ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆಧಾರ್‌ ಸಂಬಂಧಿತ ಸೇವೆಗಳು!

|

ಪ್ರಸ್ತುತ ದಿನಗಳಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್‌ ಕಾರ್ಡ್‌ ಅಗತ್ಯವಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ಭಾರತೀಯನು ಆಧಾರ್‌ ಕಾರ್ಡ್‌ ಹೊಂದುವುದು ಅವಶ್ಯಕವಾಗಿದೆ. ಇನ್ನು ಆಧಾರ್‌ ಕಾರ್ಡ್‌ ಒದಗಿಸುವ ಯುಐಡಿಎಐ ನಾಗರಿಕರಿಗೆ ಸಾಕಷ್ಟು ಅನುಕೂಲಕರ ಸೇವೆಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ UIDAI ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡುವ ಹಾಗೂ ಆಧಾರ್‌ಗಾಗಿ ನೋಂದಣಿ ಮಾಡಿಸುವ ಸೇವೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಕ್ಕೆ ಮುಂದಾಗಿದೆ.

ಆಧಾರ್

ಹೌದು, ಆಧಾರ್ ಕಾರ್ಡ್ ಹೊಂದಿರುವವರು ಶೀಘ್ರದಲ್ಲೇ ತಮ್ಮ ಮನೆಯಲ್ಲಿಯೇ ಕುಳಿತು UIDAI-ಸಂಬಂಧಿತ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ ಯುಐಡಿಎಐ ತನ್ನ ಸಿಬ್ಬಂದಿಗೆ ತರಬೇತಿ ನೀಡುತ್ತಿದೆ ಎನ್ನಲಾಗಿದೆ. ಅಲ್ಲದೆ ಮನೆಗಳಿಗೆ ಆಧಾರ್ ಸೇವೆಗಳನ್ನು ತಲುಪಿಸುವ ಉದ್ದೇಶಕ್ಕಾಗಿಯೇ UIDAI ಪೋಸ್ಟ್‌ಮ್ಯಾನ್‌ಗಳಿಗೆ ತರಬೇತಿ ನೀಡಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಯುಐಡಿಎಐ ಯಿಂದ ಮನೆಯಲ್ಲಿಯೇ ಕುಳಿತು ಯಾವೆಲ್ಲಾ ಸೇವೆಗಳನ್ನು ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್‌

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ವಿವರಗಳನ್ನು ಅಪ್ಡೇಟ್‌ ಮಾಡಬೇಕಾದರೆ, ಇಲ್ಲವೇ ಹೊಸದಾಗಿ ಆಧಾರ್‌ ಕಾರ್ಡ್‌ಗೆ ಹೆಸರನ್ನು ನೋಂದಾಯಿಸಲು ಬಯಸಿದರೆ ನೀವು ಆಧಾರ್‌ ಕಾರ್ಡ್‌ ಸೆಂಟರ್‌ಗೆ ಹೋಗಬೇಕು. ಆದರೆ ಇನ್ಮುಂದೆ ನೀವು ಆಧಾರ್‌ ಸೇವೆಗಳನ್ನು ಪಡೆಯಲು ಯಾವುದೇ ಆಧಾರ್‌ ಸೆಂಟರ್‌ಗೆ ಹೋಗಬೇಕಾದ ಅವರ್ಶಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಆಧಾರ್‌ಗೆ ಸಂಬಂಧಿಸಿದ ಸೇವೆಗಳನ್ನು ಪಡೆಯುವುದಕ್ಕೆ ಸಾಧ್ಯವಾಗಲಿದೆ. ಇದಕ್ಕಾಗಿ ಯುಐಡಿಎಐ ಕೂಡ ಕಾರ್ಯಪ್ರವೃತ್ತವಾಗಿದೆ ಎಂದು ವರದಿಯಾಗಿದೆ.

