ತಾಯಿಯ ಪ್ರಾಣಕ್ಕೇ ಸಂಚಕಾರ ತಂದ ಫೇಸ್ ಬುಕ್

Posted By: Varun
ತಾಯಿಯ ಪ್ರಾಣಕ್ಕೇ ಸಂಚಕಾರ ತಂದ ಫೇಸ್ ಬುಕ್

ಗೂಗಲ್ ಬಂದಮೇಲೆ ಇಂಟರ್ನೆಟ್ ನಲ್ಲಿ ಹುಡುಕೋದು ಸುಲಭ ಆಯ್ತು, ವಿಕಿಪೀಡಿಯ ಬಂದಮೇಲೆ ಮಾಹಿತಿಯ ಖಜಾನೆ ಸಿಕ್ಕಂಗಾಯ್ತು, ಆದ್ರೆ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣ ಬಂದಮೇಲೆ ಕಳ್ಳರಿಗೆ ಕದಿಯಲು ಕೆಲಸ ಸುಲಭ ಆಯ್ತು.

ನಿಜ ಓದುಗರೇ, ಸಾಮಾಜಿಕ ಜಾಲತಾಣಗಳು ಸಮಾನ ಮನಸ್ಕ ಜನರನ್ನು ಒಂದೆಡೆ ಸೇರಿಸಲು, ಮನದ ಮಾತನ್ನು ಹಂಚಿಕೊಳ್ಳಲು ಒಂದು ವೇದಿಕೆ ನಿರ್ಮಿಸಿಕೊಟ್ಟಿರುವುದು ನಿಜವೇ ಆದರೂ, ಅತಿಯಾಗಿ ಮಾಹಿತಿ ಹಂಚಿಕೊಳ್ಳುವುದು, ಅಜ್ಞಾತ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸಿಕೊಂಡು, ಪ್ರೇಮಕ್ಕೆ ಬಿದ್ದು ವಂಚನೆಗೆ ಒಳಗಾದ, ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಂಡ ಹಲವಾರು ಸುದ್ದಿಗಳನ್ನು ಓದಿದ್ದೀರಿ. ಇದೇ ರೀತಿಯ ಸುದ್ದಿಯೊಂದು ಆಸ್ಟ್ರೇಲಿಯಾದಿಂದ ವರದಿಯಾಗಿದೆ.

ಅಲ್ಲ ರೀ, ಬುದ್ಧಿ ಇರೋ ಯಾರೇ ಹುಡುಗಿ ಆದರೂ ಫೇಸ್ ಬುಕ್ ನಲ್ಲಿ ತಮ್ಮ ಮನೆ ಅಡ್ರೆಸ್ ನ ಹಂಚ್ಕೋತಾರಾ? ನೋಡಕ್ಕೆ ಚೆನ್ನಾಗಿದ್ರೆನೆ ಹುಡುಗರು ಚುಡಾಯಿಸೋದು, ಬೆನ್ನು ಬೀಳೋದು ಬಿಡಲ್ಲ, ಇನ್ನ ಪ್ರೊಫೈಲ್ ಫೋಟೋ ಹಾಕಿದರಂತೂ ಮುಗಿದೇ ಹೋಯ್ತು, ಫ್ರೆಂಡ್ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಬರುತ್ತೆ. ಅಂಥದ್ರಲ್ಲಿ ಆಸ್ಟ್ರೇಲಿಯಾದ 17 ವರ್ಷದ ಹುಡುಗಿಯೊಬ್ಬಳು ತನ್ನ ಮನೆಯ ವಿಳಾಸವನ್ನು ಫೇಸ್ ಬುಕ್ ಅಲ್ಲಿ ಹಾಕಿದ್ದಳು. ಅಷ್ಟೇ ಆಗಿದ್ರೆ ತೊಂದ್ರೆ ಆಗ್ತಾ ಇರ್ಲಿಲ್ವೇನೋ. ಆದ್ರೆ ಆ ಹುಡುಗಿ ಇನ್ನೊಂದು ಗುಗ್ಗು ಕೆಲಸ ಮಾಡಿಬಿಟ್ಟಳು. ಅವಳ 72 ವರ್ಷದ ಅಜ್ಜಿ ಕೂಡಿಟ್ಟಿದ್ದ ಹಣವನ್ನ ಎಣಿಸೋ ಫೋಟೋನ ಗೆಳೆಯರಿಗೆ ತಿಳಿಯಲಿ ಅಂತ ಫೋಟೋ ತೆಗೆದು ಇಂಪ್ರೆಸ್ ಮಾಡಕ್ಕೆ ಫೇಸ್ ಬುಕ್ ಅಲ್ಲಿ ಅದನ್ನ ಅಪ್ಲೋಡ್ ಮಾಡಿದ್ಲು.

ಆಕೆ ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ ಆಕೆಯ ಮನೆಗೆ ನುಗ್ಗಿದ ಮುಸುಕುಧಾರಿ ಕಳ್ಳರು ಅವಳ ತಾಯಿಗೆ ಚಾಕು ತೋರಿಸಿ, ಬೆದರಸಿ ಇರೋ ಬರೋ ಹಣ, ಒಡವೆ ವಸ್ತುಗಳನ್ನೆಲ್ಲಾ ದೋಚಿಕೊಂಡು ಪರಾರಿಯಾದರು. ಆಕೆಯದಡ್ಡ ಕೆಲಸದಿಂದಾಗಿ ತನ್ನ ತಾಯಿಯ ಪ್ರಾಣಕ್ಕೆ ಅಪಾಯ ಒದಗಿಬಂತು, ಜೊತೆಗೆ ಅಜ್ಜಿ ಕಷ್ಟಪಟ್ಟು ಕೂಡಿಟ್ಟಿದ್ದ ಹಣವೂ ಹೋಯಿತು.

ಈಗ ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗ ಎಲ್ಲ ನಾಗರೀಕರಿಗೆ ಈ ರೀತಿ ಆನ್ಲೈನಿನಲ್ಲಿ ತಮ್ಮ ವಿಳಾಸವನ್ನು ಎಲ್ಲಿಯೂ ಕೊಡದಂತೆ ಮನವಿ ಮಾಡಿದ್ದಾರೆ. ಈ ಪ್ರಕರಣ ಆಸ್ಟ್ರೇಲಿಯಾದಲ್ಲಿ ಆಗಿದ್ದರೂ ಕೂಡ ನಾವು ಇದರಿಂದ ಪಾಠ ಕಲಿಯುವುದು ಬಹಳಷ್ಟಿದೆ. ಹಾಗಾಗಿ ನಿಮ್ಮ ಮನೆಯ ವಿಳಾಸವಾಗಲಿ, ನಿಮ್ಮ ಮನೆಯ ಫೋಟೋಗಳಾಗಲೀ ಅಥವಾ ಕೆಲಸ ಮಾಡುವ ಜಾಗದ ಮಾಹಿತಿಯನ್ನು ಫೇಸ್ ಬುಕ್ ಹಾಗು ಫೇಸ್ ಬುಕ್ ಥರದ ಸಾಮಾಜಿಕ ಜಾಲತಾಣಗಳಲ್ಲಿ ಕೊಡಬೇಡಿ. ಕೊಟ್ಟರೂ ಅದನ್ನು public ಗೆ ಕಾಣದ ಹಾಗೆ ಮಾಡಿ. ಫೇಸ್ ಬುಕ್ ಸೆಟ್ಟಿಂಗ್ಸ್ ಗೆ ಹೋಗಿ.

ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಿಂದ ಆದಷ್ಟು ಸೇಫ್ ಆಗಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot