ಭಾರತ ದೇಶದ ಮಾನ ಸ್ಮಾರ್ಟ್‌ಫೋನಿನಿಂದಾಗಿ ಚೂರುಚೂರು!!

ಇಡೀ ವಿಶ್ವದಲ್ಲಿ ಪ್ರೀತಿ, ಬಾಂದವ್ಯಗಳಿಗೆ ಹೆಚ್ಚು ಬೆಲೆ ನೀಡುವ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ದೇಶದ ಮಾನ ಸ್ಮಾರ್ಟ್‌ಫೋನಿನಿಂದ ಚೂರುಚೂರಾಗಿದೆ.!

|

ಇಡೀ ವಿಶ್ವದಲ್ಲಿ ಪ್ರೀತಿ, ಬಾಂದವ್ಯಗಳಿಗೆ ಹೆಚ್ಚು ಬೆಲೆ ನೀಡುವ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ದೇಶದ ಮಾನ ಸ್ಮಾರ್ಟ್‌ಫೋನಿನಿಂದ ಚೂರುಚೂರಾಗಿದೆ.! ಅಮೆರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯವೊಂದು ಪ್ರಕಟಿಸಿರುವ ವರದಿಯನ್ವಯ ವಿಶ್ವದಲ್ಲಿ ಇತರರಿಗಿಂತ ಭಾರತೀಯರು ಸ್ಮಾರ್ಟ್‌ಪೋನ್ ಗೀಳಿಗೆ ಬಿದ್ದು ಹಾಳಾಗಿದ್ದಾರೆ ಎಂದು ತಿಳಿಸಿದೆ..!!

ಹೌದು, ಮೊಟೊರೊಲಾ ಸಹಾಯೋಗದೊಂದಿಗೆ ಅಮೆರಿಕಾದ ಹಾವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿಸಿರುವ ಒಂದು ಅಧ್ಯಯನದಲ್ಲಿ ಭಾರತೀಯರ ಸ್ಮಾರ್ಟ್‌ಫೋನ್ ಗೀಳಿನ ಬಗ್ಗೆ ಹೇಳಲಾಗಿದೆ. ಇಡೀ ವಿಶ್ವದಲ್ಲಿ ಸ್ಮಾರ್ಟ್ಫೋನ್ ಗೀಳಿಗೆ ಬಿದ್ದವರ ಪ್ರಮಾಣದಲ್ಲಿ ಭಾರತೀಯರ ಪ್ರಮಾಣ ಹೆಚ್ಚಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.!!

ಭಾರತ ದೇಶದ ಮಾನ ಸ್ಮಾರ್ಟ್‌ಫೋನಿನಿಂದಾಗಿ ಚೂರುಚೂರು!!

ಸರಿಸುಮಾರು 65% ಭಾರತೀಯರು ಸ್ಮಾರ್ಟ್‌ಫೋನ್ ಅನ್ನು ತನ್ನ ನೆಚ್ಚಿನ ಗೆಳೆಯನೆಂದು ಅಂದುಕೊಂಡಿರುವುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ. ಹಾಗಾದರೆ, ಈ ಅಧ್ಯಯನದ ಪ್ರಮುಖ ಅಂಶಗಳು ಯಾವುವು? ಭಾರತೀಯರ ಮೇಲೆ ಅಧ್ಯಯನದ ಫಲಿತಾಂಶ ಹೇಗಿದೆ? ಎಂಬುದನ್ನು ಮುಂದೆ ತಿಳಿಯಿರಿ.!!

ಏನಿದು ಅಧ್ಯಯನ?

ಏನಿದು ಅಧ್ಯಯನ?

ಗ್ಯಾಜೆಟ್‌ಗಳು ಇಂದಿನ ಪ್ರಪಂಚವನ್ನು ಹೆಚ್ಚು ಆಳುತ್ತಿವೆ, ಪ್ರಸ್ತುತ ಆಧುನಿಕ ಸಮಾಜವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೆ. ಅದರಲ್ಲಿಯೂ ಜನರು ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚು ಜನರು ಅವಲಂಬಿತರಾಗಿದ್ದಾರೆ ಎಂಬ ದೃಷ್ಟಿಯಲ್ಲಿ 16 ರಿಂದ 65 ವಯಸ್ಸಿನವರ ಮೇಲೆ ಅಧ್ಯಯನವನ್ನು ನಡೆಸಲಾಗಿದೆ.!!

ಅಧ್ಯಯನ ನಡೆಸಿದವರು ಯಾರು?

ಅಧ್ಯಯನ ನಡೆಸಿದವರು ಯಾರು?

ಮೊಟೊರೊಲಾ ಸಹಾಯೋಗದೊಂದಿಗೆ ಅಮೆರಿಕಾದ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಮೈಂಡ್-ಬ್ರೇನ್ ನಡವಳಿಕೆ ಮತ್ತು ಹ್ಯಾಪಿನೆಸ್ ವಿಜ್ಞಾನದ ತಜ್ಞನ್ಯಾನ್ಸಿ ಎಟ್ಕೋಫ್ ಅವರು ಅಧ್ಯಯನ ನಡೆಸಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ, ಬ್ರೆಜಿಲ್, ಫ್ರಾನ್ಸ್ ಮತ್ತು ಭಾರತದಂತಹ ಹಲವು ರಾಷ್ಟ್ರಗಳ 4418 ಜನರನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ.!!

