5G ವಿವರಣೆ: 5ಜಿ ಯಾವಾಗ ಲಭ್ಯ ಇದರಿಂದ ನಿಮಗೇನು ಸಿಗುತ್ತದೆ?

|

5G ಅಥವಾ 5 ನೇ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಕೇವಲ ಇಂಟರ್ನೆಟ್ ಸ್ಪೀಡ್ ನ್ನು ಮಾತ್ರವೇ ಅಪ್ ಗ್ರೇಡ್ ಮಾಡುವುದಿಲ್ಲ ಬದಲಾಗಿ ಇದು ಮುಂದಿನ ಜನರೇಷನ್ನಿನ ಟೆಕ್ನಾಲಜಿಯನ್ನು ಡ್ರೈವ್ ಮಾಡುತ್ತದೆ. ಮುಂದಿನ ವರ್ಷ ವಿಶ್ವದ ಹಲವು ಭಾಗಗಳಲ್ಲಿ 5ಜಿ ನೆಟ್ ವರ್ಕ್ ಬಿಡುಗಡೆಗೊಳ್ಳುತ್ತದೆ. ಹಾಗಾದ್ರೆ 5G ಅಂದರೆ ಏನರ್ಥ ಇದು ಗ್ರಾಹಕರಿಗೆ ಏನನ್ನು ಆಫರ್ ಮಾಡುತ್ತದೆ ಎಂಬ ವಿವರ ಇಲ್ಲಿದೆ.

5G ಅಂದರೆ ಏನು?

5G ಅಂದರೆ ಏನು?

ಪ್ರತಿ ಕೆಲವು ವರ್ಷಗಳಿಗೊಮ್ಮೆ ಮೊಬೈಲ್ ಇಂಡಸ್ಟ್ರಿ ಹೊಸ ಜನರೇಷನ್ ಅಥವಾ ಮೊಬೈಲ್ ನೆಟ್ ವರ್ಕ್ ನ ಜಿಯನ್ನು ಪುನರ್ ಸ್ಥಾಪಿಸುತ್ತದೆ ಅಥವಾ ಅಪ್ ಗ್ರೇಡ್ ಮಾಡುತ್ತದೆ.5G ಅನ್ನುವುದು ಸ್ಥಾಪಿತ ನೆಟ್ ವರ್ಕ್ಸ್ (LTE 4G) ಇದು ಮೂರು ಅಪ್ ಗ್ರೇಡ್ ಗಳನ್ನು ಆಫರ್ ಮಾಡುತ್ತದೆ: ನೆಟ್ ವರ್ಕ್ ನ ಪ್ರತಿಕ್ರಿಯೆಲ್ಲಿ ಕಡಿಮೆ ಲೋಪ ಅಥವಾ ಕಡಿಮೆ ವಿಳಂಬ; ಕಡಿಮೆ ವಿದ್ಯುತ್ ಬಳಕೆಯಿಂದಾಗಿ ಕಡಿಮೆ ಬ್ಯಾಟರಿ ಜೀವನ;ಮತ್ತು ಹೆಚ್ಚು ದೊಡ್ಡ ಮೊತ್ತದ ಡಾಟಾಗಳನ್ನು ಅತ್ಯಂತ ವೇಗವಾಗಿ ಕಳುಹಿಸುವ ಸಾಮರ್ಥ್ಯ.

4ಜಿ ಗಿಂತ 10 ಪಟ್ಟು ವೇಗದಲ್ಲಿರುವ 5G ಇಂಟರ್ನೆಟ್

4ಜಿ ಗಿಂತ 10 ಪಟ್ಟು ವೇಗದಲ್ಲಿರುವ 5G ಇಂಟರ್ನೆಟ್

ಒಬ್ಬ ಸರಾಸರಿ ಬಳಕೆದಾರನಿಗೆ, ಜನರೇಷನ್ ಬದಲಾವಣೆಯಲ್ಲಿ ಕಾಣಿಸಬಹುದಾಗಿರುವ ಪ್ರಮುಖ ವ್ಯತ್ಯಾಸವೆಂದರೆ ಅದು ಇಂಟರ್ನೆಟ್ ವೇಗ.5ಜಿಲ್ಲಿ ನಿರೀಕ್ಷಿತ ವೇಗದ ಮಟ್ಟ 10,000 Mbps

