್ರವೇಶ ನಿಯಂತ್ರಣ ಬಟನ್‌ಗಳು ಮತ್ತು ಬ್ಲೂಟೂತ್ ಆವೃತ್ತಿ 5 ಗೆ ಬೆಂಬಲ. ಇನ್ನು ಈ ಡಿವೈಸ್ 1,299ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಬೋಟ್ ಏರ್‌ಡೋಪ್ಸ್ 121 ಡಿವೈಸ್

ಬೋಟ್ ಏರ್‌ಡೋಪ್ಸ್ 121 ಡಿವೈಸ್

ಬೋಟ್ ಏರ್‌ಡೋಪ್ಸ್ 121 ಡಿವೈಸ್ ಕಡಿಮೆ ತೂಕ, ಬಣ್ಣ ಆಯ್ಕೆಗಳು ಮತ್ತು ನೀರು ಮತ್ತು ಬೆವರು-ನಿರೋಧಕ ರಚನೆಯನ್ನು ಪಡೆದಿದೆ. ಇನ್ನು ಈ ಡಿವೈಸ್ 1,299ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

Most Read Articles
Best Mobiles in India

English summary
Little surprise that affordable TWS earbuds are the top-sellers in the Indian market which grew over 150%.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X