ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುವುದು ಹೇಗೆ?

Posted By:

ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವುದು ಇತ್ತೀಚಿನ ಜಮಾನಾದಲ್ಲಿ ಕಷ್ಟದ ಕೆಲಸವೇನಲ್ಲ. ಆದರೆ ನೀವು ಖರೀದಿಸಿದ ಫೋನ್ ಅನ್ನು ವೇಗಗೊಳಿಸುವುದು ಅದರ ಕಾರ್ಯವೈಖರಿಯನ್ನು ಪರಿಣಾಮಕಾರಿಯಾಗಿಸುವುದು ಹೇಗೆ ಎಂಬುದನ್ನು ಮನಗಂಡಿದ್ದೀರಾ? ಹಾಗಿದ್ದರೆ ಆಂಡ್ರಾಯ್ಡ್ ಫೋನ್ ಅನ್ನು ಸರಳ ವಿಧಾನಗಳಲ್ಲಿ ಹೇಗೆ ವೇಗಗೊಳಿಸುವುದು ಎಂಬುದನ್ನು ಇಂದಿನ ಲೇಖನದಲ್ಲಿ ಚರ್ಚಿಸೋಣ

ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುವುದು ಹೇಗೆ?

1. ನವೀಕರಿಸಿ
ಇಂದಿನ ಕಾಲದಲ್ಲಿ ಹೊಸ ಹೊಸ ಸುಧಾರಣೆಗಳು ಟೆಕ್ ಕ್ಷೇತ್ರಕ್ಕೆ ಕಾಲಿರಿಸುತ್ತಿದ್ದು ಫೋನ್‌ನ ವೇಗವನ್ನು ಸುಧಾರಿಸುವ ನೈಪುಣ್ಯವನ್ನು ಇದು ಹೊಂದಿದೆ. ನಿಮ್ಮ ಫೋನ್‌ನ ಸೆಟ್ಟಿಂಗ್ ಆಯ್ಕೆಯಲ್ಲಿ 'ಅಬೌಟ್ ಡಿವೈಸ್' ಕ್ಲಿಕ್ ಮಾಡಿ ನಂತರ 'ಸಾಫ್ಟ್‌ವೇರ್ ಅಪ್‌ಡೇಟ್' ಆಯ್ಕೆಗೆ ಹೋಗಿ ನವೀಕರಣಗಳಿಗಾಗಿ ನೋಡಿ. ಇದು ನಿಮ್ಮ ಫೋನ್ ಅನ್ನು ವೇಗಗೊಳಿಸುತ್ತದೆ.

2. ಮುಖ್ಯ ಪರದೆಯನ್ನು ತೆರವುಗೊಳಿಸುವುದು
ನೀವು ಲೈವ್ ವಾಲ್‌ಪೇಪರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಅದನ್ನು ಆಗಾಗ್ಗೆ ಬದಲಾಯಿಸುತ್ತಿರಿ. ಅನಗತ್ಯ ವಿಜೆಟ್‌ಗಳ ನಿವಾರಣೆಯನ್ನು ಪದೇ ಪದೇ ಮಾಡಿ. ಇದು ಡಿವೈಸ್ ಅನ್ನು ವೇಗಗೊಳಿಸುತ್ತದೆ.

3.ಬಳಕೆಯಲ್ಲಿಲ್ಲದ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಿ ಮತ್ತು ಅನ್‌ಇನ್‌ಸ್ಟಾಲ್ ಮಾಡಿ
ನಿಮ್ಮ ಫೋನ್‌ನ ಹೆಚ್ಚಿನ ಸ್ಥಳವನ್ನು ನುಂಗಿಹಾಕುತ್ತಿರುವ ಅನಗತ್ಯ ಮತ್ತು ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ನಿವಾರಿಸಿ. ಸೆಟ್ಟಿಂಗ್ಸ್ ಹೋಗಿ ಅಪ್ಲಿಕೇಶನ್ ಆರಿಸಿ ನಂತರ 'ಆಲ್ ಟ್ಯಾಬ್' ಆಪ್ಶನ್ ಸ್ವೈಪ್ ಮಾಡಿ.

4.ತೆರವುಗೊಳಿಸಿದ ಕ್ಯಾಶ್‌ಡ್ ಅಪ್ಲಿಕೇಶನ್ ಡೇಟಾ
ನಿಮ್ಮ ಆಂಡ್ರಾಯ್ಡ್ ಅನ್ನು ವೇಗಗೊಳಿಸಲು ಕ್ಯಾಶ್‌ಡ್ ಅಪ್ಲಿಕೇಶನ್ ಡೇಟಾವನ್ನು ನೀವು ತೆರವುಗೊಳಿಸಬಹುದು. ನೀವು ಡೌನ್‌ಲೋಡ್ ಮಾಡುತ್ತಿರುವಾಗ ಅಥವಾ ಯಾವುದೇ ಡೇಟಾವನ್ನು ಬ್ರೌಸ್ ಮಾಡುತ್ತಿರುವಾಗ ಕ್ಯಾಶ್ಡ್ ಡೇಟಾ ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಆಗುತ್ತದೆ.

5. ಆಂಡ್ರಾಯ್ಡ್ ವೇಗಗೊಳಿಸಲು ಆಟೊ ಸಿಂಕ್ ಟರ್ನ್ ಆಫ್ ಮಾಡಿ
ಆಟೋ ಸಿಂಕ್ ಅನ್ನು ಕನಿಷ್ಟಗೊಳಿಸುವುದು ಅಥವಾ ಆಫ್ ಮಾಡುವುದು ನಿಮ್ಮ ಆಂಡ್ರಾಯ್ಡ್ ಅನ್ನು ವೇಗಗೊಳಿಸುತ್ತದೆ.

೬. ಫ್ಯಾಕ್ಟ್ರಿ ರೀಸೆಟ್
ಆಗಾಗ್ಗೆ ಫ್ಯಾಕ್ಟ್ರಿ ರೀಸೆಟ್ ಅನ್ನು ರೀಸಾರ್ಟ್ ಮಾಡುವುದು ಕೂಡ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುತ್ತದೆ. ನಿಮ್ಮ ಆಂಡ್ರಾಯ್ಡ್ ಡಿವೈಸ್ ಅನ್ನು ಸ್ವಚ್ಛವಾಗಿರಿಸಲು ಇದು ಸುಲಭ ಮಾರ್ಗವಾಗಿದೆ.

7. ಓವರ್ ಕ್ಲಾಕಿಂಗ್ ಡಿವೈಸ್
ನಿಮ್ಮ ಡಿವೈಸ್ ಅನ್ನು ಓವರ್ ಕ್ಲಾಕಿಂಗ್ ಮಾಡುವುದು ಕೂಡ ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುತ್ತದೆ.

English summary
This article tells about It can be a daunting task in pooling resources to purchase the latest smartphone. But the real picture comes out when you see that the much hyped speed and smooth performance is something of the distant past.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot