ಇಂಟರ್ನೆಟ್‌ ಬಳಕೆದಾರರು ಸುರಕ್ಷತೆಗಾಗಿ ಮಾಡಲೇಬೇಕಾದ 6 ಚಟುವಟಿಕೆಗಳು

By Suneel
|

ದಿನದ 24 ಗಂಟೆಯು ಸಹ ಬಹುಸಂಖ್ಯಾತರು ಮೊಬೈಲ್ ಅನ್ನು ತಮ್ಮೊಂದಿಗೆ ಇರಿಸಿಕೊಂಡಿರುತ್ತಾರೆ. ಅಲ್ಲದೇ ಫೇಸ್‌ಬುಕ್‌, ನೆಟ್‌ಬ್ಯಾಂಕಿಂಗ್, ಮಾರ್ಗದರ್ಶನಕ್ಕಾಗಿ ಹೀಗೆ ಹಲವಾರು ರೀತಿಯಲ್ಲಿ ಇಂಟರ್ನೆಟ್‌ ಅನ್ನು 24*7 ರೀತಿಯಲ್ಲಿ ಬಳಸುತ್ತಾ ಇಂದು ತಮ್ಮ ವಯಕ್ತಿಕ ಜೀವನ ಶೈಲಿಯನ್ನು ಎಲ್ಲರೂ ಸಹ ಬದಲಾಯಿಸಿಕೊಂಡಿದ್ದಾರೆ. ಅಂತಹವರು ಇಂದು ಇಂಟರ್ನೆಟ್‌ ಬಳಕೆಯಿಂದ ಎದುರಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಗಿಜ್‌ಬಾಟ್‌ ಇಂದು ತಿಳಿಸುವ ಪ್ರಮುಖ 6 ಅಂಶಗಳನ್ನು ತಿಳಿಯಲೇ ಬೇಕಾಗಿದೆ.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಹಲವರಿಗೆ ತಾವು ಶೇರ್‌ ಮಾಡುವ ಮಾಹಿತಿ, ಫೋಟೋಗಳನ್ನು ಗೆಳೆಯರಿಗೆ ಶೇರ್‌ ಮಾಡಿದೆನೆ ಅಥವಾ ಸಾರ್ವಜಿನಿಕವಾಗಿ ಶೇರ್‌ ಮಾಡಿದನೆ ಎಂದು ತಿಳಿಯುವುದೇ ಇಲ್ಲ. ಅಂತಹವರು ತಾವು ಶೇರಿಂಗ್‌ ಆಯ್ಕೆ ಯಾರಿಗೆ ಆಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನಿಮ್ಮ ಕುಟುಂಬದ ಫೋಟೋಗಳನ್ನು ಶೇರ್‌ ಮಾಡುವಾಗ ಯಾರಿಗೆ ಶೇರ್‌ ಆಗುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂದು ನೆಟ್‌ ಬ್ಯಾಂಕಿಂಗ್‌ ಹೆಚ್ಚು ಚಾಲ್ತಿಯಲ್ಲಿದ್ದು, ಹಲವಾರು ಅಪ್‌ಡೇಟ್‌ಗಳನ್ನು ಬ್ಯಾಂಕ್‌ನವರು ನಿಮ್ಮ ಇಮೇಲ್‌ ವಿಳಾಸಕ್ಕೆ ಕಳುಹಿಸುತ್ತಿರುತ್ತಾರೆ. 2 ಇಮೇಲ್‌ಗಳನ್ನು ಬಳಸುವುದರಿಂದ, ಕಡಿಮೆ ಬಳಸುವ ಇಮೇಲ್‌ ಅನ್ನು, ಇತರ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ವೆಬ್‌ಸೈಟ್‌ ಇಮೇಲ್‌ ಲಾಗಿನ್‌ ಕೇಳಿದರೆ ಕಡಿಮೆ ಬಳಸುವ ಇಮೇಲ್‌ನಿಂದ ಲಾಗಿನ್‌ ಆಗಬಹುದು. ಕಾರಣ ಕೆಲವು ಅನವಶ್ಯಕ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಇಮೇಲ್‌ ಮಾಹಿತಿಗಳನ್ನು ವೀಕ್ಷಿಸಬಹುದು. ಆದ್ದರಿಂದ ಬ್ಯಾಂಕ್‌ ವಹಿವಾಟು ನೆಡೆಸುವ ಇಮೇಲ್‌ ಅನ್ನು ನೀಡದೆ ಸುರಕ್ಷಿತಗೊಳಿಸಬಹುದು.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಸಾರ್ವಜನಿಕ ಸೈಬರ್ ಕೇಂದ್ರಗಳಲ್ಲಿ ನಿಮ್ಮ ಯಾವುದೇ ವಯಕ್ತಿಕ ಖಾತೆಗಳನ್ನು ಬಳಸಿದ್ದಲ್ಲಿ ಎಚ್ಚರವಹಿಸಿ. ನೀವು ನಿರ್ವಹಿಸಿರುವ ಇತಿಹಾಸವನ್ನು ತೆಗೆದು ಅವರು ದುರ್ಬಳಕೆ ಮಾಡುವ ಅವಕಾಶವಿರುತ್ತದೆ. ಆದ್ದರಿಂದ ಅಜ್ಞಾತ ಮೋಡ್‌ನಲ್ಲಿ ಕಂಪ್ಯೂಟರ್ ಬಳಸಿ ಅಥವಾ ಸರ್ಚ್‌ ಇತಿಹಾಸವನ್ನು ಡಿಲೀಟ್ ಮಾಡಿ.