ಹೊಸದಾಗಿ ಇಂಟರ್ನೆಟ್ ಬಳಕೆಯಲ್ಲಿ ಭಾರತೀಯರೇ ಮುಂದು!!

UNCTAD ವರದಿಯೊಂದರ ಅನುಸಾರ 2012 ರಿಂದ 2015 ರ ಕಾಲಘಟ್ಟದಲ್ಲಿ ಇಂಟರ್ನೆಟ್ ಬಳಕೆ ಪ್ರಾರಂಭಿಸಿದ ಜನರ ಪೈಕಿ ಶೇಕಡಾ 90%ರಷ್ಟು ಜನ ಅಭಿವೃದ್ಧಿಶೀಲ ದೇಶಕ್ಕೆ ಸೇರಿದವರಾಗಿದ್ದು, ಈ ಪೈಕಿ ಭಾರತದಲ್ಲಿ 125 ಮಿಲಿಯನ್ ಮಂದಿ ಇಂಟರ್ನೆಟ್ ಬಳಕೆ.

By Tejaswini P G
|

ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಆಂಡ್ ಡೆವೆಲಪ್ಮೆಂಟ್ (UNCTAD) ನ ವರದಿಯೊಂದರ ಅನುಸಾರ 2012 ರಿಂದ 2015 ಇಸವಿಯೊಳಗೆ ಮೊದಲ ಬಾರಿಗೆ ಆನ್ಲೈನ್ ಆದ 750 ಮಿಲಿಯನ್ ಜನರ ಪೈಕಿ ಶೇಕಡಾ 90% ರಷ್ಟು ಜನರು ಅಭಿವೃದ್ಧಿಶೀಲ ದೇಶಕ್ಕೆ ಸೇರಿದವರಾಗಿದ್ದು, ಈ ಪೈಕಿ ಅತ್ಯಧಿಕ ಅನ್ಲೈನ್ ಬಳಕೆದಾರರು ಭಾರತ(178 ಮಿಲಿಯನ್) ಮತ್ತು ಚೀನಾ (122 ಮಿಲಿಯನ್) ದೇಶದವರು.

ಹೊಸದಾಗಿ ಇಂಟರ್ನೆಟ್ ಬಳಕೆಯಲ್ಲಿ ಭಾರತೀಯರೇ ಮುಂದು!!

ಭಾರತ, ಬಾಂಗ್ಲಾದೇಶ, ಇರಾನ್, ಪಾಕಿಸ್ತಾನ ಮೊದಲಾದ ಹಲವು ಅಭಿವೃದ್ಧಿಶೀಲ ದೇಶಗಳಲ್ಲಿ, ಸುಮಾರು 50% ಅಥವಾ ಅದಕ್ಕಿಂತಲೂ ಅಧಿಕ ಇಂಟರ್ನೆಟ್ ಬಳಕೆದಾರರು ಮೊದಲ ಬಾರಿಗೆ ಇಂಟರ್ನೆಟ್ ಬಳಕೆ ಮಾಡಿದ್ದು ಕಳೆದ 3 ವರ್ಷಗಳಲ್ಲಿ ಎನ್ನುತ್ತದೆ ಈ ವರದಿ.

ಬ್ರೆಜಿಲ್ ಮತ್ತು ಚೀನಾ ದೇಶಗಳಲ್ಲಿ, ಅಲ್ಲಿನ ಜನಸಂಖ್ಯೆಯ ಶೇಕಡಾ 50% ಕ್ಕಿಂತ ಅಧಿಕ ಜನರು ಇಂಟರ್ನೆಟ್ ಬಳಸುತ್ತಿದ್ದರೆ, ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 25% ರಷ್ಟು ಜನರು ಮಾತ್ರ ಇಂಟರ್ನೆಟ್ ಬಳಸುತ್ತಾರೆ. ಅಲ್ಲದೆ ಇನ್ನು ಮುಂದೆ ಬರಲಿರುವ 1 ಬಿಲಿಯನ್ ನಷ್ಟು ಇಂಟರ್ನೆಟ್ ಬಳಕೆದಾರರು ಕೂಡ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವಾರಗಿರುತ್ತಾರೆ ಎನ್ನುತ್ತದೆ UNCTAD ವರದಿ.

ಐ.ಟಿ ನೌಕರರಿಗೆ ಸಿಹಿಸುದ್ದಿ!..ಕೆಲಸ ಕಳೆದುಕೊಳ್ಳುವ ಭೀತಿ ಇನ್ನಿಲ್ಲ!!ಐ.ಟಿ ನೌಕರರಿಗೆ ಸಿಹಿಸುದ್ದಿ!..ಕೆಲಸ ಕಳೆದುಕೊಳ್ಳುವ ಭೀತಿ ಇನ್ನಿಲ್ಲ!!

