ಅಯ್ಯಯ್ಯೋ ಹೀಗೂ ವಂಚನೆ ಮಾಡಬಹುದಾ?..'ಗೂಗಲ್ ಮ್ಯಾಪ್' ಮೇಲೂ ಖದೀಮರ ಕಣ್ಣು!!

|

ಅಯ್ಯಯ್ಯೋ ಹೀಗೂ ವಂಚನೆ ಮಾಡಬಹುದಾ ಎಂದು ನೀವು ಅಂದುಕೊಳ್ಳುವಂತಹ ಮತ್ತೊಂದು ವಂಚನೆಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಸೈಬರ್ ಖದೀಮರ ಕಣ್ಣೀಗ ಗೂಗಲ್ ಮ್ಯಾಪ್ ಮೇಲೂ ಬಿದ್ದಿದ್ದು, ಮ್ಯಾಪ್​ನಲ್ಲಿರುವ ಬ್ಯಾಂಕ್​ಗಳ ದೂರವಾಣಿ ಸಂಖ್ಯೆಗಳನ್ನೇ ಬದಲಿಸಿ, ಸಾರ್ವಜನಿಕರಿಗೆ ಕನ್ನ ಹಾಕಿರುವ ಅನೇಕ ಪ್ರಕರಣಗಳು ಈಗ ವರದಿಯಾಗಿದೆ.

ಹೌದು, ಗೂಗಲ್ ಮ್ಯಾಪ್​ನಲ್ಲಿನ ಮಾಹಿತಿಗಳನ್ನು ವಿಕಿಪೀಡಿಯಾ ರೀತಿಯಲ್ಲೇ ಯಾರು ಬೇಕಾದರೂ ಬದಲಾಯಿಸಬಹುದಾಗಿದ್ದು, ಇದೇ ಸದಾವಕಾಶವನ್ನು ಬಳಸಿಕೊಂಡಿರುವ ವಂಚಕರು ಹಲವರಿಗೆ ವಂಚಿಸಿದ್ದಾರೆ. ಮಹಾರಾಷ್ಟ್ರದ ಒಂದು ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿನ ಮೂವರು ಖಾತೆದಾರರಿಗೆ ಈ ರೀತಿಯಲ್ಲಿ ವಂಚನೆ ನಡೆಸಿರುವ ಕುರಿತು ದೂರು ದಾಖಲಾಗಿವೆ.

ಅಯ್ಯಯ್ಯೋ ಹೀಗೂ ವಂಚನೆ ಮಾಡಬಹುದಾ?..'ಗೂಗಲ್ ಮ್ಯಾಪ್' ಮೇಲೂ ಖದೀಮರ ಕಣ್ಣು!!

ಜನರು ಗೂಗಲ್​ ಅಥವಾ ಗೂಗಲ್‌ ಮ್ಯಾಪ್‌ ಮೂಲಕ ಬ್ಯಾಂಕ್​ಗಳ ಮಾಹಿತಿ ಶೋಧಿಸಿದಾಗ ಈ ಸಂಖ್ಯೆಗಳು ಮೂಡುತ್ತವೆ. ಅಪ್ಪಿತಪ್ಪಿ ಆ ಸಂಖ್ಯೆಗೆ ಕರೆ ಮಾಡಿದರೆ ಸಾಕು ವಂಚಕರು ತಮ್ಮ ಬಲೆಯನ್ನು ಬೀಸುತ್ತಿದ್ದಾರೆ. ಹಾಗಾದರೆ, ಏನಿದು ಹೊಸ ವಂಚನೆ ಪ್ರಕರಣ? ಖದೀಮರು ಮ್ಯಾಪ್‌ ಮೂಲಕ ವಂಚನೆಯ ದಾರಿ ಕಂಡುಕೊಂಡಿರುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಮೂರು ಪ್ರಕರಣ ದಾಖಲು!

ಮೂರು ಪ್ರಕರಣ ದಾಖಲು!

ಕಳೆದ ಒಂದು ತಿಂಗಳಲ್ಲಿ ಈ ರೀತಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಗ್ರಾಹಕರಿಗೆ ಬ್ಯಾಂಕ್ ಖಾತೆಯ ಸಮಸ್ಯೆ ಎದುರಾದಾಗ ಸಂಬಂಧಿಸಿದ ಬ್ಯಾಂಕಿನ ಸಂಪರ್ಕ ವಿವರಗಳನ್ನು ಆನ್​ಲೈನ್​ನಲ್ಲಿ ಹೂಡುಕಿ ಆ ಸಂಖ್ಯೆಗೆ ಕರೆ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಸುಲಭವಾಗಿ ಬಲೆಗೆ ಬೀಳುತ್ತಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ವಂಚನೆ ನಡೆಸಿರುವುದು ಹೇಗೆ?

ವಂಚನೆ ನಡೆಸಿರುವುದು ಹೇಗೆ?

