ಫೇಸ್ ಬುಕ್ ಬಗ್ಗೆ ನಿಮಗೆ ಗೊತ್ತಿರದ 6 ಅಂಶಗಳು

Posted By: Varun
ಫೇಸ್ ಬುಕ್ ಬಗ್ಗೆ ನಿಮಗೆ ಗೊತ್ತಿರದ 6 ಅಂಶಗಳು

ಜಗತ್ತಿನ ನಂ.1 ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗಾಗಲೇ ಸಾಕಷ್ಟು ಪ್ರಸಿದ್ಧಿಯಾಗಿದ್ದು, ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಶೇರುಪೇಟೆಯನ್ನೂ ಪ್ರವೇಶಿಸುತ್ತಿರುವ ವಿಷಯ ನಿಮಗೆಲ್ಲ ಗೊತ್ತು. ನಮ್ಮ ಮನಸ್ಸಿನ ಭಾವನೆಗಳನ್ನು ಮುಖ್ತವಾಗಿ ಹಂಚಿಕೊಳ್ಳಲು, ಹೊಸ ಹೊಸ ಗೆಳಯ/ಗೆಳತಿಯರನ್ನು ಮಾಡಿಕೊಳ್ಳಲು ಒಂದು ವೇದಿಕೆ ಕಲ್ಪಿಸಿಕೊಡುವ ಈ ಫೇಸ್ ಬುಕ್ ಬಗ್ಗೆ ನಿಮಗೆ ಗೊತ್ತಿರದ 6 ಅಂಶಗಳನ್ನು ತಿಳಿದುಕೊಳ್ಳಲು ಓದಿ:

  • ಫೇಸ್ ಬುಕ್, ಪ್ರಸ್ತುತ 90 ಕೋಟಿ ಬಳಕೆದಾರರನ್ನು ಹೊಂದಿದ್ದು, ಆ ಕಂಪನಿ ಏನಾದರೂ ದೇಶವಾಗಿದ್ದರೆ, ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರವಾಗುತ್ತಿತ್ತು. (ಚೀನಾ ಹಾಗು ಭಾರತದ ನಂತರ).

  • ಫೇಸ್ ಬುಕ್ ಅನ್ನು ಅತೀ ಹೆಚ್ಚಾಗಿ ಬಳಸುವ ಜನ ಇರುವುದು ಅಮೇರಿಕಾ ದೇಶದಲ್ಲಿ. ಅದರ ನಂತರದ ಸ್ಥಾನ ಇರುವುದು ಭಾರತಕ್ಕೆ.

  • ವಿಶ್ವದ ಬಹುತೇಕ ದೇಶಗಳಲ್ಲಿ ಫೇಸ್ ಬುಕ್ ಫೇಮಸ್ ಆಗಿದ್ದರೂ, ಚೀನಾ, ಜಪಾನ್, ರಷಿಯಾ, ದಕ್ಷಿಣ ಕೊರಿಯಾ ಹಾಗು ವಿಯಟ್ನಾಂ ದೇಶಗಳಲ್ಲಿ ಅಷ್ಟು ಬಳಕೆದಾರರನ್ನು ಹೊಂದಿಲ್ಲ.

  • ಶೇರು ಮಾರುಕಟ್ಟೆ ಪ್ರವೇಶಿಸಿದ ಮೇಲೆ, ಮಾರ್ಕ್ ಜುಕರ್ಬರ್ಗ್ ಸೇರಿದಂತೆ ಫೇಸ್ ಬುಕ್ ಕಂಪನಿಯ ನಾಲ್ಕು ಜನ ಬಿಲಿಯಾದಿಪತಿಗಳಾಗಲಿದ್ದಾರೆ.

  • ಫೇಸ್ ಬುಕ್ ನಲ್ಲಿ ಪ್ರತಿನಿತ್ಯ ಅಪ್ಲೋಡ್ ಆಗುವ ಫೋಟೋಗಳ ಸಂಖ್ಯೆ 3 ಕೋಟಿ!

  • ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಲೈಕ್ ಕಂಡಿರುವ ಫ್ಯಾನ್ ಪೇಜ್, ತನ್ನದೇ ಆದ ಫೇಸ್ ಬುಕ್ ಪೇಜ್. ಅದು 6.2 ಕೋಟಿ ಅಭಿಮಾನಿಗಳನ್ನು ಹೊಂದಿದೆ.

Please Wait while comments are loading...
Opinion Poll

Social Counting