2016'ರ ಸುಂದರ/ಹಾಟೆಸ್ಟ್‌ ಟೆಕ್‌ ಮಹಿಳೆಯರು ಯಾರು ಗೊತ್ತೇ?

By Suneel
|

ಆಧುನಿಕ ಜಗತ್ತಿನಲ್ಲಿ ಟೆಕ್ನಾಲಜಿ ಬಳಕೆಯಿಲ್ಲದೇ ಯಾವುದೇ ಅಭಿವೃದ್ದಿಗಾಗಿ ಒಂದು ಹೆಜ್ಜೆಯನ್ನು ಸಹ ಮುಂದಿಡಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಮನುಷ್ಯನನ್ನು ಅಪ್‌ಡೇಟ್‌ ಮಾಡುತ್ತಿರುವುದು ಟೆಕ್ನಾಲಜಿಗಳು.

ಆಧುನಿಕಿ ಜಗತ್ತು ಅಪ್‌ಡೇಟ್‌ ಆಗಲು, ಟೆಕ್ನಾಲಜಿಯ ಅತ್ಯುತ್ತಮ ಗಿಫ್ಟ್‌ಗಳನ್ನು ನೀಡಲು ಹಲವಾರು ಟೆಕ್‌ ದಿಗ್ಗಜರು ಶ್ರಮವಹಿಸಿದ್ದಾರೆ. ಅವರಲ್ಲಿ ಪುರುಷರು ಮಾತ್ರವಲ್ಲದೇ ಹಲವು ಮಹಿಳೆಯರು ಸಹ ಟೆಕ್‌ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇಂದಿನ ಲೇಖನದಲ್ಲಿ ಕೇವಲ ಸೌಂದರ್ಯಕ್ಕೆ ಮಾತ್ರ ಪ್ರಖ್ಯಾತವಾಗದೆ ಟೆಕ್‌ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ 2016 ರ ಅತೀ ಸುಂದರಿಯರು ಹಾಗೂ ಹಾಟೆಸ್ಟ್‌ ಟೆಕ್‌ ವುಮೆನ್‌ಗಳು ಯಾರು ಎಂದು ಪರಿಚಯಿಸುತ್ತಿದ್ದೇವೆ. ಅವರು ಯಾರು ಎಂಬುದನ್ನು ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?

1

1

ಮೊರ್ಗನ್ ವೆಬ್ಬ್'ರವರು ನೋಡಲು ಕೇವಲ ಸುಂದರಿಯಲ್ಲದೇ ಟೆಕ್‌ ಬ್ಯುಸಿನೆಸ್‌ ಸಂಬಂಧಿಸಿದಂತೆ ಅಪಾರ ಮಾಹಿತಿ ತಿಳಿದವರು. ಇವರ ಸೌಂದರ್ಯ FHM ನಿಯತಕಾಲಿಕೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಲ್ಲದೇ, ಬರವಣಿಗೆ ಕಲೆಯಿಂದ ಗೇಮಿಂಗ್‌ ಅಂಕಣದಿಂದ ಹಲವು ನಿಯತಕಾಲಿಕೆಗಳಿಗೆ ಕೊಡುಗೆ ನೀಡಿದ್ದಾರೆ.

2

2

'ಅಮಂಡಾ ಮೆಕ್ಕೇ' ರವರು ಸುಂದರ ರೂಪದರ್ಶಿ ಮಾತ್ರವಲ್ಲದೇ, ದೂರದರ್ಶನ ನಿರೂಪಕಿ, ಪತ್ರಕರ್ತೆ, ಎಂಟಿವಿ ಕೆನಡಾ ನಿರೂಪಕಿಯಾಗಿ, G4 ಟೆಕ್ ಟಿವಿ ನಿರೂಪಕಿಯಾಗಿ ಮತ್ತು ಗೇಮ್ಸ್‌ಟ್ರೈಲರ್‌ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಪಂಚದ ಟೆಕ್‌ ಪತ್ರಕರ್ತೆಯರ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿದ್ದಾರೆ.

