ಕೇವಲ 800 ರೂಪಾಯಿಗಳಲ್ಲಿ ನಿಮ್ಮ ಗ್ಯಾಜೆಟ್‌ಗಳ ರಕ್ಷಣೆ

By Suneel
|

ಇಲೆಕ್ಟ್ರಾನಿಕ್‌ ಪದಾರ್ಥಗಳಿಗೆ ಪ್ರಸ್ತುತ ದಿನಗಳಲ್ಲಿ ಒಂದು ದಿನವು ಕೂಡ ರಜೆಯೇ ಇಲ್ಲ. ಯಾವುದಾದರೂ ಒಂದು ಕೆಲಸಕ್ಕಾಗಿ ಉಪಯುಕ್ತವಾಗುತ್ತಲೇ ಇರುತ್ತವೆ. ಇಂತಹ ಬ್ಯುಸಿ ವೇಳೆಯಿಂದ ಅವುಗಳ ಮೇಲೆ ನಮ್ಮ ಬೆರಳುಗಳ ಬೆವರಿನ ಕೊಳೆ, ಕೂದಲು, ಧೂಳಿನ ಕಣಗಳು, ಸೂಕ್ಷ್ಮಾಣುಗಳು ಸಂಗ್ರಹವಾಗುತ್ತವೆ. ಸ್ವಚ್ಛತೆ ಮಾಡಲು ನಾವು ಸಾಮಾನ್ಯವಾಗಿ ಬಟ್ಟೆಯನ್ನು ಉಪಯೋಗಿಸುತ್ತೇವೆ. ಇದು ಉತ್ತಮ ಮಾರ್ಗವಲ್ಲ. ಓದಿರಿ:ದಂಗುಬಡಿಸಲಿರುವ ಆಪಲ್‌ನ ಹೊಸ ನಡೆಯೇನು?

ಆದ್ದರಿಂದ ನಾವು ಇಂದಿನ ಲೇಖನದಲ್ಲಿ ನಿಮಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ಶುದ್ಧವಾಗಿ ಮತ್ತು ಹೆಚ್ಚು ಬಾಳಿಕೆ ಬರುವಂತೆ ನೋಡಿಕೊಳ್ಳಲು ಕೆಲವು ಮಾರ್ಗಗಳನ್ನು ತಿಳಿಸುತ್ತೇವೆ. ಆದರೆ ನೀವು ಈ ಚಟುವಟಿಕೆಗಳನ್ನು ಮಾಡಲು 800 ರೂಪಾಯಿಗಳನ್ನು ತೆರಲೇಬೇಕಾಗಿದೆ.

ಸ್ಕ್ರೀನ್‌ ವೈಪ್ಸ್

ಸ್ಕ್ರೀನ್‌ ವೈಪ್ಸ್

ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲಿಯೂ ಟಿವಿ, ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಕಂಪ್ಯೂಟರ್‌ಗಳಂತ ಇಲೆಕ್ಟ್ರಾನಿಕ್‌ ಸಾಧನಗಳು ಇರುವುದು ಸಾಮಾನ್ಯ. ಇವುಗಳ ಸ್ಕ್ರೀನ್‌ಗಳು ಕೆಲವು ದಿನಗಳಲ್ಲಿ ಹೊಗೆ ಹಾಗು ಧೂಳಿನ ಕಣಗಳಿಂದ ಆವೃತವಾಗುತ್ತವೆ. ಈ ರೀತಿಯಿಂದ ನಿಮ್ಮ ವೀಕ್ಷಣೆಯಲ್ಲಿ ಕಿರಿಕಿರಿ ಉಂಟಾಗಬಹುದು.

ಸ್ಕ್ರೀನ್‌ ವೈಪ್ಸ್ ಬಳಸಿ ನಿಮ್ಮ ಇಲೆಕ್ಟ್ರಾನಿಕ್ ಸಾಧನಗಳನ್ನು ಸ್ವಚ್ಛ ಮಾಡುವುದರಿಂದ ಅದು ಹೆಚ್ಚುಕಾಲ ತೇವಾಂಶ ವಿದ್ದು, ಪರದೆಯ ಒರಟುತನವನ್ನು ಹೋಗಲಾಡಿಸುತ್ತದೆ. ಸ್ಕ್ರೀನ್‌ ವೈಪ್ಸ್ ಒಂದು ಬಾಕ್ಸ್ ಈಗ ಕೇವಲ ನಿಮಗೆ ಬೆಲೆ ರೂ 500 ಕ್ಕೆ ಸಿಗಲಿದೆ.

 ಸ್ಕ್ರೀನ್‌ ಕ್ಲೀನಿಂಗ್ ಕಿಟ್‌

ಸ್ಕ್ರೀನ್‌ ಕ್ಲೀನಿಂಗ್ ಕಿಟ್‌

ಇಂದಿನ ಸ್ಮಾರ್ಟ್‌ ಯುಗದ ಸ್ಮಾರ್ಟ್‌ಫೋನ್‌ಗಳೆಲ್ಲವು ಧೂಳಿನ ಕಣ ಮತ್ತು ಬೆರಳುಗಳ ಕೊಳೆಯನ್ನು ಅತಿ ಬೇಗ ಸೆಳೆಯುತ್ತವೆ. ಅದನ್ನು ನೀವು ಸ್ವಚ್ಛ ಮಾಡಲು ಯಾವುದಾದರೂ ಬಟ್ಟೆ ತುಂಡನ್ನು ಬಳಸಿದಲ್ಲಿ ಸ್ಕ್ರೀನ್ ಮೇಲೆ ಮೈಕ್ರೋ ಸ್ಕ್ಯಾಚ್‌ಆಗುವ ಅವಕಾಶಗಳಿರುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಕೇವಲ 150 ರೂಪಾಯಿಗಳಿಗೆ ಮೈಕ್ರೋ ಫೈಬರ್ ಕ್ಲಾತ್ ಮತ್ತು ಸ್ಕ್ರೀನ್ ಕ್ಲೀನಿಂಗ್ ಲಿಕ್ವಿಡ್‌ ಹೊಂದಿರುವ ಕಿಟ್‌ ಪಡೆಯಿರಿ. ಇದರಿಂದ ನೀವು ನಿಮ್ಮ ಮನೆಯ ಎಲ್ಲಾ ಇಲೆಕ್ಟ್ರಾನಿಕ್ ಪರದೆಗಳನ್ನು ಸ್ವಚ್ಛವಾಗಿಡಬಹುದಾಗಿದೆ.

 ಏರ್‌ ಬ್ಲೋವರ್ಸ್‌

ಏರ್‌ ಬ್ಲೋವರ್ಸ್‌

ಕಂಪ್ಯೂಟರ್‌ ಕ್ಯಾಬಿನೆಟ್‌ ಒಳಗೆ ಹಲವು ವಸ್ತುಗಳು ಇರುವುದು ನಿಮಗೆ ಸಾಮಾನ್ಯವಾಗಿ ತಿಳಿದಿದೆ. ಹಾಗೆಯೇ ಸಿಪಿಯು, ಜಿಪಿಯು, ಮದರ್‌ಬೋರ್ಡ್‌, ಹಾರ್ಡ್‌ಡಿಸ್ಕ್‌ಗಳಲ್ಲಿಯೂ ಧೂಳು ಹಾಗೂ ಸೂಕ್ಷ್ಮಾಣುಗಳು ಸೇರಿಕೊಳ್ಳುವುದು ಗೊತ್ತಿರುವ ಸಾಮಾನ್ಯ ವಿಷಯ. ಈ ಧೂಳಿನ ಕಣಗಳನ್ನು ಏರ್‌ ಬ್ಲೋವರ್ಸ್‌ ಮೂಲಕ ಸುಲಭವಾಗಿ ತೆಗೆಯ ಬಹುದಾಗಿದೆ. ಆದರೆ ನೀವು ಇದನ್ನು ಉಪಯೋಗಿಸುವಾಗ ಕಂಪ್ಯೂಟರ್‌ ಕ್ಯಾಬಿನೆಟ್‌ ಅನ್ನು ವಿದ್ಯುತ್‌ ನಿಂದ ಅನ್‌ಪ್ಲಗ್‌ ಮಾಡಿರಬೇಕು. ಹಾಗೂ ಏರ್‌ ಬ್ಲೋವರ್‌ ಅನ್ನು ಮದರ್‌ ಬೋರ್ಡ್‌ಗೆ ತೀರ ಹತ್ತಿರ ಇಟ್ಟುಕೊಳ್ಳಬಾರದು.
ಏರ್‌ ಬ್ಲೋವರ್ಸ್‌ ಉಪಯೋಗಿಸ ಬೇಕಾದರೆ ನಿಮ್ಮ ಮುಖವನ್ನು ರಕ್ಷಣೆಗೋಸ್ಕರ ಬಟ್ಟೆಯಿಂದ ಕಟ್ಟಿಕೊಳ್ಳುವುದು ಉತ್ತಮ.

ಏರ್‌ ಬ್ಲೋವರ್ಸ್‌ನಿಂದ ಸೆಟ್‌ಟಾಪ್‌ ಬಾಕ್ಸ್, ಕೀಬೋರ್ಡ್‌, ಆಂಪ್ಲಿಫೇಯರ್‌, ಪ್ರೊಜೆಕ್ಟರ್ ಮತ್ತು ಸ್ಪೀಕರ್‌ಗಳನ್ನು ಸ್ವಚ್ಛತೆ ಮಾಡಬಹುದಾಗಿದೆ. ಅದರ ಬೆಲೆ ರೂ 300-800.

ಕ್ಯಾಮೆರಾ ಬ್ಲೊಬರ್‌

ಕ್ಯಾಮೆರಾ ಬ್ಲೊಬರ್‌

ಕ್ಯಾಮೆರಾದಲ್ಲಿ ಇಮೇಜ್‌ ಸೆನ್ಸಾರ್‌ ಡಿಎಸ್‌ಎಲ್‌ಆರ್‌ನ ಹೃದಯವಿದ್ದಂತೆ. ಹಾಗೂ ಫೋಟೋಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕೆಲಸವು ಇದರದ್ದೇ ಆಗಿದೆ. ಇಮೇಜ್‌ ಸೆನ್ಸಾರ್‌ನ ಮೇಲೆ ಒಂದು ಧೂಳಿನ ಕಣ ಇದ್ದರೂ ಸಹ ಅದು ಅಂತಿಮ ಫೋಟೋದ ಮೇಲೆ ಅದರ ಸ್ಪಾಟ್‌ಗಳನ್ನು ತೋರಿಸುತ್ತದೆ. ಆದ್ದರಿಂದಲೇ ಡಿಎಸ್‌ಎಲ್‌ಆರ್‌ ಬಳಕೆದಾರರು ಲೆನ್ಸ್‌ಗಳ ನಡುವೆ ಸ್ವಿಚ್‌ಗಳನ್ನು ಹೊಂದಿದ್ದಾರೆ. ಕೆಲವು ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ಸೆನ್ಸಾರ್‌ ಕ್ಲೀನಿಂಗ್ ಅಳವಡಿಸಲಾಗಿದ್ದರೂ ಸಹ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಉತ್ತಮವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಏರ್‌ ಬ್ಲೋವರ್‌ ಅನ್ನು ಬಳಸಬಹುದಾಗಿದೆ. ಇದನ್ನು ಬಳಸುವಾಗ ಇದರ ನಾಜಲ್‌ ಸೆನ್ಸಾರ್‌ಗೆ ಸ್ಪರ್ಶಿಸದ ಹಾಗೆ ಬಳಸಬೇಕು.

