‍ಇನ್ಮುಂದೆ ಭಾರತದಲ್ಲಿ ಪೋರ್ನ್‌ ವೆಬ್‌ಸೈಟ್‌ ಒಪನ್‌ ಆಗಲ್ಲ...!

|

ಭಾರತದಲ್ಲಿ ಇನ್ಮುಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಪೋರ್ನ್‌ ವಿಡಿಯೋಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಹೌದು, ಮೊಬೈಲ್‌ನಲ್ಲಿ ಪೋರ್ನ್‌ ವೀಕ್ಷಿಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಬಿಗ್‌ ಶಾಕ್‌ ನೀಡಿದ್ದು, ಪೋರ್ನ್‌ ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಿದೆ.

‍ಇನ್ಮುಂದೆ ಭಾರತದಲ್ಲಿ ಪೋರ್ನ್‌ ವೆಬ್‌ಸೈಟ್‌ ಒಪನ್‌ ಆಗಲ್ಲ...!

ಹೀಗಾಗಲೇ ಭಾರತದಲ್ಲಿ ಅಗ್ಗದ ದರದಲ್ಲಿ ಡೇಟಾ ನೀಡುತ್ತಿರುವ ರಿಲಾಯನ್ಸ್‌ ಜಿಯೋ ಪೋರ್ನ್‌ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಿದೆ. ಆದ್ದರಿಂದ ಜನಪ್ರಿಯ ಪೋರ್ನ್​ ಸೈಟ್​ಗಳಾದ PornHub, XNXX, Xvideosನಂತಹ ವೆಬ್‌ಸೈಟ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಲೋಡ್‌ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕ್ರಮವನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಮುಂದುವರೆಸುವ ಸಾಧ್ಯತೆ ದಟ್ಟವಾಗಿದ್ದು, ಪೋರ್ನ್‌ ವಿಡಿಯೋ ಪ್ರಿಯರಿಗೆ ಬಹಳ ದೊಡ್ಡ ಪೆಟ್ಟು ನೀಡಿದಂತಾಗಿದೆ.

ಹೈಕೋರ್ಟ್‌ ಸೂಚನೆ

ಹೈಕೋರ್ಟ್‌ ಸೂಚನೆ

ಇತ್ತೀಚೆಗೆ ಉತ್ತರಾಖಂಡ್‌ ಹೈಕೋರ್ಟ್ ಪೋರ್ನ್‌ ಮತ್ತು ಅಶ್ಲೀಲ ವೆಬ್​ಸೈಟ್‌ಗಳನ್ನು ನಿಷೇಧಿಸಬೇಕೆಂದು​ ಟೆಲಿಕಾಂ ಕಂಪನಿಗಳಿಗೆ ಸೂಚನೆ ಹೊರಡಿಸಿತ್ತು. ಅದಲ್ಲದೇ ಒಂದಿಷ್ಟು ವೆಬ್‌ಸೈಟ್‌ಗಳ ಪಟ್ಟಿಯನ್ನು ಸಹ ಟೆಲಿಕಾಂ ಆಪರೇಟರ್‌ಗಳಿಗೆ ನೀಡಿತ್ತು. ಅದರನ್ವಯ ಜಿಯೋ ತನ್ನ ಗ್ರಾಹಕರಿಗೆ ಪೋರ್ನ್‌ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿದೆ.

827 ಪೋರ್ನ್‌ ವೆಬ್‌ಸೈಟ್‌ ಬ್ಯಾನ್‌

827 ಪೋರ್ನ್‌ ವೆಬ್‌ಸೈಟ್‌ ಬ್ಯಾನ್‌

ಕೇಂದ್ರ ಸರ್ಕಾರವು ಕೂಡ ಈ ಬಗ್ಗೆ ಆದೇಶ ಹೊರಡಿಸಿದ್ದು, ಎಲ್ಲಾ ಇಂಟರ್‌ನೆಟ್‌ ಸೇವಾ ಪೂರೈಕೆದಾರರು ಅಶ್ಲೀಲ ಹಾಗೂ ಪೋರ್ನ್‌ ವಿಡಿಯೋಗಳಿರುವ 827 ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕೆಂದು ದೂರಸಂಪರ್ಕ ಇಲಾಖೆ ಸುತ್ತೋಲೆ ಹೊರಡಿಸಿದೆ.