ಅಧ್ಯಯನದ ಫಲಿತಾಂಶಗಳೆನು?

ಅಧ್ಯಯನದ ಫಲಿತಾಂಶಗಳೆನು?

ಜಾಗತಿಕವಾಗಿ ಸರಿಸುಮಾರು 50% ಜನರುತಾವು ಬಯಸಿದಕ್ಕಿಂತ ಹೆಚ್ಚಾಗಿ ತಮ್ಮ ಫೋನ್ ಅನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ. ಸುಮಾರು 44% ಜನರು ತಮ್ಮ ದೂರವಾಣಿಗಳನ್ನು ನಿರಂತರವಾಗಿ ಪರಿಶೀಲಿಸಲು ಪ್ರೇರೇಪಿತರಾಗುವುದಾಗಿ ಒಪ್ಪಿಕೊಂಡಿದ್ದಾರೆ. ಶೇ.53% ರಷ್ಟು ಜನರು ಸ್ಮಾರ್ಟ್‌ಫೋನ್ ಕಳೆದುಕೊಳ್ಳುವ ಬಗ್ಗೆ ಹೆದರಿಕೆ ಹೊಂದಿದ್ದಾರಂತೆ!!

ಭಾರತೀಯರಲ್ಲಿ ಇನ್ನೂ ಹೆಚ್ಚು!!

ಭಾರತೀಯರಲ್ಲಿ ಇನ್ನೂ ಹೆಚ್ಚು!!

ಜಾಗತಿಕ ಸರಾಸರಿಗಿಂತಲೂ ಭಾರತೀಯರ ಸ್ಮಾರ್ಟ್‌ಫೋನ್ ಗೀಳು ಹೆಚ್ಚಿರುವುದನ್ನು ಅಧ್ಯಯನದಲ್ಲಿ ಹೇಳಲಾಗಿದೆ. ಶೇ 65% ಭಾರತೀಯರು ಜನರುತಾವು ಬಯಸಿದಕ್ಕಿಂತ ಹೆಚ್ಚಾಗಿ ತಮ್ಮ ಫೋನ್ ಅನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದರೆ, 57% ಭಾರತೀಯರು ಜನರು ತಮ್ಮ ದೂರವಾಣಿಗಳನ್ನು ನಿರಂತರವಾಗಿ ಪರಿಶೀಲಿಸಲು ಪ್ರೇರೇಪಿತರಾಗುವುದಾಗಿ ಒಪ್ಪಿಕೊಂಡಿದ್ದಾರೆ.!!

ಫೋನ್ ಕಳೆದುಕೊಳ್ಳುವ ಭೀತಿ ಹೆಚ್ಚು.!!

ಫೋನ್ ಕಳೆದುಕೊಳ್ಳುವ ಭೀತಿ ಹೆಚ್ಚು.!!

ಭಾರತದಲ್ಲಿ ಕಿರಿಯ ಪೀಳಿಗೆಯಲ್ಲಿ 47% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಇಷ್ಟಪಡುವದಕ್ಕೆ ತೊಡಗಿಸಿಕೊಂಡಿದ್ದಾರಂತೆ. ಶೇ 77% ಭಾರತೀಯರು ತಮ್ಮ ಸ್ಮಾರ್ಟ್ಫೋನ್‌ಗಳನ್ನು ಕಳೆದುಕೊಳ್ಳುವ ಹಾಗೂ ಕಳೆದುಕೊಂಡಾಗ ಹೆಚ್ಚು ಭಯಭೀತರಾಗಿರುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನೆಚ್ಚಿನ ಗೆಳೆಯ ಸ್ಮಾರ್ಟ್‌ಫೋನ್!!

ನೆಚ್ಚಿನ ಗೆಳೆಯ ಸ್ಮಾರ್ಟ್‌ಫೋನ್!!

ಸರಿಸುಮಾರು ಶೆ 65% ಭಾರತೀಯರು ಸ್ಮಾರ್ಟ್‌ಫೋನ್ ಅನ್ನು ತನ್ನ ನೆಚ್ಚಿನ ಗೆಳೆಯನೆಂದು ಅಂದುಕೊಂಡಿರುವುದಾಗಿ ತಿಳಿಸಲಾಗಿದೆ. ಪ್ರೀತಿಪಾತ್ರರಿಗಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರತೀಯರು ಹೆಚ್ಚು ಅವಲಂಬನೆಯಾಗಿದ್ದಾರೆ ಮತ್ತು ಹೆಚ್ಚು ಪ್ತೀತಿಸುತ್ತಾರೆ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ.!!

Best Mobiles in India

English summary
65 Percent Indians Care More About Smartphones than People : Study. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X