3

3

'ಜೇಡ್ ರೇಮಂಡ್' ಉತ್ತಮ ಬುದ್ಧಿವಂತಿಕೆಗೆ ಮತ್ತು ಸೌಂದರ್ಯವತಿ ಎಂಬ ಎರಡು ಗುಣಕ್ಕೂ ಉದಾಹರಣೆಯಾಗಿದ್ದಾರೆ. ಇವರು ಉತ್ತಮ ವೀಡಿಯೊ ಗೇಮ್‌ ರಚನೆಕಾರರಾಗಿದ್ದು, ಮೊದಲು ಸೋನಿಯಲ್ಲಿ ವೃತ್ತಿ ಆರಂಭಿಸಿದರು. ಅಸ್ಸಾಸ್ಸಿನ್‌ ಕ್ರೀಡ್‌ ಎಂಬ ಆಕ್ಷನ್‌ ಅಡ್ವೆನ್‌ಚರ್‌ ವೀಡಿಯೋ ಗೇಮ್‌ ಅನ್ನು ರಚಿಸಿದ್ದಾರೆ. ಅಲ್ಲದೇ ಯುಪಿಸಾಫ್ಟ್‌ ಟೊರೊಂಟೊ ಸಂಸ್ಥಾಪಕರು ಸಹ ಹೌದು.

4

4

'ಅಂಬರ್ ಮ್ಯಾಕ್ಆರ್ಥರ್'ರವರು ಕೆನೆಡಾದ ದೂರದರ್ಶನ ಮತ್ತು ನೆಟ್‌ಕಾಸ್ಟಿಂಗ್‌ ಪರ್ಸನಾಲಿಟಿ. ಪ್ರಸ್ತುತದಲ್ಲಿ ಮಾರ್ಕ್‌ಅರ್ಥರ್‌ BNN ಆಪ್‌ ಕೇಂದ್ರದ ಸಹ ನಿರೂಪಕಿಯಾಗಿದ್ದಾರೆ.

5

5

ಟೆಕ್‌ ಕ್ಷೇತ್ರದ ಅತ್ಯುತ್ತಮ ವ್ಯಾಪಾರಿಕರಣ ಟ್ರಿಕ್‌ ತಿಳಿದಿರುವ ಹಾಟೆಸ್ಟ್‌ ಮಹಿಳೆಯರಲ್ಲಿ 'ಗಿನಾ ಬಿಯಾನ್‌ಛಿನಿ' 10 ರಲ್ಲಿ ಒಬ್ಬರಾಗಿದ್ದಾರೆ. ಇವರು 'ನಿಂಗ್' ಸಾಮಾಜಿಕ ತಾಣದ ಸಿಇಓ ಆಗಿದ್ದಾರೆ.

6

6

ಪ್ರಪಂಚದ ಅತ್ಯುತ್ತಮ ಆನ್‌ಲೈನ್‌ ಮೀಡಿಯಾ ಪರ್ಸನಾಲಿಟಿ 'ವೆರೋನಿಕಾ ಬೆಲ್ಮಾಂಟ್'. ಇವರು Qore ನಿರೂಪಕರಾಗಿದ್ದು, ಇದು ವೀಡಿಯೋ ಬೇಡಿಕೆ ಕಾರ್ಯಕ್ರಮ.

