Subscribe to Gizbot

ವಾವ್..! ಶ್ಯೋಮಿ ಫೋನ್ ಈಗ ಬಿಸಿಬಿಸಿ ದೋಸೆಯಂತೆ ಮಾರಾಟ!

Posted By:

ರೆಡ್ಮೀ ನೋಟ್‌ನ ಪ್ರಥಮ ಫ್ಲ್ಯಾಶ್ ಸೇಲ್ ಅನ್ನು ಭಾರತದಲ್ಲಿ ಶ್ಯೋಮಿ ಬಿಡುಗಡೆ ಮಾಡ ಹೊರಟಿದೆ. 50,000 ಯೂನಿಟ್‌ಗಳ ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಫ್ಲಿಪ್‌ಕಾರ್ಟ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಲಿದೆ. ಈ ಚೀನಾದ ಫೋನ್ ತಯಾರಿಕಾ ಕಂಪೆನಿ, ಚೀನಾದ ಆಪಲ್ ಎಂಬ ಹೆಸರಿನಿಂದ ಕೂಡ ಚಿರಪರಿಚಿತವಾಗಿದ್ದು ಮೊದಲೇ ತಿಳಿಸಿದಂತೆ ಫ್ಲಿಪ್‌ಕಾರ್ಟ್‌ನ ಮೊದಲ 5,000 ಗ್ರಾಹಕರಿಗೆ ಶ್ಯೋಮಿ ರೆಡ್ಮೀ ನೋಟ್ ಅನ್ನು ಕಂಪೆನಿ ನೀಡಲಿದೆ.

ಫೋನ್ ಬೆಲೆ ರೂ 8,999 ಆಗಿದ್ದು, ರೆಡ್ಮೀ ನೋಟ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದೆ. ಇದರಲ್ಲಿ ಆಂಡ್ರಾಯ್ಡ್ 4.2.2 ಚಾಲನೆಯಾಗುತ್ತಿದ್ದು ಶ್ಯೋಮಿಯ MIUI ಆವೃತ್ತಿ5 ಅನ್ನು ಫೋನ್ ಮೇಲ್ಭಾಗದಲ್ಲಿ ನಿಮಗೆ ಕಾಣಬಹುದಾಗಿದೆ. ಇದು 1.7GHZ ಓಕ್ಟಾ ಕೋರ್ ಮೀಡಿಯಾ ಟೆಕ್ MTK6592 SoC ಇದ್ದು Mali-450MP4 GPU ಮತ್ತು 2 ಜಿಬಿ RAM ಅನ್ನು ಡಿವೈಸ್ ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಶ್ಯೋಮಿ ಫೋನ್ ಬಿಸಿಬಿಸಿ ಮಾರಾಟ

ರೆಡ್ಮೀ ನೋಟ್ 5.5 ಇಂಚಿನ 720x1280 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಅನ್ನು ಹೊಂದಿದೆ ಮತ್ತು 13 ಮೆಗಾಪಿಕ್ಸೆಲ್ ರಿಯರ್ ಆಟೋಫೋಕಸ್ ಕ್ಯಾಮೆರಾದ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ. ಇದು 5 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಇದು 8 ಜಿಬಿ ಬಿಲ್ಟ್ ಇನ್ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು.

ಇದನ್ನೂ ಓದಿ: ನೀವು ತಿಳಿದಿರದ ಸರಳ ಫೇಸ್‌ಬುಕ್ ಟಿಪ್ಸ್

ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನ ಹರಿಸಿದಾಗ ಇದು GPRS/ EDGE, 3ಜಿ, ವೈ-ಫೈ 802.11 b/g/n ಜೊತೆಗೆ ವೈ-ಫೈ ಡೈರೆಕ್ಟ್ ಮತ್ತು ಹಾಟ್‌ಸ್ಪಾಟ್ ಫಂಕ್ಷನಾಲಿಟಿ, ಬ್ಲ್ಯೂಟೂತ್ 4.0, ಮೈಕ್ರೋ-ಯುಎಸ್‌ಬಿ ಪೋರ್ಟ್ ಜೊತೆಗೆ OTG ಬೆಂಬಲ, ಮತ್ತು A-ಜಿಪಿಎಸ ಅನ್ನು ಪಡೆದುಕೊಂಡಿದೆ. ಫೋನ್‌ನಲ್ಲಿ 3,100mAh ಬ್ಯಾಟರಿಯನ್ನು ನಮಗೆ ಕಾಣಬಹುದಾಗಿದೆ.

ಇನ್ನು ಮಿತದರದ 4ಜಿ ಎಲ್‌ಟಿಇ ಸ್ಮಾರ್ಟ್‌ಫೋನ್ ರೆಡ್ಮೀ ನೋಟ್ 4ಜಿ ಅನ್ನು ಭಾರತದಲ್ಲಿ ಆದಷ್ಟು ಬೇಗನೇ ಲಾಂಚ್ ಮಾಡಲಿದ್ದು, ಡಿಸೆಂಬರ್‌ನ ಮಧ್ಯಭಾಗದಲ್ಲಿ ನಮಗೆ ಇದು ದೊರೆಯಬಹುದು. ಇದರ ಬೆಲೆ ರೂ 9,999 ಆಗಿದ್ದು ಈ ಫೋನ್‌ಗಾಗಿ ಏರ್‌ಟೆಲ್ ಸ್ಟೋರ್‌ನಲ್ಲಿ ಗ್ರಾಹಕರು ರೆಡ್ಮೀ ನೋಟ್ 4ಜಿಯನ್ನು ಪ್ರತ್ಯೇಕವಾಗಿ ನೋಂದಾಯಿಸಬೇಕಾಗಿದೆ.

ರೆಡ್ಮೀ ನೋಟ್ 4ಜಿ ವಿಭಿನ್ನ ಪ್ರೊಸೆಸರ್ ಜೊತೆಗೆ ಬಂದಿದ್ದು, ಉತ್ತಮ ಸಿಮ್ ಕಾರ್ಡ್ ಬೆಂಬಲವನ್ನು ಕೂಡ ನೀವು ಇದರಲ್ಲಿ ಕಾಣಬಹುದು. ರೆಡ್ಮೀ 4 ಜಿ ಕ್ವಾಡ್ ಕೋರ್ 1.6GHZ ಸ್ನ್ಯಾಪ್‌ಡ್ರಾಗನ್ ಜೊತೆಗೆ ಬಂದಿದ್ದು 400 ಸಿಪಿಯುವನ್ನು ಇದರಲ್ಲಿ ಕಾಣಬಹುದು. 2 ಜಿಬಿ RAM ಅನ್ನು ಡಿವೈಸ್ ಹೊಂದಿದ್ದು, ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಫೋನ್‌ನಲ್ಲಿದೆ. ಇನ್ನು ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಫೋನ್ ಮುಂದಿನ ದಿನಗಳಲ್ಲಿ ಕಂಡುಕೊಳ್ಳಲಿದೆ.

English summary
This article tells about 50,000 Xiaomi Redmi Note Phones to Go on Sale in Tuesday's Flash Sale.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot