ಫೇಸ್‌ಬುಕ್‌ ಇಷ್ಟೊಂದು ಖ್ಯಾತಿಗೊಳ್ಳಲು ಈಕೆಯೇ ಕಾರಣ!

Written By:

  ಫೇಸ್‌ಬುಕ್‌ನ ಮುಖ್ಯ ಆಪರೇಟಿಂಗ್ ಆಫೀಸರ್ ಶೆರಿಲ್ ಸ್ಯಾಂಡ್‌ ಬರ್ಗ್ ತಮ್ಮ 47 ರ ಹರೆಯದಲ್ಲೂ ಅಸಾಮಾನ್ಯ ಸಾಧನೆಯನ್ನು ಮಾಡಿದ್ದಾರೆ. 2008 ರಿಂದೀಚೆಗೆ ಫೇಸ್‌ಬುಕ್‌ನ ಸಿಒಒ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್‌ಬುಕ್‌ಗೆ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುವಲ್ಲಿ ಸಹಾಯ ಮಾಡಿರುವ ಶೆರಿಲ್ ಫೇಸ್‌ಬುಕ್‌ಗೆ ಅದರ ಜಾಗತಿಕ ಸ್ಥಾನಮಾನವನ್ನು ತಂದುಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿರುವ ಸಾಧಕಿ ಶೆರಿಲ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ತಿಳಿಸಲೇ ಬೇಕು.

  ಓದಿರಿ: ಟ್ರೆಂಡಿಂಗ್ ಟಾಪಿಕ್ಸ್‌ನಲ್ಲಿ ಫೇಕ್ ನ್ಯೂಸ್‌ ಪ್ರಮೋಟ್: ಸಮಸ್ಯೆಯಲ್ಲಿ ಫೇಸ್‌ಬುಕ್‌

  ಬನ್ನಿ ಇಂದಿನ ಲೇಖನದಲ್ಲಿ ಶೆರಿಲ್ ಬಗ್ಗೆ ಇನ್ನಷ್ಟು ವಿವರಗಳನ್ನು ನಾವು ತಿಳಿಸುತ್ತಿದ್ದು ಇದು ನಿಮ್ಮ ಜೀವನಕ್ಕೆ ಪ್ರೇರಣೆಯನ್ನು ನೀಡುವುದು ಖಂಡಿತ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಮನೆಯಲ್ಲಿ ಹಿರಿಯಳು

  ಮೂರು ಸಹೋದರಿಯರಲ್ಲಿ ಹಿರಿಯರಾಗಿರುವ ಶೆರಿಲ್ ಜೇವಿಶ್ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ತಂದೆ ನೇತ್ರತಜ್ಞರಾಗಿದ್ದು ತಾಯಿ ಕಾಲೇಜಿನಲ್ಲಿ ಫ್ರೆಂಚ್ ಭಾಷಾ ಶಿಕ್ಷಕಿಯಾಗಿದ್ದಾರೆ.

  ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ

  ನಾರ್ತ್ ಮಿಯಾಮಿ ಸೀನಿಯರ್ ಬೀಚ್ ಹೈ ಸ್ಕೂಲ್‌ನಲ್ಲಿ ಸ್ಯಾಂಡ್‌ಬರ್ಗ್ ಕಲಿತಿದ್ದು ನಂತರ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ. ಬಿಎ ಪದವಿಯನ್ನು ಇಲ್ಲಿ ಪಡೆದುಕೊಂಡಿದ್ದಾರೆ. ಹಾರ್ವರ್ಡ್‌ನಲ್ಲಿ 1995 ರಲ್ಲಿ ಎಮ್‌ಬಿಎ ಪದವಿಯನ್ನು ಪಡೆದಿದ್ದಾರೆ.

  ಸಂಸ್ಥೆ ಸ್ಥಾಪನೆ

  ಶೆರಿಲ್ ಸ್ಯಾಂಡ್ ಬರ್ಗ್‌ನಲ್ಲಿರುವಾಗಲೇ, ಯೋಜನೆಯೊಂದನ್ನು ಆರಂಭಿಸಿದ್ದು "ವುಮೆನ್ ಇನ್ ಇಕನಾಮಿಕ್ಸ್ ಏಂಡ್ ಗವರ್ನಮೆಂಟ್" ಎಂಬುದಾಗಿ ಇದನ್ನು ಕರೆದಿದ್ದಾರೆ. ಮಹಿಳೆಯರನ್ನು ಇಂತಹ ವಿಚಾರಗಳಲ್ಲಿ ಹೆಚ್ಚು ಸಕ್ರಿಯರಾಗಿಸುವುದು ಅವರ ಉದ್ದೇಶವಾಗಿತ್ತು.

