ಮೊಟೊ ಫೋನ್‌ಗಳಲ್ಲಿ ಈಗ 5G ಸೇವೆ!..ಈ ಲಿಸ್ಟ್‌ ಒಮ್ಮೆ ಗಮನಿಸಿ!

|

ದೇಶದ ಕೆಲವು ಪ್ರಮುಖ ನಗರಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ ತಮ್ಮ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಿವೆ. ಏರ್‌ಟೆಲ್ ಟೆಲಿಕಾಂ, ಏರ್‌ಟೆಲ್‌ 5G ಪ್ಲಸ್ ಸೇವೆಯನ್ನು ಸದ್ಯ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಒಳಗೊಂಡಂತೆ ಎಂಟು ನಗರಗಳಲ್ಲಿ ಲೈವ್ ಮಾಡಿದೆ. ಜಿಯೋ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಗರಗಳಲ್ಲಿ 5G ಸೇವೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ.

ಸಪೋರ್ಟ್‌

ಇನ್ನು ಶಿಯೋಮಿ, ರೆಡ್ಮಿ, ಪೊಕೊ, ವಿವೋ, ಒಪ್ಪೋ, ಒನ್‌ಪ್ಲಸ್‌ ಕೆಲವೊಂದು ಸ್ಮಾರ್ಟ್‌ಫೋನ್‌ಗಳಲ್ಲಿ 5G ಸಪೋರ್ಟ್‌ ಪಡೆದುಕೊಂಡಿವೆ. ಹಾಗೆಯೇ ಸ್ಯಾಮ್‌ಸಂಗ್‌ ನವೆಂಬರ್‌ನಲ್ಲಿ ಹಾಗೂ ಆಪಲ್‌ ಡಿಸೆಂಬರ್‌ನಲ್ಲಿ 5G ಸಪೋರ್ಟ್ಗಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡುವುದಾಗಿ ತಿಳಿದುಬಂದಿದೆ. ಅದೇ ರೀತಿ ಮೊಟೊರೊಲಾ ಕಂಪನಿಯ ಕೆಲವು ಫೋನ್‌ಗಳು ಈಗಾಗಲೇ 5G ಸಪೋರ್ಟ್‌ ಪಡೆದಿದ್ದು, ಮತ್ತೆ ಕೆಲವು ಫೋನ್‌ಗಳು ನವೆಂಬರ್‌ ತಿಂಗಳಿನಲ್ಲಿ ಸಪೋರ್ಟ್‌ ಪಡೆಯಲಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಮೊಟೊ ಫೋನ್‌ಗಳ 5G ಸಪೋರ್ಟ್‌ ರೋಲ್‌ಔಟ್‌ ಮಾಹಿತಿ ಇಲ್ಲಿದೆ

ಮೊಟೊ ಫೋನ್‌ಗಳ 5G ಸಪೋರ್ಟ್‌ ರೋಲ್‌ಔಟ್‌ ಮಾಹಿತಿ ಇಲ್ಲಿದೆ

ಮೊಟೊ ಎಡ್ಜ್ 30 ಅಲ್ಟ್ರಾ: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 10
ಮೊಟೊ ಎಡ್ಜ್ 30 ಫ್ಯೂಷನ್: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 11
ಮೊಟೊ G62 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ G82 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.

ರೋಲ್‌ಔಟ್‌

ಮೊಟೊ ಎಡ್ಜ್ 30: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ G71 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ ಎಡ್ಜ್ 30 ಪ್ರೊ: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.

ಫ್ಯೂಷನ್

ಮೊಟೊ G51 5G: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20 ಪ್ರೊ: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20 ಫ್ಯೂಷನ್: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.

5G ವೇಗ ಎಷ್ಟಿರುತ್ತದೆ?

5G ವೇಗ ಎಷ್ಟಿರುತ್ತದೆ?

5G ನೆಟ್‌ವರ್ಕ್‌ ವೇಗವು ಸದ್ಯದ 4G ನೆಟ್‌ವರ್ಕ್‌ ಗಿಂತ ಕನಿಷ್ಠ 20 ರಿಂದ 30 ಅಧಿಕ ವೇಗದಲ್ಲಿ ಇರುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

* ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ
* ಮೊಬೈಲ್ ನೆಟ್‌ವರ್ಕ್ ಆಯ್ಕೆಗೆ ನ್ಯಾವಿಗೇಟ್ ಮಾಡಿ
* ನೆಟ್‌ವರ್ಕ್ ಮೋಡ್ > 5G / 4G/ 3G/ 2G ಆಯ್ಕೆಯನ್ನು ಆಯ್ಕೆ ಮಾಡಿ

ಏರ್ಟೆಲ್ 5G ಲಭ್ಯವಿರುವ ಪ್ರಮುಖ ನಗರಗಳು

ಏರ್ಟೆಲ್ 5G ಲಭ್ಯವಿರುವ ಪ್ರಮುಖ ನಗರಗಳು

ಮೊದಲ ಹಂತದಲ್ಲಿ, ಏರ್ಟೆಲ್ 5G ಸೇವೆಯು ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಜಿಯೋ ಮತ್ತು ವಿ ಟೆಲಿಕಾಂ 5G ಲಭ್ಯತೆ

ಜಿಯೋ ಮತ್ತು ವಿ ಟೆಲಿಕಾಂ 5G ಲಭ್ಯತೆ

ಜಿಯೋ ಟೆಲಿಕಾಂ ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) 5G ಅನ್ನು ಯಾವಾಗ ಪ್ರಾರಂಭಿಸಲಿದೆ ಎನ್ನುವ ಬಗ್ಗೆ ಅಧಿಕೃತ ದಿನಾಂಕ ತಿಳಿಸಿಲ್ಲ.

Best Mobiles in India

English summary
5G Support for Moto Phones Announced: Check List.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X