ಗೂಗಲ್‌ನ ನಿಗೂಢ ಯೋಜನೆ ನಿಮಗೆಷ್ಟು ಗೊತ್ತು

By Suneel
|

ಗೂಗಲ್‌ ಬಗ್ಗೆ ಯಾರಿಗೂ ಸಹ ಪೀಠಿಕೆ ನೀಡಬೇಕಾಗಿಲ್ಲ. ಯಾಕಂದ್ರೆ ಪ್ರತಿದಿನ ಕಂಪ್ಯೂಟರ್‌ ಮುಂದೆ ಕುಳಿತರೇ ಸಾಕು ಎಲ್ಲರೂ ಸಹ ಯಾವುದೇ ಮಾಹಿತಿಗಾಗಿ ಮೊದಲು ಓಪೆನ್‌ ಮಾಡುವುದೇ ಗೂಗಲ್‌ ಸರ್ಚ್‌ ಇಂಜಿನ್.

ಓದಿರಿ: ಮುಂಜಾನೆಯ ಸಂಗಾತಿ ವಾಟ್ಸಾಪ್ ಫೇಸ್‌ಬುಕ್

ಗೂಗಲ್‌ ಈಗ ತನ್ನ ಎಲ್ಲಾ ಅಭಿವೃದ್ದಿಗಳೊಂದಿಗೆ ಕೆಲವು ವಿಚಿತ್ರ ಹಾಗೂ ನಿಗೂಢ ಯೋಜನೆಗಳನ್ನು (ಪ್ರಾಜೆಕ್ಟ್) ಕೈಗೊಂಡು ಅವುಗಳ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಗೂಗಲ್‌ ಬಳಕೆ ಮಾಡುವ ಎಲ್ಲರೂ ಸಹ ಗೂಗಲ್‌ ನ ಈ ಬೆಳವಣಿಗೆ ಬಗ್ಗೆ ತಿಳಿದು ಕೊಳ್ಳಲೇಬೇಕು. ಹಾಗಾದರೆ ತಡಮಾಡಬೇಡಿ ಗೂಗಲ್‌ ನ ಈ ಲೇಖನ ಓದಿ.

ಇಂಟೆರ್ಯಾಕ್ಟಿವ್‌ ಕಲಿಕಾ ಕೇಂದ್ರಗಳು (Interactive Learning Centers)

ಇಂಟೆರ್ಯಾಕ್ಟಿವ್‌ ಕಲಿಕಾ ಕೇಂದ್ರಗಳು (Interactive Learning Centers)

ಗೂಗಲ್‌ ಸ್ಯಾನ್‌ ಫ್ರಾನ್ಸಿಸ್ಕೊ ಸಮುದ್ರ ತೀರದ ದೋಣಿಗಳಲ್ಲಿ ಇಂಟೆರ್ಯಾಕ್ಟಿವ್‌ ಕಲಿಕಾ ಕೇಂದ್ರಗಳನ್ನು ನಿರ್ಮಿಸುವಲ್ಲಿ ಕಾರ್ಯನಿರತವಾಗಿದೆ.

ಇಲೆಕ್ಟ್ರಿಕ್‌ ಸ್ಕಿನ್ ಟ್ಯಾಟೂ (Electronic Skin Tattoo)

ಇಲೆಕ್ಟ್ರಿಕ್‌ ಸ್ಕಿನ್ ಟ್ಯಾಟೂ (Electronic Skin Tattoo)

ಗೂಗಲ್‌ ಸ್ವತ್ತಿನ ಮೊಟೋರೋಲಾ ಇಲಿಕ್ಟ್ರಾನಿಕ್‌ ಸ್ಕಿನ್‌ ಟ್ಯಾಟೂ ರೂಪಿಸುವ ಕಾರ್ಯದಲ್ಲಿ ತೊಡಗಿದ್ದು, ಇದು ಮೊಬೈಲ್ ಸಂಪರ್ಕ ಸಂವಹನಕ್ಕೆ ಉಪಯೋಗವಾಗಲಿದೆ.

ಗೇಜ್‌ ಟ್ರ್ಯಾಕಿಂಗ್ ಸಿಸ್ಟಮ್ (Gaze Tracking System)

ಗೇಜ್‌ ಟ್ರ್ಯಾಕಿಂಗ್ ಸಿಸ್ಟಮ್ (Gaze Tracking System)

ಗೂಗಲ್‌ ನ ಈ ಟೆಕ್ನಾಲಜಿಯೂ ಒಂದು ಜಾಹಿರಾತು ಎಷ್ಟು ಧೀರ್ಘ ಸಮಯಗಳ ಕಾಲ ನೋಡಲ್ಪಟ್ಟಿದೆ ಎಂದು ತಿಳಿಯಲು ಜಾಹಿರಾತುದಾರರಿಗೆ ಉಪಯೋಗವಾಗಲಿದೆ. ಜಾಹಿರಾತುದಾರರು ಇದರಿಂದ ಜನತೆಗೆ ಜಾಹಿರಾತು ವಿನ್ಯಾಸವನ್ನು ಹೇಗೆ ಏನನ್ನು ರೂಪಿಸಬೇಕು, ಏನನ್ನು ರೂಪಿಸಬಾರದು ಎಂದು ತಿಳಿಯಲು ಸಹಾಯಕವಾಗಲಿದೆ. ಇದು ಹೆಚ್ಚಿನ ಸಂಖ್ಯೆಯ ಫೀಚರ್ ಹೊಂದಿದ್ದು ಇತರೆ ಫೀಚರ್ ತಿಳಿಸಿಲ್ಲ.

ಪವನ ಶಕ್ತಿ ಖರೀದಿ (Purchasing Wind Power)

ಪವನ ಶಕ್ತಿ ಖರೀದಿ (Purchasing Wind Power)

ಗೂಗಲ್ ಅಯೋವಾ ಪ್ರದೇಶದಲ್ಲಿ 114 ಮೆಗಾವ್ಯಾಟ್ಗಳಷ್ಟು ಪವನ ವಿದ್ಯುತ್ ಖರೀದಿಸಿದೆ. ಇದನ್ನು ಸರಿ ಅಂತ ನೀವು ತಿಳಿದಿರಬಹುದು, ಆದರೆ ಗೂಗಲ್‌ ಆ ಪ್ರದೇಶದಲ್ಲಿ ಡಾಟಾ ಕೇಂದ್ರಗಳನ್ನೇ ಹೊಂದಿಲ್ಲದಿದ್ದರೂ ಅಲ್ಲಿ ಪವನ ವಿದ್ಯುತ್‌ ಕೇಂದ್ರ ಖರೀದಿ ಮಾಡಿರುವುದು ನಿಗೂಢ ಪ್ರಶ್ನೆಯಾಗಿದೆ.

ರೋಬೋಟ್‌ ಯೂ (The Robot You)

ರೋಬೋಟ್‌ ಯೂ (The Robot You)

ಸಮಾಜಿಕ ಜಾಲತಾಣಗಳಲ್ಲಿ ವಯಕ್ತಿಕ ಸ್ವಯಂ ಸಲಹೆ ನೀಡುವ ರೋಬೋಟ್‌ ಪ್ರಸ್ತುತ ಪಡಿಸುವಲ್ಲಿ ನಿರತವಾಗಿದೆ.

ಹೃದಯ ಸಂಕೇತದ ಪೇಟೆಂಟ್‌ (The Heart Symbol Patent)

ಹೃದಯ ಸಂಕೇತದ ಪೇಟೆಂಟ್‌ (The Heart Symbol Patent)

ಗೂಗಲ್‌ ಹೃದಯ ಸಂಕೇತದ ಸ್ವಾಮ್ಯತೆ ಪಡೆಯುತ್ತಿದ್ದು, ಇದು ಗೂಗಲ್‌ ಗ್ಲಾಸ್‌ ಸಿಸ್ಟಮ್‌ನಲ್ಲಿ ಬಳಸಲಿದೆ.

 ಕ್ಯಾಮೆರಾ ಕೇನ್‌ (Cane with a camera)

ಕ್ಯಾಮೆರಾ ಕೇನ್‌ (Cane with a camera)

ಗೂಗಲ್‌ ವಾಕಿಂಗ್‌ ಕೇನ್‌ ಅನ್ನು ಕ್ಯಾಮೆರಾದಲ್ಲಿ ಇನ್‌ಬಿಲ್ಟ್‌ ಆಗಿ ಉತ್ಪಾದಿಸುತ್ತಿದೆ.

ಲೂನಾರ್ X (Lunar X)

ಲೂನಾರ್ X (Lunar X)

ಗೂಗಲ್‌ ಚಂದ್ರನಲ್ಲಿಗೆ ರೋಬೋಟ್ ಕಳುಹಿಸುವವರಿಗೆ $30 ಮಿಲಿಯನ್‌ ನೀಡಲು ಸಿದ್ಧವಾಗಿದೆ. ಚಂದ್ರನಲ್ಲಿಗೆ ಹೋಗಿ ವಿಡಿಯೋ, ಚಿತ್ರಗಳು, ಮಾಹಿತಿಯನ್ನು ಭೂಮಿಗೆ ಕಳುಹಿಸಬೇಕಷ್ಟೆ. ಗೂಗಲ್‌ ಈ ಯೋಜನೆಯ ಕಾರಣ ಮಾತ್ರ ಗೌಪ್ಯವಾಗಿದೆ.

Best Mobiles in India

English summary
Google needs no introduction; it has single handedly improved our lives so much and in such a manner that now it is impossible to live without Google. However, there are certain projects and ideas of Google that seem to be shady at first glance and don’t really make much of a sense.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X