ಖದೀಮರು ನಕಲಿ ಗೂಗಲ್ ಖಾತೆ ಮೂಲಕ ಕೆಲವು ವಂಚಕರು ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಬದಲಾಯಿಸಿ ತಮ್ಮ ಸಂಖ್ಯೆ ಸೇರಿಸುತ್ತಿದ್ದಾರೆ. ಈ ಬಗ್ಗೆ ಅರಿವಿಲ್ಲದ ಜನರು ಬ್ಯಾಂಕ್ ಸಂಖ್ಯೆ ಎಂದು ಆ ಸಂಖ್ಯೆಗೆ ಕರೆ ಮಾಡಿದಾಗ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ನಂತರ ಕ್ರೆಡಿಟ್, ಡೆಬಿಟ್ ಕಾರ್ಡ್​ಗಳ ಮಾಹಿತಿ ಪಡೆದು ಹಣ ಲಪಟಾಯಿಸುತ್ತಿದ್ದಾರೆ.

ವಂಚನೆಗೆ ಸುಲಭ ದಾರಿ!

ವಂಚನೆಗೆ ಸುಲಭ ದಾರಿ!

ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಪಡೆದುಕೊಳ್ಳುವ ಬ್ಯಾಂಕ್ ಗ್ರಾಹಕರು ಆ ಸಂಖ್ಯೆ ಬ್ಯಾಂಕ್‌ನದ್ದೇ ಆಗಿರುತ್ತದೆ ಎಂದು ನಂಬಿಕೊಳ್ಳುತ್ತಾರೆ. ಇದರಿಂದ ವಂಚಕರಿಗೆ ಹಣ ಲಪಟಾಯಿಸಲು ಸುಲಭವಾಗಿದ್ದು, ಬ್ಯಾಂಕ್ ಗ್ರಾಹಕರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್​ ನಂಬರ್, ಸಿವಿವಿ, ಹಾಗೂ ಒಟಿಪಿಯಗಳನ್ನು ಪಡೆದು ಹಣವನ್ನು ಎಗರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಹೇಳಿದ್ದೇನು?

ಪೊಲೀಸರು ಹೇಳಿದ್ದೇನು?

ಗ್ರಾಹಕರು ಖಾತೆಯ ಸಮಸ್ಯೆ ಉದ್ಭವಿಸಿದ್ದಾಗ ಸಂಬಂಧಿಸಿದ ಬ್ಯಾಂಕಿನ ಸಂಪರ್ಕ ವಿವರಗಳನ್ನು ಆನ್​ಲೈನ್​ನಲ್ಲಿ ಹೂಡುಕಿ ಆ ಸಂಖ್ಯೆಗೆ ಕರೆ ಮಾಡುತ್ತಾರೆ.ಆ ನಂತರ ತಮ್ಮ ಖಾತೆಯ ರಹಸ್ಯ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಎಸ್​ಪಿ ಬಾಲ್ಸಿಂಗ್ ರಜಪೂತ್ ಅವರು ಹೇಳಿದ್ದಾರೆ.

ಗೂಗಲ್ ಇಂಡಿಯಾ ಸ್ಪಷ್ಟನೆ!

ಗೂಗಲ್ ಇಂಡಿಯಾ ಸ್ಪಷ್ಟನೆ!

ಉತ್ತಮ ಸೇವೆ ನೀಡುವ ಉದ್ದೇಶದಿಂದ ದೂರವಾಣಿ ಸಂಖ್ಯೆ ಸೇರಿಸುವ ಅಥವಾ ಬದಲಾಯಿಸುವ ಅವಕಾಶ ನೀಡಿದ್ದೇವೆ. ಆದರೆ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಘಟನೆ ಬೆಳಕಿಗೆ ಬಂದ ತಕ್ಷಣ ಅಂತಹ ನಕ್ಷೆಯಲ್ಲಿನ ಸಂಪರ್ಕ ವಿವರ ಬದಲಾಯಿಸಿದ್ದೇವೆ ಎಂದು ಗೂಗಲ್ ಇಂಡಿಯಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೀವು ಎಚ್ಚರ!

ನೀವು ಎಚ್ಚರ!

ಗೂಗಲ್ ಸರ್ಚ್ ಎಂಜಿನ್​ನಲ್ಲಿ ತೋರಿಸುವ ದೂರವಾಣಿ ಸಂಖ್ಯೆಗೆ ನೇರವಾಗಿ ಕರೆಮಾಡದೆ, ಪಾಸ್​ಬುಕ್ ಅಥವಾ ಬ್ಯಾಂಕ್ ನೀಡುವ ಕಿಟ್​ನಲ್ಲಿ ನಮೂದಿಸಿರುವ ಅಧಿಕೃತ ದೂರವಾಣಿ ಸಂಖ್ಯೆ ಬಳಸಿ ಎಂದು ಬ್ಯಾಂಕ್​ಗಳು ಗ್ರಾಹಕರಿಗೆ ತಿಳಿಸಿವೆ. ಬ್ಯಾಂಕ್‌ನವರೇ ಆದರೂ ಸಿವಿವಿ ಸಂಖ್ಯೆ, ಯೂಸರ್ ​ನೇಮ್, ಡೆಬಿಟ್ ಕಾರ್ಡ್‌ಗಳ ಸಂಖ್ಯೆ ಗಳನ್ನು ತಿಳಿಸದಂತೆ ಎಚ್ಚರವಾಗಿರಲು ಹೇಳಿವೆ.

Best Mobiles in India

English summary
Scamsters seem to have stumbled upon a gold mine in the form of a loophole in theGoogle Maps interface. Taking advantage of the fact that . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X