5G ಮೊಬೈಲ್‌ ಖರೀದಿಸಬೇಕೆ?... ಇಲ್ಲಿವೆ 20,000ರೂ. ಒಳಗಿನ ಬೆಸ್ಟ್‌ 5G ಫೋನ್‌ಗಳು!

|

ಭಾರತದಲ್ಲಿ ಇಂದು ಅಧಿಕೃತವಾಗಿ 5G ಸೇವೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ 5G ನೆಟ್‌ವರ್ಕ್‌ ಪ್ರಾರಂಭಿಕ ಹಂತದಲ್ಲಿ ಪ್ರಮುಖ ಮಹಾನಗರಗಳಲ್ಲಿ ಲಭ್ಯವಾಗಲಿದೆ. ಇನ್ನು ಭಾರತದಲ್ಲಿ 5G ಸೇವೆ ಲಭ್ಯವಾಗುವುದರಿಂದ 5G ಮೊಬೈಲ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳಲಿದೆ. ಭಾರತದಲ್ಲಿ ಈಗಾಗಲೇ 5G ಮೊಬೈಲ್‌ಗಳು ಸಾಕಷ್ಟು ಸದ್ದು ಮಾಡಿವೆ. ಇದರಲ್ಲಿ ಹೈ ಎಂಡ್‌ ಪ್ರೈಸ್‌ಟ್ಯಾಗ್‌ ಮಾತ್ರವಲ್ಲ ಬಜೆಟ್‌ ಬೆಲೆಯ 5G ಮೊಬೈಲ್‌ಗಳು ಕೂಡ ಭಾರತದಲ್ಲಿ ಲಭ್ಯವಾಗುತ್ತಿವೆ.

ಭಾರತದಲ್ಲಿ 5G ಸೇವೆ

ಹೌದು, ಭಾರತದಲ್ಲಿ 5G ಸೇವೆ ಪ್ರಾರಂಭವಾದ ನಂತರ 5G ಮೊಬೈಲ್‌ಗಳನ್ನು ಬಳಸುವುದು ಸಾಮಾನ್ಯವಾಗಲಿದೆ. 5G ಸೇವೆಗೆ ಸೂಕ್ತ ಸಪೋರ್ಟ್‌ ಬೇಕಾದರೆ 5G ಮೊಬೈಲ್‌ ಬಳಸುವುದು ಅನಿವಾರ್ಯವಾಗಲಿದೆ. ಹಾಗಂತ 5G ಮೊಬೈಲ್‌ಗಳಿಗೆ ಹೆಚ್ಚಿನ ಬೆಲೆ ನೀಡಬೇಕೆಂದು ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಭಾರತದ ಮಾರುಕಟ್ಟೆಯಲ್ಲಿ 20,000 ರೂ.ಒಳಗೆ ಕೂಡ 5G ಮೊಬೈಲ್‌ಗಳು ದೊರೆಯುತ್ತಿವೆ. ಹಾಗಾದ್ರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ 5G ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ M33 5G

ಸ್ಯಾಮ್‌ಸಂಗ್‌ ಗ್ಯಾಲಾಕ್ಷಿ M33 5G

ಈ ಸ್ಮಾರ್ಟ್‌ಫೋನ್‌ ಮೂಲ ದರ 25,999 ರೂ. ಗಳಿದ್ದು ಅಮೆಜಾನ್‌ನಲ್ಲಿ ಇದನ್ನು ನೀವು ಕೇವಲ 16,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ LCD ಡಿಸ್‌ಪ್ಲೇ ಹಾಗೂ FHD+ ರೆಸಲ್ಯೂಶನ್‌ ಆಯ್ಕೆ ಜೊತೆಗೆ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಇದು Exynos 1280 ಆಕ್ಟಾ ಕೋರ್ 2.4GHz 5nm ಪ್ರೊಸೆಸರ್‌ನೊಂದಿಗೆ 12 ಬ್ಯಾಂಡ್ ಬೆಂಬಲ ಪಡೆದಿದೆ. ಕ್ವಾಡ್ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್‌ಫೋನ್‌ನಲ್ಲಿದ್ದು, 6000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಇನ್ನು 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯ ಇದೆ.

ರಿಯಲ್‌ಮಿ ನಾರ್ಜೋ 50 5G

ರಿಯಲ್‌ಮಿ ನಾರ್ಜೋ 50 5G

ಈ ಸ್ಮಾರ್ಟ್‌ಫೋನ್‌ ರಿಯಲ್‌ ಕಂಪೆನಿಯ ಬಜೆಟ್‌ಬೆಲೆಯಲ್ಲಿ ಲಭ್ಯವಾಗುವ ಫೋನ್‌ ಆಗಿದೆ. ಇದನ್ನು ನೀವು ಅಮೆಜಾನ್‌ ಸೈಟ್‌ನಲ್ಲಿ ಕೇವಲ 13,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಮೂಲ ಬೆಲೆ 18,999ರೂ. ಗಳಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.6 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಪ್ರೆಸ್‌ ರೇಟ್‌ ಆಯ್ಕೆ ಪಡೆದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 810 5G ಶಕ್ತಿಯುತ ಗೇಮಿಂಗ್ ಪ್ರೊಸೆಸರ್ ನಿಂದ ಈ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಿಸಲಿದೆ. 48MP ಅಲ್ಟ್ರಾ HD ಮುಖ್ಯ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಈ ಸ್ಮಾರ್ಟ್‌ಫೋನ್‌ನಲ್ಲಿದೆ. 5000mAh ಸಾಮರ್ಥದ ಬ್ಯಾಟರಿ ಶಕ್ತಿಯನ್ನು ಈ ಸ್ಮಾರ್ಟ್‌ಫೋನ್‌ ಪಡೆದಿದ್ದು, 4 GB RAM ಹಾಗೂ 128 GB ROM ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ.

ಒಪ್ಪೊ K10 5G

ಒಪ್ಪೊ K10 5G

ಒಪ್ಪೊ ಕಂಪೆನಿಯ ಈ ಸ್ಮಾರ್ಟ್‌ಫೋನ್‌ ಬೆಲೆ 20,990ರೂ. ಗಳಾಗಿದ್ದು ನೀವು ಅಮೆಜಾನ್‌ ಮೂಲಕ ಆಫರ್‌ ಬೆಲೆ 14,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಫೋನ್‌ 6.49 ಇಂಚಿನ FHD+ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 480 5G GPU 619 650 MHz ನಿಂದ ಕಾರ್ಯನಿರ್ವಹಿಸಲಿದ್ದು, ಕ್ವಾಡ್ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ ಮತ್ತು 6GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಜೊತೆಗೆ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ವಿವೊ T1 5G

ವಿವೊ T1 5G

ಈ ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 15,990ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಮೂಲ ದರ 19,990ರೂ. ಗಳಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ 6.58 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್‌ನಿಂದ ಕೆಲಸ ಮಾಡಲಿದೆ. ಇದು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮರಾ ರಚನೆ ಪಡೆದಿದ್ದು, 5000 mAh ಬ್ಯಾಟರಿ ಸಾಮರ್ಥ್ಯದ ಆಯ್ಕೆ ಹೊಂದಿದೆ. ಇನ್ನುಳಿದಂತೆ 4 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಜೊತೆಗೆ 1 TB ವರೆಗೆ ಹೆಚ್ಚಿಸಿಕೊಳ್ಳಬಹುದಾಗಿದೆ.

iQoo Z6 Lite 5G

iQoo Z6 Lite 5G

ಈ ಸ್ಮಾರ್ಟ್‌ಫೋನ್‌ನ್ನು ನೀವು ಅಮೆಜಾನ್‌ನಲ್ಲಿ 13,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಮೂಲ ಬೆಲೆ 15,999ರೂ. ಗಳಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಜೊತೆಗೆ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ವಿಶ್ವದ ಮೊದಲ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ ಇದರಲ್ಲಿದೆ. 50 ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮೆರಾದ ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಈ ಸ್ಮಾರ್ಟ್‌ಫೋನ್‌ನಲ್ಲಿದ್ದು, 127 ಗಂಟೆಗಳ ಸಂಗೀತ ಪ್ಲೇಬ್ಯಾಕ್ ನೀಡಲಿದೆ. ಇದರೊಂದಿಗೆ 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಜೊತೆಗೆ ಮೂರು ವೇರಿಯಂಟ್‌ನಲ್ಲಿ ಲಭ್ಯ ಇವೆ.

ಪೊಕೊ M4 Pro 5G

ಪೊಕೊ M4 Pro 5G

ಪೊಕೊ ಕಂಪೆನಿಯ ಈ ಸ್ಮಾರ್ಟ್‌ಫೋನ್‌ನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 15,089ರೂ. ಗಳಿಗೆ ಕೊಂಡುಕೊಳ್ಳಬಹುದು. ಇದರ ಮೂಲ ದರ 16,999ರೂ. ಗಳಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ 6.6 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, 5000 mAh ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ. ಜೊತೆಗೆ 4 GB RAM ಹಾಗೂ 64 GB ಇಂಟರ್‌‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದೆ.

Best Mobiles in India

English summary
5G is being launched today at India Mobile Congress 2022. In between we have detailed the leading 5G smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X