  ಗೂಗಲ್ ಮತ್ತು ವರ್ಲ್ಡ್ ಬ್ಯಾಂಕ್‌ನಲ್ಲಿ ಕೆಲಸ

  ಫೇಸ್‌ಬುಕ್‌ಗೆ ಸೇರುವುದಕ್ಕೆ ಮುನ್ನವೇ, ಶೆರಿಲ್ ಮಿಕೆನ್ಸಿ ಏಂಡ್ ಕಂಪೆನಿ ಹಾಗೂ ವರ್ಲ್ಡ್ ಬ್ಯಾಂಕ್‌ಗಾಗಿ ಕೆಲಸ ಮಾಡಿದ್ದಾರೆ. ಯುಎಸ್ ಮುಖ್ಯ ಸೆಕ್ರೆಟರಿ ಟ್ರಶರಿ ಲ್ಯಾರಿ ಸಮ್ಮರ್‌ಗೆ ಕಾರ್ಯದರ್ಶಿಯಾಗಿ ಶೆರಿಲ್ ಕೆಲಸ ಮಾಡಿದ್ದಾರೆ. ತದನಂತರ ಗೂಗಲ್ ಅನ್ನು ಆಕೆ 2001 ರಲ್ಲಿ ಸೇರಿಕೊಂಡಿದ್ದಾರೆ.

  ಗೂಗಲ್‌ನ ಫಿಲಿಯೋಂತ್ರೋಪಿಕ್ ಆರ್ಮ್‌ನಲ್ಲಿ ಶೆರಿಲ್ ಪಾಲ್ಗೊಳ್ಳುವಿಕೆ

  ಗೂಗಲ್‌ನಲ್ಲಿರುವಾಗ, ಶೆರಿಲ್ ಕಂಪೆನಿಯ ಸೇಲ್ಸ್ ಕಾರ್ಯಾಚರಣೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲುಸ್ತುವಾರಿಯನ್ನು ಇವರು ನೋಡಿಕೊಂಡಿದ್ದರು ಮತ್ತು ಗೂಗಲ್ ಬುಕ್ ಸರ್ಚ್‌ನಲ್ಲೂ ಇವರು ಕಾರ್ಯನಿರ್ವಹಿಸಿದ್ದಾರೆ.

  ಫೇಸ್‌ಬುಕ್‌ನ ಬೋರ್ಡ್ ಆಫ್ ಡೈರೆಕ್ಟರ್‌ಗಳಲ್ಲಿ ಮೊದಲ ಮಹಿಳಾ ಸದಸ್ಯೆ

  2012 ರಲ್ಲಿ ಸ್ಯಾಂಡ್‌ಬರ್ಗ್ ಫೇಸ್‌ಬುಕ್‌ನ ಬೋರ್ಡ್ ಆಫ್ ಡೈರೆಕ್ಟರ್‌ಗಳಲ್ಲಿ ಮೊದಲ ಮಹಿಳೆಯಾಗಿ ನಿಯೋಜಿತಗೊಂಡಿದ್ದಾರೆ.

  ಉತ್ತಮ ಬರಹಗಾರ್ತಿ

  "Lean In: Women, Work, and the Will to Lead." ಎಂಬ ಪುಸ್ತಕವನ್ನೂ ಇವರು ಬರೆದಿದ್ದು, ಮಹಿಳೆಯ ನಾಯಕತ್ವ ಗುಣಗಳನ್ನು ಇದರಲ್ಲಿ ಆಕೆ ವ್ಯಕ್ತಪಡಿಸಿದ್ದಾರೆ.

  ಬೋಸಿ ಪದದ ಮೇಲೆ ನಿರ್ಬಂಧ

  ಅಧಿಕಾರ ಚಲಾಯಿಸುವ ಗುಣ ಎಂಬುದಾಗಿ ಕರೆಯಲ್ಪಡುವ ಪದ ಬೋಸಿಯನ್ನು ನಿರ್ಬಂಧಿಸುವುದಕ್ಕಾಗಿ ಶೆರಿಲ್ ಯೋಜನೆಯನ್ನು ಕೈಗೊಂಡರು ಮತ್ತು ಇದರಲ್ಲಿ ಸಫಲರೂ ಆದರು.

  ಹೆಚ್ಚು ಪ್ರಭಾವಿ ಮಹಿಳೆ ಎಂಬ ಖ್ಯಾತಿ

  ಶೆರಿಲ್ ಸ್ಯಾಂಡ್ ಬರ್ಗ್ ಟೈಮ್ ನಿಯತಕಾಲಿಕೆಯ 2013 ರಲ್ಲಿ ಹೆಚ್ಚು ಪ್ರಭಾವಿ ಮಹಿಳೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ವಿಶ್ವದಲ್ಲೇ ಟೈಮ್ 100 ವಾರ್ಷಿಕ ಪಟ್ಟಿಯಲ್ಲಿ ಹೆಚ್ಚು ಪ್ರಭಾವಿ ಮಹಿಳೆ ಎಂಬ ಹೆಸರನ್ನು ಪಡೆದಿದ್ದಾರೆ. ಫಾರ್ಚ್ಯೂನ್ ಮ್ಯಾಗಝೀನ್‌ನ ಹೆಚ್ಚು ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಶೆರಿಲ್ ಸ್ಥಾನ ಪಡೆದುಕೊಂಡಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

  English summary
  Here are 9 interesting facts about Facebook’s chief operating officer that you might want to know.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more