ವಾಟ್ಸಾಪ್‌ನಲ್ಲಿ 'ಹಾಯ್‌ ಅಮ್ಮ' ಅಂತಾ ಮೆಸೆಜ್‌ ಮಾಡಿ 57.84 ಕೋಟಿ ರೂ. ವಂಚನೆ!

|

ವಾಟ್ಸಾಪ್‌ ಬಳಕೆದಾರರೇ ಈ ಸುದ್ದಿಯನ್ನು ನೀವು ಗಮನವಿಟ್ಟು ಓದಲೇಬೇಕು. ಯಾಕಂದ್ರೆ ವಾಟ್ಸಾಪ್‌ನಲ್ಲಿ ಹಾಯ್‌ ಅಮ್ಮ ಅಂತಾ ಸಂದೇಶ ಕಳುಹಿಸಿ ನಿಮ್ಮ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಎಗರಿಸುವ ಸೈಬರ್‌ ಕ್ರೈಮ್‌ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಷ್ಟು ದಿನ ನಕಲಿ ಲಿಂಕ್‌ಗಳ ಮೂಲಕ ಮಾಲ್‌ವೇರ್‌ ಕಳುಹಿಸಿ ಅಕೌಂಟ್‌ ಹ್ಯಾಕ್‌ ಮಾಡ್ತಿದ್ದ ಗ್ರಾಹಕರು ವಾಟ್ಸಾಪ್‌ ಮೂಲಕ ಕನ್ನ ಹಾಕಲು ಬಂದಿದ್ದಾರೆ. ಅದರಂತೆ ಹಾಯ್‌ ಅಮ್ಮ ಅನ್ನೊ ಸಂದೇಶ ಕಳುಹಿಸಿ ಅಂದಾಜು 57.84 ಕೋಟಿ ರೂ. ಎಗರಿಸಿದ್ದಾರೆ.

ವಾಟ್ಸಾಪ್‌ನಲ್ಲಿ

ಹೌದು, ವಾಟ್ಸಾಪ್‌ನಲ್ಲಿ ಕುಟುಂಬ ಸದಸ್ಯರಂತೆ ಸಂದೇಶ ಕಳುಹಿಸುವ ವಂಚಕರು ಅಕೌಂಟ್‌ ಡಿಟೇಲ್ಸ್‌ ಪಡೆದು ಹಣ ಎಗರಿಸುವ ಮಾರ್ಗ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಕುಟುಂಬಗಳು ಹಣ ಕಳೆದುಕೊಂಡಿರುವುದಾಗಿ ಸುದ್ದಿಯಾಗಿದೆ. ಈ ರೀತಿಯ ಘಟನೆ ನಡೆದಿರೋದು ಆಸ್ಟ್ರೇಲಿಯಾದಲ್ಲಿ ಎಂದು ಹೇಳಲಾಗಿದೆ. ಆದರೆ ಇದು ಮುಂದೊಂದು ದಿನ ನಿಮ್ಮ ಬಳಿಗೂ ಬಂದರೂ ಅಚ್ಚರಿಯಿಲ್ಲ. ಹಾಗಾದ್ರೆ ವಾಟ್ಸಾಪ್‌ ಮೂಲಕ ಹಣ ಎಗರಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌

ಆನ್‌ಲೈನ್‌ನಲ್ಲಿ ಹಣ ವಂಚನೆ ಮಾಡುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಆದರೆ ವಾಟ್ಸಾಪ್‌ ಮೂಲಕ ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಈ ರೀತಿಯ ಪ್ರಕರಣ ತೀರಾ ಅಪರೂಪ ಎನ್ನಬಹುದಾಗಿದೆ. ಸದ್ಯ ವಾಟ್ಸಾಪ್‌ ಮೂಲಕ ಹಣ ಎಗರಿಸುವ ಪ್ರಕರಣ ಇದೀಗ ಎಲ್ಲೆಡೆ ಸಖತ್‌ ಸೌಂಡ್‌ ಮಾಡ್ತಿದೆ. ಹಣಕ್ಕಾಗಿ ಸೈಬರ್‌ ವಂಚಕರು ಹೇಗೆಲ್ಲಾ ಟ್ರಿಕ್ಸ್‌ ಬಳಸುತ್ತಾರೆ ಅನ್ನೊದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ನಡೆದಿರುವ ಘಟನೆಯಾಗಿದ್ದು, ಎಲ್ಲಾ ವಾಟ್ಸಾಪ್‌ ಬಳಕೆದಾರರು ದಂಗಾಗುವಂತೆ ಮಾಡಿದೆ.