7

7

ತಮ್ಮ ಕ್ಯೂಟ್‌ ಫೇಸ್‌ ಮತ್ತು ಪ್ರೀತಿಯ ಮುಗುಳ್ನಗು ಇರುವ ಹಾಟೆಸ್ಟ್‌ 'ನಟಾಲಿ ಡೆಲ್‌ ಕಾಂಟೆ ' ರವರು ಟೆಕ್‌ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇವರು ಪ್ರಖ್ಯಾತ ಟೆಕ್ನಾಲಜಿ ನ್ಯೂಸ್‌ ಪತ್ರಕರ್ತೆ. ಅಲ್ಲದೇ ಆನ್‌ಲೈನ್‌ ಮೀಡಿಯಾ ಪರ್ಸನಾಲಿಟಿ ಸಹ ಆಗಿದ್ದಾರೆ. CNET'ಯ 'Loaded'ನ ನ್ಯೂಸ್‌ ನಿರೂಪಕರು ಸಹ ಹೌದು. ಇವರ ಈ ಸಾಧನೆ ವಿಶ್ಲೇಷಿಸಲಾಗದ ಟ್ಯಾಲೆಂಟ್‌ನಿಂದ.

8

8

'ಸುಸನ್‌ ವು' ಪ್ರಪಂಚದ ಪ್ರಖ್ಯಾತ ಆನ್‌ಲೈನ್‌ ಗೇಮಿಂಗ್‌ ವೆಬ್‌ಸೈಟ್‌ 'ohai.com'ನ ಸಿಇಓ. ಅತ್ಯುತ್ತಮ ಬ್ಯುಸಿನೆಸ್ ಮಾರ್ಗದರ್ಶಕರು ಸಹ ಹೌದು. ಹಲವು ಹೆಸರಾಂತ ಟೆಕ್‌ ಕಂಪನಿಗಳಲ್ಲಿ ವೃತ್ತಿ ನಿರ್ವಹಿಸಿದ್ದಾರೆ.

9

9

ಅಮಂಡ ಕಾಂಗ್‌ಡನ್‌'ರವರು ABC'ಯ ಹೆಸರಾಂತ ನಿರೂಪಕರು ಮತ್ತು ನಿರ್ಮಾಪಕರು. ಅವರ ಬರವಣಿಗೆ ಶೈಲಿ ಯಾವುದೇ ಕಲೆಯನ್ನು ಸರಳವಾಗಿ ಆಕರ್ಷಿತವಾಗಿ ವಿವರಿಸುವ ಟ್ಯಾಲೆಂಟ್‌ ಹೊಂದಿದ್ದು, ಹೆಚ್ಚು ತಂತ್ರಜ್ಞಾನ ಕುರಿತು ನಿರೂಪಿಸುತ್ತಾರೆ. ತಮ್ಮ ವೈಟ್‌ ಬ್ಯೂಟಿಯಿಂದ ಸ್ಕ್ರೀನ್‌ ಅನ್ನೇ ನಾಚಿಸುವಷ್ಟು ಅಂದವಾಗಿದ್ದಾರೆ. ಬ್ಯೂಟಿ ಮತ್ತು ಬ್ಯುಸಿನೆಸ್‌ನಲ್ಲಿ ತಾವೆ ಯಾವಾಗಲು ಮುಂದು ಎನ್ನುವಷ್ಟು ಸಮರ್ಥರಾಗಿದ್ದಾರೆ. ಆನ್‌ಲೈನ್‌ ಡೈಲಿ ನ್ಯೂಸ್‌ ನಿರೂಪಕರಾಗಿದ್ದು, ವೀಡಿಯೊ ಬ್ಲಾಗರ್ ಸಹ ಹೌದು.

10

10

ಅತೀ ಕಡಿಮೆ ಸಮಯದಲ್ಲಿ ಪ್ರಖ್ಯಾತಗೊಂಡ ಪ್ರಪಂಚದ ಮಹಿಳೆಯರಲ್ಲಿ ಜೆಸ್ಸಿಕಾ ಛಾಬಟ್‌ ಸಹ ಒಬ್ಬರು. ಅದರಲ್ಲೂ ಟೆಕ್‌ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಪ್ರಸ್ತುತದಲ್ಲಿ ಇವರು IGN.com ನಿರೂಪಕಿಯಾಗಿದ್ದಾರೆ.

Most Read Articles
Best Mobiles in India

English summary
Top 10 Most Beautiful and Hottest Tech Women in 2016. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X