ಭಾರತದಲ್ಲಿ ಯೂಟ್ಯೂಬ್ ವೀಕ್ಷಿಸುವರ ಸಂಖ್ಯೆ ಎಷ್ಟು ಗೊತ್ತಾ?

ಎಲ್ಲವೂ ಸ್ಮಾರ್ಟ್ ಆಗುತ್ತಿರುವ ಈ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಡೇಟಾ ದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಇಂಟರ್‌ನೆಟ್ ಪ್ರಪಂಚಕ್ಕೆ ವರವಾಗಿದೆ.

|

ಎಲ್ಲವೂ ಸ್ಮಾರ್ಟ್ ಆಗುತ್ತಿರುವ ಈ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಡೇಟಾ ದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಇಂಟರ್‌ನೆಟ್ ಪ್ರಪಂಚಕ್ಕೆ ವರವಾಗಿದೆ. ಆನ್‌ಲೈನ್‌ನಲ್ಲಿ ಸಮಯ ಕಳೆಯುವವರ ಪ್ರಮಾಣ ಹೆಚ್ಚಾಗಿರುವುದರಿಂದ ಆನ್‌ಲೈನ್‌ಗೆ ಹರಿದು ಬರುತ್ತಿರುವ ಹಣದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ.!!

ಜನರು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಗೂಗಲ್ ಎಷ್ಟು ಬೆಳೆಯುತ್ತದೆ ಎಂಬುದು ಇದಕ್ಕೆ ಉದಾಹರಣೆ ಎನ್ನಬಹುದು. ಗೂಗಲ್ ಸಂಸ್ಥೆ ನೀಡಿರುವ ಒಂದು ವರದಿ ಪ್ರಕಾರ ಭಾರತದ ಶೇ. 80 ಇಂಟರ್ನೆಟ್ ಬಳಕೆದಾರರು ಯೂಟ್ಯೂಬ್ ವೀಕ್ಷಿಸುತ್ತಿದ್ದಾರಂತೆ. ಯೂಟ್ಯೂಬ್​ನಂಥ ವಿಡಿಯೋ ಪ್ಲಾಟ್​ಫಾರ್ಮ್​ ಬಗ್ಗೆ ಜನರಿಗೆ ಈಗೀಗ ಆಸಕ್ತಿ ಹೆಚ್ಚಾಗುತ್ತಿದೆಯಂತೆ.!!

ಭಾರತದಲ್ಲಿ ಯೂಟ್ಯೂಬ್ ವೀಕ್ಷಿಸುವರ ಸಂಖ್ಯೆ ಎಷ್ಟು ಗೊತ್ತಾ?

ಭಾರತದಲ್ಲಿ 2014ರಲ್ಲಿ 10 ಲಕ್ಷಕ್ಕಿಂತ ಸಬ್​ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್​ಗಳ ಸಂಖ್ಯೆ ಕೇವಲ 16 ಮಾತ್ರ ಇತ್ತು. ಆದರೆ, 10 ಲಕ್ಷಕ್ಕಿಂತ ಸಬ್​ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್​ಗಳು ಈಗ 300 ಸಂಖ್ಯೆಯನ್ನು ಮೀರಿದೆ ಎಂದು ಗೂಗಲ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.!!

ಇನ್ನು ಕಾಮ್​ಸ್ಕೋರ್ ವಿಡಿಯೋ ಮೆಟ್ರಿಕ್ಸ್ ಮಲ್ಟಿ-ಪ್ಲಾಟ್​ಫಾರ್ಮ್ ವರದಿಯಲ್ಲಿಯೂ ಯೂಟ್ಯೂಬ್ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಸಕ್ರಿಯ ಇಂಟರ್‌ನೆಟ್ ಬಳಕೆದಾರರ ಪೈಕಿ ಶೇ.85ರಷ್ಟು ಜನರು ಯೂಟ್ಯೂಬ್ ವೀಕ್ಷಿಸುತ್ತಾರಂತೆ ಮತ್ತು 2020ರ ವೇಳೆಗೆ ಇಂಟರ್ನೆಟ್​ನಲ್ಲಿ ವಿಡಿಯೋ ವೀಕ್ಷಿಸಲಿರುವ ಜನರ ಪ್ರಮಾಣ 50 ಕೋಟಿ ಮೀರಲಿದೆಯಂತೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!!

Best Mobiles in India

English summary
About 80 per cent of Indian internet users browse YouTube: Google. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X