ವಂಚಕರು

ಈ ಪ್ರಕರಣದಲ್ಲಿ ವಂಚಕರು ವಾಟ್ಸಾಪ್‌ನಲ್ಲಿ ವ್ಯಕ್ತಿಯೊಬ್ಬರಿಗೆ 'ಹಾಮ್‌ ಮಮ್‌' (ಹಾಯ್‌ ಅಮ್ಮ) ಅಂತಾ ಸಂದೇಶ ಕಳುಹಿಸಿದ್ದಾರೆ. ಕುಟುಂಬ ಸದಸ್ಯರ ರೀತಿಯಲ್ಲಿ ಸಂದೇಶ ಕಳುಹಿಸಿ ಮನೆಯವರನ್ನು ಯಾಮಾರಿಸಿದ್ದಾರೆ. ಅಲ್ಲದೆ ಆಪ್ತ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ರೀತಿಯಲ್ಲಿ ನಿಮ್ಮ ಕುಟುಂಬ ಸದಸ್ಯರ ಫೋನ್‌ ಕಳೆದುಹೋಗಿದೆ ಅವರಿಗೆ ಇದೀಗ ಹಣದ ಸಹಾಯದ ಅವಶ್ಯಕತೆಯಿದೆ ಎಂದು ಜನರನ್ನು ನಂಬಿಸಿ ಅವರಿಂದ ಬ್ಯಾಂಕ್‌ ಮಾಹಿತಿ ಪಡೆದುಕೊ ಹಣ ಎಗಿರಿಸಿದ್ದಾರೆ. ಇದೇ ರೀತಿಯಲ್ಲಿ ಬೇರೆ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಹಾಯ್‌ ಅಮ್ಮು ಅಂತಾ ಕಳುಹಿಸಿ ಆಸ್ಟ್ರೇಲಿಯಾದಲ್ಲಿ ಸುಮಾರು $ 7 ಮಿಲಿಯನ್ (ಅಂದಾಜು 57.84 ಕೋಟಿ ರೂ.) ಹಣವನ್ನು ದೋಚಿದ್ದಾರೆ.

ಏನಿದು 'ಹಾಯ್ ಅಮ್ಮ' ಹಗರಣ?

ಏನಿದು 'ಹಾಯ್ ಅಮ್ಮ' ಹಗರಣ?

ಸದ್ಯ ಇಡೀ ಆಸ್ಟ್ರೇಲಿಯಾದಲ್ಲಿ ಸದ್ದು ಮಾಡುತ್ತಿರುವ ಈ ಹಗರಣ ಜಾಗತಿಕವಾಗಿ ಎಲ್ಲಾ ವಾಟ್ಸಾಪ್‌ ಬಳಕೆದಾರರನ್ನು ಬೆಚ್ಚಿ ಬಿಳಿಸಿದೆ. ಈ ಹಗರಣದಲ್ಲಿ ವಂಚಕರು ವಾಟ್ಸಾಪ್‌ ಮೂಲಕ ನಿಮ್ಮ ಮನೆಯ ಸದಸ್ಯರಂತೆ ಸಂದೇಶ ಕಳುಹಿಸುತ್ತಾರೆ. ನಂತರ ನಿಮ್ಮ ಕುಟುಂಬ ಸದಸ್ಯರ ಫೋನ್‌ ಕಳೆದುಹೋಗಿದೆ ಎಂದು ಹೇಳುತ್ತಾರೆ. ನಂತರ ಅವರಿಗೆ ಕೂಡಲೇ ಸಹಾಯದ ಅಗತ್ಯವಿದೆ. ಇದಕ್ಕಾಗಿ ನೀವು ಸಹಾಯ ಮಾಡಿ ಎಂದು ಯಾಮಾರಿಸುತ್ತಾರೆ. ಅಲ್ಲದೆ ಅವರ ಬ್ಯಾಂಕ್‌ ಅಕೌಂಟ್‌ ಮಾಹಿತಿ ಪಡೆದು ವಂಚಕರು ಹಣ ಎಗರಿಸುತ್ತಿರೋದು ಭಾರಿ ಸುದ್ದಿಯಾಗಿದೆ.

ಆಸ್ಟ್ರೇಲಿಯನ್

ಆಸ್ಟ್ರೇಲಿಯನ್ ಗ್ರಾಹಕ ಮತ್ತು ಕಾಂಪಿಟಿಷನ್ ಆಯೋಗವು (ACCC) 'ಹಾಯ್ ಮಮ್' ಹಗರಣದ ಬಗ್ಗೆ ಮಾಹಿತಿ ನೀಡಿದೆ. ಅದರಂತೆ ಈ ಹಗರಣದಲ್ಲಿ ಅಂದಾಜು 1,150 ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದು ವರದಿಯಾಗಿದೆ. ಈ ವರದಿಯ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಜನರು ಸುಮಾರು $2.6 ಮಿಲಿಯನ್ ನಷ್ಟು, ಅಂದರೆ ಅಂದಾಜು 21 ಕೋಟಿ ರೂ. ಕಳೆದುಕೊಂಡಿದ್ದಾರೆ. ಅದರಲ್ಲೂ 2022ರಲ್ಲೇ ಕನಿಷ್ಠ 11,100 ಸಂತ್ರಸ್ತರಿಂದ 7.2 ಮಿಲಿಯನ್ ಡಾಲರ್ (ಅಂದಾಜು 57.84 ಕೋಟಿ ರೂ.) ಕದಿಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಇದು ಆಸ್ಟ್ರೇಲಿಯಾದಲ್ಲಿ ನಡೆದಿದೆಯಾದರೂ ಭಾರತದಲ್ಲಿಯೂ ಕೂಡ ನಾವೆಲ್ಲಾ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

Best Mobiles in India

English summary
A new scam on WhatsApp users lose over Rs 54 crore: Details Here

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X