ಸರ್ಕಾರಿ ವೆಬ್‌ಸೈಟ್‌ನಲ್ಲಿನ ಎಡವಟ್ಟು! ಆನ್‌ಲೈನ್‌ ಲೀಕ್‌ ಆಯ್ತು ರೈತರ ಆಧಾರ್‌ ವಿವರ!

|

ಸರ್ಕಾರದ ವೆಬ್‌ಸೈಟ್‌ನಲ್ಲಿನ ದೋಷದಿಂದ ಲಕ್ಷಾಂತರ ಭಾರತೀಯ ರೈತರು ಆತಂಕ ಪಡುವಂತಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ವೆಬ್‌ಸೈಟ್‌ನಲ್ಲಿನ ಎಡವಟ್ಟು ಇದೀಗ ದೇಶದ ರೈತರನ್ನು ಚಿಂತಿಸುವಂತೆ ಮಾಡಿದೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅಂದರೆ, ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಂದ ಸಂಗ್ರಹ ಮಾಡಿರುವ ಆಧಾರ್‌ ಡೇಟಾ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಮೂಲಕ ರೈತರ ಆಧಾರ್‌ ಕಾರ್ಡ್‌ ವಿವರಗಳು ಇದೀಗ ವಂಚಕರ ಕೈ ಸೇರಿದೆ ಎಂದು ವರದಿಯಾಗಿದೆ.

ಆಧಾರ್‌

ಹೌದು, ನಿಜಕ್ಕೂ ಇದು ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಯೋಚಿಸಬೇಕಾದ ವಿಚಾರ. ಸರ್ಕಾರಿ ಯೋಜನೆಯ ಸೌಲಭ್ಯ ಪಡೆಯಲು ಸರ್ಕಾರಿ ವೆಬ್‌ಸೈಟ್‌ನಲ್ಲಿ ನಮೂದಿಸಿದ ಆಧಾರ್‌ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಇದರಿಂದ ದೇಶದ ಲಕ್ಷಾಂತರ ರೈತರ ಆಧಾರ್‌ ಡೇಟಾ ಇದೀಗ ವಂಚಕರ ಕೈ ಸೇರುವ ಆತಂಕ ಎದುರಾಗಿದೆ. ಈ ಡೇಟಾವನ್ನು ಬಳಸಿ ರೈತರ ಇತರೆ ಖಾತೆಗಳಿಗೆ ವಂಚಕರು ಕನ್ನ ಹಾಕುವ ಸಾಧ್ಯತೆ ಕೂಡ ಇದೆ. ಹಾಗಾದ್ರೆ ರೈತರ ಆಧಾರ್‌ ಡೇಟಾ ಆನ್‌ಲೈನ್‌ನಲ್ಲಿ ಬಹಿರಂಗವಾಗಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಿಸಾನ್‌

ಭಾರತದ ಸರ್ಕಾರದ ಪ್ರದಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ವೆಬ್‌ಸೈಟ್‌ನಲ್ಲಿನ ದೋಷದಿಂದಾಗಿ ಲಕ್ಷಾಂತರ ಭಾರತೀಯ ರೈತರ ಆಧಾರ್ ಡೇಟಾವನ್ನು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಬಹಿರಂಗವಾಗಿರುವ ಆಧಾರ್‌ ಕಾರ್ಡ್‌ ಡೇಟಾ ವಂಚಕರ ಕೈ ಸೇರುವ ಸಾಧ್ಯತೆಯಿದೆ ಎಂದು ಭದ್ರತಾ ಸಂಶೋಧಕ ಅತುಲ್ ನಾಯರ್ ಬಹಿರಂಗಪಡಿಸಿದ್ದಾರೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ದೇಶದ ಎಲ್ಲಾ ರೈತರಿಗೆ ಕನಿಷ್ಠ ಮೂಲ ಆದಾಯವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ವರ್ಷಕ್ಕೆ ಮೂರು ಕಂತಿನಂತೆ ಪ್ರತಿ ಕಂತಿನಲ್ಲಿ 2000ರೂ ಗಳಂತೆ ವರ್ಷಕ್ಕೆ 6,000 ರೂ. ಸಹಾಯ ಧನ ಪಡೆಯಬಹುದಾಗಿದೆ.

ಕಿಸಾನ್

ಈ ಯೋಜನೆಯ ವೆಬ್‌ಸೈಟ್‌ನ ಒಂದು ಭಾಗದಿಂದ ರೈತರ ಆಧಾರ್ ಡೇಟಾ ಬಹಿರಂಗವಾಗಿ. ಪಿಎಂ ಕಿಸಾನ್ ವೆಬ್‌ಸೈಟ್ ವಿವಿಧ ಚಾರ್ಟ್‌ಗಳು ಮತ್ತು ಡೇಟಾವನ್ನು ವೀಕ್ಷಿಸಲು ಡ್ಯಾಶ್‌ಬೋರ್ಡ್ ಫೀಚರ್ಸ್‌ ಅನ್ನು ಒದಗಿಸಿದೆ. ಇದರಲ್ಲಿ ಪ್ರದೇಶ (ರಾಜ್ಯ, ಜಿಲ್ಲೆ, ಗ್ರಾಮ) ಆಧಾರದ ಮೇಲೆ ಎಲ್ಲಾ ರೈತರ ಆಧಾರ್ ಸಂಖ್ಯೆಯನ್ನು ಡ್ಯಾಶ್‌ಬೋರ್ಡ್‌ನಲ್ಲಿ ನೀಡಲಾಗಿದೆ. ಇದರಲ್ಲಿರುವ ಎಂಡ್‌ ಪಾಯಿಂಟ್‌ ಮೂಲಕ ಆಧಾರ್‌ ಡೇಟಾ ಸೋರಿಕೆಯಾಗಿದೆ ಎನ್ನಲಾಗಿದೆ.

ಸೈಬರ್‌

ವೆಬ್‌ಸೈಟ್‌ನ ದೋಷದಿಂದಾಗಿ ಪ್ರಸ್ತುತ ಲಕ್ಷಾಂತರ ರೈತರ ವೈಯಕ್ತಿಕ ಡೇಟಾವನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಲ್ಲದೆ ರೈತರಿಗೆ ಸಂಬಂಧಿಸಿದ ಈ ಎಲ್ಲಾ ಡೇಟಾವನ್ನು ಸಂಗ್ರಹಿಸಲು ಸೈಬರ್‌ ಹ್ಯಾಕರ್‌ಗಳು ಆಕ್ಟಿವ್‌ ಆಗುಬಹುದೆಂದು ಭದ್ರತಾ ಸಂಶೋದಕರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ನೋಡಿದರೆ ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ವೆಬ್‌ಸೈಟ್ 11 ಕೋಟಿಗೂ ಹೆಚ್ಚು ರೈತರು ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಕಂಡುಬಂದಿರುವ ದೋಷ ಮುಂದುವರೆದರೆ 110 ಮಿಲಿಯನ್ ರೈತರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಸುಲಭವಾಗಿ ಪ್ರವೇಶಿಸಬಹುದು.

ಆಧಾರ್‌ ಡೇಟಾ ಸೋರಿಕೆ ಇದೇ ಮೊದಲೇನಲ್ಲ

ಆಧಾರ್‌ ಡೇಟಾ ಸೋರಿಕೆ ಇದೇ ಮೊದಲೇನಲ್ಲ

ಭಾರತೀಯ ನಾಗರಿಕರ ವೈಯುಕ್ತಿಕ ಮಾಹಿತಿಯನ್ನು ಹೊಂದಿರುವ ಆಧಾರ್‌ ಕಾರ್ಡ್‌ನ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿರೋದು ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಲ್ಲಿ, ಆಧಾರ್-ಸಂಯೋಜಿತ ಡೇಟಾಬೇಸ್‌ಗಳನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿದ ಹಲವಾರು ಪ್ರಕರಣಗಳು ನಡೆದಿವೆ. 2019 ರಲ್ಲಿ, ಸರ್ಕಾರಿ ಸ್ವಾಮ್ಯದ ಗ್ಯಾಸ್ ಕಂಪನಿ ಇಂಡೇನ್‌ನ ವೆಬ್‌ಸೈಟ್‌ನಲ್ಲಿನ ದೋಷದಿಂದಾಗಿ ಸಾಕಷ್ಟು ಗ್ರಾಹಕರು ಆಧಾರ್‌ ಡೇಟಾ ಆನ್‌ಲೈನ್‌ನಲ್ಲಿ ಬಹಿರಂಗವಾಗಿತ್ತು. ಅಲ್ಲದೆ ಅದೇ ವರ್ಷದಲ್ಲಿ, ಜಾರ್ಖಂಡ್‌ನಲ್ಲಿ ಸರ್ಕಾರಿ ನೌಕರರ ಹಾಜರಾತಿಯನ್ನು ದಾಖಲಿಸಲು ಬಳಸುವ ವೆಬ್ ವ್ಯವಸ್ಥೆಯ ಎಡವಟ್ಟಿನಿಂದಾಗಿ ಸರಿಸುಮಾರು 166,000 ಸರ್ಕಾರಿ ನೌಕರರ ಹೆಸರುಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿತ್ತು.

Best Mobiles in India

English summary
Aadhaar data of millions of Indian farmers was left exposed online owing to a bug in a government website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X