5G ವೇಗ vs 4G, 3G ಮತ್ತು 2G

5G ವೇಗ vs 4G, 3G ಮತ್ತು 2G

5G: 10,000 Mbps

4G (LTE): 1,000 Mbps

3G: 3.1 Mbps

5G ವಿಶ್ವದ ಟೈಮ್ ಲೈನ್ : ಯಾರಿಗೆ ಯಾವಾಗ 5ಜಿ

5G ವಿಶ್ವದ ಟೈಮ್ ಲೈನ್ : ಯಾರಿಗೆ ಯಾವಾಗ 5ಜಿ

2019 ಮೊದಲಾರ್ಧ: ಟಾಪ್ 4 ಯುಎಸ್ ಟೆಲಿಕಾಂ ಕ್ಯಾರಿಯರ್ಸ್ ಗಳಾಗಿರುವ AT&T, ವರಿಜಾನ್ ಸ್ಪ್ರಿಂಟ್ ಮತ್ತು ಟಿ-ಮೊಬೈಲ್ ಗಳು 5ಜಿ ಸೇವೆಯನ್ನು ಆರಂಭಿಸಲಿದೆ. ಸೌತ್ ಕೋರಿಯಾ ಕೂಡ ಮುಂದಿನ ವರ್ಷದ ಮಾರ್ಚ್ ನಲ್ಲಿ ಬಿಡುಗಡೆಗೊಳಿಸುವ ಪ್ಲಾನ್ ನಲ್ಲಿದೆ.

2019 ರ ಅಂತ್ಯ : ಜಪಾನ್ ನಲ್ಲಿ 5ಜಿ ಸೇವೆ ಆರಂಭವಾಗಲಿದೆ.

2020: ಚೀನಾ ಮತ್ತು ಹೆಚ್ಚಿನ ಪಾಶ್ಚಿಮಾತ್ಯ ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ.ಭಾರತೀಯ ಸರ್ಕಾರವು ಇದೇ ಸಂದರ್ಬದಲ್ಲಿ 5ಜಿ ನೆಟ್ ವರ್ಕ್ ಸೇವೆ ಆರಂಭಿಕ ಹಂತವನ್ನು ಪ್ರಾರಂಭಿಸಲಿದೆ.

2022: ಭಾರತವು ಸಂಪೂರ್ಣವಾಗಿ 5ಜಿ ನೆಟ್ ವರ್ಕ್ ನ್ನು ಸ್ಥಾಪಿಸಲಿದೆ.

5ಜಿ ಯಿಂದ ಟೆಕ್ನಾಲಜಿ ಅಭಿವೃದ್ಧಿ

5ಜಿ ಯಿಂದ ಟೆಕ್ನಾಲಜಿ ಅಭಿವೃದ್ಧಿ

ಸ್ಮಾರ್ಟ್ ಹೋಮ್, ಸ್ಮಾರ್ಟ್ ಸಿಟಿ, ಸೆಲ್ಫ್ ಡ್ರೈವಿಂಗ್ ಕಾರ್ ಗಳು, ಹೆಲ್ತ್ ಮಾನಿಟರಿಂಗ್, IoT ಡಿವೈಸ್ ಗಳ ಅಭಿವೃದ್ಧಿ ಇದರಿಂದ ಸಾಧ್ಯವಾಗುತ್ತದೆ

5ಜಿ ತಂತ್ರಜ್ಞಾನದ ಯುಗದಲ್ಲಿ ಮಿಲಿಯನ್ ಗಟ್ಟಲೆ ಡಿವೈಸ್ ಗಳು ಡಾಟಾಗಳನ್ನು ಕಲೆಕ್ಟ್ ಮಾಡುತ್ತದೆ ಮತ್ತು ಹೆಚ್ಚಿನ ಸಂವಹನವನ್ನು ನಡೆಸುತ್ತದೆ. ನಿಮ್ಮ ಫೋನ್ ಮನೆಯ ಎಲ್ಲಾ ಡಿವೈಸ್ ಗಳಿಗೂ ಕನೆಕ್ಟ್ ಆಗಿರುತ್ತದೆ. ನಿಮ್ಮ ಮನೆಯ ಫ್ರಿಡ್ಜ್ ನಿಂದ ಹಿಡಿದು ಭದ್ರತಾ ವ್ಯವಸ್ಥೆಯವರೆಗೆ ಮತ್ತು ಸ್ಮಾರ್ಟ್ ಸಿಟಿಗಳು, ಅಟೋನೊಮಸ್ ಕಾರ್ ಗಳು ರಿಯಾಲಿಟಿಗೆ ಬಂದಿರುತ್ತದೆ.

ಮೊದಲ 5ಜಿ ಸ್ಮಾರ್ಟ್ ಫೋನ್

ಮೊದಲ 5ಜಿ ಸ್ಮಾರ್ಟ್ ಫೋನ್

ಒನ್ ಪ್ಲಸ್, ಹುವಾಯಿ ಮತ್ತು ಶಿಯೋಮಿ -- ಈ ಮೂರೂ ಸಂಸ್ಥೆಗಳು 5ಜಿ ನೆಟ್ ವರ್ಕ್ ಗೆ ಬೆಂಬಲ ನೀಡುವ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.

