ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!

By Suneel
|

ವೈಜ್ಞಾನಿಕ ಬರಹಗಳಲ್ಲಿ (ಕಾಲ್ಪನಿಕ ವಿಜ್ಞಾನ ಬರಹಗಳು) ಹಲವರು ತಮ್ಮ ಕಲ್ಪನೆಯಲ್ಲಿ ಬರೆದ ಟೆಕ್ನಾಲಜಿ ವಿಷಯಗಳು ಪ್ರಸ್ತುತ ಆಧುನಿಕ ಜಗತ್ತಿಗೆ ವರವಾಗಿವೆ. ಆದ್ರೆ ಲೇಟೆಸ್ಟ್‌ ವಿಷಯ ಅಂದ್ರೆ ಕೆಲವು ಸೈಂಟಿಫಿಕ್‌ ಸಿನಿಮಾಗಳಲ್ಲಿ ಬಳಸಿದ ಟೆಕ್ನಾಲಜಿಗಳನ್ನು ಇಂದು ವಾಸ್ತವವಾಗಿ ಅಭಿವೃದ್ದಿಪಡಿಸಲಾಗಿದೆ.

2016'ರ ಸುಂದರ/ಹಾಟೆಸ್ಟ್‌ ಟೆಕ್‌ ಮಹಿಳೆಯರು ಯಾರು ಗೊತ್ತೇ?

ಉದಾಹರಣೆಗೆ 'ಮೆಟ್ರಿಕ್ಸ್‌' ಸಿನಿಮಾದಲ್ಲಿ ಆಕ್ಟರ್‌ಗಳು ಬಳಸಿರುವ ಕೆಲವು ಟೆಕ್ನಾಲಜಿಗಳು ಇಂದು ಸಾಮಾನ್ಯ ಜನರ ಕೈ ಸೇರಿವೆ. ವಿಶೇಷ ಅಂದ್ರೆ ಇಂದು ಹೆಚ್ಚು ಪ್ರಖ್ಯಾತವಾಗಿರುವ ಟೆಕ್‌ಗಳು ಜನರ ಕೈ ಸೇರುವ ಮುನ್ನ ಫೇಮಸ್‌ ಸಿನಿಮಾಗಳಲ್ಲಿ ಬಳಕೆಯಾಗಿವೆ. ಅಲ್ಲದೇ ಜನರು ದಿನನಿತ್ಯ ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂತಹ ಕುತೂಹಲಕಾರಿ ಟೆಕ್‌ ಪ್ರಾಡಕ್ಟ್‌ಗಳು ಯಾವುವು ಎಂದು ಇಂದಿನ ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

1

1

ಸ್ಮಾರ್ಟ್‌ಫೋನ್‌ ಇಂದು ವ್ಯಕ್ತಿಯ ದಿನನಿತ್ಯದ ಮೂಲಭೂತ ವಸ್ತುಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್ ಮೊದಲು 'ಸ್ಟಾರ್‌ ಟ್ರೆಕ್' ಸಿನಿಮಾದಲ್ಲಿ ಕಾಲ್ಪನಿಕವಾಗಿ ಕಾಣಿಸಿಕೊಂಡಿತು. 1966 ರಲ್ಲಿ ಮೊದಲು ಬಿಡುಗಡೆಗೊಂಡ 'ಸ್ಟಾರ್‌ ಟ್ರೆಕ್‌' ಸೀರೀಸ್‌ನಲ್ಲಿ ಹ್ಯಾಂಡ್‌ಸೆಟ್‌ 'Tricoder' ಎಂದು ಹೆಸರು ಪಡೆಯಿತು. ನಂತರ ಈಗ ಸ್ಮಾರ್ಟ್‌ಫೋನ್‌ ಹೇಗೇಗೆಲ್ಲಾ ಬಂದಿದೆ ಎಂಬುದು ನಿಮಗೆ ಗೊತ್ತೇ ಇದೆ.

2

2

ಟೆಕ್‌ ಕಂಪನಿಗಳಿಗೆ ಮತ್ತು ಟೆಕ್‌ ಪ್ರಿಯರಿಗೆ 'ವರ್ಚುವಲ್‌ ರಿಯಾಲಿಟಿ' ಇಂದು ಹಾಟೆಸ್ಟ್‌ ಸಿಗ್ಮೆಂಟ್‌ ಆಗಿದೆ. ವರ್ಚುವಲ್‌ ರಿಯಾಲಿಟಿ ಮೊದಲು 'ಮೆಟ್ರಿಕ್ಸ್‌' ಸಿನಿಮಾದಲ್ಲಿ ಕಾಣಿಸಿಕೊಂಡಿತು. ಮೆಟ್ರಿಕ್ಸ್‌ ಸಿನಿಮಾದಲ್ಲಿ ತೋರಿಸಿದ ಹೊರಜಗತ್ತು ಇಂದು ವರ್ಚುವಲ್‌ ರಿಯಾಲಿಟಿ ಮೂಲಕ ಜನರ ಕೈಗೆ ಸಿಗುತ್ತಿದೆ.

3

3

ಹಲವು ವರ್ಷಗಳ ನಂತರ ಸ್ಮಾರ್ಟ್‌ವಾಚ್‌ಗಳು ಸಹ ಇಂದು ನಮ್ಮ ನಿತ್ಯ ಜೀವನದ ಭಾಗವಾಗುತ್ತಿವೆ. ಆದರೆ ಸ್ಮಾರ್ಟ್‌ವಾಚ್‌ ಐಡಿಯಾ 1962 ರ ಹಿಂದೆ 'ಜೆಟ್‌ ಸನ್ಸ್‌'ರ ಆನಿಮೇಷನ್‌ ಆಧಾರಿತ ಕಾರ್ಟೂನ್‌ ಸೀರೀಸ್‌ನಲ್ಲಿ ಕಾಣಿಸಿಕೊಂಡಿತ್ತು. ಸ್ಮಾರ್ಟ್‌ವಾಚ್‌ ಮಾತ್ರವಲ್ಲದೇ ಕಾರ್ಟೂನ್‌ ಸೀರೀಸ್‌ನಲ್ಲಿ ಫ್ಲೈಯಿಂಗ್‌ ಕಾರ್‌ಗಳು, ಐಓಟಿ ಡಿವೈಸ್‌ಗಳು ಮತ್ತು ಇತರೆ ಕಾಣಿಸಿಕೊಂಡಿವೆ.

4

4

ಥ್ರಿಲ್ಲಿಂಗ್‌ ಆಗಿರೊ ವೀಡಿಯೊ ಕರೆ ದೃಶ್ಯವನ್ನು 1968 ರಲ್ಲಿ ಬಿಡುಗಡೆಯಾದ '2001; A Space Odyssey' ಸಿನಿಮಾದಲ್ಲಿ ನೋಡಿದ ಎಲ್ಲರೂ ಸಹ ಪುಳಕಿತರಾದರು. ನಂತರದಲ್ಲಿ ವೀಡಿಯೊ ಕರೆ ಫೀಚರ್‌ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿತು. ಆದರೆ 2003 ರಲ್ಲಿ ವೀಡಿಯೋ ಕರೆ ಮಾಡಲು 'Skype' ಆಪ್‌ ರಿಯಲ್‌ ಆಗಿ ಬಂದಿತು.

5

5

'Minority Report' ಸಿನಿಮಾದಲ್ಲಿ ಮೊದಲು ಫ್ಯೂಚರ್ ಟೆಕ್ನಾಲಜಿ 'ಮೋಶನ್‌ ಸೆನ್ಸಾರ್‌ ತಂತ್ರಜ್ಞಾನವನ್ನು ತೋರಿಸಲಾಗಿತ್ತು. ಮೋಶನ್‌ ಸೆನ್ಸಾರ್‌ ಟೆಕ್ನಾಲಜಿಯಿಂದ ವ್ಯಕ್ತಿಯು ಮಾಡುವ ಅಪರಾಧವನ್ನು ಮೊದಲೇ ತಿಳಿಯಬಹುದಾದ ಫೀಚರ್‌ ಅನ್ನು ಹೊಂದಿರುವ ಬಗ್ಗೆ ಹೇಳಲಾಗಿತ್ತು.

6

6

ಹಾವರ್‌ ಬೋರ್ಡ್‌ ಟೆಕ್ನಾಲಜಿ ಇಂದು ಕೆಲವು ಜನರು ಮಾತ್ರ ಬಳಸದೇ ನಮ್ಮ ಸುತ್ತಮುತ್ತಲೇ ಇರುವ ಟೆಕ್ನಾಲಜಿ. ಹಿಂದಿನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡು 'ಸಬ್‌ವೆ ಸರ್ಫರ್ಸ್' ಗೇಮ್‌ ಸಹ ಆಗಿತ್ತು. ಲೆಕ್ಸಸ್‌ ಕಳೆದ ವರ್ಷ ಗಾಳಿಯಲ್ಲಿ ತೇಲುವ ಹಾವರ್‌ಬೋರ್ಡ್‌ ಅನ್ನು ರಚಿಸಿತ್ತು.

7

7

ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ಸೆಲ್ಫ್‌ ಟೈಯಿಂಗ್‌ ಶೂಗಳನ್ನು 'ನೈಕ್‌' ಕಂಪನಿ ಇತ್ತೀಚೆಗೆ ಅನಾವರಣ ಮಾಡಿತ್ತು.

8

8

ಡ್ರೈವರ್‌ ಇಲ್ಲದ ಕಾರನ್ನು ಹಲವು ಸಿನಿಮಾಗಳಲ್ಲಿ, ಅದರಲ್ಲೂ ಹಾಲಿವುಡ್‌ ಮತ್ತು ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಹೆಚ್ಚು ನೋಡಿರುತ್ತೀರಿ. ಆದರೆ ಇತ್ತೀಚೆಗೆ ಗೂಗಲ್‌ ಡ್ರೈವರ್‌ ಇಲ್ಲದ ಕಾರನ್ನು ಬಿಡುಗಡೆ ಮಾಡಿತ್ತು. 'Total Recall' ಎಂಬ 90 ದಶಕದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಡ್ರೈವರ್‌ ಇಲ್ಲದ ಕಾರನ್ನು ಇಂದು ಹಲವು ಟೆಕ್‌ ಕಂಪನಿಗಳು ನಿರ್ಮಿಸುತ್ತಿವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊದಲನೇ ಮಹಾಯುದ್ಧ ಸಂದರ್ಭದ ಕಪ್ಪು ಬಿಳುಪು ಫೋಟೋಗಳುಮೊದಲನೇ ಮಹಾಯುದ್ಧ ಸಂದರ್ಭದ ಕಪ್ಪು ಬಿಳುಪು ಫೋಟೋಗಳು

100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌ 100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಲೇಖನಗಳು

Best Mobiles in India

English summary
8 scifi movie technologies that are real now, check in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X