ಭಾರತ, ಮೆಕ್ಸಿಕೋ ಮತ್ತು ನೈಜೀರಿಯಾ ದೇಶಗಳಲ್ಲಿ 2012 ರಿಂದ 2015ರ ವರೆಗೆ 4-6 ಪ್ರತಿಶತ ಇಂಟರ್ನೆಟ್ ಬಳಕೆದಾರರು ಹೆಚ್ಚಿದ್ದರೆ, ಜಪಾನ್ ದೇಶವನ್ನು ಹೊರತುಪಡಿಸಿ ಇತರ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಈ ಬೆಳವಣಿಗೆಯ ಮಟ್ಟ ಕಡಿಮೆಯಿದೆ. ಈ ದೇಶಗಳಲ್ಲಿ ಇಂಟರ್ನೆಟ್ ನ ಮಾರುಕಟ್ಟೆ ಈಗಾಗಲೇ ತನ್ನ ಮಿತಿಯನ್ನು ತಲುಪಿರುವುದು ಇದಕ್ಕೆ ಕಾರಣವಿರಬಹುದು ಎನ್ನುತ್ತದೆ UNCTAD ವರದಿ.

ಅಲ್ಲದೆ, ಈ ವರದಿ ಹೇಳುವಂತೆ, 2015ರಲ್ಲಿ ಜಾಗತಿಕ ಜನಸಂಖ್ಯೆಯ ಶೇಕಡಾ 69% ರಷ್ಟು ಜನಸಂಖ್ಯೆ 3G ಮೊಬೈಲ್ ಬ್ರಾಡ್ಬ್ಯಾಂಡ್ ಬಳಸುತ್ತಿದ್ದು, 2011 ರಲ್ಲಿ ಈ ಸಂಖ್ಯೆ ಕೇವಲ 45% ಇತ್ತು.

ಬ್ರಾಡ್ಬ್ಯಾಂಡ್ ಸೇವೆಯ ಗುಣಮಟ್ಟದಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಇದರ ಡೌನ್ಲೋಡ್ ವೇಗ, ಅಪ್ಲೋಡ್ ವೇಗ, ಲೇಟೆನ್ಸಿ ಮೊದಲಾದ ಗುಣಮಟ್ಟವನ್ನು ಸೂಚಿಸುವ ಅಂಶಗಳು ನಿರ್ದಿಷ್ಟ ಕ್ಲೌಡ್-ಆಧಾರಿತ ಅಪ್ಲಿಕೇಶನ್ಗಳ ಬಳಕೆ ಮೇಲೆ ಪ್ರಭಾವ ಬೀರುತ್ತದೆ.

ಅಷ್ಟೇ ಅಲ್ಲದೆ ಇಂಟರ್ನೆಟ್ ಬಳಸುವ ಪುರಷರ ಮತ್ತು ಸ್ತ್ರೀಯರ ಸಂಖ್ಯೆಯ ಮಧ್ಯೆ ಬಹಳ ವ್ಯತ್ಯಾಸವಿದ್ದು ಮಹಿಳೆಯರಿಗಿಂತ 250 ಮಿಲಿಯನ್ ಆಧಿಕ ಪರುಷರು ಇಂಟರ್ನೆಟ್ ಬಳಸುತ್ತಿದ್ದಾರೆ. ಕೆಲವು ದೇಶಗಳನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಇಂಟರ್ನೆಟ್ ಬಳಸುವ ಮಹಿಳೆಯರಿಗಿಂತ ಪರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎನ್ನುತ್ತದೆ 2016 ರ ITU ವರದಿ.

ಜಾಗತಿಕ ಮಟ್ಟದಲ್ಲಿ, ಇಂಟರ್ನೆಟ್ ಬಳಕೆದಾರರ ಪೈಕಿ ಲಿಂಗಾಧಾರಿತ ಸಂಖ್ಯೆಗಳನ್ನು ಪರಿಶೀಲಿಸದರೆ ಶೆಕಡಾ 12% ರಷ್ಟು ವ್ಯತ್ಯಾಸ ಕಂಡುಬರುತ್ತದೆ ಎನ್ನುತ್ತದೆ 2016ರ ITU ವರದಿ. ಈ ವ್ಯತ್ಯಾಸ ಅಭಿವೃದ್ಧಿಶೀಲ ದೇಶಗಳಲ್ಲಿ ಹಚ್ಚಿದ್ದು, ಅದರಲ್ಲಿಯೂ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಅಧಿಕವಾಗಿದೆ. ಶಿಕ್ಷಣದ ಮಟ್ಟ ಮತ್ತು ಶಾಲಾ ದಾಖಲಾತಿಗಳು ಇದಕ್ಕೆ ಮುಖ್ಯ ಕಾರಣವಾಗಿದೆ. ಇಂಟರ್ನೆಟ್ ಬಳಕೆದಾರರಲ್ಲಿ ಈ ವ್ಯತ್ಯಾಸ ಅಧಿಕವಾಗಿ ಕಂಡುಬರುತ್ತಿರುವುದು ಆಫ್ರಿಕಾ ಮತ್ತು ಏಶಿಯಾ-ಪೆಸಿಫಿಕ್ ಪ್ರದೇಶಗಳಲ್ಲಾಗಿದೆ.

Best Mobiles in India

Read more about:
English summary
In Brazil and China, more than 50 percent of the population uses the internet

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X