ನಿಮ್ಮ ಟೆಕ್ನಾಲಜಿ ಸ್ಕಿಲ್ ಹೆಚ್ಚಿಸಿಕೊಳ್ಳಲು ಇರುವ 8 ಉಚಿತ ಆನ್ ಲೈನ್ ಕೋರ್ಸ್ ಗಳ ವೆಬ್ ಸೈಟ್ ಗಳು

By Gizbot Bureau
|

ದಿನಗಳು ಉರುಳಿದಂತೆ ವಿದ್ಯಾಭ್ಯಾಸ ಅನ್ನುವುದು ದುಬಾರಿಯಾಗಿಬಿಟ್ಟಿದೆ ಎಂಬ ಮಾತು ಕೇಳಿಬರುತ್ತದೆ. ಆದರೆ ಐಟಿ ಸ್ಕಿಲ್ ಹೆಚ್ಚಿಸಿಕೊಳ್ಳಬೇಕು ಅಂದರೆ ನೀವು ಹೆಚ್ಚು ಪಾವತಿ ಮಾಡುವ ಅಗತ್ಯವಿಲ್ಲ. ಹೌದು ಮನೆಯಲ್ಲೇ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಇದ್ದು ಅಂತರ್ಜಾಲದ ಕನೆಕ್ಷನ್ ಇದ್ದರೆ ಸಾಕು, ನೀವು ದೊಡ್ಡ ದೊಡ್ಡ ಕೋರ್ಸ್ ಗಳನ್ನು ಕೂಡ ಉಚಿತವಾಗಿ ಮಾಡಿ ಮುಗಿಸಬಹುದು!

ಆನ್ ಲೈನ್ ನಲ್ಲೂ ಕೋರ್ಸ್ ಮಾಡುವ ಇಚ್ಛೆಯಿದ್ದರೆ ಈ ವೆಬ್ ಸೈಟ್ ಗಳನ್ನು ಗಮನಿಸಿ

ನಾವು ತಮಾಷೆ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ನಾವಿಲ್ಲಿ ನಿಮಗೆ 8 ಪ್ರಮುಖ ಆನ್ ಲೈನ್ ಎಜುಕೇಷನ್ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಿದ್ದೇವೆ. ಇವುಗಳು ಟೆಕ್ನಿಕಲ್ ವಿಚಾರಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ನೀಡುವ ಆನ್ ಲೈನ್ ವೆಬ್ ಸೈಟ್ ಗಳು.

ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಮತ್ತು ಅದರ ಇಂಡಸ್ಟ್ರಿಗೆ ಬೇಕಾಗುವ ಸ್ಕಿಲ್ ನ್ನು ನೀವು ಈ ಮೂಲಕ ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ನೀವು ನಿಮ್ಮ ಕರಿಯರ್ ನ ದಿಕ್ಕನ್ನು ಬದಲಾಯಿಸಿಕೊಳ್ಳಬೇಕು ಮತ್ತು ನಿಮ್ಮ ರೆಸ್ಯೂಮ್ ನಲ್ಲಿ ಹೊಸ ಆಸಕ್ತಿಯನ್ನು ಸೇರಿಸಿಕೊಳ್ಳಬೇಕು ಎಂದರೆ ನೀವು ಈ ವೆಬ್ ಸೈಟ್ ಗಳಿಗೆ ಒಮ್ಮೆ ಭೇಟಿ ನೀಡಬಹುದು.

ಟೆಕ್ನಿಕಲ್ ಸ್ಕಿಲ್ ಗಾಗಿ ಇರುವ 8 ಆನ್ ಲೈನ್ ಎಜುಕೇಷನ್ ಸೈಟ್ ಗಳು

ಕೋಡ್ ಎಕಾಡಮಿ(Codeacademy)

ಕೋಡ್ ಎಕಾಡಮಿ(Codeacademy)

ಕೋಡ್ ಅಕಾಡಮಿಯು ಉಚಿತ ಕೋಡಿಂಗ್ ಕ್ಲಾಸ್ ಗಳನ್ನು 12 ಪ್ರೋಗ್ರಾಮಿಂಗ್ ಮತ್ತು ಮಾರ್ಕ್ ಅಪ್ ಭಾಷೆಗಳಲ್ಲಿ ಅಂದರೆ ಪೈಥಾನ್, ರುಬಿ,ಜಾವಾ ಸ್ಕ್ರಿಪ್ಟ್, ಜಾವಾ, ಜೆಕ್ವೆರಿ, ರಿಯಾಕ್ಟ್.ಜೆಎಸ್, ಆಂಗುಲರ್ ಜೆಎಸ್, HTML, ಸಾಸ್ ಮತ್ತು ಸಿಎಸ್ಎಸ್ ಗಳನ್ನು ಉಚಿತವಾಗಿ ನೀಡುತ್ತದೆ. ಸಾಕಷ್ಟು ಅನುಭವವನ್ನು ಮತ್ತು ರಿಯಲ್ ಟೈಮ್ ಫೀಡ್ ಬ್ಯಾಕ್ ನ್ನು ಈ ಕೋರ್ಸ್ ಗಳಲ್ಲಿ ನೀಡುವ ಭರವಸೆ ನೀಡಲಾಗುತ್ತದೆ. ಒಂದು ವೇಳೆ ನೀವು ಕೂಡ ಈ ಕೋರ್ಸ್ ಗಳನ್ನು ಇಷ್ಟಪಟ್ಟರೆ ಪ್ರತಿ ತಿಂಗಳಿಗೆ 19.99 ಡಾಲರ್ ಪಾವತಿ ಮಾಡಿ ಕೋಡ್ ಅಕಾಡಮಿಗೆ ಸೈನ್ ಅಪ್ ಆಗಬಹುದು. ಸಾಕಷ್ಟು ಪ್ರೊಜೆಕ್ಟ್ ಗಳು ಇದರಲ್ಲಿ ಲಭ್ಯವಾಗುತ್ತದೆ. ಬೇಸಿಕ್ ಕೋರ್ಸ್ ಗಳು ಇದರಲ್ಲಿ ಉಚಿತವಾಗಿರುತ್ತದೆ. ಒಂದು ವೇಳೆ ನೀವು ಸ್ವತಃ ಕಾರ್ಯ ನಿರ್ವಹಿಸುವ ಕೆಲಸಗಾರರಾಗಿದ್ದಲ್ಲಿ ಖಂಡಿತ ಇದು ಸಹಕಾರಿಯಾಗಿರುತ್ತದೆ.

ಡ್ಯಾಷ್ ಜನರಲ್ ಎಸ್ಸೆಂಬ್ಲಿ

ಡ್ಯಾಷ್ ಜನರಲ್ ಎಸ್ಸೆಂಬ್ಲಿ

ಸಾಕಷ್ಟು ಲಾಭದಾಯಕವಾಗಿರುವ ಎಜುಕೇಷನ್ ಆರ್ಗನೈಜೇಷನ್ ಡ್ಯಾಷ್ ಜನರಲ್ ಎಸ್ಸೆಂಬ್ಲಿ. ಆದರೆ ಅವರು ಉಚಿತವಾಗಿಯೂ ಕೂಡ ವೆಬ್ ಡೆವಲಪ್ ಮೆಂಟ್ ನ ಬೇಸಿಕ್ ವಿಚಾರಗಳ ಬಗೆಗಿನ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಆಫರ್ ಮಾಡುತ್ತಾರೆ. ಹೆಚ್ ಟಿಎಂಎಲ್ ಬಳಸುವುದು ಹೇಗೆ CSS ಮತ್ತು ಜಾವಾ ಸ್ಕ್ರಿಪ್ಟ್ ಬಗೆಗಿನ ವಿಚಾರಗಳನ್ನು ಡ್ಯಾಷ್ ಜನರಲ್ ನಲ್ಲಿ ತಿಳಿಸಲಾಗುತ್ತದೆ. ಈ ಕಾರ್ಯಕ್ರಮವು ಉಚಿತವಾಗಿರುತ್ತದೆ ಮತ್ತು ಆನ್ ಲೈನ್ ನಲ್ಲೇ ಮಾಡಬಹುದು.

EdX

EdX

ಶಾಲೆಗಳು, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ನಿಗಮಗಳು ಅಭಿವೃದ್ಧಿಪಡಿಸಿದ ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣದೊಂದಿಗೆ ಬೃಹತ್ ಮುಕ್ತ ಆನ್ಲೈನ್ ಕೋರ್ಸ್ (MOOC) ಒದಗಿಸುವ ಸಂಸ್ಥೆ ಇದಾಗಿದೆ. ಬಳಕೆದಾರರಿಗೆ ಇದನ್ನು ಉಚಿತವಾಗಿ ನೀಡಲಾಗುತ್ತದೆ. MITಮತ್ತು Harvard ನಿಂದ ಇದು ಉಚಿತವಾಗಿರುತ್ತದೆ. ಶಾರ್ಟ್ ವೀಡಿಯೋಗಳು, ಇಂಟರ್ಯಾಕ್ಟೀವ್ ಲರ್ನಿಂಗ್ ಎಕ್ಸರ್ಸೈಜ್, ಟ್ಯೂಟೋರಿಯಲ್ ವೀಡಿಯೋಗಳು, ಆನ್ ಲೈನ್ ಟೆಕ್ಸ್ಟ್ ಬುಕ್ ಗಳು ಮತ್ತು ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಸಂವಹನ ನಡೆಸಿ ಅಧ್ಯಯನ ಮಾಡಲು ಅವಕಾಶ, ಪ್ರಶ್ನೆ ಮಾಡುವುದಕ್ಕೆ ಅವಕಾಶ ಇತ್ಯಾದಿಗಳು ಇದರಲ್ಲಿ ಲಭ್ಯವಿದ್ದು ನೀವು ಸರ್ಟಿಫಿಕೇಟ್ ನ್ನು ಕೂಡ ಪಡೆಯುತ್ತೀರಿ.

ಹಾರ್ವರ್ಡ್ ಆನ್ ಲೈನ್ ಲರ್ನಿಂಗ್

ಹಾರ್ವರ್ಡ್ ಆನ್ ಲೈನ್ ಲರ್ನಿಂಗ್

ಹಾರ್ವರ್ಡ್ ಕೂಡ ಆನ್ ಲೈನ್ ಆಕ್ಸಿಸ್ ಮಾಡಲು ಅವಕಾಶ ನೀಡುತ್ತದೆ. ಕೋರ್ಸ್ ಮೆಟಿರಿಯಲ್, ಲೆಕ್ಚಕ್, ಪ್ರೊಗ್ರಾಮ್ಸ್ ಮತ್ತು ಇತರೆ ಎಜುಕೇಷನ್ ಕಂಟೆಂಟ್ ಗಳನ್ನು ಉಚಿತವಾಗಿ ನೀಡುತ್ತದೆ. ಹಾರ್ವರ್ಡ್ ಎಜುಕೇಷನ್ ನ್ನು ಪಡೆಯಲು ಇಚ್ಛಿಸಿದ್ದು ಅದು ಸಾಧ್ಯವಾಗದವರಿಗೆ ಈ ಅವಕಾಶವನ್ನು ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.ಕಟೆಂಟ್ ಪ್ರೊವೈಡರ್, ಗೆಟ್ ಸ್ಮಾರ್ಟರ್, ಹಾರ್ವರ್ಡ್ ಎಕ್ಸ್, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಇತ್ಯಾದಿ ಕಟೆಂಟ್ ಗಳನ್ನು ಇದು ಒಳಗೊಂಡಿರುತ್ತದೆ. ಯಾವುದೇ ಟ್ಯೂಷನ್ ಬಿಲ್ ಇಲ್ಲದೆ ನೀವು ಹಾರ್ವಡ್ ಎಜುಕೇಷನ್ ಪಡೆಯುವುದಕ್ಕೆ ಇದರಲ್ಲಿ ಸಾಧ್ಯವಿದೆ.

ಖಾನ್ ಅಕಾಡಮಿ

ಖಾನ್ ಅಕಾಡಮಿ

ಖಾನ್ ಅಕಾಡಮಿಯು 2006 ರಲ್ಲಿ ಡೆವಲಪ್ ಆಗಿರು ಲಾಭಮುಕ್ತ ಎಜುಕೇಷನ್ ಸಂಸ್ಥೆಯಾಗಿದೆ. ಆನ್ ಲೈನ್ ನಲ್ಲಿ ಉಚಿತವಾಗಿ ಎಜುಕೇಷನ್ ನೀಡುವ ಉದ್ದೇಶವನ್ನು ಇದು ಹೊಂದಿದೆ. ಯುಟ್ಯೂಬ್ ವೀಡಿಯೋಗಳ ಮೂಲಕ ಎಜುಕೇಷನ್ ನೀಡುವ ಉದ್ದೇಶವನ್ನು ಇದು ಹೊಂದಿದೆ.ಮೊಬೈಲ್ ಡಿವೈಸ್ ನಲ್ಲಿಯೋ ಕೋರ್ಸ್ ಗಳನ್ನು ಆಕ್ಸಿಸ್ ಮಾಡಬಹುದು. ಸಾಕಷ್ಟು ಭಾಷೆಗಳಲ್ಲಿ ಇದು ಲಭ್ಯವಿದೆ. 20,000 ಭಾಷೆಗಳ ಸಬ್ ಟೈಟಲ್ ಕೂಡ ಸಿಗುತ್ತದೆ. ಫಾರ್ಮಲ್ ಎಜುಕೇಷನ್ ಪಡೆಯಲು ಸಾಧ್ಯವಾಗವರು ಇಲ್ಲಿ ಖಂಡಿತ ಎಜುಕೇಷನ್ ಪಡೆಯಬಹುದು.

ಲಿಂಕ್ಡ್ ಇನ್ ನಿಂದ ಲಿಂಡಾ.ಕಾಮ್

ಲಿಂಕ್ಡ್ ಇನ್ ನಿಂದ ಲಿಂಡಾ.ಕಾಮ್

ಲಿಂಡಾ.ಕಾಮ್ ನ್ನು 1995 ರಲ್ಲಿ ಲಿಂಡ್ರಾ ವೈನ್ಮ್ಯಾನ್ ಅಭಿವೃದ್ಧಿ ಪಡಿಸಿದರು. ಇವರು ಸ್ಪೆಷಲ್ ಎಫೆಕ್ಟ್ ಎನಿಮೇಟರ್ ಮತ್ತು ಮಲ್ಟಿಮೀಡಿಯಾ ಪ್ರೊಫೆಸರ್ ಆಗಿದ್ದರು ಮತ್ತು ತನ್ನ ಗಂಡನ ಜೊತೆಗೆ ಡಿಜಿಟಲ್ ಆರ್ಟ್ ಸ್ಕೂಲ್ ನ್ನು ಕೂಡ ತೆರೆದಿದ್ದಾರೆ. ಪ್ರಾರಂಭಿಕವಾಗಿ ಆನ್ ಲೈನ್ ಬುಕ್ಸ್ ಮತ್ತು ಕ್ಲಾಸ್ ಗಳು ಲಭ್ಯವಾಗುತ್ತಿತ್ತು. 2002 ರಲ್ಲಿ ಉಚಿತ ಕೋರ್ಸ್ ಗಳನ್ನು ಕೂಡ ಪ್ರಾರಂಭಿಸಲಾಯಿತು.

ಇದನ್ನು 2016 ರಲ್ಲಿ ಲಿಂಕ್ಡ್ ಇನ್ ಖರೀದಿ ಮಾಡಿದೆ. ಟೆಕ್ನಿಕಲ್ ವಿಚಾರಗಳ ಬಗೆಗೆ ಸಾಕಷ್ಟು ಕೋರ್ಸ್ ಗಳನ್ನು ಇಲ್ಲಿ ಆಫರ್ ಮಾಡಲಾಗುತ್ತದೆ. ಒಂದು ತಿಂಗಳಿಗೆ ಉಚಿತವಾಗಿ ನೀವು ನೋಡಬಹುದು ಮತ್ತು ನಂತರ ನೀವು 29 ಡಾಲರ್ ನ್ನು ಪ್ರತಿ ತಿಂಗಳಿಗೆ ಪಾವತಿಸಬೇಕಾಗುತ್ತದೆ ಅಥವಾ 24 ಡಾಲರ್ ಪಾವತಿಸಿ ವಾರ್ಷಿಕ ಚಂದಾದಾರಿಕೆಯನ್ನು ಕೂಡ ಪಡೆಯಬಹುದು.

MIT ಓಪನ್ ಕೋರ್ಸ್ ವೇರ್

MIT ಓಪನ್ ಕೋರ್ಸ್ ವೇರ್

2001 ರಲ್ಲಿ ಎಂಐಟಿ ಯುನಿರ್ವಸಿಟಿಯು ಇದನ್ನು ಬಿಡುಗಡೆಗೊಳಿಸಿದೆ. ಪದವಿ ಮತ್ತು ಪದವಿ ಪೂರ್ವ ಲೆವೆಲ್ಲಿನ ಮೆಟಿರಿಯಲ್ ಗಳು ಉಚಿತವಾಗಿ ಆನ್ ಲೈನ್ ನಲ್ಲಿ ಸಿಗುತ್ತದೆ. ಇದು ಮೊದಲ ಉಚಿತ ಕೋರ್ಸ್ ಗಳನ್ನು ನೀಡಿದ ಯುನಿವರ್ಸಿಟಿಯಾಗಿದೆ. ಎಂಐಟಿ ಅನುಸರಿಸಿದ ಮಾದರಿಯನ್ನು ಸುಮಾರು 250 ಇತರೆ ಕಾಲೇಜುಗಳು ಅನುಸರಿಸಿದೆ. 2018 ರಲ್ಲಿ 100 ಕೋರ್ಸ್ ಗಳಿಗೆ ಸಂಪೂರ್ಣ ವೀಡಿಯೋ ಲೆಕ್ಚರ್ ನ್ನು ಎಂಐಟಿ ಉಚಿತವಾಗಿ ಆನ್ ಲೈನ್ ಗೆ ಸೇರಿಸಿದೆ.

ಯುಡೇಮೈ

ಯುಡೇಮೈ

ಯುಡೇಮೈ ಪ್ರೊಫೆಷನಲ್ ಗಳನ್ನು ಟಾರ್ಗೆಟ್ ಮಾಡಿದ್ದು ಯಾರು ಕೆಲಸಕ್ಕೆ ಹೋಗುತ್ತಲೇ ಓದಬೇಕು ಎಂದು ಬಯಸುತ್ತಾರೋ ಅವರಿಗೆ ಅವಕಾಶ ನೀಡುವ ಪರಿಕಲ್ಪನೆಯನ್ನು ಹೊಂದಿದೆ. ಕೆಲವು ಕೋರ್ಸ್ ಗಳು ಉಲ್ಲಿ ಉಚಿತವಾಗಿರುತ್ತದೆ. ಆದರೆ ಕೆಲವು ಕೋರ್ಸ್ ಗಳಿಗೆ ನೀವು ಪಾವತಿ ಮಾಡಬೇಕಾಗುತ್ತದೆ. ಇದು ನೀವು ಯಾವ ಕೋರ್ಸ್ ಪಡೆಯುತ್ತಿರಿ ಮತ್ತು ಅದಕ್ಕೆ ಯಾವ ಲೆಕ್ಚರ್ ಬೇಕು ಎಂಬುದನ್ನು ಆಧರಿಸಿರುತ್ತದೆ. ಕಡಿಮೆ ಬೆಲೆಯಲ್ಲೇ ನಿಮಗೆ ಇದು ಸಾಧ್ಯವಾಗುತ್ತದೆ. 9.99 ಡಾಲರ್ ಮೊತ್ತವನ್ನು ಪಾವತಿಸಿದರೆ ಉಚಿತವಲ್ಲದ ಕೋರ್ಸ್ ಗಳು ಕೂಡ ಕೈಗೆಟುಕುತ್ತದೆ.

Most Read Articles
Best Mobiles in India

Read more about:
English summary
8 free online course sites for growing your tech skills

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more