ಆಧಾರ್‌

ಇನ್ನು UIDAI ಮನೆ ಮನೆಗಳಿಗೆ ಆಧಾರ್‌ ಸಂಬಂಧಿತ ಸೇವೆಗಳನ್ನು ನೀಡಲು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಇದಕ್ಕಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ 48,000 ಪೋಸ್ಟ್‌ಮ್ಯಾನ್‌ಗಳಿಗೆ ಈ ನಿರ್ದಿಷ್ಟ ಪಾತ್ರವನ್ನು ವಹಿಸಲು ತರಬೇತಿ ನೀಡಲಾಗುತ್ತಿದೆ. ಈ ಪೋಸ್ಟ್‌ಮ್ಯಾನ್‌ಗಳು ಮೊಬೈಲ್ ಸಂಖ್ಯೆಗೆ ಆಧಾರ್ ಅನ್ನು ಲಿಂಕ್ ಮಾಡುವುದು, ಆಧಾರ್‌ನಲ್ಲಿ ನಿಮ್ಮ ವಿವರಗಳನ್ನು ಅಪ್ಡೇಟ್‌ ಮಾಡುವ ಮತ್ತು ಮಕ್ಕಳನ್ನು ಆಧಾರ್‌ ಡೇಟಾಬೇಸ್‌ಗೆ ಸೇರ್ಪಡೆ ಮಾಡುವಂತಹ ಸೇವೆಗಳನ್ನು ನೀಡಲಿದ್ದಾರೆ. ಇದಲ್ಲದೆ, ಈ ಸೇವೆಗಳನ್ನು ಆನ್‌ಲೈನ್ ಅಥವಾ ಟೆಲಿಫೋನಿ ಮೂಲಕ ಬುಕ್ ಮಾಡಲಾಗುತ್ತದೆ. ಆದರೆ ಇದರ ಬಗ್ಗೆ ಇನ್ನು ಕೂಡ, ಯಾವುದೇ ಮಾಹಿತಿ ಅಧಿಕೃತ ಮಾಹಿತಿವಾಗಿಲ್ಲ.

UIDAI

UIDAI ಡೇಟಾಬೇಸ್‌ನಲ್ಲಿ ಆಧಾರ್‌ ಕಾರ್ಡ್‌ ಹೊಂದಿರುವವರ ವಿವರಗಳನ್ನು ಸರಿಪಡಿಸಲು ಹೊಸದಾಗಿ ತರಬೇತಿ ಪಡೆದ ಸಿಬ್ಬಂದಿಗೆ ಕೆಲವು ಮೂಲಭೂತ ಸಾಧನಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಅಗತ್ಯ ಆಧಾರ್ ಸೇವೆಗಳನ್ನು ಒದಗಿಸಲು ಅವರಿಗೆ ಲ್ಯಾಪ್‌ಟಾಪ್ ಮತ್ತು ಬಯೋಮೆಟ್ರಿಕ್ ಸ್ಕ್ಯಾನರ್‌ನಂತಹ ಅಗತ್ಯ ಹಾರ್ಡ್‌ವೇರ್ ಅನ್ನು ಒದಗಿಸಲಾಗುತ್ತದೆ. ಅಲ್ಲದೆ UIDAI ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಾಮಾನ್ಯ ಸೇವಾ ಕೇಂದ್ರದೊಂದಿಗೆ ಕೆಲಸ ಮಾಡುವ ಸುಮಾರು 13,000 ಬ್ಯಾಂಕಿಂಗ್ ವರದಿಗಾರರನ್ನು ಸಹ ನೇಮಕ ಮಾಡುವ ಸಾಧ್ಯತೆಯಿದೆ.

ಆಧಾರ್

ಇನ್ನು ದೇಶದ ಎಲ್ಲಾ 755 ಜಿಲ್ಲೆಗಳಲ್ಲಿಯೂ ಆಧಾರ್ ಸೇವಾ ಕೇಂದ್ರಗಳು ಇರುತ್ತವೆ. ಆದರೆ ಮಾಹಿತಿ ಸಂಗ್ರಹಣೆಯ ಹಂತದಿಂದ ಮೇನ್‌ಫ್ರೇಮ್‌ಗೆ ಡೇಟಾವನ್ನು ಸಂಗ್ರಹಿಸಲು ಮತ್ತು ನವೀಕರಿಸಲು ಈ ಕೇಂದ್ರಗಳು ಪೋಸ್ಟ್‌ಮೆಂಟ್‌ಗೆ ಸೆಂಟರ್‌ಗಳಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಅಪ್ಡೇಟ್‌ ಮತ್ತು ದಾಖಲಾತಿ ವೇಗವನ್ನು ಹೆಚ್ಚಿಸಬಹುದಾಗಿದೆ. ಸದ್ಯ ಇಲ್ಲಿಯವರೆಗೆ, 72 ನಗರಗಳಲ್ಲಿ ಕೇವಲ 88 UIDAI ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ.

UIDAI

ಪ್ರಸ್ತುತ, UIDAI ಆಧಾರ್‌ ಕಾರ್ಡ್ ಹೊಂದಿರುವವರಿಗೆ ಕೆಲವು ಆನ್‌ಲೈನ್ ಸೇವೆಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ UIDAI ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡುವುದು. ವರ್ಚುವಲ್ ID ಅಥವಾ VID ಅನ್ನು ರಚಿಸುವ ಅವಕಾಶವನ್ನು ನೀಡಲಿದೆ. ಅಲ್ಲದೆ ನಿಮ್ಮ ಸೇವಾ ವಿನಂತಿಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಕೂಡ ಅವಕಾಶವನ್ನು ಕಲ್ಪಿಸಿದೆ.

Best Mobiles in India

English summary
Aadhaar card holders will soon be able to get all the UIDAI-related services from the comfort of their homes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X