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಸಿನಿಮಾಗಳು ನಿಮಗೆ ಟೊರೆಂಟ್‌ ವೆಬ್‌ಸೈಟ್‌ನಲ್ಲಿ ಸಿಗಬಹುದು. ಅವುಗಳನ್ನು ಡೌನ್‌ಲೋಡ್‌ ಸಹ ಮಾಡಬಹುದು. ಆದರೆ ನೆನಪಿರಲಿ, ಟೊರೆಂಟ್ ವೆಬ್‌ಸೈಟ್‌ ಅಧಿಕವಾದ ವೈರಸ್‌ಗಳನ್ನು ಹೊಂದಿದ್ದು, ನಿಮ್ಮ ಡಿವೈಸ್‌ ಬಹುಬೇಗ ಕೆಡುವುದಕ್ಕೆ ಕಾರಣವಾಗುತ್ತದೆ. ಅಲ್ಲದೇ ಪೈರಸಿ ಅಂಶಗಳು ಸಹ ಇದರಲ್ಲಿವೆ. ಆದ್ದರಿಂದ ಯಾವುದೇ ಫೈಲ್‌ಗಳನ್ನು ಟೊರೆಂಟ್‌ನಿಂದ ಡೌನ್‌ಲೋಡ್‌ ಮಾಡದಿರಿ.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಆಕರ್ಷಕ ಜಾಹೀರಾತು ಹೊಂದಿರುವ ಉಚಿತ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಎಚ್ಚರವಹಿಸಿ. ಉಚಿತ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿದವರು ತಮ್ಮ ಹಣವನ್ನು ಗಳಿಸಲು ಆ ರೀತಿಯಲ್ಲಿ ಶೇರ್‌ ಮಾಡುತ್ತಿರುತ್ತಾರೆ.

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇಂಟರ್ನೆಟ್‌ನಲ್ಲಿ ಸುರಕ್ಷತೆಗಾಗಿ ಸಲಹೆಗಳು

ಇ-ಕಾಮರ್ಸ್‌ ವಹಿವಾಟು ನಿರ್ವಹಿಸುವವರು ಹಾಗೂ ಆನ್‌ಲೈನ್‌ನಲ್ಲಿ ಯಾವುದೇ ಬಿಲ್‌ ಪಾವತಿ ಮಾಡುವವರು ನೀವು ಬಿಲ್‌ ಪಾವತಿ ಮಾಡುತ್ತಿರುವ ವೆಬ್‌ಸೈಟ್‌ನ URL ವಿಳಾಸದ ಮೊದಲು https ಎಂದು ವೆಬ್‌ ವಿಳಾಸ ಬಂದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ </a></strong><br /><strong><a href=ಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನ
ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" title="ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ
ಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನ
ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" loading="lazy" width="100" height="56" />ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ
ಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನ
ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
6 habits that will keep you safe on the Internet. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X