ಭಾರತದಲ್ಲಿ ಓಡಲಿದೆ ಸೋಲಾರ್ ರೈಲು

Written By:

ಟೆಕ್‌ ಬೆಳವಣಿಗೆಯನ್ನು ಇತರ ದೇಶಗಳಿಗೆ ಹೋಲಿಸಿದರೇ ಭಾರತ ದೇಶ ಸ್ವಲ್ಪ ನಿಧಾನಗತಿಯಲ್ಲಿದೇ ಅನಿಸುತ್ತೇ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಹಲವರು ದೂರದರ್ಶನ ಹಾಗೂ ಇಂಟರ್‌ನೆಟ್‌ನಲ್ಲಿ ಇತರ ದೇಶಗಳನ್ನು ನೋಡಿದಾಗ ಆ ದೇಶಗಳೊಂದಿಗೆ ಭಾರತ ದೇಶವನ್ನು ಹೋಲಿಸಿಕೊಂಡು ಸ್ವಲ್ಪ ಬೇಸರವನ್ನು ತಂದು ಕೊಳ್ಳುತ್ತಾರೆ. ಆದರೆ ನಿಜವಾದ ಕಾರಣ ಭಾರತ ಹಳ್ಳಿಗಳ ದೇಶವಾಗಿದ್ದು, ಇದು ಎಲ್ಲಾ ರೀತಿಯ ಬೆಳವಣಿಗೆಯನ್ನು ಇತರ ದೇಶಗಳಂತೆ ಪಡೆಯಲು ಹಲವು ವರ್ಷಗಳು ಬೇಕಾಗಿವೆ.

ಓದಿರಿ: ಉಪ್ಪುನೀರಿನ ಲ್ಯಾಂಪ್‌ನಿಂದ 8 ಗಂಟೆ ಬೆಳಕು

ಆದರೂ ಸಹ ಹಂತ ಹಂತವಾಗಿ ಮುಂದುವರೆಯುತ್ತಿರುವ ಭಾರತ ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಅಭಿವೃದ್ದಿಯನ್ನು ಅತಿ ಶೀಘ್ರದಲ್ಲಿ ಅಳವಡಿಸಲಿದೆ. ಹೌದು, ಭಾರತ ಅತಿಶೀಘ್ರದಲ್ಲಿ ಸೋಲಾರ್‌ ಪವರ್‌ ರೈಲುಗಳಿಗೆ ಚಾಲನೆ ನೀಡಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಈ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 IR and DMRC

IR and DMRC

ಭಾರತೀಯ ರೈಲ್ವೆ ಮತ್ತು ದೆಹಲಿ ಮೆಟ್ರೊ ರೈಲ್‌ ಕಾರ್ಪೋರೇಶನ್ ಇಂಧನ ವೆಚ್ಚ ಕಡಿಮೆ ಮಾಡಲು ಸೋಲಾರ್‌ ರೈಲುಗಳನ್ನು ಚಾಲನೆ ಗೊಳಿಸಲು ಯೋಜನೆ ರೂಪಿಸಿವೆ.

 ಸಾಗಾಣಿಕೆ

ಸಾಗಾಣಿಕೆ

ಭಾರತ ರೈಲುಗಳು ದಿನನಿತ್ಯ 25 ಮಿಲಿಯನ್‌ ಜನರು ಮತ್ತು 3 ಮಿಲಿಯನ್‌ ಟನ್‌ ಸರಕುಗಳನ್ನು ಸಾಗಾಣಿಕೆ ಮಾಡಬೇಕಾಗಿದೆ.

ರೈಲುಗಳ ಇಂಧನ

ರೈಲುಗಳ ಇಂಧನ

ಪ್ರಸ್ತುತದಲ್ಲಿ ಚಾಲನೆಯಲ್ಲಿರುವ ಎಲ್ಲಾ ರೈಲುಗಳು ವಿದ್ಯುತ್‌ ಪವರ್ ಮತ್ತು ಡೀಸೆಲ್‌ಇಂಧನದಿಂದ ಚಾಲನೆ ಪಡೆದಿವೆ. ಸರಾಸರಿ 4GW ಇಂಧನ ಶಕ್ತಿಯನ್ನು ವಿದ್ಯುತ್‌ ಜೆನೆರೇಟಿಂಗ್‌ನಿಂದ ಪಡೆದಿವೆ.

 ಅಧ್ಯಯನದ ಮುಖ್ಯಾಂಶಗಳು

ಅಧ್ಯಯನದ ಮುಖ್ಯಾಂಶಗಳು

ರೈಲುಗಳಿಗೆ ಸೋಲಾರ್‌ ಪವರ್‌ ಅಳವಡಿಸುವುದರಿಂದ ಒಂದು ರೈಲಿಗೆ ವರ್ಷಕ್ಕೆ 90,000 ಲೀಟರ್‌ ಡೀಸೆಲ್‌ ಹಾಕುವುದನ್ನು ನಿಲ್ಲಿಸಬಹುದು, ಹಾಗೂ ಪ್ರತಿವರ್ಷಕ್ಕೆ 200 ಟನ್‌ CO2 ವಿಸರ್ಜನೆಯನ್ನು ಕಡಿಮೆಗೊಳಿಸಬಹುದಾಗಿದೆ.

 ಸರಳ ಕಾರಣಗಳು

ಸರಳ ಕಾರಣಗಳು

ರೈಲುಗಳು ಯಾವಾಗಲು ಹಗಲುವೇಳೆ ಮತ್ತು ಭೂಮಿಯ ಮೇಲೆ ಹೆಚ್ಚು ಸಂಚರಿಸುವುದರಿಂದ ಈ ಯೋಜನೆ ಕೈಗೊಂಡಿದ್ದು, ಫೋಟೊವೊಲ್ಟಿಕ್‌ ಪ್ಯಾನೆಲ್ಸ್ ಅನ್ನು ರೈಲುಗಳ ಮೇಲೆ ಅಳವಡಿಸಲು ಚಿಂತಿಸಲಾಗಿದೆ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಪ್ರಸ್ತುತದಲ್ಲಿ 2KW ವಿನ್ಯಾಸದ ಫೋಟೊವೊಲ್ಟಿಕ್ಸ್‌ ಪ್ಯಾನೆಲ್ಸ್‌ ಒಳಗೊಂಡಿರುವ ಒಂದು ಪ್ರಾಯೋಗಿಕ ಅಧ್ಯಯನ ಕೈಗೊಂಡಿದೆ.

ಪ್ರಾಯೋಗಿಕ ಪರೀಕ್ಷೆ

ಪ್ರಾಯೋಗಿಕ ಪರೀಕ್ಷೆ

ಇತ್ತೀಚಿನ ವರದಿಯು ವಾರ್ಷಿಕವಾಗಿ $1800 ರೂ ಲಾಭ ಹೆಚ್ಚಾಗಲಿದೆ ಎನ್ನಲಾಗಿದೆ.

ಮಳೆಗಾಲದಲ್ಲಿ ಪ್ರಾಯೋಗಿಕ ಪರೀಕ್ಷೆ.

ಮಳೆಗಾಲದಲ್ಲಿ ಪ್ರಾಯೋಗಿಕ ಪರೀಕ್ಷೆ.

ಉಪ ಅಧ್ಯಯನವಾಗಿ ಭಾರತೀಯ ರೈಲ್ವೆ ಮಳೆಗಾಲದಲ್ಲಿ ಒಂದು ಅಧ್ಯಯನವನ್ನು ಕೈಗೊಳ್ಳುವ ಬಗ್ಗೆ ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indian Railways (IR) and the Delhi Metro Rail Corporation (DMRC) are always looking for new ways to reduce fuel costs and the biggest breakthrough comes in the form of solar trains. The reasons are simple enough; the trains operate above ground and mostly during daytime hours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot