ಹೊಸ ಐಫೋನ್‌ಗಳ ಖರೀದಿ ನೀವು ಮಾಡಲೇಬೇಕು! ಏಕೆ ಗೊತ್ತೇ?

By Shwetha
|

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಆಪಲ್ ಈವೆಂಟ್‌ನಲ್ಲಿ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಲಾಂಚ್ ಆಗಿದೆ. ಆಪಲ್ ವಾಚ್ ಸಿರೀಸ್ 2 ಅನ್ನು ಕೂಡ ಕಂಪೆನಿ ಸದ್ಯದಲ್ಲಿಯೇ ಘೋಷಿಸಲಿದೆ. ಆಪಲ್‌ನ ಹೊಸ ಐಫೋನ್‌ಗಳು ಅದ್ಭುತವಾದ ಬದಲಾವಣೆಗಳನ್ನು ಕಂಡುಕೊಂಡು, ಇನ್ನಷ್ಟು ವೈವಿಧ್ಯಮಯ ಫೀಚರ್‌ಗಳೊಂದಿಗೆ ಬರಲಿದೆ.

ಓದಿರಿ: ಅತಿ ದೊಡ್ಡ ಸ್ಮಾರ್ಟ್‌ಫೋನ್ ಲಾಂಚ್‌ಗೆ ಇಡಿಯ ವಿಶ್ವವೇ ಸಜ್ಜು

ಇಂತಹ ಅದ್ಭುತ ಐಫೋನ್ ಅನ್ನು ಖರೀದಿಸುವ ಮನಸ್ಸು ಯಾವ ಬಳಕೆದಾರರಿಗೆ ಇರುವುದಿಲ್ಲ ಹೇಳಿ. ಅಂತೆಯೇ ಐಫೋನ್ ಅನ್ನು ಖರೀದಿಸುವ ಮನಸ್ಸು ನೀವು ಮಾಡಿದ್ದೀರಿ ಎಂದಾದಲ್ಲಿ ಇಂದಿಲ್ಲಿ ನಾವು ಆರು ಕಾರಣಗಳನ್ನು ನೀಡುತ್ತಿದ್ದು ಹೊಸ ಐಫೋನ್‌ಗಳನ್ನು ಏಕೆ ಖರೀದಿಸಬೇಕು ಎಂಬ ಕಾರಣಗಳನ್ನು ನೀವಿಲ್ಲಿ ಕಂಡುಕೊಳ್ಳಲಿದ್ದೀರಿ.

ಉತ್ತಮ ಪ್ರೊಸೆಸರ್

ಉತ್ತಮ ಪ್ರೊಸೆಸರ್

ಹೊಸ ಐಫೋನ್‌ಗಳು ಬ್ರಾಂಡ್ ನ್ಯೂ 64 ಬಿಟ್ A10 ಫ್ಯೂಶನ್ ಚಿಪ್‌ಸೆಟ್‌ನೊಂದಿಗೆ ಬಂದಿದೆ. ಆಪಲ್‌ ವಿನ್ಯಾಸಪಡಿಸಿರುವ, ಈ ಐಫೋನ್ ಕ್ವಾಡ್ ಕೋರ್ ಸಿಪಿಯುವನ್ನು ಒಳಗೊಂಡಿದ್ದು ಎರಡು ಹೆಚ್ಚು ಕಾರ್ಯಕ್ಷಮತೆಯ ಕೋರ್‌ಗಳನ್ನು ಪಡೆದುಕೊಂಡಿವೆ ಇನ್ನು ಬ್ಯಾಟರಿ ಜೀವನಕ್ಕಾಗಿ ಎರಡು ಕೋರ್‌ಗಳನ್ನು ಪಡೆದುಕೊಂಡಿವೆ.

ಹೆಚ್ಚು ಇಂಟರ್ನಲ್ ಸ್ಟೋರೇಜ್

ಹೆಚ್ಚು ಇಂಟರ್ನಲ್ ಸ್ಟೋರೇಜ್

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಎಲ್ಲಾ ಆವೃತ್ತಿಗಳು ದ್ವಿ ಸಂಗ್ರಹಣಾ ಸಾಮರ್ಥ್ಯವನ್ನು ನೀಡಲಿವೆ. 32 ಜಿಬಿ, 128 ಜಿಬಿ ಮತ್ತು 256 ಜಿಬಿ ಉತ್ತಮ ಸಂಗ್ರಹಣೆಯನ್ನು ನೀಡುತ್ತಿವೆ.

ವೈರ್‌ಲೆಸ್ ಏರ್‌ಪೋಡ್ಸ್

ವೈರ್‌ಲೆಸ್ ಏರ್‌ಪೋಡ್ಸ್

ಹೊಸದಾಗಿ ಲಾಂಚ್ ಆಗಿರುವ ಏಪಲ್ ಏರ್‌ಪೋಡ್‌ಗಳಿಗೆ ಐಫೋನ್ ಡ್ಯು ಬೆಂಬಲವನ್ನು ಒದಗಿಸಲಿವೆ. ಆಪಲ್ ವಿನ್ಯಾಸದ ಡಬ್ಲ್ಯೂ 1 ಚಿಪ್‌ ಅನ್ನು ಇದು ಬೆಂಬಲಿಸುತ್ತಿದ್ದು, ಆಪಲ್‌ನ ಡಿಜಿಟಲ್ ಸಹಾಯಕ ಸಿರಿಗೆ ಸ್ಪರ್ಶಿಸುವುದರ ಮೂಲಕ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಹೋಮ್ ಬಟನ್

ಹೊಸ ಹೋಮ್ ಬಟನ್

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನಲ್ಲಿ ಹೋಮ್ ಬಟನ್ ಭಿನ್ನವಾಗಿದೆ. 'ಟಾಪ್ಟಿಕ್ ಎಂಜಿನ್' ವ್ಯವಸ್ಥೆಯನ್ನು ಇದು ಪಡೆದುಕೊಂಡಿದ್ದು ಬಲವಾಗಿ ಸ್ಪರ್ಶಿಸುವ ಫೀಚರ್ ಇದರಲ್ಲಿದೆ.

ಶಕ್ತಿಯುತ ಕ್ಯಾಮೆರಾಗಳು

ಶಕ್ತಿಯುತ ಕ್ಯಾಮೆರಾಗಳು

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಕ್ಯಾಮೆರಾಗಳು 12 ಎಮ್‌ಪಿ ಆವೃತ್ತಿಯದ್ದಾಗಿದೆ.

ಸ್ಟಿರಿಯೊ ಸ್ಪೀಕರ್‌ಗಳು

ಸ್ಟಿರಿಯೊ ಸ್ಪೀಕರ್‌ಗಳು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಚಲನ ಚಿತ್ರ ವೀಕ್ಷಣೆ ಮತ್ತು ಗೇಮ್ಸ್ ಆಡುವುದು ನಿಮಗೆ ಇಷ್ಟ ಎಂದಾದಲ್ಲಿ, ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನಿಜಕ್ಕೂ ಅತ್ಯದ್ಭುತ ಎಂದೆನಿಸಲಿದೆ. ಎರಡೂ ಡಿವೈಸ್‌ಗಳು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬಂದಿದ್ದು, ಒಂದು ಮೇಲ್ಭಾಗದಲ್ಲಿದ್ದರೆ ಇನ್ನೊಂದು ಡಿಸ್‌ಪ್ಲೇ ಕೆಳಭಾಗದಲ್ಲಿದೆ.

Best Mobiles in India

English summary
So, if you’re planning on treating yourself to a new smartphone, we give you six reasons why you should consider Apple’s new iPhone 7 and iPhone 7 Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X