ಲೆನ್ಸ್ ಪೆನ್

ಲೆನ್ಸ್ ಪೆನ್

ಲೆನ್ಸ್‌ ಪೆನ್ ಕೇವಲ 300 ರೂಪಾಯಿಗಳಾಗಿದ್ದು ಇದನ್ನು ಎಲ್ಲಾ ಕ್ಯಾಮೆರಾ ಬಳಕೆದಾರರು ಲೆನ್ಸ್‌ಗಳನ್ನು ಸ್ವಚ್ಛ ಮಾಡಲು ಉಪಯೋಗಿಸಬೇಕಾಗಿದೆ. ಇದನ್ನು ಡಿಎಸ್‌ಎಲ್‌ಆರ್‌, ಕಾಂಪಾಕ್ಟ್ ಕ್ಯಾಮೆರಾ ಹಾಗೂ ಸ್ಮಾರ್ಟ್‌ಫೋನ್‌ ಸ್ವಚ್ಛತೆಗೂ ಬಳಸಬಹುದಾಗಿದೆ. ಇದು ಮೃದು ಬ್ರಸ್ ಆಗಿದ್ದು ಸೂಕ್ಷ್ಮ ಧೂಳಿನ ಕಣಗಳನ್ನು ಸಹ ಸಣ್ಣ ಮೂಲೆಗಳಲ್ಲು ತೆಗೆಯುತ್ತದೆ. ಲೆನ್ಸ್‌ಪೆನ್‌ ಅನ್ನು ಟಿಲಿಸ್ಕೋಪ್‌ಹಾಗೂ ಮೈಕ್ರೋಸ್ಕೋಪ್‌ಸ್ವಚ್ಛತೆಗೂ ಬಳಸಬಹುದಾಗಿದೆ.

ಸೈಬರ್‌ಕ್ಲೀನ್

ಸೈಬರ್‌ಕ್ಲೀನ್

ಸೈಬರ್‌ ಕ್ಲೀನ್‌ ಒಂದು ವಿಷಕಾರಿ ಅಲ್ಲದ ಹಾಗೂ ಸಂಯುಕ್ತ ಜೈವಿಕ ಶುದ್ಧೀಕರಣವಾಗಿದ್ದು ಇದಕ್ಕೆ ಪೇಟೆಂಟ್‌ ಪಡೆಯ ಬೇಕಾಗಿದೆ. ಎಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಶೇಕಡ 99.9 ರಷ್ಟು ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಲೋಳೆಯಂತ ವಸ್ತುವನ್ನು ಸ್ವಚ್ಛತೆಗಾಗಿ ಬಳಸಲಿದ್ದು, ರಿಮೋಟ್, ಸ್ಪೀಕರ್ ಗ್ರಿಲ್ಸ್, ಕೀಬೋರ್ಡ್ ‌ಮತ್ತು ಫೋನ್‌ ಕೀಪ್ಯಾಡ್‌ಗಳನ್ನು ಶುದ್ಧ ಮಾಡಲು ಉಪಯೋಗಿಸಲಾಗುತ್ತದೆ.

ಸಂಕುಚಿತ ಏರ್‌ ಕ್ಯಾನ್

ಸಂಕುಚಿತ ಏರ್‌ ಕ್ಯಾನ್

ನಿಮ್ಮ ಗ್ಯಾಜೆಟ್‌ಗಳನ್ನು ಏರ್‌ ಬ್ಲೋವರ್‌ನಿಂದ ಸ್ವಚ್ಛಗೊಳಿಸಲು ಬೆಸರವಾದರೆ, ಸಂಕುಚಿತ ಏರ್‌ ಕ್ಯಾನ್‌ ಉತ್ತಮ ಮಾರ್ಗವಾಗಿದೆ. ಈ ಕ್ಯಾನ್‌ಗಳು ಉದ್ದನೆಯ ನಾಜಲ್‌ ಹೊಂದಿದ್ದು, ಇವು ಬಣ್ಣ ಹಚ್ಚುವ ಕ್ಯಾನ್‌ಗಳಂತೆ ಕಾಣಿಸುತ್ತವೆ. ನಾಜಲ್‌ಗಳಿಂದ ಸರಿಯಾದ ರೀತಿಯಲ್ಲಿ ಕಡಿಮೆ ಗಾಳಿಯನ್ನು ಬಳಸಿ ಧೂಳಿನ ಕಣಗಳನ್ನು ಸ್ವಚ್ಛ ಮಾಡಬೇಕಿದೆ. ಬೆಲೆ ರೂ 300

Best Mobiles in India

English summary
Electronic devices tend to get handled by many people on a daily basis. So it's no surprise that they accumulate fingerprints, hair, dust particles and even pathogens. Just wiping them down with a cloth is not the best way to go about it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X