2015ರಲ್ಲಿಯೇ ಕೇಂದ್ರದಿಂದ ಪ್ರಯತ್ನ

2015ರಲ್ಲಿಯೇ ಕೇಂದ್ರದಿಂದ ಪ್ರಯತ್ನ

ಈಗ ಪೋರ್ನ್‌ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿರುವ ಕೇಂದ್ರ ಸರ್ಕಾರ 2015ರಲ್ಲಿ ನೂರಾರು ಪೋರ್ನ್‌ ವಿಡಿಯೋ ಸೈಟ್​ಗಳನ್ನು ನಿಷೇಧಿಸಲು ಮುಂದಾಗಿತ್ತು.​ ಆದರೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ನಿಷೇಧದ ನಿರ್ಧಾರದಿಂದ ಹಿಂದೆ ಸರಿದಿತ್ತು.

ನೆಟ್ಟಿಗರಿಂದ ಆಕ್ರೋಶ

ನೆಟ್ಟಿಗರಿಂದ ಆಕ್ರೋಶ

ಪೋರ್ನ್​ ವೆಬ್‌ಸೈಟ್‌ಗಳ ನಿಷೇಧದ ಕುರಿತು ಟ್ವಿಟ್ಟರ್ ಮತ್ತು ರೆಡ್‌ಹಿಟ್‌ನಲ್ಲಿ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ಜಿಯೋ ನೆಟ್‌ವರ್ಕ್‌ನಲ್ಲಿ ಪೋರ್ನ್​ ವೆಬ್​ಸೈಟ್​​ಗಳು ಒಪನ್‌ ಆಗುತ್ತಿಲ್ಲ ಎಂದು ದೂರಿದ್ದಾರೆ. ಅಲ್ಲದೆ, ಈ ಆದೇಶದ ಕುರಿತು ಹಲವಾರು ಟ್ರೋಲ್​ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಎಲ್ಲಾ ಆಪರೇಟರ್‌ಗಳಿಂದಲೂ ಬ್ಯಾನ್‌..?

ಎಲ್ಲಾ ಆಪರೇಟರ್‌ಗಳಿಂದಲೂ ಬ್ಯಾನ್‌..?

ಕೇಂದ್ರ ಸರ್ಕಾರದ ಆದೇಶದ ಅನ್ವಯ ಎಲ್ಲಾ ಇಂಟರ್​ನೆಟ್​ ಸೇವಾ ಪೂರೈಕೆದಾರರು ಅಶ್ಲೀಲ ಚಿತ್ರ ಮತ್ತು ವಿಡಿಯೋಗಳಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಬೇಕಾಗಿರುವುದರಿಂದ ಟೆಲಿಕಾಂ ಆಪರೇಟರ್‌ಗಳಿಗೆ ಬೇರೆ ದಾರಿ ಇಲ್ಲದಂತಾಗಿದ್ದು. ಈಗ ಜಿಯೋ ಅನುಸರಿಸಿರುವ ಕ್ರಮವನ್ನು ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್‌, ಐಡಿಯಾಗಳು ಮುಂದಿನ ದಿನಗಳಲ್ಲಿ ಅನುಸರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತ ತೃತೀಯ

ಭಾರತ ತೃತೀಯ

2015ರ ವರದಿ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಪೋರ್ನ್ ವಿಡಿಯೋ ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳ ನಿಷೇಧ ನಿರ್ಧಾರದಿಂದ ಪೋರ್ನ್​ ಮಾರುಕಟ್ಟೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

Best Mobiles in India

English summary
857 porn websites blocked in jio network. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X