5G ನಿಮ್ಮ ಪ್ರೈವೆಸಿಯ ನಿದ್ದೆಗೆಡಿಸಬಹುದು

5G ನಿಮ್ಮ ಪ್ರೈವೆಸಿಯ ನಿದ್ದೆಗೆಡಿಸಬಹುದು

5G ಡಿವೈಸ್ ಗಳು ಹೆಚ್ಚು ಡಾಟಾವನ್ನು ಜನರೇಟ್ ಮಾಡುತ್ತದೆ. ಇದು ಕೇವಲ ಓವರ್ ಲೋಡ್ ನ್ನು ಮಾತ್ರ ಕ್ರಿಯೇಟ್ ಮಾಡುವುದಿಲ್ಲ ಬದಲಾಗಿ ನಿಮ್ಮ ಖಾಸಗಿತನಕ್ಕೂ ಧಕ್ಕೆ ತರುವ ಸಾಧ್ಯತೆ ಇದೆ.ಉದಾಹರಣೆಗೆ ಸ್ಮಾರ್ಟ್ ಹೋಮ್ ನಿಮ್ಮ ವಯಕ್ತಿಕ ಸಂದರ್ಬದಲ್ಲಿ ಇತರರಿಗೆ ಆಕ್ಸಿಸ್ ನೀಡುವ ಸಾಧ್ಯತೆ.

5ಜಿ ನೆಟ್ ವರ್ಕ್ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಹ್ಯಾಕರ್ಸ್ ಗಳಿಗೆ ಕದಿಯಲು ಹೆಚ್ಚು ಅವಕಾಶಗಳನ್ನು ತೆರೆಯುವ ಸಾಧ್ಯತೆ

5ಜಿ ನೆಟ್ ವರ್ಕ್ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಹ್ಯಾಕರ್ಸ್ ಗಳಿಗೆ ಕದಿಯಲು ಹೆಚ್ಚು ಅವಕಾಶಗಳನ್ನು ತೆರೆಯುವ ಸಾಧ್ಯತೆ

5ಜಿ ಡಿವೈಸ್ ಗಳು ನೆಟ್ ವರ್ಕ್ ಬೈಪಾಸ್ ಗಳಾಗಿದ್ದು ನೇರವಾಗಿ ಇಂಟರ್ನೆಟ್ ಗೆ ಕನೆಕ್ಟ್ ಆಗಿರುತ್ತದೆ.ಇದು ಹ್ಯಾಕರ್ ಗಳಿಗೆ ಹೆಚ್ಚಿನ ಅವಕಾಶಗಳನ್ನು ತೆರೆದಿಡುವ ಸಾಧ್ಯತೆ ಇದೆ.

ವಿಶ್ವದ ಮೊದಲ ವಾಣಿಜ್ಯಿಕ 5ಜಿ ನೆಟ್ ವರ್ಕ್ ಯುಎಸ್ ನಲ್ಲಿ ಬಿಡುಗಡೆಗೊಳ್ಳಲಿದೆ

ವಿಶ್ವದ ಮೊದಲ ವಾಣಿಜ್ಯಿಕ 5ಜಿ ನೆಟ್ ವರ್ಕ್ ಯುಎಸ್ ನಲ್ಲಿ ಬಿಡುಗಡೆಗೊಳ್ಳಲಿದೆ

ಯುಸ್ ಮೂಲಕ ಟೆಲ್ಕೋ ವರಿಜಾನ್ ವಿಶ್ವದ ಮೊದಲ ಕಮರ್ಷಿಯಲ್ 5ಜಿ ಸೇವೆಯನ್ನು ತಮ್ಮ ಗ್ರಾಹಕರಿಗೆ ಕೆಲವು ಭಾಗದಲ್ಲಿ ಅಂದರೆ ಹೋಸ್ಟನ್,ಇಂಡಿನಾಪೋಲಿಸ್,ಲಾಸ್ ಏಂಜಲೀಸ್ ಮತ್ತು ಸಾಕ್ರಮೆಂಟೋ ಭಾಗದಲ್ಲಿ ಬಿಡುಗಡೆಗೊಳಿಸಲಿದೆ. ವರಿಜಾನ್ 5ಜಿ ಹೋಮ್ ನೆಟ್ ವರ್ಕ್ 5ಜಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಯನ್ನೂ ಕೂಡ ನೀಡಲಿದೆ. 5ಜಿ ಹೋಮ್ ಕಸ್ಟಮರ್ ಗೆ ಯುಟ್ಯೂಬ್ ಟಿವಿ ಉಚಿತವಾಗಿ ಸಿಗುತ್ತದೆ ಮೂರು ತಿಂಗಳ ಅವಧಿಗೆ ಮತ್ತು ಉಚಿತ ಆಪಲ್ ಟಿವಿ 4ಕೆ ಅಥವಾ ಗೂಗಲ್ ಕ್ರೋಮ್ ಕಾಸ್ಟ್ ಆಲ್ಟ್ರಾ ಡಿವೈಸ್ ಇನ್ಸ್ಟಾಲೇಷನ್ ನಲ್ಲಿ ಅಳವಡಿಸಲಾಗುತ್ತದೆ.

Best Mobiles in India

Read more about:
English summary
5g explainer what it means you more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X