ಗೂಗಲ್‌ ಉತ್ಪನ್ನಗಳ ಲಾಂಚ್‌ಗೆ ಇಂದು ವೇದಿಕೆ ಸಿದ್ಧ..!

|

ನ್ಯೂಯಾರ್ಕ್ ನಲ್ಲಿ ಅಕ್ಟೋಬರ್ 9 ರಂದು ಗೂಗಲ್ ತನ್ನ ಮುಂದಿನ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ. ಗೂಗಲ್ ನಿಂದ ತಯಾರಿಸಲ್ಪಟ್ಟ ಮೂರನೇ ಜನರೇಷನ್ನಿನ ಪಿಕ್ಸಲ್ ಸ್ಮಾರ್ಟ್ ಫೋನ್ ಸೇರಿದಂತೆ ಹಲವು ಇತರೆ ಡಿವೈಸ್ ಗಳನ್ನು ಅಂದು ಕಂಪೆನಿಯು ಬಿಡುಗಡೆಗೊಳಿಸಲಿದೆ. ಈ ಸರ್ಚ್ ಗೈಂಟ್ ನ ಮುಂದಿನ ಪಿಕ್ಸಲ್ 3 ಸ್ಮಾರ್ಟ್ ಫೋನ್ ಗಳನ್ನು ಪಿಕ್ಸಲ್ 3 ಮತ್ತು ಪಿಕ್ಸಲ್ 3 ಎಕ್ಸ್ಎಲ್ ಎಂದು ಕರೆಯಲಾಗುವ ಸಾಧ್ಯತೆ ಇದೆ.

ಗೂಗಲ್‌ ಉತ್ಪನ್ನಗಳ ಲಾಂಚ್‌ಗೆ ಇಂದು ವೇದಿಕೆ ಸಿದ್ಧ..!

ಒಂದು ತಿಂಗಳಿನಿಂದಲೂ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.ಡುಯೋ ಹೊರತು ಪಡಿಸಿ ಗೂಗಲ್ ಇತರೆ ಕೆಲವು ಹಾರ್ಡ್ ವೇರ್ ಪ್ರೊಡಕ್ಟ್ ಗಳನ್ನು ಈ ಸಂದರ್ಬದಲ್ಲಿ ಬಿಡುಗಡೆಗೊಳಿಸಲಿದೆ. ಜೊತೆಗೆ ಇದೇ ಸಂದರ್ಬದಲ್ಲಿ ತನ್ನದೇ ಸ್ವಂತ ಓಎಸ್ ಬೇಸ್ಡ್ ಆಗಿರುವ ವಾಚ್ ನ್ನು ಬಿಡುಗಡೆಗೊಳಿಸಲಿದ್ದು ಪಿಕ್ಸಲ್ ವಾಚ್ ಎಂದು ಇದನ್ನು ಕರೆಯಲಾಗುತ್ತದೆ. “ಮೇಡ್ ಬೈ ಗೂಗಲ್” ಕಾರ್ಯಕ್ರಮದಲ್ಲಿ ಅಕ್ಟೋಬರ್ 9 ರಂದು ಯಾವೆಲ್ಲ ವಸ್ತುಗಳು ಬಿಡುಗಡೆಗೊಳ್ಳಲಿದೆ ಎಂಬ ವಿವರ ಇಲ್ಲಿದೆ.

ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3XL ಸ್ಮಾರ್ಟ್ ಫೋನ್ ಗಳು:

ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3XL ಸ್ಮಾರ್ಟ್ ಫೋನ್ ಗಳು:

ಮುಂದಿನ ಪಿಕ್ಸಲ್ 3 ಮತ್ತು ಪಿಕ್ಸಲ್ 3 ಎಕ್ಸ್ಎಲ್ ಸ್ಮಾರ್ಟ್ ಫೋನ್ ಗಳು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಹೊಂದಿರಲಿದ್ದು ನೂತನ ಆಂಡ್ರ್ಯಾಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿರಲಿದೆ. ಆದರೆ, ಇವೆರಡು ಮೊದಲು ಆಂಡ್ರಾಯ್ಡ್ 9.0 ಪೈ ಸ್ಮಾರ್ಟ್ ಫೋನ್ ಗಳೇನಲ್ಲ. ಇನ್ನು ದೊಡ್ಡದಾಗಿರುವ ಪಿಕ್ಸಲ್ 3 ಎಕ್ಸ್ಎಲ್ ಐಫೋನ್ ನಂತಹ ನಾಚ್ ನ್ನು ಹೊಂದಿರಲಿದೆ ಆದರೆ ಪಿಕ್ಸಲ್ 3 ನಾಚ್ ನ್ನು ಹೊಂದಿರುವುದಿಲ್ಲ. ಪಿಕ್ಸಲ್ 3ಎಕ್ಸ್ಎಲ್ ನಲ್ಲಿ ಡುಯಲ್ ಮುಂಭಾಗದ ಕ್ಯಾಮರಾವಿರಲಿದೆ. ನವೆಂಬರ್ ನಲ್ಲಿ ಭಾರತದಲ್ಲಿ ಈ ಎರಡೂ ಫೋನ್ ಗಳು ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಗೂಗಲ್ 'Nocturne' ಹೈಬ್ರಿಡ್ ಟ್ಯಾಬ್ಲೆಟ್

ಗೂಗಲ್ 'Nocturne' ಹೈಬ್ರಿಡ್ ಟ್ಯಾಬ್ಲೆಟ್

ಅಕ್ಟೋಬರ್ 9 ರಂದು ಗೂಗಲ್ ಕ್ರೋಮ್ ಓಎಸ್ ಪವರ್ಡ್ ಪಿಕ್ಸಲ್ ಬುಕ್ ಟ್ಯಾಬ್ಲೆಟ್ ಅದರ ಕೋಡ್ ನೇಮ್ 'Nocturne' ನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ಡಿವೈಸ್ ಡಿಟ್ಯಾಚೇಬಲ್ ಡಿಸ್ಪ್ಲೇಯನ್ನು ಹೊಂದಿರಲಿದೆ. ವಿಂಡೋಸ್ 2ಇನ್1 ಹೈಬ್ರಿಡ್ಸ್ ನಲ್ಲಿರುವಂತೆಯೇ ಇರಲಿದೆ. ಈಗಾಗಲೇ ಇರುವ ಗಾಳಿಸುದ್ದಿಗಳ ಪ್ರಕಾರವೇ ಹೇಳುವುದಾದರೆ ಇದು ಕ್ರೋಮ್ ಓಎಸ್ ನಿಂದ ರನ್ ಆಗಲಿದ್ದು ಲಿನಕ್ಸ್ ಗೂ ಕೂಡ ಬೈ ಡಿಫಾಲ್ಟ್ ಆಗಿ ಬೆಂಬಲ ನೀಡಲಿದೆ.

ಕುತೂಹಲಕಾರಿ ವಿಚಾರವೇನೆಂದರೆ, ಗೂಗಲ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಪಿಕ್ಸಲ್ ಬುಕ್ ನ ಬದಿಗಳಲ್ಲಿ ಅಳವಡಿಸಿರಲಿದೆ. ಬೆಲೆಯ ಬಗ್ಗೆ ಹೇಳುವುದಾದರೆ ನಿಖರವಾದ ಬೆಲೆ ಇನ್ನೂ ತಿಳಿಯದೇ ಇದ್ದರೂ ಸ್ವಲ್ಪ ದುಬಾರಿ ಪ್ರೊಡಕ್ಟ್ ಆಗಿರಲಿದೆ ಎಂಬುದರಲ್ಲಿ ಅನುಮಾನ ಬೇಡ. ಇಂಟೆಲ್ Kaby ಲೇಕ್-ವೈ ಪ್ರೊಸೆಸರ್ 8ಜಿಬಿ ಮೆಮೊರಿಯೊಂದಿಗೆ ಪೇರ್ ಆಗಿರಲಿದೆ.13 ಇಂಚಿನ ಡಿಸ್ಪ್ಲೇ ಇದಾಗಿರಲಿದ್ದು ಇದರ ರೆಸಲ್ಯೂಷನ್ 2,400 x 1,600 ಪಿಕ್ಸಲ್ ಜೊತೆಗೆ ಬ್ಯಾಕ್ ಲಿಟ್ ಕೀಬೋರ್ಡ್ ನ್ನು ಇದು ಹೊಂದಿರುತ್ತದೆ.

ನ್ಯೂ ಕ್ರೋಮ್ ಕಾಸ್ಟ್

ನ್ಯೂ ಕ್ರೋಮ್ ಕಾಸ್ಟ್

ಗೂಗಲ್ ಹೊಸ ಕ್ರೋಮ್ ಕಾಸ್ಟ್ ಮಾಡೆಲ್ ಜೊತೆಗೆ ಬ್ಲೂಟೂತ್ ಬೆಂಬಲ ಮತ್ತು 5GHz ವೈ-ಫೈ ಕನೆಕ್ಟಿವಿಟಿ ಯನ್ನು ಪಿಕ್ಸಲ್ 3 ಲಾಂಚ್ ಇವೆಂಟ್ ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಗಾಸಿಪ್ ಗಳು ಹೇಳುವ ಪ್ರಕಾರ ಹೊಸ ಕ್ರೋಮ್ ಕಾಸ್ಟ್ 4ಕೆ ರೆಸಲ್ಯೂಷನ್ ಗೆ ಬೆಂಬಲ ನೀಡದೇ ಇರುವ ಸಾಧ್ಯತೆಗಳಿದೆ.

ಗೂಗಲ್ ಹೋಮ್ ಹಬ್

ಗೂಗಲ್ ಹೋಮ್ ಹಬ್

ನಿರೀಕ್ಷೆಯಂತೆ, ಗೂಗಲ್ ಹೊಸ ಸ್ಮಾರ್ಟ್ ಹೋಮ್ ಅಸಿಸ್ಟೆಂಟ್ ನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಮತ್ತು ಅದನ್ನು ಈ ವರ್ಷ ಗೂಗಲ್ "ಹೋಮ್ ಹಬ್" ಎಂದು ಕರೆಯುವ ಸಾಧ್ಯತೆ ಇದೆ. ಈ ಡಿವೈಸ್ ಡಿಸ್ಪ್ಲೇ ಜೊತೆಗೆ ಸ್ಪೀಕರ್ ನ್ನು ಕೂಡ ಒಳಗೊಂಡಿರುವ ಸಾಧ್ಯತೆಗಳಿದೆ. ಈ ಡಿವೈಸ್ ಎಫ್ ಸಿಸಿ ಫೈಲಿಂಗ್ ನಲ್ಲೂ ಕೂಡ ಲೀಕ್ ಆಗಿದೆ.

Best Mobiles in India

English summary
6 'Made by Google' products launching this week. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X